VACHANA IN
KANNADA
ಆಸೆ
ಪರಿಣಾಮಕ್ಕೆ ಸೋತು ಹೋಯಿತ್ತು
ಆಶ್ರಯದ
ನಿದ್ರೆ ಕೆಟ್ಟಿತ್ತು
ಗ್ರಾಸ
ಮೆಲ್ಲನಾಯಿತ್ತು
ಸ್ತ್ರೀಯರ
ಮೇಲಣ ಇಚ್ಛೆ ಕೆಟ್ಟಿತ್ತು
ಈಶ್ವರ
ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ! ರಾಮಾನಾಥಾ.
TRANSLITERATION
aase
pariNaamakke sOtu hOyittu
aashrayada
nidde keTTittu
graasa
mellanaayittu
streeyara mElaNa
icCe keTTittu
Ishvara
nimma paadaaMbuja sEveyiMda kaaNaa! raamanaathaa.
CLICK HERE
FOR A RECITATION
TRANSLATION
(WORDS)
aase (desire) pariNaamakke (of the result/ outcome) sOtu hOyittu
(got defeated)
aashrayada
(of dependence) nidde (sleep) keTTittu
(was spoilt, ended)
graasa
(food) mellanaayittu (became slow)
streeyara (of woman/men) mElaNa icCe (desire for) keTTittu (was spoilt,
ended)
Ishvara (
god) nimma (your) paadaaMbuja (lotus feet) sEveyiMda (by worshipping) kaaNaa! (you see) raamanaathaa(Ramanatha).
VACHANA IN
ENGLISH
The desire
got defeated for its outcome
The sleep of
dependence got spoilt
The food
became slow
The desire
for women ended
Ishvara
(God), because of worshipping your lotus feet, you see! Raamanaatha.
COMMENTARY
In this
Vachana Devara Dasimayya describes the effect of establishing ones heart and
soul in the Divine. Desire is the root cause of all our misery. When we acquire
the object of our desire we scale the mountain of joy. We know that the joy
could be temporary. Yet, we desire for more. The desire for more never ends.
When we fail in acquiring the object of desire we sink to the bottom of the
sea. We forget that this state is also not permanent. Setting ourselves in the
Divine, takes us out of the ups and downs created by the desire.
We are all
social beings. We enjoy the company of people and objects around us. We depend
on them for our happiness. For our happiness and existence we are dependent on
the books we read, the movies we see, the sports we are involved in, the
friendships we have cultivated and our relations with father, mother, wife and
husband, etc. Setting on the Divine gets us the freedom from these
dependencies.
The
eagerness to consume food slowed down. The food here refers to all the objects
we consume to sustain our lives and grow. We are in a constant turmoil to
satisfy our hunger. With the Divine blessing, we escape from this turmoil. Our
eagerness vanishes and a peaceful pace sets in.
One of the
basic instincts of humans is the attraction for the opposite sex. It has turned
out to be one of the major weaknesses of the humans and has resulted in
destruction of families and kingdoms.
Setting ones heart on the divine defeats this attraction.
The message
of the Vachana is that once we realize the Divine and bow our head at His lotus
feet and set our soul on Him, we get the freedom from the worldly desires and
achieve the bliss. All the above effects
are due to surrendering to the lotus feet of the Divine. This surrender does
not correspond to ritual, outward worship. It calls for realizing the Divine
within through single minded, intense quest. Through this enquiry one realizes
as to how the desires generate, what is their effect and how to overcome them.
Along the same lines, one understands how the dependence leads to misery. The
dependence is the result of the fear of losing something. Key to overcome
dependence is the removal of the fear. This can only be done by the individual
himself and not by others. Realization of the Divine erases the selfishness and
allows one to see the Divine in everything and everyone around him. It erases
the conflict of ‘me and them’ and ‘man and woman’ and brings equanimity. This
is the true worship of the Divine.
Let us
invite Him to be with us and relieve us of the mortal tentacles.
KANNADA
COMMENTARY
ಅರ್ಥ:
ಆಸೆ (ಬಯಕೆ)
ಪರಿಣಾಮಕ್ಕೆ (ಅದರಿಂದ ಉಂಟಾದ ಫಲಿತಾಂಶದಿಂದ) ಸೋತು ಹೋಯಿತ್ತು
ಆಶ್ರಯದ (ಅವಲಂಬನೆಯ)
ನಿದ್ರೆ ಕೆಟ್ಟಿತ್ತು
ಗ್ರಾಸ
(ಆಹಾರ) ಮೆಲ್ಲನಾಯಿತ್ತು (ನಿಧಾನವಾಯಿತು)
ಸ್ತ್ರೀಯರ
ಮೇಲಣ ಇಚ್ಛೆ ಕೆಟ್ಟಿತ್ತು (ನಿಂತು ಹೋಯಿತು)
ಈಶ್ವರ
ನಿಮ್ಮ ಪಾದಾಂಬುಜ (ಪಾದ ಕಮಲಗಳ) ಸೇವೆಯಿಂದ
ಕಾಣಾ! ರಾಮಾನಾಥಾ.
ತಾತ್ಪರ್ಯ:
ಆಸೆ
ಪರಿಣಾಮಕ್ಕೆ ಸೋತು ಹೋಯಿತು ಎನ್ನುತ್ತಾರೆ. ಸಾಮಾನ್ಯವಾಗಿ ಮನುಷ್ಯನಲ್ಲಿ ಆಸೆ ಸಾಯುವುದಿಲ್ಲ. ಆಸೆಯಿಂದ ಮನಸ್ಸು
ಕೋಟಲೆಗೊಳಗಾದರೂ ಮತ್ತೆ ಮತ್ತೆ ಆಸೆ ಹುಟ್ಟುತ್ತಲೇ ಇರುತ್ತದೆ. ತನ್ನ ಆಸೆಗಳು ಎಲ್ಲವೂ
ಪೂರ್ತಿಗೊಳ್ಳುವುದಿಲ್ಲ, ಮತ್ತೆ ಮತ್ತೆ ನಿರಾಸೆ ಕಾದಿರುತ್ತದೆ ಎಂದು ತಿಳಿದಿದ್ದರೂ ಆಸೆ
ಸೋಲುವುದಿಲ್ಲ. ಅದು ಇದ್ದೇ ಇರುತ್ತದೆ. ಆದರೆ ಕೊನೆಗೊಮ್ಮೆ ಅದು ಸೋತಿತು ಎಂದು ಹೇಳುತ್ತಾರೆ.
ಯಾವಾಗ ಎಂಬುದನ್ನು ಮುಂದೆಹೇಳುತ್ತಾರೆ.
ಆಶ್ರಯ
ನಿದ್ದೆ ಕೆಟ್ಟಿತ್ತು ಎಂದು ಹೇಳುತ್ತಾರೆ. ಆಶ್ರಯ ಎಂದರೆ ಅವಲಂಬನೆ. ಸಾಮಾನ್ಯವಾಗಿ ಜೀವ ತನ್ನ
ಸುಖಕ್ಕಾಗಿ ಯಾವುದಾವುದನ್ನೋ ಯಾರ ಯಾರನ್ನೋ ಆಶ್ರಯಿಸಿ
ಸುಖವಾಗಿದ್ದೇನೆ ಎಂದುಕೊಳ್ಳುತ್ತದೆ. ಉದಾಹರಣೆಗೆ: ಮನೋರಂಜನೆಯನ್ನು, ಕೆಲಸವನ್ನು,
ಪುಸ್ತಕವನ್ನು, ಧರ್ಮವನ್ನು, ಆಚರಣೆಯನ್ನು, ಅಪ್ಪನನ್ನು, ಹೆಂಡತಿಯನ್ನು, ಗಂಡನನ್ನು, ಗೆಳೆಯ
ಗೆಳತಿಯನ್ನು ಮುಂತಾದವರನ್ನು ಜೀವ ಆಶ್ರಯಿಸುತ್ತದೆ. ತನ್ನ ಸುಖಕ್ಕಾಗಿ ಅವರು ಖಂಡಿತವಾಗಿಯೂ ನೆರವಾಗುತ್ತಾರೆ
ಎಂದು ನಂಬುತ್ತದೆ. ಅವರಿರುವರೆಗೆ ತನಗೆ ಯಾವ ಚಿಂತೆಯೂ ಇಲ್ಲವೆಂದು ತಿಳಿದುಕೊಂಡಿರುತ್ತದೆ. ಆದರೆ
ಅದೆಲ್ಲ ಸುಳ್ಳು ಎಂಬ ಅರಿವು ಉಂಟಾಗುತ್ತದೆ. ಆಗ ಜೀವನ ಸುಖವಾದ ಅಥವಾ ನಂಬುಗೆಯ ನಿದ್ದೆ ಕಳೆದು
ಹೋಗುತ್ತದೆ.
ಗ್ರಾಸ
ಮೆಲ್ಲನಾಯಿತ್ತು ಎನ್ನುತ್ತಾರೆ. ಗ್ರಾಸ ಎಂದರೆ ಆಹಾರ.ಎಂದರೆ ಕೇವಲ ಊಟದ ವಸ್ತುಗಳಷ್ಟೇ ಅಲ್ಲ.
ಜೀವಪಡೆದುಕೊಳ್ಳುವ ಎಲ್ಲವೂ ಆಹಾರವೇ. ಈ
ಆಹಾರವೆಲ್ಲವೂ ಮೆಲ್ಲನಾಯಿತು. ಎಂದರೆ ಜೀವ ಸ್ವೀಕರಿಸುವ ಎಲ್ಲದರ ಗತಿ ನಿಧಾನವಾಯಿತು. ಎಂದರೆ
ಮುನ್ನಿನಂತೆ ಹಪಹಪಿಸುವಿಕೆ ನಿಂತುಹೋಯಿತು. ಗತಿ ನಿಧಾನವಾದ್ದರಿಂದ ತನಗೆ ಆವಶ್ಯಕವಾದದ್ದನ್ನು ಮಾತ್ರ ಅವಶ್ಯಕವಾದಷ್ಟೇ
ಸ್ವೀಕರಿಸುವಂತಾಯಿತು.
“ಸ್ತ್ರೀಯರ
ಮೇಲಣ ಇಚ್ಛೆ ಕೆಟ್ಟಿತ್ತು” ಎನ್ನುತ್ತಾರೆ. ಎಂದರೆ ಪುರುಷರಿಗೆ ಸ್ತ್ರೀಯರ ಹಾಗೂ ಸ್ತ್ರೀಯರಿಗೆ
ಪುರುಷರ ಬಗ್ಗೆ ಆಸಕ್ತಿ ಒಮ್ಮಿಲೆ ನಿಂತು ಹೋಯಿತು ಎನ್ನುತ್ತಾರೆ. ವಿರುದ್ಧ ಲಿಂಗದವರಲ್ಲಿ
ಆಸಕ್ತಿ ಬಹಳ ಆಳ ಮತ್ತು ಬಲವಾದದ್ದು ಅದು ತಾನಾಗಿಯೇ ನಿಂತು ಹೋಯಿತು ಎನ್ನುವುದು ಸೋಜಿಗದ ವಿಷಯವೆ
ಹೊರತು ಸಾಮಾನ್ಯವಲ್ಲ.
ಇಷ್ಟೆಲ್ಲ ಆದದ್ದು ದೇವರ ಪಾದಗಳ ಸೇವೆಯಿಂದ ಎನ್ನುತ್ತಾರೆ. ದೇವರ ಪಾದ ಸೇವೆ
ಎಂದರೇನು? ದೇವಸ್ಥಾನದಲ್ಲಿರುವ ದೇವರ ಮೂರ್ತಿಯ ಪಾದಪೂಜೆಯೆ? ಖಂಡಿತ ಅಲ್ಲ. ಮತ್ತೇನು? ಆ
ಪರವಸ್ತುವಿನ ಅರಿವು ಪಡೆಯುವುದು.ಆದನ್ನು ಏಕ ನಿಷ್ಠೆಯಿಂದ ಅನ್ವೇಷಿಸಿ ಪಡೆಯಬೇಕು. ಅದೇ ದೇವರ
ಪಾದ ಪೂಜೆ. ಆ ಪರವಸ್ತುವಿನ ಅರಿವು ಆದಾಗ ಆಸೆ ತನಗಾದ ಪರಿಣಾಮದಿಂದ ಸೋತು ಹೋಗುತ್ತದೆ. ಅದಕ್ಕೆ ಆಸೆಯ ಇಡೀ ರಚನಾಕ್ರಮದ
ಅರಿವು ಉಂಟಾಗುತ್ತದೆ. ಅಂದರೆ ಮನಸ್ಸಿನಲ್ಲಿ ಆಸೆ ಏಕೆ ಹುಟ್ಟುತ್ತದೆ? ಆಸೆಯ ಪರಿಣಾಮ
ಏನಾಗುತ್ತದೆ ಮತ್ತೆ ಏಕಾಗುತ್ತದೆ ಎಂಬುದು ತಾನಾಗಿಯೇ ಸ್ಪಷ್ಟವಾಗುತ್ತದೆ. ಆಗ ಆಸೆ ತಾನಾಗಿಯೇ
ಹಿಂದೆ ಸರಿಯುತ್ತದೆ.
ಇದೇ ರೀತಿ ಅವಲಂಬನೆ, ಆಶ್ರಯ ಹೇಗೆ ಮನುಷ್ಯನನ್ನು ದುಃಖಕ್ಕೀಡು ಮಾಡುತ್ತದೆ
ಎಂಬುದರ ಅರಿವಾಗುತ್ತದೆ. ತನ್ನ ಮನದಲ್ಲಿರುವ ಭಯವೇ ತನ್ನನ್ನು ಅವಲಂಬಿಸುವಂತೆ ಮಾಡುತ್ತದೆ.
ಮತ್ತು ಈ ಭಯವನ್ನು ತಾನು ಮಾತ್ರ ನಿವಾರಿಸಿಕೊಳ್ಳಬಲ್ಲ. ಇನ್ನೊಬ್ಬರು ಅದನ್ನು ಮಾಡಲಾರರು. ಮತ್ತು
ಭಯಕ್ಕೆ ಕಾರಣ ತಾನು ಬೇರೆ ಎಂಬ ಭಾವನೆ. ಈ ಸೃಷ್ಟಿಯಲ್ಲಿ ಎಲ್ಲವೂ ದೇವರ ಅಂಶವೇ ಎಂಬ ಭಾವ ಆಳವಾಗಿ
ಬೇರೂರಿದಾಗ ಭಯ ತಾನಾಗಿಯೇ ಇಲ್ಲವಾಗುತ್ತದೆ. ಇದು ಆ ಪರವಸ್ತುವಿನ ಅರಿವಿನಿಂದ
ಉಂಟಾಗುತ್ತದೆ.ಇದರಿಂದಲೇ ತನ್ನ ಸ್ವಾರ್ಥ ಭಾವ ಅಳಿಯುತ್ತದೆ. ತನಗೆ ಬೇಕು, ಇಂದಿಗೆ ಮಾತ್ರವಲ್ಲ
ನಾಳೆಗೂ ಎಂಬ ಭಾವ ನಿರ್ನಾಮವಾಗುತ್ತದೆ. ಎಲ್ಲವನ್ನೂ ಎಷ್ಟು ಬೇಕೋ ಅಷ್ಟೆ ತೆಗೆದುಕೊಳ್ಳುವ ಗುಣ
ಅಳವಡುತ್ತದೆ. ಎಲ್ಲವೂ ನಿಧಾನಗತಿಯಲ್ಲಿ ನಡೆಯುತ್ತದೆ. ಯಾವುದರಲ್ಲಿಯೂ ಅವಸರವಿರುವುದಿಲ್ಲ.
ಏಕೆಂದರೆ ಯಾವುದೇ ರೀತಿಯ ಭಯವಿರುವುದಿಲ್ಲ. ಸ್ತ್ರೀ ಪುರುಷರಬಗ್ಗೆಯಾಗಲಿ ಆಸಕ್ತಿಯಿರುವುದಿಲ್ಲ.
ಸ್ತ್ರೀ ಪುರುಷವೆಂಬ ಭೇದ ಭಾವ ಕಳೆಯುತ್ತದೆ. ಇಷ್ಟೆಲ್ಲವೂ ಆ ಪರವಸ್ತುವಿನ ಅರಿವಿನಿಂದ
ಆಗುತ್ತದೆ. ಅದೇ ದೇವರ ಪಾದಪೂಜೆ.
No comments:
Post a Comment