VACHANA IN KANNADA
ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿಯಲಲ್ಲದೆ ಸುಡಲರಿಯದು
ವಾಯು ಸುಳಿಯಲಲ್ಲದೆ ಸುಡಲರಿಯದು
ಆ ಅಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥಾ
TRANSLITERATION
agni suDalallade suLiyalariyadu
vaayu suLiyalallade suDalariyadu
aa agni vaayuva kUDidallade aDiyiDalariyadu
I pariyaMte
narararivare kriyaaj~jaanabhEdava? raamanaathaa.
CLICK HERE FOR A RECITATION
TRANSLATION (WORDS)
agni (fire)
suDalallade (other than burning)
suLiyalariyadu (doesn’t know moving/
roaming)
vaayu ( wind) suLiyalallade (other than moving/ roaming) suDalariyadu (doesn’t know burning)
aa (that) agni (fire)
vaayuva (the wind) kUDidallade (unless
joins) aDiyiDalariyadu (doesn’t know to
move)
I (this) pariyaMte
(way) narararivare (do people know) kriyaaj~jaanabhEdava (the mystery of action
and knowledge)? raamanaathaa (Ramanatha)
VACHANA IN ENGLISH
Fire can only burn, but cannot
move
Wind can only move, but cannot
burn
Unless the fire joins the wind, it
would not know how to move
This way, do people realize the
mystery of action and knowledge, Ramanatha?
COMMENTARY
Devara Dasimayya stresses the
importance of combining knowledge with action in this Vachana.
The fire can only burn. It cannot
roam around by itself. The wind can only move around. It cannot burn anything.
When the fire joins the wind, together they can roam and burn. Along the same
lines, knowledge is important. Just the knowledge alone would not be of any use
unless it is combined with action.
Action without knowledge leads to undesirable consequences. We must gain
the appropriate knowledge as the prerequisite for the action we plan on. Just
acquiring the knowledge is not sufficient – it should be put to use through appropriate
action. Dasimayya laments how people do not realize the importance of combining
the knowledge and action.
Let us act with knowledge!
KANNADA COMMENTARY
ಅರ್ಥ:
ಅರ್ಥ:
ಅಗ್ನಿ (ಬೆಂಕಿ) ಸುಡಲಲ್ಲದೆ (ಸುಡುವುದನ್ನು
ಬಿಟ್ಟು) ಸುಳಿಯಲರಿಯದು (ಅಡ್ಡಾಡಲು,
ಅಲೆದಾಡುವುದನ್ನು ತಿಳಿಯದು)
ವಾಯು (ಗಾಳಿ) ಸುಳಿಯಲಲ್ಲದೆ (ಅಲೆದಾಡುವುದನ್ನು ಬಿಟ್ಟು) ಸುಡಲರಿಯದು (ಸುಡುವುದನ್ನು ತಿಳಿಯದು)
ಆ ಅಗ್ನಿ ವಾಯುವ ಕೂಡಿದಲ್ಲದೆ (ಆ ಬೆಂಕಿ ಗಾಳಿಯನ್ನು ಕೂಡಿದಾಗ ಮಾತ್ರ) ಅಡಿಯಿಡಲರಿಯದು (ಅಲೆದಾಡಲು ಸಾಧ್ಯ)
ಈ ಪರಿಯಂತೆ (ಈ ರೀತಿಯಾಗಿ)
ನರರರಿವರೆ (ಮನುಷ್ಯರು ತಿಳಿಯುವರೆ?)ಕ್ರಿಯಾಜ್ಞಾನಭೇದವ
(ಕ್ರಿಯೆ ಮತ್ತು ಜ್ಞಾನದ ರಹಸ್ಯವನ್ನು)? ರಾಮನಾಥಾ.
ತಾತ್ಪರ್ಯ:
ತಾತ್ಪರ್ಯ:
ಇಲ್ಲಿ ದೇವರ ದಾಸಿಮಯ್ಯನವರು, ಅಗ್ನಿ ಮತ್ತು ವಾಯುವಿನ ಉದಾಹಾರಣೆಯೊಂದಿಗೆ ಜ್ಞಾನ
ಮತ್ತು ಕ್ರಿಯೆಯ ಸಂಬಂಧವನ್ನು ತಿಳಿಸುತ್ತಿದ್ದಾರೆ.
ಅಗ್ನಿಗೆ ಸುಡುವ ಗುಣವಿದೆ. ಅದು ಸುಡುತ್ತದೆಯೇ ಹೊರತು ಅಲೆದಾಡುವುದಿಲ್ಲ. ಅದಕ್ಕೆ
ಅಲೆದಾಡಲು ಬರುವುದಿಲ್ಲ. ಅದೇ ರೀತಿಯಾಗಿ ಗಾಳಿ ಅಲೆದಾಡುತ್ತದೆಯೇ ಹೊರತು ಸುಡುವುದಿಲ್ಲ.
ಅಲೆದಾಡುವುದು ವಾಯುವಿನ ಗುಣ. ಅಗ್ನಿ ವಾಯುವಿನೊಂದಿಗೆ ಕೂಡಿದಾಗ ಅದು ಮುಂದೆ ಅಡಿಯಿಡುತ್ತದೆ.
ಅದು ಕ್ರಿಯಾಶೀಲವಾಗುತ್ತದೆ. ಇಲ್ಲದಿದ್ದರೆ ಅದು ಏನೂ ಮಾಡಲಾಗುವುದಿಲ್ಲ. ಅಗ್ನಿಗೆ ಗಾಳಿಯ ಸಹಾಯ
ಬೇಕೇ ಬೇಕು. ಗಾಳಿಯಿಲ್ಲದಿದ್ದಲ್ಲಿ ಅಗ್ನಿಗೆ ಯಾವ ಬೆಲೆಯೂ ಇಲ್ಲ. ಅಗ್ನಿ ಸುಡಲು ಗಾಳಿಯನ್ನು
ಅವಲಂಬಿಸುತ್ತದೆ. ಇದೇ ರೀತಿಯಾಗಿ ಜ್ಞಾನ ಮತ್ತು
ಕ್ರಿಯೆಗಳು ಒಂದನ್ನೊಂದು ಕೂಡಿಕೊಂಡಾಗ ಮಾತ್ರ ಸಾರ್ಥಕವಾಗುತ್ತವೆ ಎನ್ನುತ್ತಾರೆ ದೇವರ ದಾಸಿಮಯ್ಯನವರು. ಕೇವಲ ಜ್ಞಾನ ಹೊಂದಿದ್ದರೆ ಏನೂ ಪ್ರಯೋಜನವಿಲ್ಲ. ಮತ್ತು ಜ್ಞಾನವಿಲ್ಲದ ಕ್ರಿಯೆಯಿಂದಲೂ ಏನೂ
ಪ್ರಯೋಜನವಿಲ್ಲ.ಏಕೆಂದರೆ ಕ್ರಿಯೆಯಿಲ್ಲದ ಜ್ಞಾನ ಅಮೂರ್ತವಾಗಿ ತಲೆಯಲ್ಲಿರುತ್ತದೆಯೇ ಹೊರತು ಯಾರ
ಕಣ್ಣಿಗೂ ಕಾಣದು. ಜ್ಞಾನ ಕ್ರಿಯಾಶೀಲವಾದಾಗ ಅದು ಎಲ್ಲರ ಕಣ್ಣಿಗೂ ಕಾಣುತ್ತದೆ, ಸಮಾಜಕ್ಕೆ ಕಲ್ಯಾಣದಾಯಕವಾಗುತ್ತದೆ
ಮತ್ತು ಸಾರ್ಥಕಗೊಳ್ಳುತ್ತದೆ. ಕ್ರಿಯಶೀಲವಾಗದ ಜ್ಞಾನ ವ್ಯರ್ಥ. ಮತ್ತು ಜ್ಞಾನವಿಲ್ಲದ ಕ್ರಿಯೆ
ಸಂಪೂರ್ಣ ವ್ಯರ್ಥ, ತಿಳುವಳಿಕೆಯಿಲ್ಲದೆ ಯಾವುದೇ ಕೆಲಸಮಾಡಿದರೂ ಅದು ಉಪಯೋಗಕ್ಕೆ ಬರುವುದಿಲ್ಲ.
ವೃಥಾ ಶಕ್ತಿಯ ವ್ಯಯವಾಗುತ್ತದೆ. ತಿಳುವಳಿಕೆಯಿದ್ದು ಕ್ರಿಯೆ ಕೈಗೊಂಡಾಗ ಅದರ ಒಳ್ಳೆಯ ಪರಿಣಾಮ ಎಲ್ಲರ ಮೇಲೂ
ಕಂಡುಬರುತ್ತದೆ. ಎಲ್ಲರಿಗೂ ಅದರಿಂದ ಕಲ್ಯಾಣವಾಗುತ್ತದೆ. ಆದ್ದರಿಂದ ತಿಳುವಳಿಕೆ ಅಥವಾ ಜ್ಞಾನ
ಸಹಿತ ಕ್ರಿಯೆಗೆ ಅಗಾಧ ಶಕ್ತಿಯಿದೆ. ಇದರ ರಹಸ್ಯವನ್ನು ಅರಿಯುವರೆ ಮನುಷ್ಯರು? ಎಂದು ಕೇಳುತ್ತಾರೆ
ದೇವರ ದಾಸಿಮಯ್ಯನವರು. ಯಾವಾಗಲೂ ಜ್ಞಾನ ಮತ್ತು ಕ್ರಿಯೆಗಳು ಅಗ್ನಿ ಮತ್ತು ವಾಯುವಿನಂತೆ ಒಂದನ್ನೊಂದು
ಕೂಡಿ ಮುಂದಡಿಯಿಡಬೇಕು ಎಂದು ತಿಳಿಸುತ್ತಿದ್ದಾರೆ.
ಈ ವಚನ ಅತ್ಯಂತ ಸಮರ್ಪಕವಾದ ಉದಾಹರಣೆಯಿಂದ
ಜ್ಞಾನ ಕ್ರಿಯೆಯ ರಹಸ್ಯಮಯ ಸಂಬಂಧವನ್ನು
ಅಂಗೈಯ ನೆಲ್ಲಿಕಾಯಿಯಂತೆ ಸ್ಪಷ್ಟಗೊಳಿಸುತ್ತದೆ.
No comments:
Post a Comment