Friday, January 31, 2014

Vachana 179: Orategala kandintu Kelaree Bhaviya Thodembaru - On seeing a spring, they say Dig up a Well!

 VACHANA IN KANNADA

ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು!
ಅರವಟಿಗೆ ಛತ್ರವು ತಮ್ಮದೆಂಬರು!
ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ,
ಅವರೇತರಲ್ಲಿ ನೀಡುವರಯ್ಯಾ? ರಾಮನಾಥಾ.

TRANSLITERATION

orategaLa kaMDiMtu kelarI baaviya tODeMbaru
aravaTige Catravu tammadeMbaru
ele payiraidadire, suriva maLe surusadiddaDe,
avarETaralli nIDuvaraiyyaa? raamanaathaa.

CLICK HERE FOR A RECITATION


TRANSLATION (WORDS)

orategaLa  (springs) kaMDiMtu  (after seeing)  kelarI (some people)  baaviya  ( a well) tODeMbaru ( say, dig up)
aravaTige  ( a place where  water and other drinks are served to travelers ) Catravu  (a place where food and a place for stay is offered to travelers)  tammadeMbaru ( people say, is their own)
ele payiraidadire (if greenery does not grow), suriva maLe  (rain) surusadiddaDe ( If  does not pour),
avarETaralli (how will they)  nIDuvaraiyyaa?  (serve ? sir) raamanaathaa (Ramanatha)

VACHANA IN ENGLISH

On seeing a spring, some say dig up a well!
They say that they provide the food, water and shelter!
If the green stops growing and the rain stops pouring,
How will they serve, Sir?  Raamanatha!

COMMENTARY

This is another simple, yet powerful Vachana by Devara Dasimayya impressing on us to remember that everything we have is given to us by the Divine. As such, there is no point in becoming too proud saying ‘I did this and I gave this’.

Just as they run across a spring, some people make arrangements to dig up a well. They build shelters by the well. They start inviting travelers to take rest in these shelters, provide them food and water. Immediately, they start spreading the word that ‘they did it’ with all the pride they can muster.  Eventually the service attitude goes away and what remains is the thirst for the fame and recognition by everyone of this great deed they are doing! Dasimayya questions “how will you serve the water if the well dries up because of no rain? How will you serve food if the crops stop growing?” These materials that form the basis of service are provided by Him. If they are not there, our capability to provide food and shelter to others withers away. In fact, if we reflect on any aspect of our life or any object we are using,  the fundamental components needed to create it comes from the nature.

This Vachana drives home two points. First, everything we have is His. We need to be thankful to all this blessing we have. Second, our giving should be to serve Him and returning His back to Him. It should not be for advertising that we are doing a great service to humanity. What the right hand gives, should not be known by the left hand! Giving must be for the sake of returning that we received and not for boosting our ego!

Let us return His to Him with our right hand and let the left hand not know it!

KANNADA COMMENTARY  

ಅರ್ಥ:

ಒರತೆಗಳ (ನೀರು  ಒಸರುವ ಸ್ಥಳ)  ಕಂಡಿಂತು (ನೋಡಿ)  ಕೆಲರೀ (ಕೆಲವರು)  ಬಾವಿಯ ತೋಡೆಂಬರು!
ಅರವಟ್ಟಿಗೆ (ಪ್ರವಾಸಿಗರಿಗೆ ನೀರು ಮತ್ತು ಇತರ ಪಾನೀಯಗಳನ್ನು ಸ್ಥಳ) ಛತ್ರವು
(ಪ್ರವಾಸಿಗರಿಗೆ ಇರಲು ಸ್ಥಳ ಹಾಗೂ ಊಟವನ್ನು ಕೊಡುವ ಸ್ಥಳ)  ತಮ್ಮದೆಂಬರು!
ಎಲೆ ಪಯಿರೈದದಿರೆ (ಬೆಳೆ ಬೆಳೆಯದಿದ್ದರೆ) , ಸುರಿವ ಮಳೆ ಸುರಿಸದಿದ್ದಡೆ (ಮಳೆ ಸುರಿಯದಿದ್ದರೆ),
ಅವರೇತರಲ್ಲಿ ನೀಡುವರಯ್ಯಾ (ಕೊಡುವವರು ಹೇಗೆ ಕೊಡುವರು)? ರಾಮನಾಥಾ.

ತಾತ್ಪರ್ಯ:

ಬಹಳ ಸಾಮಾನ್ಯದಂತೆ ಕಾಣುವ ಈ ವಚನ ಆಳವಾದ ಅರ್ಥದಿಂದ ತುಂಬಿದೆ. ಇಲ್ಲಿ ದಾಸಿಮಯ್ಯನವರು  ಜನರು “ನಾನು ತೋಡಿಸಿದ ಭಾವಿ, ನಾನು ಕಟ್ಟಿಸಿದ  ಛತ್ರ”ವೆಂದು ಉಬ್ಬುಬ್ಬಿ ಹೇಳಿಕೊಳ್ಳುತ್ತಿರುವವರನ್ನು ಕುರಿತು ಹೇಳುತ್ತಿದ್ದಾರೆ.
ನೀರಿನ ಒರತೆಯನ್ನು ನೋಡಿ ಇಲ್ಲಿ ಬಾವಿ ತೋಡು ಎನ್ನುತ್ತಾರೆ. ಮೊದಲೇ ಒರತೆ ಇರುವಲ್ಲಿ ಅದರ ನೀರು ಜಿನುಗಿ ಭೂಮಿಯಲ್ಲಿ ನೀರು ಇಂಗಿ ಕೆಳಗೆ ನೀರಿರುವುದು ಸಹಜ. ಅಂತಹ ಸ್ಥಳದಲ್ಲಿ ಬಾವಿ ತೋಡಿ ಅರವಟ್ಟಿಗೆಯನ್ನು ಇಟ್ಟು ತಾನೇ ಅದನ್ನು ಮಾಡಿದವನು ಎಂದು ಹೇಳುವುದು ಮನುಷ್ಯನ ಸ್ವಭಾವ. ಛತ್ರವನ್ನು ಕಟ್ಟಿ  ಪಥಿಕರಿಗೆ ಇರಲು ಸ್ಥಳ  ಮತ್ತು ಊಟಕ್ಕೆ  ಆಹಾರ ಕೊಡುತ್ತಾರೆ ಕೆಲವರು. ಮತ್ತು ತಾನು ಆಹಾರವನ್ನು ಕೊಡುತ್ತಿದ್ದೇನೆ ಎಂದು ಬೀಗುತ್ತಾರೆ. ಆದರೆ ಇದರಲ್ಲಿ ತಾನು ಮಾಡಿದುದೇನು ಎಂದು ಕೇಳುತ್ತಾರೆ ದಾಸಿಮಯ್ಯನವರು. ಮಳೆಯೇ ಬರದಿದ್ದಿದ್ದರೆ, ಪೈರು ಬೆಳೆಯದೆ ಇದ್ದಿದ್ದರೆ ಅರವಟ್ಟಿಗೆ, ಛತ್ರ ನಡೆಸಲು ಸಾಧ್ಯವಾಗುತ್ತಿತ್ತೇ? ಎಂದು ಕೇಳುತ್ತಾರೆ. 

ಬಾವಿ ತೋಡುವುದಕ್ಕಿಂತ ಮೊದಲೇ ನೀರಿನ ಒರತೆ ಇತ್ತು, ಆಹಾರ ಕೊಡುವುದಕ್ಕಿಂತ ಮೊದಲೇ ಬೆಳೆ ಬೆಳೆದಿತ್ತು. ಇದರಲ್ಲಿ ತಾನು ಮಾಡಿದದು ಏನು? ಇಂದಿನ ದಿನಗಳಲ್ಲಿ ಛತ್ರ ಅರವಟ್ಟಿಗೆಗಳು ಇಲ್ಲ. ಆದ್ದರಿಂದ ನಾವು “ನಾವು ಹಾಗೆಲ್ಲ ಮಾಡುತ್ತಿಲ್ಲ” ಎಂದು ನಿಶ್ಚಿಂತೆಯಿಂದಿರಬಹುದು. ಆದರೆ ಇಂದು ಅದರ ಆಯಾಮ ಬೇರೆಯಾಗಿದೆ. 

ಇಂದು ಅನೇಕ ಕಂಪನಿಗಳು, ಸಂಘ ಸಂಸ್ಥೆಗಳು ಇವೆ. ಅನೇಕರು ವೈಯಕ್ತಿಕವಾಗಿಯೂ  ಎಲ್ಲವೂ ತಾವು ಮಾಡುತ್ತಿರುವ ಕೆಲಸವನ್ನು ಘಂಟಾಘೋಷವಾಗಿ , ಹಿಂದಿನಕ್ಕಿಂತ ಹೆಚ್ಚಿನ ಅಹಂ ನಿಂದ ದೂರ ದರ್ಶನದಲ್ಲಿ, ಅಂತರ್ಜಾಲ ತಾಣಗಳಲ್ಲಿ  ಹೇಳಿಕೊಳ್ಳುತ್ತಾರೆ. ಆದರೆ ಪ್ರಕೃತಿಯ ಕೊಡುಗೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಎಂಬುದು  ದಾಸಿಮಯ್ಯನವರ ಪ್ರಶ್ನೆ. ಯಾವುದೇ ವಸ್ತು ನಿರ್ಮಾಣ ಮಾಡಲು, ಏನೇ ಆದರು ಕೊಡಲು ಮೂಲ ಸಂಪನ್ಮೂಲ ಪ್ರಕೃತಿಯಿಂದಲೇ ಒದಗಬೇಕಲ್ಲವೆ?  ಪ್ರಕೃತಿಯೇ ಎಲ್ಲವನ್ನೂ ಕೊಡುತ್ತಿರುವಾಗ, ಅಂದರೆ ಯಾವುದೋ ಪರವಸ್ತು ಎಲ್ಲವನ್ನೂ ಆಗು ಮಾಡುತ್ತಿರುವಾಗ ತಾನು ಮಾಡಿದೆ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ? ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂದು ಮಾರುಕಟ್ಟೆಯಲ್ಲಿ ಹಲವು ವಸ್ತುಗಳು  ಪ್ರಕೃತಿಗೆ ಸಂಬಂಧಪಟ್ಟವುಗಳು ಅಲ್ಲವೆಂದೇ ತೋರುತ್ತವೆ. ಆದರೆ ಆಳವಾಗಿ ಯೋಚಿಸಿದಾಗ ಅವುಗಳ ಮೂಲ ಪ್ರಕೃತಿಯ ಯಾವುದೋ ಒಂದು ವಸ್ತು ಆಗಿರುತ್ತದೆ. ಅದನ್ನು ಮಾನವ  ನಿರ್ಮಿಸಲು ಸಾಧ್ಯವಿಲ್ಲ. ಎಂಬುದು ತಿಳಿದುಬರುತ್ತದೆ. ಅದಿಲ್ಲದೆ ತಾನು ತನ್ನದೆಂದು ಹೇಳಿಕೊಂಡು ಬೀಗುತ್ತಿರುವ ವಸ್ತು ಮಾಡಲು ಬರುವುದಿಲ್ಲ. ಎಂಬುದು ತಿಳಿದು ಬರುತ್ತದೆ. ಈ ಅರಿವು ಮೂಡಿದಾಗ ಮನುಷ್ಯ ವಿನೀತನಾಗುತ್ತಾನೆ. ಆ ಪರವಸ್ತುವಿನ ಅರಿವು ಸಾಧ್ಯವಾಗುತ್ತದೆ.


No comments:

Post a Comment