VACHANA IN
KANNADA
ಕೆಯಿ
ಬೆಳೆವಲ್ಲಿ ಸದೆಗೆ ಮುನಿವರಲ್ಲದೆ, ಬೆಳೆಗೆ
ಮುನಿದವರುಂಟೆ ಅಯ್ಯಾ?
ಅರಿದಂಗವ
ತಾಳಿದವರಲ್ಲಿ ಮರೆವೆಗೆ ಮುನಿವರಲ್ಲದೆ, ಅರಿವಿಗೆ
ಮುನಿವರುಂಟೆ ಅಯ್ಯಾ?
ಕೊಲ್ಲಿ
ಆವಿಂಗೆ ಕಾಲ ಕಟ್ಟುವರಲ್ಲದೆ, ಮೊಲೆಯ ಕಟ್ಟಿದರುಂಟೆ ಅಯ್ಯಾ?
ಗುರುವಾದಡೂ
ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ
ಅರಿವಿಂಗೆ
ಶರಣು ಮರೆವಿಗೆ ಮಥನವ ಮಾಡಿದಲ್ಲದೆ ಇರೆ.
ಇದು ನೀವು
ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು
TRANSLITERATION
keyi beLevalli sadege munivarallade, beLege munivaruMTe
ayyaa?
aridaMgava
taaLidavaralli marevege munivarallade, arivige munidavaruMTe ayyaa?
kolli
aaviMge kaala kaTTuvarallade, moleya kaTTidaruMTe ayyaa?
guruvaadaDU
aagali, liMgavaadaDU aagali, jamgamavaadaDU aagali
ariviMge
sharaNu marevige mathanava maaDidallade ire
idu nIvu
koTTa arivina maarana iravu, sadaashivamUrthyliMgada baravu
CLICK HERE
FOR A RECITATION
TRANSLATION
(WORDS)
keyi (paddy)
beLevalli (in the place of growing) sadege (with the weed) munivarallade (people
get angry)
beLege (with
the crop) munivaruMTe (do people get angry) ayyaa?(sir)
ariidaMgava
taaLidavaralli (knowingly taking birth) marevege (with ignorance) munivarallade
(people get angry)
arivige
(with awareness) munidavaruMTe ayyaa?(sir!are
there people who get angry)
kolli ( mischievous)
aaviMge (cow’s) kaala (legs) kaTTuvarallade (are tied, but)
moleya
kaTTidaruMTe ayyaa? (is the udder tied)
guruvaadaDU
aagali (whether guru)
liMgavaadaDU
aagali(whether linga the icon)
jamgamavaadaDU
aagali (whether Jangama/devotee)
ariviMge
sharaNu (I will bow to awareness) marevige mathanava maaDidallade ire (I cannot
be without churning ignorance)
idu nIvu
koTTa (this is your gift) arivina
maarana iravu (Arivina Mara’s being)
sadaashivamUrthyliMgada
baravu (Sadashivamurthylinga’s arrival)
VACHANA IN ENGLISH
In a field
of Paddy, won’t the people be averse of the weeds? would they ever be averse of
the crop, Sir?
Would not
the people be averse to the ignorance of those taking rebirth knowingly? Would
they be averse to the awareness, Sir?
Would we not
tie the legs of the rogue cow? Would we ever tie the udder, Sir?
May it be
Guru (teacher), May it be Linga (icon), may it be Jangama (devotee),
I will bow
to the awareness; I cannot stay away from churning the ignorance!
This is your
gift of Arivina Maara’s being,
and Sadashivamurthylinga’s
arrival!
COMMENTARY
In this Vachana, Arivina Marithande highlights
the importance of ‘awareness’ and says that the Lord has gifted him the
attribute of churning the ignorance away once recognized to develop the
awareness. He uses two simple similes to illustrate his thoughts. In the field
of paddy, weeds are a nuisance. They do not become part of the crop; rather
they come in the way of the growth of Paddy. As such, people dislike weeds in
the paddy field. The Vachana asks, would one ever dislike the crop? When a cow
is rogue, one would tie her legs to help get the milk out; no one would tie the
udder. The Vachana advocates constantly moving towards the awareness and away
from the ignorance. One should be averse to the ignorance of those who continue
to go through rebirths and keep themselves immersed in the material world, but not to the awareness of those who
have lifted themselves above it. Arivina Marithande says that he bows to those who
are aware, may it be teacher, devotee or the icon. He has no appreciation for
those who just pretend to be a teacher or a devotee and those who are not really
aware of the meaning behind the icon.
Further, he cannot stay away from churning the ignorance away from
himself, and this nature of his is a gift from the Lord.
Let churning
the ignorance away become our nature!
KANNADA
COMMENTARY
ಕೆಯಿ
(ಭತ್ತ) ಬೆಳೆವಲ್ಲಿ ಸದೆಗೆ (ಕಳೆಗೆ) ಮುನಿವರಲ್ಲದೆ (ಬೇಸರಪಟ್ಟುಕೊಳ್ಳುವರು ಅಲ್ಲದೆ)
ಬೆಳೆಗೆ
ಮುನಿದವರುಂಟೆ ಅಯ್ಯಾ?
ಅರಿದಂಗವ
ತಾಳಿದವರಲ್ಲಿ (ತಿಳಿದೂ ಮರು ಜನ್ಮವ ಪಡೆದವರಲ್ಲಿರುವ )
ಮರೆವೆಗೆ (ಅಜ್ಞಾನಕ್ಕೆ) ಮುನಿವರಲ್ಲದೆ
ಅರಿವಿಗೆ
ಮುನಿವರುಂಟೆ ಅಯ್ಯಾ?
ಕೊಲ್ಲಿ
(ತುಂಟ) ಆವಿಂಗೆ (ಆಕಳಿಗೆ, ಹಸುವಿನ ) ಕಾಲ ಕಟ್ಟುವರಲ್ಲದೆ (ಕಾಲುಗಳನ್ನು ಕಟ್ಟುವರು ಅಲ್ಲದೆ)
ಮೊಲೆಯ
ಕಟ್ಟಿದರುಂಟೆ ಅಯ್ಯಾ?
ಗುರುವಾದಡೂ
ಆಗಲಿ
ಲಿಂಗವಾದಡೂ
ಆಗಲಿ
ಜಂಗಮವಾದಡೂ
ಆಗಲಿ
ಅರಿವಿಂಗೆ
ಶರಣು (ಅರಿವಿಗೆ ತಲೆ ಬಾಗುತ್ತೇನೆ) ಮರೆವಿಗೆ ಮಥನವ ಮಾಡಿದಲ್ಲದೆ ಇರೆ (ಮರೆವನ್ನು ಮಥಿಸದೆ
ಇರಲಾರೆನು).
ಇದು ನೀವು
ಕೊಟ್ಟ ಅರಿವಿನ ಮಾರನ ಇರವು
ಸದಾಶಿವಮೂರ್ತಿಲಿಂಗದ
ಬರವು
ತಾತ್ಪರ್ಯ:
ಇದು ಅರಿವಿನ ಮಾರಿತಂದೆಯವರ ಮತ್ತೊಂದು ವಚನ. ಇಲ್ಲಿ ಅವರು ಸಾಮಾನ್ಯವಾಗಿ
ಜನರು ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತ
ತನ್ನ ಸ್ವಭಾವದ ಬಗ್ಗೆ ಹೇಳುತ್ತಿದ್ದಾರೆ. ತನ್ನ ಆ ವಿಶಿಷ್ಟ ಸ್ವಭಾವ ಸದಾಶಿವಮೂರ್ತಿಲಿಂಗದ
ಅನುಗ್ರಹ ಎಂದು ಹೇಳುತ್ತಾರೆ.
ಭತ್ತದ ಹೊಲದಲ್ಲಿ ಬೆಳೆಯುವ ಕಳೆಗೆ ಜನರು ಮುನಿಯುವರು. ಅದನ್ನು ಕಿತ್ತುಹಾಕುವರು.
ಆದರೆ ಭತ್ತದ ಬೆಳೆಗೆ ಯಾರಾದರು ಮುನಿಯುತ್ತಾರೆಯೆ?
ಇಲ್ಲ. ಏಕೆಂದರೆ ಭತ್ತ ವ್ಯಕ್ತಿಯ ಹೊಟ್ಟೆ ತುಂಬುತ್ತದೆ. ಕಳೆಯಿಂದ ಯಾವ ಪ್ರಯೋಜನವೂ
ಇಲ್ಲ. ಅದು ತಿನ್ನಲು ಬರುವುದಿಲ್ಲ. ಪ್ರಾಣಮೂಲವಾದ ಭತ್ತದ ಸೊಂಪಾದ ಬೆಳೆಗೆ ಹಾನಿ ಮಾಡುತ್ತದೆ.
ಆದ್ದರಿಂದ ಅದನ್ನು ಯಾರೂ ಇಷ್ಟಪಡುವುದಿಲ್ಲ. ಜಗತ್ತಿನಲ್ಲಿ ಅಜ್ಞಾನದಿಂದ ಹುಟ್ಟು ಸಾವಿನ
ಚಕ್ರದಲ್ಲಿ ಸಿಕ್ಕು ಜನ್ಮತಾಳಿದವನ ಅಜ್ಞಾನ ತೆಗಳಿಕೆಗೆ ಗುರಿಯಾಗುತ್ತದೆಯೆ ಹೊರತು ಅರಿವನ್ನು ಯಾರೂ ತೆಗಳುವುದಿಲ್ಲ. ಅಜ್ಞಾನದಿಂದ ಹುಟ್ಟು ಸಾವುಗಳು, ಸುಖ ದುಃಖಗಳು ಬಾಧಿಸುತ್ತವೆ, ಅರಿವುಳ್ಳವನು ಇವುಗಳಿಂದ ಬಾಧೆ
ಪಡುವುದಿಲ್ಲ.
ತುಂಟ ಆಕಳ ಕಾಲುಗಳನ್ನು ಕಟ್ಟುತ್ತಾರೆ. ಏಕೆಂದರೆ ಅದು ಹಾಲು ಕರೆಯಲು
ಬಿಡುವುದಿಲ್ಲ. ಹಾಲು ಕರೆಯಲು ಅಡ್ಡಿ ಮಾಡುವುದರಿಂದ ಆದರ ಕಾಲುಗಳನ್ನು ಕಟ್ಟಿಹಾಕುತ್ತಾರೆಯೇ
ಹೊರತು ಯಾರೂ ಅದರ ಮೊಲೆಗಳನ್ನು ಕಟ್ಟಿಹಾಕುವುದಿಲ್ಲ. ಅವುಗಳಿಂದ ಅಮೃತದಂತಹ ಹಾಲು ದೊರೆಯುತ್ತದೆ.
ಇಲ್ಲಿ ಒಳ್ಳೆಯದನ್ನು ಪಡೆಯುವಲ್ಲಿ ಅಡ್ಡಿಯಾಗುವ
ಕಳೆ ಮತ್ತು ತುಂಟ ಕಾಲುಗಳನ್ನು ಉಪಾಯದಿಂದ ತಮ್ಮ ಕೆಲಸದಲ್ಲಿ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ
ಜನರು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.
ಗುರು ಲಿಂಗ ಜಂಗಮರ ಅರಿವಿಂಗೆ ನಾನು ಶರಣು ಎನ್ನುತ್ತೇನೆ, ಎಂದರೆ ಅರಿವು
ಗುರುವಿನಲ್ಲಿರಲಿ, ಲಿಂಗದಲ್ಲಿರಲಿ ಅಥವಾ ಜಂಗಮನಲ್ಲಿರಲಿ ಆ ಅರಿವಿಂಗೆ ನಾನು ಶರಣನೆನ್ನುತ್ತೇನೆ.
ಅರಿವು ಇಲ್ಲದ ಗುರು, ಲಿಂಗ ಹಾಗೂ ಜಂಗಮಕ್ಕೆ ನಾನು ಶರಣು ಎನ್ನಲಾರೆ ಎಂಬ ಭಾವ. ಅರಿವು ಇಲ್ಲದ ಗುರು ಜಂಗಮರು ಕೇವಲ ತೋರಿಕೆಯ
ಗುರು ಜಂಗಮರು.ಅಂತಹವರಿಗೆ ಶರಣೆಂದು ಏನು ಫಲ? ಅರಿವು ಉಂಟಾಗದೆ ಇದ್ದಾಗ ಲಿಂಗ ಕೇವಲ ಒಂದು
ಕಲ್ಲು, ಅದು ಕುರುಹು ಮಾತ್ರ. ಕುರುಹಿನ ಹಿಂದಿರುವ ಅರಿವು ಮುಖ್ಯ. ಭತ್ತ ಮತ್ತು ಹಾಲಿನಂತೆ ಅರಿವು ನನಗೆ ಜೀವರಸ. ಈ ವಿಷಯದ
ಬಗ್ಗೆ ನನ್ನ ಮನದಲ್ಲಿ ಮರೆವೆಯುಂಟಾದರೆ ನಾನು ಮನೋಮಂಥನಕ್ಕೆ ಮೊದಲು ಮಾಡುತ್ತೇನೆ. ಹಾಗೆ
ಮರವೆಯನ್ನು ಮಥಿಸದೆ ನಾನು ಇರಲಾರೆ, ಎಂದು ಹೇಳುತ್ತಾರೆ ಅರಿವಿನ ಮಾರಿ ತಂದೆಯವರು. ಹೇಗೆ
ಕಳೆಯನ್ನು ಕಂಡು ಮನವು ಮುನಿಯುತ್ತದೆಯೋ, ಹೇಗೆ ತುಂಟ ಹಸುವಿನ ಕಾಲುಗಳು ಅವುಗಳನ್ನು ಕಟ್ಟುವಂತೆ
ಮಾಡುತ್ತವೆಯೋ ಹಾಗೆಯೇ ನನ್ನ ಮರೆವು ಮಂಥನಕ್ಕೆ
ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ. ಮರವೆಯನ್ನು ಮಥಿಸಿ ಅರಿವನ್ನು ಪಡೆಯುವುದು ನನ್ನ ಸ್ವಭಾವ.
ನಾನು ಹಾಗೆ ಮಾಡದೆ ಇರಲಾರೆನು ಎಂದು ಹೇಳುವಲ್ಲಿ ಅವರ ಛಲ ಮತ್ತು ಆತ್ಮವಿಶ್ವಾಸ ಕಂಡು
ಬರುತ್ತದೆ. ಸಾಮಾನ್ಯರಾದ ನಾವು ಮರವೆಯಲ್ಲಿ ಮುಳುಗಿರುತ್ತೇವೆ. ಇಡೀ ಬದುಕೇ ಮರವೆಯಲ್ಲಿ ಕಳೆದು
ಹೋಗುತ್ತದೆ. ಆದರೆ ಅದನ್ನು ಗುರುತಿಸುವುದು ಸಾಮಾನ್ಯ ಲಕ್ಷಣವಲ್ಲ. ಗುರುತಿಸಿ ಅದನ್ನು ಮಥಿಸಿ ಅರಿವಿನೆಡೆಗೆ ಹೋಗುವುದು
ಶರಣರ ದಾರಿ. ಅದನ್ನು ನಾನು ಮಾಡುತ್ತೇನೆ ಎಂದು ಹೇಳುವಲ್ಲಿ ಅವರ ಆತ್ಮವಿಶ್ವಾಸ ಎದ್ದು ತೋರುತ್ತದೆ. ಆದರೆ ಅದು ನೀ ಕೊಟ್ಟ ಕೊಡುಗೆ
ಎಂದು ಆ ಸದಾಶಿವಮೂರ್ತಿಲಿಂಗವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಎಂದರೆ ಮರವೆಯನ್ನು ಮಥಿಸುತ್ತ ಅರಿವಿನೆಡೆಗೆ ಹೋಗುವಂತಹ
ತನ್ನ ಸ್ವಭಾವದ ಅನುಗ್ರಹ ತನಗೆ ಆ ಸದಾಶಿವಮೂರ್ತಿಯಿಂದ ಆದದ್ದು ಎಂದು ಹೇಳುತ್ತಾರೆ. ಇಲ್ಲಿ ಅವರ ವಿನಯ
ಎದ್ದು ತೋರುತ್ತದೆ. ವಿನಯ ಅರಿವಿನ ಮುಖ್ಯ ಲಕ್ಷಣ.
No comments:
Post a Comment