Friday, April 11, 2014

Vachana 189: Attalitta Hogadante - Let me not wander!

VACHANA IN KANNADA

ಅತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ  ಅಂಧಕನ ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ

TRANSLITERATION

attalitta hOgadaMte heLavana maaDayya taMde
sutti suLidu nODadaMte aMdhakana maaDayya taMde
mattoMda kELadaMte kivuDana maaDayya taMde
nimma sharaNara paadavallade anya viShayakkelsadaMte irisu kUDalasamgamadEvaa

CLICK HERE FOR A RECITATION


For a musical rendering click here:


TRANSLATION (WORDS)

attalitta (there and here) hOgadaMte (not wandering)  heLavana (lame)  maaDayya (make ) taMde (oh! father)
sutti suLidu ( roaming)  nODadaMte (not seeing)  aMdhakana (blind) maaDayya (make ) taMde (oh! father)
mattoMda (anything else)  kELadaMte (not hearing) kivuDana (deaf) maaDayya (make ) taMde (oh! father)
nimma (your) sharaNara (of devotees) paadavallade (other than feet)  anya (other) viShayakke (enticements) elsadaMte (not yielding to) irisu (keep) kUDalasamgamadEvaa (Kudalasangamadeva)

VACHANA IN ENGLISH

Oh Father! Make me a crippled man,
so I don’t wander here and there.
Oh Father! Make me a blind man,
so my glances won’t rove astray.
Oh Father! Make me a deaf man,
so I hear nothing but about You.
Oh Lord Kudala Sangama! keep me unyielding to all enticements,
other than to the feet of Your devotees!

COMMENTARY

Wandering is the nature of the mind. The enticements of the material world keep our sense organs at their most active level. They feed the mind and enhance its wandering nature. Mind becomes a monkey on steroids. Falling prey to the wandering of the mind and enticements of the material world takes us away from developing the inner purity needed to realize the self. For an individual indulged in all sorts of worldly pleasures, withdrawal of senses from their respective objects is very difficult. Considerable perseverance and one-pointedness are a must to prevent the mind and the senses to be distracted and run away to the external world. In this popular Vachana, Basavanna shows his intense observation of the mind and his deep feelings about how such a wandering mind comes in the way of inner purity. He portrays his helplessness in conquering the mind and requests the Lord to help him in this regard. He begs Him to make him a crippled so the mind does not wander around. He requests the Lord to make him blind so he does not fall prey to the sights of the material around. He would like to hear only about the Lord and asks Him to make him deaf for all the other sounds. Finally, he requests the Lord to keep him completely concentrated on the feet of the devotees of the Lord and away from all other enticements. If Basavanna felt so helpless in disciplining the mind, it is indeed a herculean task for us ordinary beings. We must strive to accomplish it to succeed in the spiritual path. Sharanas advocated being active in the material world through selfless duty (Kaayaka) and sharing with the community (Daasoha) while not forgetting the journey within to realize Self!

Let everything we hear, see, do and speak be His!


KANNADA COMMENTARY

ಅರ್ಥ:

ಅತಲಿತ್ತ (ಅಲ್ಲಿ ಇಲ್ಲಿ) ಹೋಗದಂತೆ ಹೆಳವನ (ಕಾಲುಗಳಿಲ್ಲಿದವನಂತೆ) ಮಾಡಯ್ಯ ತಂದೆ
ಸುತ್ತಿ ಸುಳಿದು (ಸುತ್ತಿ, ಇತರರಿಗೆ ಗೊತ್ತಾಗದಂತೆ) ನೋಡದಂತೆ  ಅಂಧಕನ (ಕುರುಡನ)  ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ (ಬೇರೆ ವಿಷಯಗಳ ಕಡೆಗೆ ಹೋಗದಂತೆ) ಇರಿಸು ಕೂಡಲಸಂಗಮದೇವಾ

ತಾತ್ಪರ್ಯ:

ಇದು ಭಕ್ತಿ ಭಂಡಾರಿ ಬಸವಣ್ಣನವರ ವಚನ.
ಇಲ್ಲಿ ಬಸವಣ್ಣನವರು ತಮ್ಮ ಮನಸ್ಸು ತಾನು ಹೇಳಿದಂತೆ ಕೇಳುತ್ತಲಿಲ್ಲ, ಅದು ತನಗೆ ಬೇಕಾದ ಕಡೆಗೆ ಓಡುತ್ತದೆ. ಆದ್ದರಿಂದ ಅದನ್ನು ಹೆಳವನನ್ನಾಗಿ ಮಾಡು ಎಂದು ಕೂಡಲ ಸಂಗಮನನ್ನು ಕೇಳುತ್ತಿದ್ದಾರೆ. ಮನಸ್ಸು, ಅಥವಾ ಇಂದ್ರಿಯಗಳು ತಮಗಿಷ್ಟವಾದ ವಿಷಯಗಳ ಕಡೆಗೆ ಹರಿಯುವುದು ಸಾಮಾನ್ಯ. ಅದಕ್ಕೆ ಸಂಸಾರದ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ. ಅದರಿಂದ ಆತ್ಮೋನ್ನತಿಯಲ್ಲಿ ಅನೇಕ ಅಡ್ಡಿಗಳುಂಟಾಗುತ್ತವೆ.  ಇದರಿಂದ ಬೇಸತ್ತು ಬಸವಣ್ಣನವರು ಕೂಡಲಸಂಗಮನ ಮೊರೆಹೋಗುತ್ತಾರೆ.

ಮನಸ್ಸು ತನ್ನನ್ನು ತೃಪ್ತಿಗೊಳಿಸಲು ಅನೇಕ ಉಪಾಯಗಳನ್ನು ಮಾಡುತ್ತದೆ. ಭಕ್ತನಾದ ತಾನು ಆಸೆಗಳಿಗೆ ಈಡಾದರೆ ನಗೆಗೀಡಾಗುತೇನೆ ಎಂದು ಇತರರಿಗೆ ಗೊತ್ತಾಗದಂತೆ ಎಲ್ಲೆಲ್ಲೋ ಸುತ್ತಿ ಬಳಸಿ ಸುಳಿದು ತನಗಿಷ್ಟವಾದದ್ದನ್ನು ನೋಡುವುದರಲ್ಲಿ ತೊಡಗುತ್ತದೆ. ಆದ್ದರಿಂದ ಹಾಗೆ ಮಾಡಲಾಗದಂತೆ  ತನ್ನನ್ನು ಅಂಧಕನ ಮಾಡು ಎಂದು ಕೇಳುತ್ತಾರೆ ಬಸವಣ್ಣನವರು. ಸಂಸಾರದ ವಿಷಯಗಳಲ್ಲಿ ಅನಾಸಕ್ತಿ  ತಾಳುವಂತೆ ಮಾಡು ಎಂಬುದು ಇದರ ಭಾವ.
ಉಪಯೋಗಕ್ಕೆ ಬಾರದ, ವ್ಯರ್ಥವಾದ ಮಾತುಗಳನ್ನು ಕೇಳದಂತೆ ತನ್ನನ್ನು ಕಿವುಡನನ್ನಾಗಿ ಮಾಡು ಎನ್ನುತ್ತಾರೆ. ತನ್ನನ್ನು ತಾನು  ತಿದ್ದಿಕೊಳ್ಳದೆ, ಅಥವಾ ತನ್ನನ್ನು ಶುದ್ಧಿಗೊಳಿಸುವಲ್ಲಿ ತೊಡಗಿಸಿಕೊಳ್ಳದೆ ಇತರರ ಮಾತುಗಳನ್ನು ಕೇಳುವುದರಲ್ಲಿ ಮನಸ್ಸು ಅತಿ ಆಸಕ್ತಿ ತೋರುತ್ತದೆ. ಅದರ ಈ ಆಸಕ್ತಿ ಅದನ್ನು ಆತ್ಮಶುದ್ಧಿಯಿಂದ ದೂರವಿಡುತ್ತದೆ. ಆದ್ದರಿಂದ ಅದನ್ನು ನಿರರ್ಥಕವಾದ ಮಾತುಗಳನ್ನು ಕೇಳದಂತೆ ಕಿವುಡನ ಮಾಡು ಎನ್ನುತ್ತಾರೆ.

ಒಟ್ಟಿನಲ್ಲಿ ಮನಸ್ಸು ಅತಿತ್ತ ಹರಿಯದಂತೆ ಹೆಳವ, ಆಕರ್ಷಣೆಗಳಿಗೆ ಒಳಗಾಗಿ ಅತ್ತಿತ್ತ ನೋಡದಂತೆ ಅಂಧ ಮತ್ತು ಬೇಡದ ಮಾತುಗಳನ್ನು ಕೇಳದಂತೆ ಕಿವುಡನನ್ನಾಗಿ ಮಾಡು ಎಂದು ಕೂಡಲ ಸಂಗಮನನ್ನು ಕೇಳುತ್ತಿದ್ದಾರೆ. ಇಷ್ಟೇ ಅಲ್ಲದೆ ಶರಣರ ಪಾದಗಳಲ್ಲಿ ಮನ ನಿಲ್ಲುವಂತೆ ಮಾಡು ಎನ್ನುತ್ತಾರೆ. ಶರಣರು ದೇವರ ಸ್ವರೂಪರು. ಆದ್ದರಿಂದ ಅಂತಹ ಮಹಾತ್ಮರನ್ನು  ಬಿಟ್ಟು ತನ್ನ ಮನಸ್ಸು ಬೇರೆಡೆಗೆ ಹರಿಯದಂತೆ ಮಾಡು ಎಂದು ಕೂಡಲಸಂಗಮನನ್ನು ಕೇಳಿಕೊಳ್ಳುತ್ತಿದ್ದಾರೆ.

ಈ ವಚನ, ಅವರು ತಮ್ಮಮನಸ್ಸನ್ನು ಎಷ್ಟು ಆಳವಾಗಿ ಗಮನಿಸಿದ್ದರು, ಮತ್ತು ಅಂತರಂಗ ಶುದ್ಧಿಯಲ್ಲಿ ಅಂತಹ ಮನಸ್ಸು ಎಷ್ಟು ಅಡ್ಡಿಯಾಗುತ್ತದೆ, ಅಲ್ಲದೆ ಅದರಿಂದ ಅವರ ಮನಸ್ಸು ಎಷ್ಟು ನೊಂದಿತ್ತು ಎನ್ನುವುದನ್ನು ತೋರಿಸಿಕೊಡುತ್ತದೆ. ಮನಸ್ಸಿನ ಹರಿದಾಟ, ಆಕರ್ಷಣೆಗಳಿಗೆ ತುತ್ತಾಗುವುದರಿಂದ ಮತ್ತು ವ್ಯರ್ಥವಾದ ಮಾತುಗಳನ್ನು ಕೇಳುವುದರಿಂದ ಆತ್ಮ ಬಲ ಕುಂದುತ್ತದೆ, ಅಮೂಲ್ಯವಾದ ಸಮಯ ನಷ್ಟವಾಗುತ್ತದೆ ಮತ್ತು ಆತ್ಮೋನ್ನತಿಯ ದಾರಿಯಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬುದನ್ನು ಅವರು ಸೂಕ್ಷ್ಮವಾಗಿ ಗಮನಿಸಿ ಅದೆಲ್ಲದರಿಂದ ದೂರವಿರುವಂತೆ  ಮಾಡು ಎಂದು ಮತ್ತು ಶರಣರ ಪಾದಗಳನ್ನು ಬಿಟ್ಟು ಬೇರೆಡೆಗೆ ಮನಸ್ಸು ಹರಿಯದಂತೆ ಮಾಡು ಎಂದು ದೇವರನ್ನು ಕೇಳುತ್ತಿದ್ದಾರೆ.





No comments:

Post a Comment