Friday, February 14, 2014

Vachana 181: Kolondaralli Halau Kulada Govugala Nilisuvante – The Stick


VACHANA IN KANNADA

ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ
ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು,  
ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ ಮಹಾ ನಿಜದನೆಲೆ.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ

TRANSLITERATION

kOloMdaralli  halavu kulada  gOvugaLa  calisade nilisuvaMte
Ekacittanaagi sarva vikaaraMgaLa kaTTuvadedu
iMdriyaMgaLa icCeyalli trividhava  hiDidiruvara saMdiyalli nusuLade
vastuvina aMgadalliye tannaMga tallIyavaagippude mahaa nijada nele
gOpinaatha vishVEshvaraliMgavanarivudakke ide baTTe

CLICK HERE FOR A RECITATION

TRANSLATION (WORDS)
kOloMdaralli (with one stick)   halavu kulada (of several kinds) gOvugaLa (the cows)  calisade (without moving)  nilisuvaMte (like stopping)
Ekacittanaagi (one minded) sarva (all) vikaaraMgaLa (distortions of the mind)  kaTTuvadedu (bound, tied up)
iMdriyaMgaLa (of senses)  icCeyalli (in/ with desires)  trividhava (mind body wealth) hiDidiruvara (are in the grip of) saMdiyalli (in between a crowd)  nusuLade (not going)
vastuvina (of the truth)  aMgadalliye  (the body) tannaMga (own body) tallIyavaagippude (becomimg one with)  mahaa nijada nele (is the abode of the truth)
gOpinaatha vishVEshvaraliMgavanarivudakke (to know Gopinatha Vishveshvaralinga) ide (This alone is) baTTe(the way)

VACHANA IN ENGLISH

Like stopping several kinds of cows from moving, with one stick!
Becoming single minded and tying up all distortions of the mind,
Not mingling with the crowd that is in the grip of the desires of the trio (mind, body, wealth),
Merging own body with the body of the Divine (Truth), is reaching the abode of the Truth!
This alone is the way to know Gopinatha Vishveshvaralinga!

COMMENTARY

In this Vachana Turugahi Ramanna identifies the abode of the Divine (the Truth) and how to reach there.
A cowherd can control a herd of cows of different kinds with just one stick. Ramanna equates the distortions of the mind to the herd of cows and says that the only way to reach the Truth is to tie these distortions up by become single minded seeker of the Truth. The distortions of the mind are due to the desires and the sense organs generating and feeding these desires. Obviously, one cannot completely concur them, neither one should completely surrender to them. The senses should be used appropriately for their intended function, but one should not indulge in them. Man is a social animal. He tends to follow the trends in the society. It is tempting to become one like the neighbor in terms of the materialistic aspects brought up by body, mind and wealth. Ramanna urges us not to join the crowd. He says that the only way to realize God (Self, Divine, Truth) is to merge with Him with the utmost single mindedness we can muster. This alone is the way to reach Him! This alone should be the goal of life!  

Let us stick our mind to Divine and merge with Him!

KANNADA COMMENTARY
ಅರ್ಥ:
ಕೋಲೊಂದರಲ್ಲಿ (ಒಂದು ಕೋಲಿನಿಂದ)  ಹಲವು ಕುಲದ (ಬೇರೆ ಬೇರೆ ಜಾತಿಯ, ಕುಲದ)  ಗೋವುಗಳ ಚಲಿಸದೆ (ಹಸುಗಳನ್ನು ಅಲ್ಲಾಡದೆ, ಸುಮ್ಮನೆ) ನಿಲಿಸುವಂತೆ
ಏಕಚಿತ್ತನಾಗಿ (ಒಂದೇ ಮನಸ್ಸಿನವನಾಗಿ) ಸರ್ವವಿಕಾರಂಗಳ (ಎಲ್ಲ ಮನೋ ವಿಕಾರಗಳು)  ಕಟ್ಟುವಡೆದು (ಕಟ್ಟಿಹಾಕಿ),  
ಇಂದ್ರಿಯಂಗಳ ಇಚ್ಛೆಯಲ್ಲಿ  (ಇಂದ್ರಿಯಗಳ ಇಚ್ಛೆಗೆ ಅನುಗುಣವಾಗಿ) ತ್ರಿವಿಧವ (ತನು, ಮನ, ಧನ) ಹಿಡಿದಿರುವರ (ಹಿಡಿತಕ್ಕೆ ಒಳಗಾಗಿರುವರ, ತನು ಮನ, ಧನಗಳು ಇಂದ್ರಿಯಗಳ ಇಚ್ಛೆಗಳಿಂದ ಹಿಡಿದಿಟ್ಟಲ್ಪಟ್ಟಿವೆ)   ಸಂದಿಯಲ್ಲಿ (ನಡುವೆ) ನುಸುಳದೆ (ಸೇರಿಕೊಳ್ಳದೆ)
ವಸ್ತುವಿನ (ಆ ಪರವಸ್ತು, ಸತ್ಯದ ನೆಲೆ)  ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ (ಅದರಲ್ಲಿ ಒಂದಾಗಿರುವುದೇ) ಮಹಾ ನಿಜದನೆಲೆ(ತನ್ನ ನಿಜವಾದ ಪರಮ ನೆಲೆ)
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ (ಲಿಂಗವನ್ನು ಅರಿಯುವುದಕ್ಕೆ) ಇದೆ ಬಟ್ಟೆ (ಇದೇ ದಾರಿ)

ತಾತ್ಪರ್ಯ:
ಈ ವಚನದಲ್ಲಿ ರಾಮಣ್ಣನವರು ನಿಜದ ನೆಲೆ ಯಾವುದು ಮತ್ತು ಅದಕ್ಕೆ ದಾರಿಯಾವುದು ಎನ್ನುವುದನ್ನು ತಮ್ಮ ವೃತ್ತಿಗೆ ಸಂಬಂಧಪಟ್ಟಂತೆ ಹೇಳುತ್ತಾರೆ.
ಗೋವಳಿಗನು ಒಂದೇ ಕೋಲಿನಿಂದ ಅನೇಕ ಜಾತಿಯ ಗೋವುಗಳನ್ನು ಎಲ್ಲಿಯೂ ಓಡಿಹೋಗದಂತೆ ನಿಲ್ಲಿಸುತ್ತಾನೆ. ಅದೇ ರೀತಿಯಾಗಿ ಒಮ್ಮನಸ್ಸಿನಿಂದ ಮನಸ್ಸಿನ ವಿಕಾರಗಳನ್ನು ಕಟ್ಟಿ ಹಾಕಬೇಕು ಎನ್ನುತ್ತಾರೆ ರಾಮಣ್ಣನವರು. ಇಲ್ಲಿ ಕಟ್ಟಹಾಕಬೇಕು ಎಂದರೆ ಅವಗಳ ಮಿತಿಯಲ್ಲಿ ಅವಿರುವಂತೆ ಮಾಡುವುದು ಎಂದರ್ಥ. ಅವುಗಳು ತಮ್ಮ ಮಿತಿಯನ್ನು ಮೀರಿ ಸುಖವನ್ನು ಅರಸುತ್ತ  ಎಲ್ಲಂದರಲ್ಲಿ ಅಲೆದಾಡುವುದಲ್ಲ. ಗೋಪಾಲಕನು ಒಂದು ಕೋಲಿನ ಸಹಾಯದಿಂದ ಗೋವುಗಳ ಇಡೀ ಗುಂಪನ್ನು ತನ್ನ ವಶದಲ್ಲಿಟ್ಟುಕೊಳ್ಳುವಂತೆ ಏಕಾಗ್ರಚಿತ್ತದಿಂದ ತನ್ನೆಲ್ಲ ವಿಕಾರಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ.


ಮನಸ್ಸು ಬಹು ಬೇಗ ಇತರರನ್ನು ನೋಡಿ ಅವರನ್ನು ಅನುಕರಿಸುತ್ತದೆ. ಇತರರು ಇಂದ್ರಿಯಗಳ ಇಚ್ಛೆಗಳಿಗೆ ಬಲಿಯಾಗಿ ತಮ್ಮ ತನು, ಮನ, ಧನವನ್ನು ಅದಕ್ಕೆ ಅರ್ಪಿಸಿರುತ್ತಾರೆ. ತ್ರಿವಿಧಗಳನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸುವುದನ್ನು ಮರೆತು ಇಚ್ಛೆಗಳ ಪೂರ್ತಿಗಾಗಿ ಮೀಸಲಾಗಿಡುತ್ತಾರೆ. ಅಂತಹವರ ಸಂದಿಯಲ್ಲಿ ನುಸುಳಬಾರದು ಎನ್ನುತ್ತಾರೆ ರಾಮಣ್ಣನವರು. ಅಂತಹವರ ಸಂದಿಯಲ್ಲಿ ನುಸುಳುವದು ಎಂದರೆ ತನಗೆ ತಾನೇ ಕೇಡು ಬಗೆದಂತೆ. ಸಂದಿಯಲ್ಲಿ ನುಸುಳು ಎನ್ನುವ ಪದ ಇಲ್ಲಿ ಬಹಳ ಅರ್ಥಪೂರ್ಣ. ಇಚ್ಛೆಗಳಿಗೆ ದಾಸರಾಗಿರುವವರು ಬಹಳ ಜನರಿದ್ದಾರೆ. ಅವರ ದೊಡ್ಡ ಜನಸಂದಣಿಯೇ ಇದೆ. ಆ ಸಂದಿಯಲ್ಲಿ, ಆ ಗೊಂದಲದಲ್ಲಿ ನೀನೂ ನುಸುಳಿಕೊಂಡು ಹೋಗದಿರು ಎಂದು ಹೇಳುತ್ತಿದ್ದಾರೆ. ಹಾಗೆ ಮಾಡದೆ ಆತ್ಮ ಹೇಳುತ್ತಿರುವುದನ್ನು ಏಕಾಗ್ರಚತ್ತನಾಗಿ ಪಾಲಿಸಬೇಕು. ಆ ಪರವಸ್ತುವಿನಲ್ಲಿ ಲೀನವಾಗಬೇಕು. ಇದೇ ಆ ನಿಜದ ನೆಲೆ. ಇದೇ ಆ ಅಖಂಡ ಸತ್ಯದ ನೆಲೆ. ಆ ನೆಲೆಗೆ ಹೋಗಲು ಇದೇ ಏಕೈಕ ದಾರಿ ಎನ್ನುತ್ತಾರೆ.

No comments:

Post a Comment