Friday, January 17, 2014

Vachana 177: Okkudu Prasaadavalla – The blessing

VACHANA IN KANNADA

ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ
ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ
ತರ್ಕೈಸಿ ನಿಮ್ಮವನಪ್ಪಿಕೊಂಡಡೆ
ಅದು ನಿಶ್ಚಯ ಪ್ರಸಾದ ಕಾಣಾ ರಾಮನಾಥಾ.

TRANSLITERATION

okkudu prasaadavalla, mikkudu prasaadavalla
hatte karedikkidudu prasaadavalla
tarkaisi nimmavanappikoMDaDe
adu niScaya prasaada kaaNaa raamanaathaa.

CLICK HERE FOR A RECITATION:


TRANSLATION (WORDS)

okkudu (food given to a devotee) prasaadavalla (is not prasaada/ generally prasaada is food given by the God which cannot be wasted and to be consumed with complete reverence), mikkudu  (leftover food ) prasaadavalla (is not prasaada)
hatte (near)  karedikkidudu (given after requesting one to come near )  prasaadavalla (is not prasaada)
tarkaisi ( thinking logically)  nimmavanappikoMDaDe (if embraced Him/ God)
adu (that)  niScaya (surely is) prasaada (prasaada)  kaaNaa raamanaathaa (you see Ramanatha).

VACHANA IN ENGLISH

The food offered to a devotee is not prasaada, leftover food is not prasaada
That offered after asking one to come close is not prasaada
Having thought logically, if you embrace Yours (God)
That surely is prasaada, you see Ramanatha!

COMMENTARY

It is a common practice to cook food and offer it (Naivedya) to God as part of the worship. The food is then distributed to devotees who consume it with complete reverence, considering it ‘prasaada’ (blessing) from God. Devara Dasimayya says that such food is not prasaada. This food is actually a leftover after offering it to God. Such leftover food is not prasaada too. Even if the food is offered with utmost love by inviting one to come close and accept it, it is not prasaada. If one debates (thinks) logically and embraces Him, then it is truly prasaada.

The ingredients for the food we cook to offer to God are actually created by Him. We take His material and offer it back to Him in cooked form and accept the same as His blessing. We offer the food to devotees by inviting them very lovingly to come and accept our offering. We then consume the leftover with all the reverence as it is the blessing. We go through this circuitous path to take what was given to us by Him and does not even think about what we are going through. Dasimayya says that what is needed is the realization that everything we have is His. We already have His blessing and we do not need to convert it into anything else, but accept it with reverence.

Let us accept everything we have as His blessing and everything we do as His work!

KANNADA COMMENTARY

ಅರ್ಥ:

ಕ್ಕುದು(ಜಂಗಮರಿಗೆ ಕೊಟ್ಟದ್ದು) ಪ್ರಸಾದವಲ್ಲ, ಮಿಕ್ಕುದು (ಅಥವಾ ಉಳಿದದ್ದು) ಪ್ರಸಾದವಲ್ಲ
ಹತ್ತೆ  (ಹತ್ತಿರ) ಕರೆದಿಕ್ಕಿದುದು (ಕರೆದು ಬಡಿಸಿದದು) ಪ್ರಸಾದವಲ್ಲ
ತರ್ಕೈಸಿ (ತರ್ಕದಿಂದ ಯೋಚಿಸಿ) ನಿಮ್ಮವನಪ್ಪಿಕೊಂಡಡೆ (ದೇವರನ್ನು ಅಪ್ಪಿಕೊಂಡರೆ)
ಅದು ನಿಶ್ಚಯ (ಅದು ನಿಜವಾದ) ಪ್ರಸಾದ ಕಾಣಾ ರಾಮನಾಥಾ.

ತಾತ್ಪರ್ಯ:

ಇಲ್ಲಿ ದೇವರ ದಾಸಿಮಯ್ಯನವರು ಪ್ರಸಾದವೆಂದರೇನು ಎಂಬುದನ್ನು ತಿಳಿಸಿ ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಜಂಗಮರಿಗೆ ಅರ್ಪಿಸಿದುದು ಪ್ರಸಾದವೆಂದು ನಂಬುತ್ತಾರೆ. ತಮಗೆ ಅರ್ಪಿಸಿದುದನ್ನು ಜಂಗಮರು ಮುಟ್ಟಿ ಇತರರಿಗೆ ಕೊಡುವುದನ್ನು ಜನರು ಬಹಳ ಗೌರವದಿಂದ ಸ್ವೀಕರಿಸುತ್ತಾರೆ. ಪ್ರಸಾದವೆಂದರೆ ಅದು ದೇವರೇ ಕೊಟ್ಟದ್ದು, ಅದನ್ನು ವ್ಯರ್ಥ ಮಾಡಬಾರದು ಎನ್ನುವ ಭಾವನೆ ಜನರಲ್ಲಿದೆ. ಅದನ್ನು ಅತ್ಯಂತ ಗೌರವದಿಂದ, ಪೂರ್ತಿಯಾಗಿ, ಅದರ ರುಚಿಯ ಕಡೆಗೆ ಗಮನಕೊಡದೆ ಏಕನಿಷ್ಠೆಯಿಂದ  ಸ್ವೀಕರಿಸುತ್ತಾರೆ. ಆದರೆ ಅದು ಪ್ರಸಾದವಲ್ಲ, ಮಿಕ್ಕಿದದು ಪ್ರಸಾದವಲ್ಲ, ಮತ್ತು ಹತ್ತಿರ ಕರೆದು ಪ್ರೀತಿಯಿಂದ ಕೊಟ್ಟದ್ದು ಪ್ರಸಾದವಲ್ಲ ಎನ್ನುತ್ತಾರೆ ದಾಸಿಮಯ್ಯನವರು. ಏಕೆ ಹಾಗೆ ಹೇಳುತ್ತಾರೆ? ಸಾಮಾನ್ಯ ನಂಬಿಕೆ ಹಾಗಿರಬೇಕಾದರೆ ಅದು ಪ್ರಸಾದವಲ್ಲ ಎಂಬುದು ಏಕೆ?
ಪ್ರಸಾದವೆಂದರೆ ದೇವರು ಕೊಟ್ಟದ್ದು ಎಂಬುದು ಎಲ್ಲರೂ ಒಪ್ಪುವ ಮಾತು. ಆದರೆ ಜಂಗಮರಿಗೆ ಅರ್ಪಿಸಿದ ಮಾತ್ರಕ್ಕೆ ಅದು ಪ್ರಸಾದವಾಗಲಾರದು, ಅಥವಾ ಜಂಗಮರಿಗೆ ಅರ್ಪಿಸಿ ಉಳಿದದ್ದು ಪ್ರಸಾದವಾಗಲಾರದು ಎನ್ನುತ್ತಾರೆ. ಏಕೆಂದರೆ ದೇವರು ಕೊಟ್ಟದ್ದು ಪ್ರಸಾದವಾದರೆ ಯಾರನ್ನು ದೇವರು ಎನ್ನುವುದು ಮತ್ತು ಏಕೆ? ಆತನು ಏನನ್ನು ಕೊಡುತ್ತಾನೆ?  ಹೇಗೆ ಕೊಡುತ್ತಾನೆ?ಎಂಬುದು ಮುಖ್ಯ. ಆದ್ದರಿಂದ ಜಂಗಮರಿಗೆ ಕೊಟ್ಟದ್ದು ಮಾತ್ರವೇ ಪ್ರಸಾದವೆ? ಅವರಿಗೆ ಕೊಟ್ಟು ಉಳಿದದ್ದು ಪ್ರಸಾದವೆ? ಅಥವಾ ಬೇರೆಯವರು ಹತ್ತಿರ ಕರೆದು ಕೊಟ್ಟದ್ದು ಪ್ರಸಾದವೆ? ಎಂಬುದನ್ನು ತರ್ಕದ ಒರೆಗೆ ಹಚ್ಚಿ ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ ದೇವರ ದಾಸಿಮಯ್ಯನವರು. ಜಂಗಮನು ದೇವರೆ? ಎಲ್ಲ ಜಂಗಮರೂ ದೇವರೆ?  ಜಂಗಮರ ವೇಶ ತೊಟ್ಟವರೆಲ್ಲ ದೇವರಾಗಲು ಸಾಧ್ಯವೆ? ಎಂದು ತರ್ಕದ ಒರೆಗೆ ಹಚ್ಚಿ ನೋಡಬೇಕು. ಆಗ ಎಲ್ಲ ಜಂಗಮರಿಗೆ ಕೊಟ್ಟದ್ದು, ಮಿಕ್ಕಿದುದು ಮಾತ್ರ ಪ್ರಸಾದವಾಗಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತದೆ. ಅವರಿಗೆ ಅರ್ಪಿತವಾಗದೆ ಇದ್ದದ್ದು ಏಕೆ ಪ್ರಸಾದವಲ್ಲ ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಮತ್ತು ಅದಕ್ಕೆ ಉತ್ತರವಿರುವುದಿಲ್ಲ.
ಈ ಪ್ರಶ್ನೆಗಳನ್ನು ಆಳವಾಗಿ, ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಬೇಕು. ಆಗ ಈ ಎಲ್ಲವೂ ಪ್ರಸಾದವಲ್ಲ. ಅಥವಾ ಅವುಗಳಲ್ಲಿ ಯಾವ ಭೇದಭಾವವೂ ಇಲ್ಲ ಎಂಬುದು ಗಮನಕ್ಕೆ ಬರುತ್ತದೆ. ಹಾಗಾದರೆ ಪ್ರಸಾದವೆಂದರೆ ಏನು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಅದನ್ನು ಯೋಚಿಸಿದಾಗ ದೇವರು ಕೊಟ್ಟದ್ದು ಪ್ರಸಾದವೆಂದಾದರೆ ದೇವರು ಯಾರು ಎಂಬುದರ ಕಡೆಗೆ ಗಮನ ಹರಿಯುತ್ತದೆ. ಆದರೆ ದೇವರು ಯಾವಾಗ ಏನು ಕೊಡುತ್ತಾನೆಎಂಬಂತಹ ಪ್ರಶ್ನೆಗಳು  ಹುಟ್ಟುತ್ತವೆ. ಈ ಪ್ರಶ್ನೆಗಳಿಗೆ ಅರ್ಥ ಹುಡುಕುವಾಗ ತರ್ಕವನ್ನು ಮೀರಿನಿಂತ ದೇವರ ಅನುಭವವಾಗಬಹುದು. ಹಾಗಾಗಿ ಆ ದೇವರನ್ನು ಅಪ್ಪಿಕೊಂಡಾಗ, ದೇವರಲ್ಲಿ ಒಂದಾದಾಗ, ಇಲ್ಲಿ ಇರುವುದೆಲ್ಲ ದೇವರ ಪ್ರಸಾದವೇ ಎಂಬ ಭಾವ ಬೆಳೆಯುತ್ತದೆ.


No comments:

Post a Comment