VACHANA IN
KANNADA
ಬಿದಿರೆಲೆಯ
ಮೆಲಿದಡೆ ಮೆಲಿದಂತಲ್ಲದೆ, ರಸವ
ಹಡೆಯಲು ಬಾರದು
ಮಳಲ
ಹೊಸೆದಡೆ ಹೊಸೆದಂತಲ್ಲದೆ, ಸರವಿಯ
ಹಡೆಯಲು ಬಾರದು
ನೀರ
ಕಡೆದಡೆ ಕಡೆದಂತಲ್ಲದೆ, ಬೆಣ್ಣೆಯ ಹಡೆಯಲು ಬಾರದು
ನಮ್ಮ
ಕೂಡಲ ಸಂಗಮದೇವನಲ್ಲದೆ, ಅನ್ಯದೈವಕ್ಕೆರಗಿದಡೆ
ಹೊಳ್ಳ
ಕುಟ್ಟಿ ಕೈ ಹೊಟ್ಟೆಯಾದಂತೆ ಆಯಿತ್ತಯ್ಯಾ
TRANSLITERATION
bidireleya
melidaDe melidaMtallade, rasava haDeyalu
baaradu
maLala
hosedaDe hosedaMtallde, saraviya haDeyalu baaradu
nIra
kaDedaDe kaDedaMallade , beNNeya haDeyalu baaradu
namma kUDala
saMgamadEvallade, anyadaivakkeragidaDe
hoLLa
kuTTi kai hoTTeyaadaMte aayittayyaa
CLICK HERE
FOR A RECITATION
TRANSLATION
(WORDS)
bidireleya (bamboo leaves) melidaDe (if chewed) melidaMtallade (feeling of chewing will be
there but)
rasava
(juice) haDeyalu baaradu (will not give out)
maLala
(sand) hosedaDe ( if twisted) hosedaMtallde (will give the feeling of
twisting but)
saraviya
(rope) haDeyalu baaradu (will not give out)
nIra (water)
kaDedaDe (if churned) kaDedaMallade
(will give the feeling of churning but)
beNNeya
(butter) haDeyalu baaradu (will not give out)
namma kUDala
saMgamadEvallade (other than our kUDalasangamadeva)
anyadaivakkeragidaDe
(if one worships)
hoLLa ( chaff) kuTTi
( by hitting) kai (the hand) hoTTeyaadaMte
aayittayyaa ( like swollen, sir! )
VACHANA IN
ENGLISH
If bamboo
leaves are chewed, feeling of chewing will be there, but juice does not come
out!
If sand is
spun, feeling of spinning will be there, but the rope does not come out!
If water is
churned, feeling of churning will be there, but the butter does not come out!
Bowing to
any other God than our Lord Kudala Sangama,
is as if,
by pounding chaff and getting the hand swollen, Sir!
COMMENTARY
Basavanna is
advocating bowing to just one God in this Vachana through several interesting
similes. Bamboo leaves are known to be just fibrous. Chewing them although
provides the feeling of chewing, does not yield any juice with nutritional
value. We need to spin several threads together to make a rope. Spinning sand between
our hands does not yield a rope. Butter is generated by churning the butter milk;
churning water does not yield butter. We need to concentrate and use
appropriate material to get the results we want. Basavanna says that bowing to any
other God other than Lord Kudala Sangama is like pounding the chaff to get the hand
swollen – it has no tangible value!
Here it is very important to understand who are Lord Kudala Sangama and the 'other' God.
Here it is very important to understand who are Lord Kudala Sangama and the 'other' God.
Sharanas did not believe in idol worship, let alone multiple forms of
it. They provided the icon of Ishtalinga
to represent the concept of the Divine principle. They urged us to see past the
physical icon and become aware of the principle it represents. Basavanna is referring
to this divine principle as his God Kudala Sangama. The name 'Kudala Sangama' is
the signature of Basavanna’s Vachanas. Other Sharanas have used similar signatures
(Guheshvara, Swtantra Siddalingeshvara, Chenna Mallikarjuna etc.). All of them pointed to that
single divine principle they urged us to become aware of.
The message of this Vachana then is to get away from worshipping multiple forms
and shapes and sizes and develop the awareness of that divine principle!
Let us get
single minded and focus on the Divine Principle!
KANNADA
COMMENTARY
ಅರ್ಥ:
ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ (ಬಿದಿರಿನ
ಎಲೆಯನ್ನು ಬಾಯಲ್ಲಿಟ್ಟು ಅಗಿದರೆ ಅಗಿದಂತೆ
ಆಗುತ್ತದೆ ಆದರೆ)
ರಸವ
ಹಡೆಯಲು ಬಾರದು (ಅದು ರಸವನ್ನು ಕೊಡಲಾರದು)
ಮಳಲ
ಹೊಸೆದಡೆ ಹೊಸೆದಂತಲ್ಲದೆ (ಮರಳನ್ನು ಕೈಯಲ್ಲಿ ಹೊಸೆದರೆ ಹೊಸೆದಂತೆ ಆಗುತ್ತದೆ ಆದರೆ)
ಸರವಿಯ
(ಹಗ್ಗವನ್ನು) ಹಡೆಯಲು ಬಾರದು ( ಕೊಡಲಾರದು)
ನೀರ
ಕಡೆದಡೆ ಕಡೆದಂತಲ್ಲದೆ (ನೀರನ್ನು ಕಡೆಗೋಲಿನಿಂದ ಕಡೆದರೆ ಅಡೆದಂತೆ ಆಗುತ್ತದೆ ಆದರೆ)
ಬೆಣ್ಣೆಯ
ಹಡೆಯಲು ಬಾರದು (ಅದು ಬೆಣ್ಣೆಯನ್ನು ಕೊಡಲಾರದು)
ನಮ್ಮ
ಕೂಡಲ ಸಂಗಮದೇವನಲ್ಲದೆ (ಕೂಡಲ ಸಂಗಮನನ್ನು ಬಿಟ್ಟು)
ಅನ್ಯದೈವಕ್ಕೆರಗಿದಡೆ
(ಬೇರೆ ದೇವರಿಗೆ ಶರಣು ಹೋದರೆ)
ಹೊಳ್ಳ (ಟೊಳ್ಳು) ಕುಟ್ಟಿ ಕೈ ಹೊಟ್ಟೆಯಾದಂತೆ ( ಕುಟ್ಟಿ ಕೈ ಬಾತುಕೊಂಡಂತೆ) ಆಯಿತ್ತಯ್ಯಾ
ತಾತ್ಪರ್ಯ:
ಇಲ್ಲಿ ಬಸವಣ್ಣನವರು ಅನೇಕ ದೇವರನ್ನು ಪೂಜಿಸುವವರನ್ನು ಕುರಿತು ಅಂತಹ ಪೂಜೆ
ಎಷ್ಟು ನಿರರ್ಥಕ ಎಂಬುದನ್ನು ಉದಾಹರಣೆಸಹಿತ
ಹೇಳುತ್ತಿದ್ದಾರೆ.
ಬಿದಿರಿನ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಮೆಲಿದರೆ ಆ ಎಲೆಗಳನ್ನು ಮೆಲಿದಂತೆ
ಆಗುತ್ತದೆಯೆ ಹೊರತು ಆ ಎಲೆಗಳಿಂದ ರಸ ಹೊರಡಲಾರದು, ಹೊಟ್ಟೆ ತುಂಬಲಾರದು. ಅದು ಕೇವಲ ನಾರುಮಯ. ಆದ್ದರಿಂದ ಬಿದಿರ ಎಲೆಗಳನ್ನು
ಅಗಿಯುವ ಶ್ರಮದ ಕೆಲಸ ವ್ಯರ್ಥವಾಗುತ್ತದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.
ಮರಳಿನಿಂದ ಹಗ್ಗ ಮಾಡುತ್ತೇನೆ ಎಂದು ಅದನ್ನು ಹೊಸೆಯುತ್ತ ಕುಳಿತರೆ ಹಗ್ಗ ಸಿಗುತ್ತದೆಯೆ? ಕೈಯಿಂದ ಹೊಸೆದಂತೆ ಆಗುತ್ತದೆಯೆ
ಹೊರತು ಆ ಮರಳು ಹಗ್ಗವನ್ನು ಕೊಡಲಾರದು. ಹೊಸೆದ ಶ್ರಮ ವ್ಯರ್ಥವಾಗುತ್ತದೆ. ಉದ್ದೇಶ ಪೂರೈಸದು.
ಅದೇ ರೀತಿ ನೀರನ್ನು ಕಡೆಗೋಲಿನಿಂದ ಮೊಸರು ಕಡೆದಂತೆ ಕಡೆದರೆ ಆ ನೀರು
ಬೆಣ್ಣೆಯನ್ನು ಕೊಡಬಲ್ಲುದೆ? ಇಲ್ಲವಾದ್ದರಿಂದ ಈ ಎಲ್ಲ ಕೆಲಸಗಳ ಶ್ರಮ ವ್ಯರ್ಥವಾಗುತ್ತದೆ. ಅದೇ
ರೀತಿ ಕೂಡಲಸಂಗಮನಲ್ಲದೆ ಬೇರೆ ದೇವರ ಪೂಜಿಸಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು
ಹೇಳುತ್ತಾರೆ ಬಸವಣ್ಣನವರು.
ಇಲ್ಲಿ ಕೂಡಲಸಂಗಮ ಎಂದರೆ ಯಾರು? ಅನ್ಯದೇವರು ಎಂದರೆ ಯಾರು? ಎಂಬುದನ್ನು ಅರ್ಥಮಾಡಿಕೊಳ್ಳುವುದು
ಮುಖ್ಯವಾಗುತ್ತದೆ.
ಕೂಡಲಸಂಗಮ ಎಂಬುದು ಬಸವಣ್ಣನವರ, ಇಷ್ಟದೇವ ಮತ್ತು ಅವರ ವಚನಗಳ ಅಂಕಿತ. ಇದೇ
ರೀತಿಯಾಗಿ ಎಲ್ಲ ಶರಣರು ತಮ್ಮ ತಮ್ಮ ಇಷ್ಟದೇವನನ್ನು ಪೂಜಿಸುತ್ತಿದ್ದರು ಮತ್ತು ಅದನ್ನೇ ತಮ್ಮ
ಅಂಕಿತವಾಗಿಟ್ಟುಕೊಂಡರು. ಉದಾಹರಣೆಗೆ-
ಗುಹೇಶ್ವರ, ಸ್ವತಂತ್ರ ಸಿದ್ದಲಿಂಗೇಶ್ವರ, ಚೆನ್ನ ಮಲ್ಲಿಕಾರ್ಜುನ, ನಿರ್ಲಜ್ಜೇಶ್ವರ, ಅಪ್ಪಣ್ಣಪ್ರಿಯ
ಚೆನ್ನಬಸವಣ್ಣ ಇತ್ಯಾದಿ. ಹಾಗೆಂದರೆ ಅವರೆಲ್ಲರೂ
ಒಬ್ಬೊಬ್ಬ ದೇವರನ್ನು ಪೂಜಿಸುತ್ತಿದ್ದರೆ? ಇಲ್ಲ. ಅವರೆಲ್ಲರೂ ಪೂಜಿಸುತ್ತಿದ್ದುದು ಆ
ಪರತತ್ವವನ್ನು ಮಾತ್ರ. ಆ ಪರತತ್ವವನ್ನು ಅವರು ತಮ ತಮಗೆ ಇಷ್ಟವಾದ ಹೆಸರಿನಿಂದ ಕರೆದರು. ಆ
ಪರತತ್ವವನ್ನು ಪೂಜಿಸುವುದು ಎಂದರೆ ಅರಿಯುವುದು ಮುಖ್ಯ. ಯಾರೇ ಆಗಲಿ ಇದನ್ನು ಅರಿಯುವುದನ್ನು ಬಿಟ್ಟು
ಬೇರೆ ದೇವರನ್ನು ಪೂಜಿಸುವುದು ವ್ಯರ್ಥ ಎಂದು ಹೇಳುತ್ತಾರೆ ಬಸವಣ್ಣನವರು. ಅದನ್ನು ಬಿಟ್ಟು, ಅರಗು ತಿಂದು ಕರಗುವ ದೇವರನ್ನು, ಕಲ್ಲಿನಲ್ಲಿ ಕಟೆದ ಮೂರ್ತಿಯನ್ನು,
ಚಿನ್ನ್ನ ಬೆಳ್ಳಿಯನ್ನು ಎರಕ ಹೊಯ್ದು ಮಾಡಿದ, ಕಾಲಕಳೆದಂತೆ ಬಣ್ಣ, ಆಕಾರಗೆಟ್ಟು ಹಾಳಾಗುವ, ಅಥವಾ
ಕ್ಷಣಹೊತ್ತು ಮನಸ್ಸನ್ನು ರಂಜಿಸಿ ತಿಪ್ಪೆಸೇರುವ ದೇವರುಗಳನ್ನು ಅಥವಾ ಸತ್ತು ಹುಟ್ಟುವ ವ್ಯಕ್ತಿಗಳನ್ನು
ಪೂಜಿಸುವುದು, ರಸವನ್ನು ಪಡೆಯಲು ಬಿದಿರಿನ ಎಲೆಗಳನ್ನು ಮೆಲಿದಂತೆ, ಹಗ್ಗ ಪಡೆಯಲು ಮರಳನ್ನು
ಹೊಸೆದಂತೆ ಅಥವಾ, ಬೆಣ್ಣೆಯನ್ನು ಪಡೆಯಲು ನೀರನ್ನು ಕಡೆದಂತೆ ವ್ಯಥವೆಂದು ಹೇಳುತ್ತಾರೆ. ಇವುಗಳ ಬಗ್ಗೆ
“ಭಕ್ತಿ ಭಕ್ತಿ” ಎಂದು ಜನರ ಹೇಳುವ ಅದು ನಿಜವಾದ ಭಕ್ತಿಯಲ್ಲ. ಜನರು ಅವುಗಳ ಬಗ್ಗೆ
ನಿರ್ಮಿಸುವ ಕಥೆಗಳಿಂದ ಹುಟ್ಟುವ ಮೌಡ್ಯ ಮತ್ತ ಭಯ. ಈ ಮೌಢ್ಯ ಮತ್ತು ಭಯ ಜನರು ಅವುಗಳನ್ನು ನಾನಾರೂಪದಲ್ಲಿ ಪೂಜಿಸುವಂತೆ ಮಾಡುತ್ತವೆ. ಕಾಲಾಂತರದಲ್ಲಿ
ಸ್ವತಃ ಹಾಳಾಗುವ ಈ ದೇವರುಗಳು ಮನುಷ್ಯನಿಗೆ ತಾವೇನು ಕೊಡಬಲ್ಲವು? ಇಂತಹ
ದೇವರುಗಳನ್ನು ಪೂಜಿಸುವುದು ಎಂದರೆ ಟೊಳ್ಳನ್ನು ಕೈಯಿಂದ ಕುಟ್ಟಿದಂತೆ. ಟೊಳ್ಳನ್ನು
ಕುಟ್ಟಿದರೆ ಕೈ ನೋವಾಗಿ ಅದಕ್ಕೆ ಬಾವು ಬರುತ್ತದೆ ಅಷ್ಟೆ. ಪರತತ್ವವನ್ನು ಬಿಟ್ಟು ಉಳಿದ
ದೇವರುಗಳೆಲ್ಲ ಯಾವ ದೇವತ್ವವೂ ಇಲ್ಲದ ಟೊಳ್ಳು ವಸ್ತುಗಳು. ಅಂತಹವುಗಳನ್ನು ಪೂಜಿಸದರೆ
ಕೇವಲ ಪೂಜಿಸಿದ ಆಯಾಸವೇ ಅದರ ಫಲ. ಆದ್ದರಿಂದ ಶಾಶ್ವತವಾದದ್ದನ್ನು, ನಿತ್ಯ
ಸತ್ಯವಾದದ್ದನ್ನು, ಪೂಜಿಸಬೇಕು ಎನ್ನುತ್ತಾರೆ ಬಸವಣ್ಣನವರು.
Wonderful Vachanas.
ReplyDeleteDon't go to the Himalayas to seek him, stay in his creation and yet out of it, like a lotus that grows in water but is not in it...we have to learn to stay अलिप्त A difficult task not achieved without His grace. We keep on doing the karya and not wait for what it gives us..Again, hard tasks. And don't fall for all these various forms--that's what they are, idols, without substance. There was a गुजराती भगत who used to say, एक मूरख ने एवी टेव, पत्थर एटला पूजे देव. One 'stupid-ignorant' person was in the habit of bowing to all the rocks he came across, thinking there was god in them!
Meera