Friday, April 18, 2014

Vachana 190: Manakke Naachada Vachana – Mind and the Speech

VACHANA IN KANNADA
 
ಮನಕ್ಕೆ ನಾಚದ ವಚನ  ವಚನಕ್ಕೆ ನಾಚದ ಮನ
ಕುಂದು- ಹೆಚ್ಚು ನುಡಿವೆ
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ
ಕೂಡಲಸಂಗಮ ಶರಣರ ಎನ್ನಾಳ್ದರೆಂಬೆ

TRANSLITERATION

 
manakke naacada vacana  vacanakke naacada mana
kuMdu- heccu nuDive
oMdu maatina gellakke hiDidu hOruve
kUDala saMgama sharanara ennaaLdareMbe

CLICK HERE FOR A RECITATION
 

TRANSLATION (WORDS)

manakke (to/of the mind) naacada (not ashamed)  vacana (the word)  vacanakke (to/of the word) naacada (not ashamed) mana (the mind)
kuMdu (snag,flaw)- heccu nuDive (I talk too much)
oMdu maatina (one statement) gellakke (to win over) hiDidu hOruve (hold on and fight)
kUDala saMgama sharanara (devotees of Kudalasanagama) ennaaLdareMbe (I say, are my masters)

VACHANA IN ENGLISH

The word not ashamed (shy of) of the mind, the mind not ashamed of the word.
I speak with flaw and in excess.
To win over one statement I hold on and fight.
I say, Kudalasangama’s devotees are my masters!

COMMENTARY

This Vachana reflects the intense inspection on part of Basavanna of the duality of the internal and the external. The characteristic of the mind (internal) is to jump from thought to thought. It keeps this hopping going on and we hardly notice what the mind is up to. It becomes our second nature to let the mind wander without paying any attention to it, especially when we start speaking (external). Only when we start observing our mind and speech, we notice that most often what we speak is not what is on our mind. For instance, we start thinking that we should be extremely courteous to the gentleman approaching us. But, as he approaches us we simply do not offer him the courtesy we deemed he deserves, rather we start speaking to him in ordinary tones. Our mind keeps telling us not to eat the sweets offered to us since they have ill effect on our health. But, we start saying how tasty the sweets are and indulge in consuming them. Basavanna comments on this duality saying that the mind is not paying attention to the speech and the speech is ignoring the mind. He feels that he does not really weigh his words before they are spoken and hence they are flawed. He feels that the spoken words are unnecessarily excessive since speaking has become a routine habit. Further, we make a statement and will even be prepared to fight to justify what we said is right. Basavanna says ‘I say that I am the servant of devotees of the Lord, just to show off rather than being a true devotee’.

This Vachana again illustrates how keen the Sharanas were in maintaining the internal and external purity – the purity in thoughts and the purity in deeds!

Let us speak what we think!

KANNADA COMMENTARY
 
ಅರ್ಥ:
 
ಮನಕ್ಕೆ ನಾಚದ ವಚನ (ಮಾತು) ವಚನಕ್ಕೆ ನಾಚದ ಮನ
ಕುಂದು (ನೂನ್ಯತೆ,ಕೊರತೆ)- ಹೆಚ್ಚು ನುಡಿವೆ
ಒಂದು ಮಾತಿನ ಗೆಲ್ಲಕ್ಕೆ (ಗೆಲ್ಲುವುದಕ್ಕೆ) ಹಿಡಿದು ಹೋರುವೆ (ಚರ್ಚಿಸುವೆ, ವಾದಿಸುವೆ)
ಕೂಡಲಸಂಗಮ ಶರಣರ ಎನ್ನಾಳ್ದರೆಂಬೆ(ಶರಣರು ನನ್ನ ಒಡೆಯರು ಎನ್ನುವೆ)

ತಾತ್ಪರ್ಯ:
 
ತಮ್ಮ ಮನ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇದು ಬಸವಣ್ಣನವರ ಇನ್ನೊಂದು ವಚನ.
ತಮ್ಮ ಮನವನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುತ್ತಿದ್ದಾರೆ. ಮನಸ್ಸು ಏನೇನೋ ಮಾಡುತ್ತದೆ, ಏನೇನೋ ಯೋಚಿಸುತ್ತದೆ. ಸುಮ್ಮನಿರುವ ಸ್ವಭಾವ ಅದರದಲ್ಲ. ಸದಾ  ಏನಾದರೂ ಯೋಚಿಸುವ ಅಭ್ಯಾಸ ಅದಕ್ಕೆ. ಈ ಅಭ್ಯಾಸ ಎಷ್ಟು ಆಳವಾದದ್ದು ಎಂದರೆ ಅನೇಕ ಸಲ ವ್ಯಕ್ತಿ ಅದನ್ನು ಗುರುತಿಸುವುದೂ ಇಲ್ಲ. ಗುರುತಿಸಿದಾಗ ಅದು ಯೋಚಿಸುವುದೇ ಬೇರೆ, ಮತ್ತು ತಾನು ಮಾತಾಡುವುದೇ ಬೇರೆ ಎಂದು ತಿಳಿದುಬರುತ್ತದೆ. ಮಾತಿಗೂ ಮತ್ತು ಅದರ ಯೋಚನೆಗೂ ಏನೇನೂ ಸಂಬಂಧವಿಲ್ಲ ಎಂಬುದು ಅರಿವಿಗೆ ಬರುತ್ತದೆ. ಮನಸ್ಸು ಮತ್ತು ವಚನದ ಈ ಅಸಂಬಂದ್ಧತೆ ವ್ಯಕ್ತಿತ್ವದಲ್ಲಿಯ ಒಂದು ಕೊರತೆ.
ಉದಾಹರಣೆಗೆ ಮನಸ್ಸು ಹೇಳುತ್ತದೆ: ಆ ಗೌರವಾನ್ವಿತ ವ್ಯಕ್ತಿಯೊಂದಿಗೆ ಪ್ರೀತಿಯಿಂದ ಮಾತಾಡು. ಆತನು ಹೇಳುವುದನ್ನು ಕೇಳು ನಿನಗೆ ಒಳ್ಳೆಯದಾಗುತ್ತದೆ, ಎಂದು. ಆದರೆ ಆತ ಬಂದಾಗ  ನಮ್ಮ ನುಡಿಗಳು ಸೌಜನ್ಯಯುಕ್ತವಾಗಿರುವುದಿಲ್ಲ. ಮಾತುಗಳಲ್ಲಿ ’ನನಗೆ ನೀನು ಬುದ್ಧಿ ಹೇಳುವುದು ಬೇಕಾಗಿಲ್ಲ, ನನಗೆಲ್ಲ ಗೊತ್ತಿದೆ’  ಎಂಬ ಧೋರಣೆ ಇರುತ್ತದೆ.
ಅದನ್ನು ತಿನ್ನ ಬಾರದು. ಅದು ಸಕ್ಕರಯಿಂದ  ಮಾಡಿರುವುದು. ಆರೋಗ್ಯಕ್ಕೆ ಒಳ್ಳೆಯದಲ್ಲ, ಎಂದು ನುಡಿಯುತ್ತೇವೆ.
ಅದೋ ಆ ಸಿಹಿ ತಿಂಡಿ ತುಂಬಾ ರುಚಿಯಾಗಿದ್ದಂತೆ ಕಾಣುತ್ತದೆ, ತಿಂದು ಬಿಡು, ಆರೋಗ್ಯ ಕೆಟ್ಟಾಗ ನೋಡಿಕೊಳ್ಳೋಣ, ಎಂದು ಮನಸ್ಸು ಹೇಳುತ್ತದೆ.
 
ಮನಸ್ಸು ಬೇಡವಾದದ್ದೆನ್ನೆಲ್ಲ ಯೋಚಿಸುತ್ತದೆ. ಆದರೆ, ಬಾಯಿಯಿಂದ ತನ್ನಲ್ಲಿ ಯಾವ ಕೆಟ್ಟ ಗುಣಗಳೂ ಇಲ್ಲವೆಂಬಂತೆ ಮಧುರವಾದ ನುಡಿಗಳು ಹೊರಹೊಮ್ಮುತ್ತವೆ.  ನಮ್ಮ ಮಾತುಗಳನ್ನು ಕೇಳಿದವರು ನಮ್ಮ ಕೆಟ್ಟ ಮನವನ್ನು, ಅದು ಯೋಚಿಸುತ್ತಿರುವ ಕೀಳು ವಿಚಾರಗಳನ್ನು ಊಹಿಸಲೂ ಆರರು. ಅವರು ನಮ್ಮನ್ನು ನಮ್ಮ ಮಾತುಗಳಿಂದ ಒಳ್ಳೆಯವರೆಂದೇ ನಂಬುತ್ತಾರೆ. ಅಂತಹ ಕೆಟ್ಟ ಮನಸ್ಸಿಗೆ  ನುಡಿಯು ನಾಚದು. ಅಯ್ಯೋ ನನ್ನ ಮನಸ್ಸು ಯೋಚಿಸುತ್ತಿರುವುದೇ ಬೇರೆ, ನಾನು ಅದಕ್ಕೆ ತದ್ವಿರುದ್ಧವಾಗಿ ನುಡಿಯುತ್ತಿದ್ದೇನೆ ಎಂದು ಅದು  ನಾಚುವುದಿಲ್ಲ. ಅದೇ ರೀತಿಯಾಗಿ ನುಡಿಗಳಿಗೆ ಮನಸ್ಸು ತಾನು ನಾಚದು. ನುಡಿಗಳಲ್ಲಿ ನಾವು ಹೇಳುವುದೊಂದು ಮನಸ್ಸು ತಾನು ಯೋಚಿಸುವುದು ಇನ್ನೊಂದು. ಮಾತುಗಳು ಕೆಟ್ಟಮಾತಾಡಬೇಡ ಎಂಬ  ಉಪದೇಶ  ಕೊಡುತ್ತವೆ. ಆದರೆ ಮನಸ್ಸು  ಕೆಟ್ಟದ್ದನ್ನೇ ಯೋಚಿಸುತ್ತದೆ. ವಚನಕ್ಕೆ ಮನಸ್ಸು ನಾಚದು. ಅಯ್ಯೋ ನಾನು ಹೇಳಿದಂತೆ ನಡೆಯುತ್ತಲಿಲ್ಲ, ಎಂದು ಮರುಗದು. ತಾನು ಹೇಳುವುದೇ ಬೇರೆ ಮತ್ತು ಮನಸ್ಸಿನಲ್ಲಿ ಯೋಚಿಸುತ್ತಿರುವುದೇ ಬೇರೆ. ಈ ಅಸಂಬದ್ಧತೆ ವ್ಯಕ್ತಿತ್ವದ ಒಂದು ಕೊರತೆ. ಇದರಿಂದ ನಾನು  ಬೇಕಾದುದಕ್ಕಿಂತ ಹೆಚ್ಚು ಮಾತಾಡುತ್ತೇನೆ ಎನ್ನುತ್ತಾರೆ ಬಸವಣ್ಣನವರು. ಮಾತಿನ ಚಟಕ್ಕೆ ಬಿದ್ದು ನಾನು ಅರಿವೇ ಇರದ ಯಾವುದೋ ಒಂದು ಮಾತಿಗಾಗಿ, ನನ್ನ ಮಾತೇ ಸರಿಯೆಂದು ಚರ್ಚೆಯಲ್ಲಿ ಗೆಲ್ಲುವುದಕ್ಕಾಗಿ ವಾದಕ್ಕಿಳಿಯುತ್ತೇನೆ, ಇಷ್ಟೇ ಅಲ್ಲದೆ, ಕೂಡಲಸಂಗಮನ ಶರಣರು ನನ್ನ ಒಡೆಯರು, ಎಂದು ಹೇಳಿಕೊಳ್ಳುತ್ತೇನೆ, ಎನ್ನುತ್ತಾರೆ. ಆ ಒಡೆಯರಂತೆ  ನಡೆಯುವುದಿಲ್ಲ ನಾನು. ಅಂತಹ ಮಹಾ ವ್ಯಕ್ತಿಗಳ ಗುಣಗಳು ನನ್ನಲ್ಲಿ ಎಳ್ಳೆನಿತೂ ಇಲ್ಲ ಎಂದು ತಮ್ಮ ನಡತೆಯ ಬಗ್ಗೆ ಯೋಚಿಸುತ್ತಿದ್ದಾರೆ.




No comments:

Post a Comment