Friday, May 23, 2014

Vachana 195: Bhaavadalli Shuchi – The Untainted Mind

VACHANA IN KANNADA

ಭಾವದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ:
ಇದಾವಂಗಳವಡುವುದಯ್ಯಾ?
ನಿಧಾನ ತಪ್ಪಿ ಬಂದಡೆ ಒಲ್ಲೆನೆಂಬವರಿಲ್ಲ,
ಪ್ರಮಾದವಶ ಬಂದಡೆ  ಹುಸಿಯೆನೆಂಬವರಿಲ್ಲ,
ನಿರಾಶೆ, ನಿರ್ಭಯ ಕೂಡಲಸಂಗಮದೇವಾ
ನೀನೊಲಿದ ಶರಣಂಗಲ್ಲದಿಲ್ಲ.

TRANSLITERATION

bhaavadalli Suci, praaNadalli nirbhaya:
idaavaMgaLavaDuvudayyaa?
nidhaana tappi baMdaDe olleneMbavarilla
pramaadavaSa baMdaDe husiyenembuvarilla
niraaSe, nirbhaya kUDalasMagamadEvaa
nInolida shaaraNgaMgalladilla

CLICK HERE FOR A RECITATION
http://youtu.be/Oi_QSUKN-n8

TRANSLATION (WORDS)

bhaavadalli Suci (pure mind, untainted mind) praaNadalli (of life) nirbhaya (without fear):
idaavaMgaLavaDuvudayyaa (who will be able to possess these qualities) ?
nidhaana (wealth) tappi (by mistake) baMdaDe (if comes) olleneMbavarilla (no one refuses)
pramaadavaSa (by fault, by error)   baMdaDe (if came)  husiyenembuvarilla (no one says the truth)
niraaSe (without desire) , nirbhaya (without fear) kUDalasMagamadEvaa (Kiudalasangama)
nInolida (by your grace) shaaraNgaMgalladilla (only Sharanas can do it)

VACHANA IN ENGLISH

The untainted mind and no fear of life:
Who will be able to possess these qualities, Sir?
No one refuses it if the wealth comes by mistake.
No one tells the truth if it came by error.
Desirelessness and fearlessness: Lord Kudalasangama,
only Sharanas can achieve them with your grace!

COMMENTARY

In this Vachana, Basavanna comments on two major attributes everyone must strive to possess: Being desire less and being fearless. He says that only Sharanas with the grace of the Lord can achieve these. Without these attributes, ordinary men will not have the strength to refuse to accept the wealth that comes in their way by mistake. They will not even be able to tell the truth that it is not theirs, when the wealth arrives by mistake. The tainted mind is the result of the six passions of mind (arishadvargas): desire (kama), anger (Krodha), greed (Lobha), infatuation (Moha), pride (Madha) and jealousy (Matsarya). These are our six inner enemies, with ‘desire’ being the root cause of all. Anger is the result of unfulfilled desires. Greed is the desire for more and more. Infatuation is the attachment to all the material one possesses. Pride is the cause of feeling that one possesses all and the jealousy appears when others possess something that one desires to have.  The fear of life (i.e. the fear of not having the desired material) is a consequence of the six passions. The way to achieve an untainted mind then is to overcome ‘desire’ and overcome the fear of life. This requires a determined query into the ways of material life, a realization that the never ending quest for fulfilling desires is useless, and developing a fearless attitude towards material life. The Vachana implies that a true Sharana will have achieved these attributes through the grace of the Divine.

Let us conquer the fear and the desire!

KANNADA COMMENTARY

 ಅರ್ಥ:

ಭಾವದಲ್ಲಿ ಶುಚಿ (ನಿರ್ಮಲವಾದ ಚಿತ್ತ), ಪ್ರಾಣದಲ್ಲಿ ನಿರ್ಭಯ (ಪ್ರಾಣದ ಬಗ್ಗೆ ನಿರ್ಭೀತಿ):
ಇದಾವಂಗಳವಡುವುದಯ್ಯಾ ( ಗುಣಗಳನ್ನು ಯಾರು ಸಾಧಿಸಲು ಸಾಧ್ಯ)?
ನಿಧಾನ (ಸಂಪತ್ತು) ತಪ್ಪಿ ಬಂದಡೆ (ತಾನು ಗಳಿಸದೆ ಬಂದರೆ) ಒಲ್ಲೆನೆಂಬವರಿಲ್ಲ (ಬೇಡವೆನ್ನುವವರಿಲ್ಲ),
ಪ್ರಮಾದವಶ (ಏನೋ ತಪ್ಪಾಗಿ) ಬಂದಡೆ (ತನಗೆ ಬಂದರೆಹುಸಿಯೆನೆಂಬವರಿಲ್ಲ (ನಾನು ಸುಳ್ಳು ಹೇಳುವುದಿಲ್ಲ ಎಂಬುವವರಿಲ್ಲ),
ನಿರಾಶೆ (ಆಸೆ ಇಲ್ಲದಿರುವುದು), ನಿರ್ಭಯ (ಭಯವಿಲ್ಲದಿರಿವಿದು) ಕೂಡಲಸಂಗಮದೇವಾ
ನೀನೊಲಿದ ಶರಣಂಗಲ್ಲದಿಲ್ಲ (ಕೂಡಲಸಂಗಮನು ಒಲಿದ ಶರಣರಿಗಲ್ಲದೆ ಇತರರಿಗೆ ಸಾಧ್ಯವಿಲ್ಲ).

ತಾತ್ಪರ್ಯ:

ಭಾವ ಶುದ್ಧಿ ಮತ್ತು ನಿರ್ಭಯತೆಯಂತಹ ಗುಣಗಳು ಶರಣರ ಗುಣಗಳು. ಸಾಮಾನ್ಯರು ಅವುಗಳನ್ನು ಸಾಧಿಸುವುದು ಬಹು ಕಷ್ಟ ಎಂಬುದನ್ನು ಹೇಳುತ್ತಾರೆ ಬಸವಣ್ಣನವರು.

ಭಾವಶುದ್ಧಿ ಎಂದರೆ ಕಾಮ,ಕ್ರೋಧ, ಮದ, ಮತ್ಸರ,ಲೋಭ, ಮೋಹಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ವಶವಾಗದೆ ಇರುವುದು. ಮನುಷ್ಯನ ಭಾವನೆಗಳು ಸದಾ ಒಂದಿಲ್ಲೊಂದು ಮನೋವಿಕಾರಕ್ಕೆ ಬಲಿಯಾಗುತ್ತಲೇ ಇರುತ್ತವೆ. ಮನದಲ್ಲಿ ನಾನಾ ಆಸೆಗಳು ಹುಟ್ಟುತ್ತವೆ. ಅವುಗಳು ಕೈಗೂಡದೆ ಹೋದರೆ ನಿರಾಶೆಯಾಗುತ್ತದೆ ಮತ್ತು ಕ್ರೋಧ ಹುಟ್ಟುತ್ತದೆ. ಆಸೆ ಕೈಗೂಡಿದರೆ ಅದರಿಂದ ಮದ ಹುಟ್ಟುತ್ತದೆ. ತಾವು ಬಯಸಿದ ವಸ್ತು ತಮಗೆ ಸಿಗದೆ ಇತರರಿಗೆ ಸಿಕ್ಕಿದರೆ ಅದರಿಂದ ಮತ್ಸರವುಂಟಾಗುತ್ತದೆ, ತಮಗೆ ಸಿಕ್ಕರೆ ಅದು ಇನ್ನೂ ಇನ್ನೂ  ಬೇಕು ಎಂಬ ಲೋಭವುಂಟಾಗುತ್ತದೆ ಮತ್ತು ಅದರ ಬಗ್ಗೆ ಮೋಹ ಹುಟ್ಟಿ ಅದನ್ನು ಬಿಟ್ಟುಕೊಡಲು ಅಥವಾ ಕಳೆದು ಕೊಳ್ಳಲು ಇಷ್ಟಪಡದೆ ಅದನ್ನು ಕಾಯ್ದುಕೊಳ್ಳುವ ಜಂಜಾಟದಲ್ಲಿ ತೊಳಲುತ್ತದೆ. ಎಲ್ಲಿ ಅದು ಕಳೆದ ಹೋಗುವದೋ ಎಂಬ ಭಯ ಮನೆ ಮಾಡುತ್ತದೆ. ಸದಾ ಭಯದ ನೆರಳಲ್ಲಿಯೇ ಬದುಕು ಸಾಗುತ್ತದೆ. ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ. ಒಟ್ಟಿನಲ್ಲಿ ಆಸೆ ಎಂಬ ಒಂದು ವಿಷಯ ಇತರ ಮನೋ ವಿಕಾರಗಳಿಗೆ ದಾರಿ ಮಾಡಿಕೊಟ್ಟು ಅವುಗಳ ಹಿಡಿತಕ್ಕೆ ಜೀವ ಬಲಿಯಾಗುವಂತೆ ಮಾಡುತ್ತದೆ. ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹಗಳು ಮನಸ್ಸನ್ನು ಕೆಡಿಸುತ್ತವೆ. ಮನಸ್ಸು ಶುದ್ಧವಾಗಿರಲು ಬಿಡುವುದಿಲ್ಲ. ಆದರೆ, ಇವುಗಳು ಮನಸ್ಸಿನ ಮೇಲ್ಮೈ ಪ್ರವೃತ್ತಿಗಳು, ಅಭ್ಯಾಸಗಳು. ಆಸೆ ನೆರವೇರುವುದರಿಂದ ಸುಖ ಸಿಗುತ್ತದೆ ಎಂಬ ಹುಸಿ ನಂಬಿಕೆ ಮನಸ್ಸನ್ನು ಆಸೆಗಳ ಪೂರೈಕೆಯಲ್ಲಿ ತೊಡಗಿಸುತ್ತದೆ. ಆದರೆ ಒಂದು ಆಸೆ ಪೂರೈಸಿದರೆ ಇನ್ನೊಂದು, ಮತ್ತೊಂದು, ಮಗದೊಂದು ತಲೆ ಎತ್ತುತ್ತದೆ. ಅದಕ್ಕೆ ಕೊನೆಯೇ ಇಲ್ಲ. ಮತ್ತು ಮನಸ್ಸು ಅದರ ಪೂರೈಕೆಯಲ್ಲಿಯೇ ಇಡಿ ಬದುಕು ಕಳೆಯುತ್ತದೆ. ಅವುಗಳಿಗೆ ಭಯ ಪಡಬೇಕಾಗಿಲ್ಲ ಎಂಬುದನ್ನು ಅರಿತು. ಮನಸ್ಸಿನ ಅಭ್ಯಾಸಗಳನ್ನು  ಕಳೆದುಕೊಂಡು. ಸದಾ ಎಚ್ಚರವಿದ್ದು ಮನಸ್ಸನ್ನು ಅಭ್ಯಾಸಗಳಿಗೆ ಬಲಿಯಾಗದಂತೆ ನೋಡಿಕೊಂಡು, ಆಸೆಯ ಪೂರೈಕೆಯಂದ ಸುಖ ಸಿಗುತ್ತದೆ ಎಂಬ ಅದರ ಹುಸಿ ನಂಬಿಕೆಯನ್ನು ಅದಕ್ಕೆ ತೋರಿಸಿಕೊಟ್ಟು ಅದರಿಂದ ಮುಕ್ತರಾಗುತ್ತಾರೆ ಶರಣರು.


ಸಾಮಾನ್ಯರು ಹೀಗೆ ಮಾಡುವುದಿಲ್ಲ. ತಾನಾಗಿ ದುಡಿದು ಗಳಿಸದೆ, ತಮಗೆ ತಪ್ಪಿ ಸಂಪತ್ತು ಬಂದರೆ ಅದು ತನಗೆ ಬೇಡ ಎಂದು ಹೇಳುವ ಅಥವಾ ಅದು ತನ್ನದಲ್ಲ ಎಂದು ಸತ್ಯ ಹೇಳುವ ಆತ್ಮಬಲ ಅವರಿಗಿರುವುದಲ್ಲ. ಏಕೆಂದರೆ ಅಂತರಂಗ ಶುದ್ಧಿಯ ಕಡೆಗೆ ಅವರ ಗಮನವಿರುವುದಿಲ್ಲ. ಅದರ ಕಡೆಗೆ ಗಮನಕೊಟ್ಟು ಅದನ್ನು ಸಾಧಿಸಬಲ್ಲವನು ಕೂಡಲ ಸಂಗಮನ ಕೃಪೆಗೆ ಪಾತ್ರನಾದ ಶರಣನುಮಾತ್ರ ಎಂದು ಬಸವಣ್ಣನವರು ಹೇಳುತ್ತಾರೆ. ಏಕೆಂದರೆ ಅದನ್ನು ಸಾಧಿಸಲು ಶಾಂತ ಮನಸ್ಸು ಮತ್ತು ಅಪಾರವಾದ ಮನೋಬಲ ಬೇಕಾಗುತ್ತದೆ.  

1 comment:

  1. I totally agree, when you have faith in the supreme, you become fearless. I always feel like arjuna, He is by my side, I do not fear ever, I can face anything.
    The mechnical manoeuvres are just that, mechanical manoeuvres, may help you to live longer.
    The breath control is also just that but coupled with His concentration helps.
    The goal is to live in it without being of it.
    Thanks.
    Meera

    ReplyDelete