Friday, April 25, 2014

Vachana 191: Abhyasavenna Vartisitayya – I am a Creature of my Habits!

VACHANA IN KANNADA

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ
ಆನು ನಿಮ್ಮ ಮನಂಬೊಗುವನ್ನಕ್ಕ
ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ.   

TRANSLITERATION

abhyaasavenna vartisittayyaa
bhakti saadhyavaagadu, naanEvenayyaa
aanu nimma manaMboguvannakka
nIvenna manaMboguvannakka
kaayaguNaMgaLa kaLedavarige sharaNeMbe kUDalasaMgamadEvaa.


CLICK HERE FOR A RECITATION

http://youtu.be/VpJ8d7-67K8

 
TRANSLATION (WORDS)

abhyaasavenna (habit makes me)  vartisittayyaa (act, Oh sir!)
bhakti (devotion) saadhyavaagadu( is not possible), naanEvenayyaa (I am helpless)
aanu (I) nimma (your)  manaMboguvannakka (until enter your mind)
nIvenna (you, my) manaMboguvannakka (enter my mind)
kaayaguNaMgaLa (worldly interests) kaLedavarige (those who have shed there) sharaNeMbe (I bow to) kUDalasaMgamadEvaa(Kudalasangamadeva)


VACHANA IN ENGLISH

 
Habit makes me act, oh Sir!
Devotion has become impossible, I am helpless, Oh Sir!
Until I enter your mind,
and You enter my mind,
I bow to those who have shed their worldly traits,
Oh, Lord Kudala Sangama!


COMMENTARY
 
In this Vachana, Basavanna is revealing his deep introspection saying that the devotion has not set in him because of his inbuilt habits. He says that he has become helpless and cannot escape from the clutch of his habits. Further, he sees the only way is to surrender to those who have shed their worldly traits until the Lord enters his mind and his mind sets in the Lord!
Indeed, habits make the man. Habits are the result of what we have been exposed repetitiously. They come from exposure to culture, people and practices. They become our integral parts and getting out of the habit is not easy even if one tries. It is easy and less stressful to follow the dictum of our habits. All our actions are dictated by these habits. We routinely respect or despise others because of our habits. Our environment provides us a view of God and believing in that view and corresponding rituals become our habit. We seldom think twice about our action dictated by our habits. But, when we start a deep inspection our habitual actions, we find new and real meaning behind what we are surrounded with. Basavanna is longing for such insight to get deep into devotion. He is surrendering to those who have already gained such insights and have shed the worldly traits (habits) as a way of reaching that state.
While the Vachana is advocating a deep introspection of our habits to become a true devotee, such introspection is a must for us to see the world in a new light and gain the perspective of what we are!

Let us shed our habits and gain the new sight!

KANNADA COMMENTARY
 
ಅರ್ಥ:
 
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ( ನಾನು ಅಭ್ಯಾಸಬಲದಿಂದ ವರ್ತಿಸುತ್ತಿದ್ದೇನೆ)
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ (ನನಗೆ ಭಕ್ತಿ ಸಾಧ್ಯವಾಗುತ್ತಿಲ್ಲ, ಏನು ಮಾಡಲಿ)
ಆನು ನಿಮ್ಮ ಮನಂಬೊಗುವನ್ನಕ್ಕ ( ನಾನು ನಿಮ್ಮ ಅಂತರಂಗವನ್ನು ಸೇರಿಹೋಗುವವರೆಗೆ)
ನೀವೆನ್ನ ಮನಂಬೊಗುವನ್ನಕ್ಕ (ನೀವು ನನ್ನ ಅಂತರಗವನ್ನು ಸೇರಿಹೋಗುವವರೆಗೆ)
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ (ತನುಗುಣಗಳನ್ನು ಕಳೆದವರಿಗೆ ಶರಣೆನ್ನುವೆನು)

ತಾತ್ಪರ್ಯ:
 
ಇಲ್ಲಿ ಬಸವಣ್ಣನವರು ತನಗೆ ಭಕ್ತಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ತಮ್ಮನ್ನು ತಾವು ಆಳವಾಗಿ ಗಮನಿಸಿ ಹೇಳುತ್ತಿದ್ದಾರೆ.
ಅಭ್ಯಾಸವು ನಾನು ಭಕ್ತಿ ಮಾಡದಂತೆ ತಡೆಯುತ್ತಿದೆ ಎನ್ನುತ್ತಾರೆ. ಅಭ್ಯಾಸ ಎಂದರೆ ರೂಢಿಯಿಂದ ಬಂದದ್ದು ಅಥವಾ ಪುನರಾವರ್ತಿಸುವುದು. ನಮ್ಮೆಲ್ಲರ ನಡತೆಗಳು ಅಭ್ಯಾಸದಿಂದಲೇ ಬಂದವುಗಳು. ಅಭ್ಯಾಸಗಳು ಬಹಳ ಆಳವಾಗಿ ಬೇರೂರಿರುವಂತಹವು. ಹುಟ್ಟಿನಿಂದಲೇ ಮೈಗೂಡಿದಂತಹವು. ಸಂಸ್ಕೃತಿಯಿಂದ, ಪರಂಪರೆಯಿಂದ  ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವಂತಹವು. ಅವುಗಳನ್ನು ಕಳೆದುಕೊಳ್ಳುವುದು  ಸುಲಭವಲ್ಲ. ಅಭ್ಯಾಸವು ವ್ಯಕ್ತಿಯನ್ನು, ವಿಷಯವನ್ನು ಅಥವಾ ಯಾವುದನ್ನೇ ಆಗಲಿ ಹೊಸದಾಗಿ ಕಂಡುಕೊಳ್ಳುವುದರಿಂದ ತಡೆಯುತ್ತದೆ. ನಾವು ನಮ್ಮ ನಡತೆಯನ್ನು  ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ತಿಳಿಯುತ್ತದೆ, ನಮ್ಮ ಎಲ್ಲ ಕ್ರಿಯೆಗಳು ಅಭ್ಯಾಸದ ಪರಿಣಾಮವಾಗಿವೆ ಎಂದು. ಅಭ್ಯಾಸ ಬಲದಿಂದಲೇ ನಾವು ಬೇರೊಬ್ಬ ವ್ಯಕ್ತಿಯ ಬಗ್ಗೆ ಗೌರವ ಅಥವಾ ಅನಾದರ ತಾಳುತ್ತೇವೆ.  ಉದಾಹರಣೆಗೆ- ದೇವರ ಬಗ್ಗೆ ನಾವು ತಾಳುವ  ಭಾವನೆಗಳು ಇನ್ನಾರದೋ ಭಾವನೆಗಳನ್ನು ಅಥವಾ ಪರಂಪರಾಗತವಾಗಿ ಯೋಚಿಸುವ ರೀತಿಗಳನ್ನು ಅವಲಂಬಿಸಿರುತ್ತವೆ. ನಾವು ಸ್ವತಃ ಹೊಸದಾಗಿ ದೇವರ ಬಗ್ಗೆ ಎಂದೂ ಯೋಚಿಸುವುದಿಲ್ಲ. ಯಾರನ್ನೋ ನಂಬುವುದು, ಇನ್ನೊಬ್ಬರನ್ನು ಅವಲಂಬಿಸಿ ನಿರ್ಣಯ ಕೈಗೊಳ್ಳುವುದು ಇವೆಲ್ಲ ಅಭ್ಯಾಸದ ಬಲದಿಂದಲೇ ನಡೆಯುತ್ತವೆ. ಏಕೆಂದರೆ ಅದು ಬಹು ಸುಲಭದ ದಾರಿ. ನನ್ನ ಬುದ್ಧಿ ಶಕ್ತಿ  ಕೆಲಸಮಾಡಬೇಕಾಗಿಲ್ಲ.
 
ಬಸವಣ್ಣನವರು, ತಾನೂ ಅಭ್ಯಾಸಕ್ಕೆ ಬಲಿಯಾಗಿದ್ದೇನೆ, ಆದ್ದರಿಂದ ತನಗೆ ಭಕ್ತಿ ಕೈಗೂಡುತ್ತಿಲ್ಲ ಎನ್ನುತಿದ್ದಾರೆ. ಭಕ್ತಿ ಮೂಢನಂಬಿಕೆಯಲ್ಲ. ಅದು  ಪರಂಪರೆಯಲ್ಲ. ಅದು ಸಂಸ್ಕೃತಿಯಲ್ಲ, ಅದು ಅಭ್ಯಾಸವಲ್ಲ.  ಅಭ್ಯಾಸದ ನಡತೆ, ನಿಂತ ನೀರಾದ ಪರಂಪರೆಯಿಂದ, ಸಂಸ್ಕೃತಿಯಿಂದ, ಅರಿವೇ ಇಲ್ಲದ ಜಡ್ಡುಗಟ್ಟಿದ ನಡತೆ. ಅರಿವು ಇಲ್ಲದ ಅಭ್ಯಾಸದ ನಡತೆ ಮೂಢನಂಬಿಕೆಯಾಗುತ್ತದೆ.  ತಾನು ಎಲ್ಲವೂ ಅಭ್ಯಾಸದಿಂದಲೇ ಮಾಡುತ್ತಿದ್ದೇನೆ.  ಭಕ್ತಿ ಮತ್ತು ಇತರ ವಿಷಯಗಳನ್ನು ನೂತನವಾಗಿ ಕಾಣುವ ಶಕ್ತಿ ಎನ್ನಲಿಲ್ಲ, ಏನು ಮಾಡಲಿ ಎಂದು ಹಳಹಳಿಸುತ್ತಿದ್ದಾರೆ ಬಸವಣ್ಣನವರು.
ಎಲ್ಲಿಯವರೆಗೆ  ನನ್ನ ಮನಸ್ಸಿನಲ್ಲಿ ಲಿಂಗವು ಪೂರ್ತಿಯಾಗಿ ಸೇರಿಹೊಗುವುದಿಲ್ಲವೋ ಅಥವಾ ನನ್ನ ಮನಸ್ಸು ಪೂರ್ತಿಯಾಗಿ ಲಿಂಗದಲ್ಲಿ ಸೇರಿಹೋಗುವುದಿಲ್ಲವೋ ಅಲ್ಲಿಯವರೆಗೆ ನಾನು ತನುಗುಣಗಳನ್ನು ಮೀರಿದ ನಿಮ್ಮ ಶರಣರಿಗೆ ಶರಣೆನ್ನುತ್ತೇನೆ. ಎಂದರೆ ಎಲ್ಲಿಯವರೆಗೆ ನಾನು ನನ್ನ ಅಭ್ಯಾಸಗಳಿಂದ ಬಿಡುಗಡೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಅಭ್ಯಾಸಗಳಿಂದ ಬಿಡುಗಡೆ ಪಡೆದ, ಎಲ್ಲ ತನುಗುಣಗಳಿಂದ ಮುಕ್ತರಾದ ಶರಣರಿಗೆ ಶರಣೆನ್ನುವೆನು ಎನ್ನುತ್ತಾರೆ ಬಸವಣ್ಣನವರು.





No comments:

Post a Comment