VACHANA IN KANNADA:
ಕೈದು
ಮೊನೆಯೇರುವುದಕ್ಕೆ
ಮೊದಲೇ
ಕಟ್ಟಬಲ್ಲಡೆ
ಕೈದೇನ
ಮಾಡುವುದು?
ಹಾವು
ಬಾಯಿ
ಬಿಡುವುದಕ್ಕೆ
ಮೊದಲೇ
ಹಿಡಿದ
ಮತ್ತೆ
ವಿಷವೇನ
ಮಾಡುವುದು?
ಮನ
ವಿಕಾರಿಸುವುದಕ್ಕೆ
ಮೊದಲೇ ಮಹದಲ್ಲಿ
ನಿಂದ
ಮತ್ತೆ
ಇಂದ್ರಿಯಗಳೇನ
ಮಾಡಲಾಪವು
ಜಾಂಬೇಶ್ವರಾ?
Transliteration:
kaidu
moneEruvudakke modalE kaTTaballaDe
kaidEna
maaDuvudu?
haavu
baayi biDuvudakke modalE hiDida matte
viShavEna
maaDuvudu?
mana
vikaarisuvudakke modalE mahadalli niMda matte
iMdriyagaLena
maaDalaapavu jaaMbEShvaraa?
TRANSLATION(WORDS):
kaidu
(a weapon) moneEruvudakke (piercing) modalE (before) kaTTaballaDe (if tied/ stopped)
kaidEna
(what can a weapon) maaDuvudu? (do)
haavu
(a serpent) baayi (mouth) biDuvudakke
(opening) modalE (before) hiDida ( if caught)) matte(then)
viShavEna
(what can the poison) maaDuvudu?(do)
mana(mind) vikaarisuvudakke (distort) modalE (before)
mahadalli (in the truth) niMda (if
established) matte(then)
iMdriyagaLena
(what the senses) maaDalaapavu (can
do) jaaMbEShvaraa?( Janbeshvara)
VACHANA IN ENGLISH
What can a weapon do if it is tied before piercing?
What can the poison do if the serpent’s mouth is tied
before it opens it?
What can the senses do if the mind is set in the
Divine before it gets distorted, JaambeShvara?
Commentary
In this Vachana, Raayasada Manchanna provides a way
for escaping the distortions of the mind through two simple similes. A weapon can only pierce, hurt or kill if it
is not stopped before it inflicts the damage. If it is tied up before it
pierces, the damage is avoided. Along the same lines, the poison from a serpent
is disastrous only if the serpent is allowed to bite. If the serpent’s mouth is
tied up before it bites, the poison has no effect. The mind is known to wander.
It keeps seeking worldly pleasures and gets distorted. The way to escape from
the effect of senses that bring this distortion is to engage the mind in the
Divine. Once the mind is established in this higher cause, the truth and the
bliss, it quits seeking the mundane. The senses then have no effect on the
mind. It is interesting that Manchanna uses the word ‘tie’ for the weapon and
the poison, while he uses ‘establish’ for the mind. He is not asking us to tie
up the mind. He is suggesting us to establish it in the higher purpose, in the
truth!
Let us make an all-out effort to establish our mind in Him!
Kannada
Commentary
ಅರ್ಥ:
ಕೈದು
(ಶಸ್ತ್ರ, ಆಯುಧ)
ಮೊನೆಯೇರುವುದಕ್ಕೆ
(ಚುಚ್ಚುವುದಕ್ಕೆ)
ಮೊದಲೇ
ಕಟ್ಟಬಲ್ಲಡೆ
(ಮುಂಚಿತವಾಗಿ ಕಟ್ಟಬಹುದಾದರೆ)
ಕೈದೇನ
(ಆಯುಧ ಏನು)
ಮಾಡುವುದು?
(ಮಾಡಲು ಸಾಧ್ಯ)
ಹಾವು
ಬಾಯಿ
ಬಿಡುವುದಕ್ಕೆ(
ಹಾವು
ಕಚ್ಚುವುದಕ್ಕೆ
ಬಾಯಿ
ತೆಗೆಯುವುದಕ್ಕೆ) ಮೊದಲೇ
ಹಿಡಿದ
ಮತ್ತೆ
(ಅದನ್ನು ಹಿಡಿದ
ಮೇಲೆ)
ವಿಷವೇನ
ಮಾಡುವುದು?
(ಅದರ ವಿಷವೇನು
ಮಾಡಬಲ್ಲುದು)
ಮನ
ವಿಕಾರಿಸುವುದಕ್ಕೆ (ಮನಸ್ಸು
ನಾನಾ
ವಿಕಾರಗಳಿಗೆ
ಒಳಗಾಗುವ)
ಮೊದಲೇ ಮಹದಲ್ಲಿ
ನಿಂದ
ಮತ್ತೆ
(ಮೊದಲು
ಆ
ಪರವಸ್ತುವಿನಲ್ಲಿ
ನಿಲ್ಲಿಸಿದರೆ)
ಇಂದ್ರಿಯಗಳೇನ
ಮಾಡಲಾಪವು
(ಇಂದ್ರಿಯಗಳು ಏನು
ಮಾಡಬಲ್ಲವು?)
ಜಾಂಬೇಶ್ವರಾ?
ತಾತ್ಪರ್ಯ:
ಮನವನ್ನು
ಅತ್ತಿತ್ತ
ಹರಿಯದಂತೆ
ಏನು
ಮಾಡಬಹುದು?
ಎನ್ನುವುದಕ್ಕೆ
ರಾಯಸದ
ಮಂಚಣ್ಣನವರು
ಈ
ವಚನದಲ್ಲಿ
ಒಳ್ಳೆಯ
ಉಪಾಯ
ಉದಾಹರಣೆ
ಸಹಿತ
ಕೊಡುತ್ತಿದ್ದಾರೆ.
ಶಸ್ತ್ರಗಳು
ಬಹಳ
ಅಪಾಯಕಾರಿ. ಶಸ್ತ್ರಗಳ
ಆಘಾತ
ಬಹು
ವೇದನಾಮಯ.
ಅನೇಕಸಲ
ಅದು
ಪ್ರಾಣಕ್ಕೂ
ಸಂಚಕಾರ
ತರುತ್ತದೆ.
ಅದರಿಂದ
ತಪ್ಪಿಸಿಕೊಳ್ಳುವುದು
ಹೇಗೆ?
ಮಂಚಣ್ಣನವರು
ಹೇಳುತ್ತಾರೆ.
ಶಸ್ತ್ರ
ಮೊನೆಏರುವುದಕ್ಕೆ
ಮೊದಲೇ,
ಅಂದರೆ
ಅದು
ಆಘಾತ
ಮಾಡುವುದಕ್ಕೆ
ಮುಂಚೆಯೆ
ಅದನ್ನು
ಕಟ್ಟಿದರೆ
ಅದು
ಏನು
ಮಾಡಲು
ಸಾಧ್ಯ?
ಚುಚ್ಚುವವರೆಗೆ
ಸುಮ್ಮನಿದ್ದರೆ
ತಾನೇ
ಅದರಿಂದ
ಆಘಾತವಾಗುವುದು.
ಅದನ್ನು
ಅಲ್ಲಿಯವರೆಗೆ
ಹೋಗಲು
ಬಿಡದೆ,
ಅದಕ್ಕೆ
ಮುಂಚಿತವಾಗಿ
ಅದನ್ನು
ಕಟ್ಟಿಹಾಕಿದರೆ
ಅದು
ಏನೂ
ಮಾಡಲಾಗುವುದಿಲ್ಲ.
ಹಾವು
ಕೂಡ
ಅಪಾಯಕಾರಿ
ಜೀವಿ.
ಅದು
ಕಚ್ಚಿದರೆ
ವಿಷವೇರಿ
ವ್ಯಕ್ತಿ
ಸಾವಿಗೆ
ಒಳಗಾಗುತ್ತಾನೆ.
ಅದರಿಂದ
ತಪ್ಪಿಸಿಕೊಳ್ಳುವುದು
ಹೇಗೆ?
ಹಾವು
ಬಾಯಿ
ತೆರೆದು
ತನ್ನ
ವಿಷದ
ಹಲ್ಲಿನಿಂದ
ಕಚ್ಚುವುದಕ್ಕೆ
ಮೊದಲೇ
ಅದರ
ಬಾಯಿಯನ್ನು
ಹಿಡಿದು
ಬಿಟ್ಟರೆ
ಅದು
ಕಚ್ಚುವುದಾದರು
ಹೇಗೆ?
ಆಗ
ಅದರ
ಬಾಯಿಯಲ್ಲಿರುವ
ವಿಷದ
ಪರಿಣಾಮ
ವ್ಯಕ್ತಿಯ
ಮೇಲೆ
ಆಗುವುದುಂಟೆ?
ಇಲ್ಲ.
ಎಲ್ಲ
ಅಪಾಯಕಾರಿ
ಸಂಗತಿಗಳಿಗೆ
ಒಳ್ಳೆಯ
ಉಪಾಯವಿದೆ.
ಅವುಗಳು
ಅಪಾಯ
ಮಾಡುವುದಕ್ಕೆ
ಮೊದಲೆ
ಅವುಗಳನ್ನು
ಕಟ್ಟಿ
ಹಾಕುವುದೇ
ಆ
ಉಪಾಯ.
ಅದೇ
ರೀತಿಯಾಗಿ ಮನಸ್ಸು
ತನಗೆ
ಬೇಕಾದ
ಕಡೆಗೆ
ಹರಿಯುತ್ತದೆ.
ಅದನ್ನು
ನಿಲ್ಲಿಸುವುದು
ಹೇಗೆ?
ಅದು
ಇನ್ನಿತರ
ಕಡೆಗೆ
ಹರಿದು
ಹೋಗುವ
ಮುಂಚೆಯೇ
ಅದನ್ನು
“ಮಹತ್ತಿನಲ್ಲಿ” ನಿಲ್ಲಿಸಬೇಕು.
ಮಹತ್ತಾದುದರ
ಪರಿಚಯ
ಅದಕ್ಕೆ
ಇಲ್ಲದುದರಿಂದ
ಅದು
ಇತರ
ವಿಷಯಗಳಿಗೆ
ಹರಿಯುತ್ತದೆ.
ಹಾಗೆ
ಅದು
ನಶ್ವರವಾದ
ಸುಖಗಳಿಗೆ
ಹರಿಯುವ
ಮೊದಲೇ
ಅದನ್ನು
ಮಹತ್ತಾದ
ಆ
ಪರವಸ್ತುವಿನಲ್ಲಿ
ನಿಲ್ಲುವಂತೆ
ಮಾಡಬೇಕು.
ಆಗ
ಅದಕ್ಕೆ
ಇತರ
ಸುಖಗಳು
ಯಕಃಶ್ಚಿತ್
ಎನಿಸುತ್ತವೆ.
ಆ
ಮಹತ್ತಿನ
ಎದುರು
ಅವು
ಬೆಲೆಯಿಲ್ಲದಾಗುತ್ತವೆ.
ಆಗ
ಆ
ಮನಸ್ಸು
ಬೇರೆ
ಕಡೆಗೆ
ಹೋಗುವುದನ್ನು
ನಿಲ್ಲಿಸುತ್ತದೆ
ಎನ್ನುತ್ತಾರೆ
ರಾಯಸದ
ಮಂಚಣ್ನನವರು.
ಇಲ್ಲಿ
ಒಂದು
ವಿಷಯ
ಗಮನಿಸಬೇಕು.
ಆಯುಧವನ್ನು
ಕಟ್ಟಿಹಾಕು,
ಹಾವಿನ
ಬಾಯಿ
ಹಿಡಿದುಬಿಡು
ಎನ್ನುವ
ಅವರು
ಮನಸ್ಸನ್ನು
ಕಟ್ಟಿಹಾಕು
ಎನ್ನುತ್ತಲಿಲ್ಲ.
ಅದನ್ನು
ಸಾಮಾನ್ಯ
ವಿಷಯಗಳಲ್ಲಿ
ರುಚಿಯನ್ನು
ಕಾಣದಂತೆ
ಹಿರಿದಾದ
ವಿಷಯದಲ್ಲಿ
ಅಂದರೆ
ಮಹತ್ತಿನಲ್ಲಿ
ನಿಲ್ಲಿಸು
ಎನ್ನುತ್ತಾರೆ.
ಇದು
ಶರಣರ
ದಾರಿ.
No comments:
Post a Comment