VACHANA IN
KANNADA
ಏರಿದ
ವಾಜಿ ಓಹೋ ಎಂದು ಕರೆದೋರಿದಲ್ಲಿ
ನಿಂದಿತ್ತು
ವಾಹನ ವಾಹಕನ ಹೃದಯವನರಿತು,
ವಸ್ತುವ
ಮುಟ್ಟಿ ಆಡುವ ಚಿತ್ತ ನಿಜ ವಸ್ತುವಿನ ಗೊತ್ತನರಿಯದೆ
ತನ್ನ
ಇಚ್ಛೆಯಲ್ಲ್ಲಿ ಹರಿದಾಡುತ್ತಿದೆ ನೋಡಾ!
ಇದಕ್ಕೆ
ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ ಕಟ್ಟುವಡೆವಂತೆ ಮಾಡು
ಗೋಪಿನಾಥ
ವಿಶ್ವೇಶ್ವರಲಿಂಗ (ತುರುಗಾಹಿ
ರಾಮಣ್ಣ)
TRANSLITERATION
Erida vaaji
OhO eMdu karedOridalli
niMdittu vaahana vahakana hRudayavanaritu
vastuva
muTTi aaDuva citta nijavastuvina gottanariyade
tanna
icCeyalli haridaaDuttide nODaa!
idakke oMdu
kaTTaNeya gotta lakShisi kaTTuvaDevaMte maaDu
gOpinaatha
vishvEshvaraliMga
CLICK HERE
FOR A RECITATION
TRANSLATION
(WORDS)
Erida vaaji
(the horse with a rider) OhO eMdu
karedOridalli (hearing the rider’s words)
niMdittu
(stopped) vaahana (vehicle) vahakana (rider’s)
hRudayavanaritu
(knowing his mind)
vastuva(attractions
, wealth etc.) muTTi (experienced)
aaDuva (playing, indulging) citta (mind)
nijavastuvina (the truth) gottanariyade (not knowing)
tanna( own)
icCeyalli (interest) haridaaDuttide
(roaming) nODaa! (you see)
idakke (to
this) oMdu kaTTaNeya (a house,
restriction) gotta (a fixed place) lakShisi (observing)
kaTTuvaDevaMte
maaDu (see that it is tied to it)
gOpinaatha
vishvEshvaraliMga (Gopinatha Vishveshvaralinga)
VACHANA IN
ENGLISH
On hearing
the rider’s words, the horse
Stopped the
vehicle, knowing the mind of the rider!
The mind
indulged in materialistic desires,
Not knowing
the truth,
Roaming around
with its own interests! You see.
Please
restrict this to a boundary and tie it to the fixed post,
Gopinatha
Visvesvaralinga!
COMMENTARY
In this
Vachana, Turugahi Ramanna is requesting Lord Gopinatha Visvesvaralinga (signature
of Turugahi Ramanna) to help him contain the desires and discipline his mind to
make it concentrate on the Divine.
It is easy
to stop the cart drawn by a horse – all it takes is the rider calling ‘Oho’.
The horse hears it and understands the rider’s intention and stops. But the
mind, supposedly more sophisticated than a horse does not hear or pay attention
to any word from its owner. It continues to be indulged in materialistic
desires. The desires never end. The mind jumps from desire to desire like a
monkey. There is no desire to home in on that permanent bliss, the divine. Ramanna
is requesting the Lord to help him tie up the mind within a boundary to a
permanent post, i.e. give him the strength to discipline the mind and point it
towards realizing the Self. Indeed, we can stop a powerful horse from running
just by few spoken words. We cannot control our mind. We often hear that voice
from within urging us to stop being materialistic and move towards the Divine.
We simply ignore it and continue to be indulged in the impermanent pleasures of
this world. We need God’s help to contain our mind and see Him!
Oh Divine,
help me realize You!
KANNADA
COMMENTARY
ಅರ್ಥ:
ಏರಿದ
ವಾಜಿ (ಸವಾರಿ ಮಾಡಿದ ಕುದುರೆ) ಓಹೋ ಎಂದು
ಕರೆದೋರಿದಲ್ಲಿ (ಓಹೋ ಎಂದು ಕರೆದಾಗ)
ನಿಂದಿತ್ತು
(ನಿಂತು ಬಿಟ್ಟಿತು) ವಾಹನ ವಾಹಕನ ಹೃದಯವನರಿತು
(ಒಡೆಯನ, ಸವಾರನ ಮನಸ್ಸನ್ನು ತಿಳಿದು)
ವಸ್ತುವ (ಇಂದ್ರಿಯ ಗೋಚರವಾದ ಪದಾರ್ಥ, ದ್ರವ್ಯ.
ಧನ) ಮುಟ್ಟಿ
ಆಡುವ ಚಿತ್ತ (ಅನುಭವಿಸಿ ಆಡುವ ಮನಸ್ಸು) ನಿಜ
ವಸ್ತುವಿನ (ಪರಮಾತ್ಮನ) ಗೊತ್ತನರಿಯದೆ (ಗುರಿ, ತನ್ನ ನಿಶ್ಚಿತ ಸ್ಥಳವನ್ನು ತಿಳಿಯದೆ)
ತನ್ನ
ಇಚ್ಛೆಯಲ್ಲಿ ಹರಿದಾಡುತ್ತಿದೆ (ತನ್ನ ಇಷ್ಟದಂತೆ ಅಲೆಯುತ್ತಿದೆ) ನೋಡಾ!
ಇದಕ್ಕೆ
ಒಂದು ಕಟ್ಟಣೆಯ (ಮನೆ, ಬಂಧ) ಗೊತ್ತ (ನೆಲೆ) ಲಕ್ಷಿಸಿ (ಪರಿಗಣಿಸಿ,ಗಮನಕ್ಕೆ ಬರುವಂತೆ)
ಕಟ್ಟುವಡೆವಂತೆ
(ಕಟ್ಟುವಂತೆ,) ಮಾಡು
ಗೋಪಿನಾಥ
ವಿಶ್ವೇಶ್ವರಲಿಂಗ
ತಾತ್ಪರ್ಯ:
ಇದು ತುರುಗಾಹಿ ರಾಮಣ್ಣನವರ ವಚನ. ಇಲ್ಲಿ ಅವರು ಕುದುರೆಯು ಒಡೆಯನ ಮಾತು ಕೇಳುವಂತೆ
ತನ್ನ ಮನಸ್ಸು ತನ್ನ ಮಾತು ಕೇಳುತ್ತಿಲ್ಲ. ಆದ್ದರಿಂದ ಮನಸ್ಸಿಗೆ ಒಂದು ನೆಲೆಯನ್ನು ಗೊತ್ತು ಮಾಡಿ
ಆ ನೆಲೆಗೆ ಅದು ಕಟ್ಟಿರುವಂತೆ ಮಾಡು ಎಂದು ದೇವರನ್ನು ಕೇಳುತ್ತಿದ್ದಾರೆ.
ಕುದುರೆಯ ಸವಾರ ತನ್ನ ಕುದುರೆಗೆ ಓಹೋ! ಎಂದು
ಕರೆದರೆ ಸಾಕು ಅದು ತನ್ನ ಸವಾರನ ಹೃದಯವನ್ನರಿತು ನಿಂತು ಬಿಡುತ್ತದೆ. ಮೂಕ ಪ್ರಾಣಿಯಾದರೂ ತನ್ನ
ಸವಾರನ ಮನಸ್ಸನ್ನು ಅರಿತುಕೊಂಡು ಆತನ ಇಚ್ಛೆಯಂತೆನಡೆಯುತ್ತದೆ. ಆದರೆ ನನ್ನ ಚಿತ್ತ ನನ್ನ ಮಾತು
ಕೇಳುತ್ತಿಲ್ಲ. ಧನ, ಸಂಪತ್ತು ಮತ್ತು ಇತರ ಭೋಗವಸ್ತುಗಳೊಂದಿಗೆ ಆಟವಾಡುತ್ತಿದೆ. ಇಚ್ಛೆಗಳ
ಆಳಾಗಿ ಅಲೆದಾಡುತ್ತಿದೆ. ತಾನು ಹೇಳಿದಂತೆ ಕೇಳುತ್ತಿಲ್ಲ. ಅದಕ್ಕೆ ಒಂದು ನೆಲೆಯನ್ನು ತೋರಿಸಿ
ಆ ನೆಲೆಗೆ ಕಟ್ಟಿರುವಂತೆ ಮಾಡು, ಎಂದು ಆ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಇದು ಎಲ್ಲ ಸಾಮಾನ್ಯರ ಅನುಭವ. ನಾವು
ಬೇಡವೆಂದದ್ದನೆಲ್ಲ ಮನಸು ಇನ್ನೂ ಇನ್ನೂ ಬಯಸುತ್ತದೆ. ಕುದುರೆ ಹಸುರನ್ನು ಕಂಡು ತಿನ್ನಲು
ಧಾವಿಸುವಂತೆ ಮನಸ್ಸು ವಿಷಯಗಳ ಕಡೆಗೆ ಹರಿಯುತ್ತದೆ. ಒಂದು ಆಸೆಗೆ ಸಿಕ್ಕು ಅಲ್ಲಿಗೇ ಅದು
ನಿಲ್ಲುವುದಿಲ್ಲ. ಇನ್ನೂ ಇನ್ನೂ ಆಸೆಗಳನ್ನು ತೀರಿಸಿಕೊಳ್ಳುವುದರಲ್ಲಿಯೇ ಮುಳುಗಿ ಹೋಗುತ್ತದೆ.
ತನ್ನ ನಿಜವಾದ ನೆಲೆ ಯಾವುದು? ತಾನು ಎಲ್ಲಿಗೆ ಹೋಗಬೇಕು? ಎಂಬ ವಿಷಯಗಳ ಬಗ್ಗೆ ಅದು ಚಿಂತಿಸುವುದಿಲ್ಲ. ಆತ್ಮ ಅದಕ್ಕೆ ತಿಳಿಹೇಳಿದರೂ ಅದು ಅದರ
ಮಾತು ಕೇಳುವುದಿಲ್ಲ. ಮಾತು ಕೇಳದೆ ಇರುವದಕ್ಕೆ ಅದು ನಾನಾ ಕಾರಣಗಳನ್ನು ಕೊಡುತ್ತದೆ, ನಾನಾ
ನೆಪಗಳನ್ನೊಡ್ಡುತ್ತದೆ. ತನ್ನ ಮನಸ್ಸನ್ನು ತನ್ನ ನಿಗ್ರಹದಲ್ಲಿರಿಸಿಕೊಳ್ಳುವುದು
ಅಸಾಧ್ಯವೆನ್ನುವಷ್ಟು ಕಷ್ಟವಾದಾಗ, ತಾನು ಮಾಡಿದ ಉಪಾಯಗಳಲ್ಲ ಸೋತು ಹೋದಾಗ ಆ ದೇವರನ್ನೇ
ಮೊರೆಹೋಗುತ್ತಾರೆ ತುರುಗಾಹಿ ರಾಮಣ್ಣನವರು.
ಆ ಮನಸ್ಸಿಗೆ ಒಂದು ನೆಲೆಯನ್ನು (ಆ ಪರವಸ್ತುವಿನ
ನೆಲೆ) ತೋರಿಸಿ ಅದನ್ನೇ ಗಮನದಲ್ಲಿರಿಸಿಕೊಂಡು ಮನಸ್ಸು ಆ ನೆಲೆಗೆ ಬಂಧಿತವಾಗಿರುವಂತೆ ಮಾಡಿರಿ
ಎಂದು ಕೇಳಿಕೊಳ್ಳುತ್ತಿದ್ದಾರೆ.
No comments:
Post a Comment