Friday, May 2, 2014

Vachana 192: Giriya Shikaradamele Kulithukondu – Sitting on top of the Mountain!


VACHANA IN KANNADA

ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನ್ನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದೊಡನೆ
ಸವೆದ ಪಾಷಾಣ!
ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು
ಏಸು ಕಾಲವಿರ್ದಡೇನು? ಅದರಂತು ಕಾಣಿರಣ್ಣಾ.

TRANSLITERATION

giriya shikharada mEle kuLitukoMDu, jaDeyannErisikoMDu
huttEri hAvu suttidaDEnayyA?
kRutyuga, trEtAyuga, dvAparayuga, kaliyugadoDane
saveda paShANa!
namma kUDalsaMgana sharaNara prasAdajIvigaLalladavaru
Esu kaalavirdaDEnu? adaraMtu kANiraNNA.

CLICK HERE FOR A RECITATION


TRANSLATION (WORDS)

giriya shikharada mEle( on top of the hill, mountain) kuLitukoMDu(sitting), jaDeyannErisikoMDu (tying hair on the head)
huttEri (ant hill grown)  hAvu (snake)  suttidaDEnayyA (what if snake is wound around sir)?
kRutyuga, trEtAyuga, dvAparayuga, kaliyugadoDane (four names of YUGAs, eras)
saveda paShANa (is like a stone eroded with time, YUGAs,) !
namma kUDalsaMgana sharaNara (our Kudalsangama’s devotees’) prasAdajIvigaLalladavaru (those who do not accept  everything as blessing)
Esu kaalavirdaDEnu (what if they live any amount of time)? adaraMtu kANiraNNA (they surely will succumb to death).

VACHANA IN ENGLISH

What if one is sitting on top of the mountain, with the hair tied into a braid on top of the head,
the ant hill grown around and a snake wound around, Sir!
Like a stone eroded over all the four Eras (kRuta, trEta, dvApara and kali)!
Those who do not accept everything as blessing from our kUdalasangama’s devotees,
no matter how long they live, they surely will succumb to death!

COMMENTARY

Our great books have innumerable stories of individuals in pursuit of the Divine subjecting themselves to lot of hardship. They give up their worldly activities and sit on top of mountains or secluded places. They remain so still that the ant hill grows around their bodies and eventually a serpent occupies the ant hill and surrounds their body. The story normally ends with the Divine appearing eventually and offering the Boone the seeker wanted. Basavanna might have come across individuals subjecting themselves to such hardship. He says that subjecting the body to such hardship does not take one close to the Divine. One has to be in the world created by Him for us. One has to gain the awareness of what the world is about and realize that it is a blessing from Him. One has to realize that everything one does is His work and it is for Him. When such awareness strikes, one has seen the Divine. In the absence of such awareness, one is like a stone exposed to the weather for ages, yet remains a stone.

Once again, this Vachana drives home the concept of being completely here (in this world), being unselfishly active (Kaayaka) and realizing Him in every aspect of life and appreciating everything one has as His blessing. That is the only way to reach the Divine!

Let us heighten our awareness to make Him reside within us!
   
KANNADA COMMENTARY

ಅರ್ಥ:

ಗಿರಿಯ ಶಿಖರದ ಮೇಲೆ ಕುಳಿತುಕೊಂಡು,(ಗಿರಿ ಶಿಖರದ ಮೇಲೆ ತಪಸ್ಸಿಗೆ ಕುಳಿತುಕೊಂಡು) ಜಡೆಯನ್ನೇರಿಸಿಕೊಂಡು (ಜಡೆಯನ್ನು ಬೆಳೆಸಿ ತಲೆಯ ಮೇಲೆ ಕಟ್ಟಿಕೊಂಡು)
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ? (ಸುತ್ತ ಹುತ್ತು ಬೆಳೆದು ಹಾವು ಸುತ್ತಿಕೊಂಡಿದ್ದರೇನು?)
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದೊಡನೆ
ಸವೆದ ಪಾಷಾಣ! (ಅದು ಅನೇಕ ಯುಗಗಳಿಂದ ಸವೆದು ಹೋದ ಕಲ್ಲಿನ ಸಮಾನ)
ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು (ಶರಣರನ್ನು ಅರಿತು ಅವರ ಪ್ರಸಾದದಿಂದ ಬದುಕದವರು)
ಏಸು ಕಾಲವಿರ್ದಡೇನು? (ಎಷ್ಟು ಕಾಲ ಜೀವಿಸಿದ್ದರೇನು?)  ಅದರಂತು ಕಾಣಿರಣ್ಣಾ.(ಅವರು ಸಾವಿಗೆ ಈಡಾಗುತ್ತಾರೆ)

ತಾತ್ಪರ್ಯ:

ಇಲ್ಲಿ ಬಸವಣ್ಣನವರು ಶರಣನ್ನರಿಯವುದು ಮುಖ್ಯ, ಮತ್ತು ಹಾಗೆ ಮಾಡಲು ಗಿರಿ ಶಿಖರಗಳ ಮೇಲೆ ಕುಳಿತು ತಪಸ್ಸು ಮಾಡುವ ಅವಶ್ಯಕತೆಯಿಲ್ಲವೆಂದು ಹೇಳುತ್ತಾರೆ.

ಬಸವಣ್ಣನವರ ಸಮಯದಲ್ಲಿ  ಅನೇಕರು ಗುಹೆಗಳಲ್ಲಿ, ಬೆಟ್ಟ ಶಿಖರಗಳಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದಿರಬೇಕು.  ಅಂತಹವರ ಸುತ್ತ ಹುತ್ತ ಬೆಳೆದು ಹಾವುಗಳು  ಇರುವ ಕತೆಯನ್ನು ಹುಟ್ಟಿಸಿ ಜನರು ಅಚ್ಚರಿಪಡುತ್ತಿದ್ದಿರಬೇಕು. ಜನರು ಅವರನ್ನು ಹಾಡಿ ಹೊಗಳುವುದು. ಅವರನ್ನು ಪೂಜಿಸುವುದು, ಅವರನ್ನು ಅನುಕರಿಸುವುದು ಮಾಡುತ್ತಿದ್ದಿರಬೇಕು. ಜನರ ಇಂತಹ ಮೌಢ್ಯವನ್ನು ಕಂಡು ಬಸವಣ್ಣನವರು ನೊಂದಿರಬೇಕು. ಅಂತಹವರನ್ನು ಕುರಿತು ಅವರು ಹೇಳುತಾರೆ-


ಬೆಟ್ಟ ಗುಡ್ಡಗಳಲ್ಲಿ ಕುಳಿತು ತಪಸ್ಸುಗೈಯುತ್ತ ಅವರ ಮೇಲೆ ಹುತ್ತ ಬೆಳೆದರೇನು? ಹಾವು ಸುತ್ತಿಕೊಂಡಿದ್ದರೇನು? ಆತನೇನು ಮಹಾನನೆ? ಅದನ್ನು ಮಾಡುವುದಕ್ಕೆ ಮಹಾ ವ್ಯಕ್ತಿ ಬೇಕಾಗಿಲ್ಲ. ಯುಗ ಯುಗಗಳೇ ಕಳೆದು ಹೋದರೂ ಅಂತಹ ವ್ಯಕ್ತಿ ಕೂಡಲಸಂಗಮನನ್ನು ಕಾಣಲಾರ. ಏಕೆಂದರೆ ಕೂಡಲಸಂಗಮನನ್ನು ಕಾಣಲು ದೇಹವನ್ನು ದಂಡಿಸುವ ಅವಶ್ಯಕತೆಯಿಲ್ಲ. ಒಬ್ಬನೇ ದೂರದಲ್ಲೆಲ್ಲೋ ಹೋಗಿ ಕುಳಿತಿರುವ ಅಗತ್ಯವಿಲ್ಲ. ದಿನಗಟ್ಟಲೆ ಒಂದೆಡೆಯಲ್ಲ್ಲಿ ಕುಳಿತು ಮೈಮೇಲೆ ಹುತ್ತ ಬೆಳೆಸಿಕೊಳ್ಳುವ ಅಗತ್ಯವಿಲ್ಲ, ಹಾವುಗಳಿಂದ ಸುತ್ತುವರಿಯುವ ಅಗತ್ಯವಿಲ್ಲ. ಸಮಯ ಕಳೆದಂತೆ ಆತನ ಮೈ ಮೇಲೆ ದೊಡ್ಡ ಹುತ್ತ ಬೆಳೆಯಬಹುದು, ಜಡೆಯೂ ಬೆಳೆಯಬಹುದು. ಅಂತಹ ವ್ಯಕ್ತಿ ನಾಲ್ಕೂ ಯುಗಗಳಲ್ಲಿ ಬಿಸಿಲು ಮಳೆ ಗಾಳಿಗೆ ಒಡ್ಡಿಹೋಗಿ ಸವೆದ ಕಲ್ಲಿನ ಸಮಾನವೇ ಹೊರತು ಹೆಚ್ಚಿನವನೇನೂ ಅಲ್ಲ. ಆತನು ತಪ್ಪಸ್ಸಿಗೆ ಕುಳಿತುಕೊಳ್ಳುವ ಮುಂಚೆ ಇದ್ದ ಅಜ್ಞಾನದ ಕತ್ತಲೆಯಲ್ಲಿಯೇ ಸದಾ ಇರುತ್ತಾನೆ ಮತ್ತು ಆ ಕತ್ತಲೆಯಲ್ಲಿಯೇ ಸಾಯುತ್ತಾನೆ. ತಪಸ್ಸು, ಜಗತ್ತಿನಿಂದ ಪ್ರತ್ಯೇಕಪಡಿಸಿಕೊಳ್ಳುವಿಕೆ, ಹುತ್ತ, ಹಾವು ಯಾವುವೂ ಆತನಿಗೆ ಬೆಳಕನ್ನು ಕೊಡಲಾರವು. ಈ ಪ್ರಪಂಚದಲ್ಲಿಯೇ ಇದ್ದು ಇದನ್ನು ತಿಳಿದುಕೊಂಡು, ಇದರೊಂದಿಗೆ ವ್ಯವಹರಿಸಿ, ಇದರ ಹಿಂದೆ ಇರುವ ಅರಿವನ್ನು ಕಂಡುಕೊಳ್ಳುವುದು ಮುಖ್ಯ. ಆ ಅರಿವನ್ನು ಪಡೆದುಕೊಂಡಾಗ ಇಲ್ಲಿರುವ ಪ್ರತಿಯೊಂದೂ ಕೂಡಲಸಂಗಮ ಶರಣರ ಪ್ರಸಾದವೆಂದು ತಿಳಿದು ಬರುತ್ತದೆ. ಅಂತಹ ಅರಿವಿನಿಂದ ವ್ಯಕ್ತಿ ಈ ಪ್ರಪಂಚವನ್ನು ಬಿಟ್ಟು ದೂರ ಓಡಿ ಹೋಗುವುದಿಲ್ಲ. ಇಲ್ಲಿಯೇ ಇದ್ದುಕೊಂಡು ಶರಣತ್ವವನ್ನು ಹೊಂದುತ್ತಾನೆ. ಆತನ ಅರಿವಿನ ಬೆಳಕು ಇತರರಿಗೂ ಬೆಳಕಾಗುತ್ತದೆ. ಅಂತಹ ವ್ಯಕ್ತಿಗೆ ಸಾವಿಲ್ಲ. ಅಂತಲ್ಲದವರು ಸಾವಿಗೆ ಬಲಿಯಾಗುತ್ತಾರೆ, ಎನ್ನುತ್ತಾರೆ ಬಸವಣ್ಣನವರು. 

No comments:

Post a Comment