ನಿಷ್ಠೆಯೆಂಬುವದು ತನುವಿನ ಪ್ರಕೃತಿಯ ಕೆಡಿಸುವುದು
ನಿಷ್ಠೆಯೆಂಬುವದು ಮನದ ಮಾಯೆಯನಳಿವುದು
ನಿಷ್ಠೆಯೆಂಬುವದು ಜ್ಞಾನದ ಬಟ್ಟೆಯ ತೋರುವುದು
ನಿಷ್ಠೆಯೆಂಬುವದು ಅಖಂಡೇಶ್ವರ ಲಿಂಗವನೊಲಿಸುವುದು
TRANSLITERATION
niShTheyeMbuvadu tanuvina prakRutiya keDisuvudu
niShTheyeMbuvadu manada maayeyanaLivudu
niShTheyeMbuvadu j~jaanada baTTeya tOruvudu
niShTheyeMbuvadu akhaMDEshvaraliMgavanolisuvudu
CLICK HERE TO READ ALONG:
http://www.youtube.com/watch?v=hqUyiKu8dws&feature=youtu.be
TRANSLATION (WORDS)
niShThey (devotion) eMbuvadu (so called) tanuvina (of the body) prakRutiya (nature, characteristics, tendencies) keDisuvudu (destroys)
niShThey (devotion) eMbuvadu (so called) manada (of mind) maayeyanu (illusion)aLivudu (destroys)
niShThey (devotion) eMbuvadu (so called) j~jaanada (of self-knowledge) baTTeya (way ) tOruvudu (shows)
niShThey (devotion) eMbuvadu (so called) akhaMDEshvaraliMgavanu (Lord of the Universe) olisuvudu (persuades, comes up on)
TRANSLATION
Devotion destroys the tendencies of the body!
Devotion destroys the illusion of the mind!
Devotion shows the way for self-knowledge!
Devotion persuades the Lord of the Universe!
COMMENTARY
In this Vachana Sharana Shanmuka Swamy stresses the concepts of devotee and devotion portrayed in the last two postings, saying that devotion destroys the common tendencies of the body, destroys the illusion of the mind, shows the way for self-realization and enables one to reach the Lord.
The word ‘niShThey’ is commonly translated as ‘devotion’. Devotion usually means devotion to God or Bhakti. We are accustomed to providing a form for God and worshipping Him through various rituals and routine beliefs. We assume that being involved in ritualistic practices is true devotion or bhakti. This and the previous two Vachanas take us away from this narrow interpretation of devotion or bhakti. Devotion is the commitment to do whatever we do without attention to gain or loss from it, without the goal of satisfying someone else but ourselves, and with immense honesty to ourselves. When we examine within and perform with such devotion we unearth the subtleties which erase the difference between right and wrong, remove the illusions of mind and take us away from the mundane tendencies of the body. This is self-realization, the way to reach the Lord. This mode of intense devotion removes all our expectations from the Lord or the fellow beings and paves the way for self-realization.
Let us examine ourselves with immense honesty towards becoming intense devotees!
KANNADA COMMENTARY
ಇದು ಷಣ್ಮುಖಸ್ವಾಮಿಗಳ ವಚನ. ಅವರೂ ಕೂಡ ದೇವರದಾಸಿಮಯ್ಯನವರ ಭಾವವನ್ನೇ ಒತ್ತಿ ಹೇಳುತ್ತಿದ್ದಾರೆ. ಇಲ್ಲಿ ನಿಷ್ಠೆ ಎಂಬುದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯವಾದದ್ದು. ಅದನ್ನು, ನಾವು ತಿಳಿದುಕೊಂಡಂತೆ ಭಕ್ತಿ ಎಂದು ಅರ್ಥೈಸುವುದು ತಪ್ಪಾಗುತ್ತದೆ. ಏಕೆಂದರೆ, ನಾವು, ಮೂಢನಂಬಿಕೆ ಅಥವಾ ಧರ್ಮಾಚಾರವನ್ನೇ ಭಕ್ತಿಯೆಂದು ತಿಳಿದುಕೊಂಡಿದ್ದೇವೆ. ದೇವರ ಒಂದು ರೂಪವನ್ನು ನಂಬಿ, ಅದಕ್ಕೆ ತಕ್ಕಂ ತೆ ಧಾರ್ಮಿಕ ಅನುಷ್ಠಾನವನ್ನು ಕೈಗೊಳ್ಳುವುದು ಭಕ್ತಿ ಎನಿಸಿದೆ. ಇಂತಹ ಭಕ್ತಿಯಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದಲೇ ಇಲ್ಲಿ ಭಕ್ತಿಯ ಬದಲು ನಿಷ್ಠೆಗೆ ಮಹತ್ವವನ್ನು ಕೊಟ್ಟಿದ್ದಾರೆ. ಹಾಗಾದರೆ ನಿಷ್ಠೆ ಎಂದರೇನು? ಅಂದರೆ, ನಾವು ಎನೇ ಮಾಡಿದರೂ ಅದನ್ನು ಯಾವುದೇ ಲಾಭ ನಷ್ಟಗಳ ಚಿಂತೆಯಿಲ್ಲದೆ, ಯಾರನ್ನಾದರೂ ಒಲಿಸುವ ದೃಷ್ಟಿಯಿಂದಲ್ಲದೆ, ಕೇವಲ ಪ್ರಾಮಾಣಿಕತೆಯಿಂದ ಸಂಪೂರ್ಣವಾಗಿ ಗಮನವಿತ್ತು ಮಾಡುವುದು ಎಂದು ಹೇಳಬಹುದು. ಅಖಂಡೇಶ್ವರನ ಒಲಿಸುವ ಸಂದರ್ಭದಲ್ಲಿ, ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ನಮ್ಮನ್ನು ನಾವು ಗಮನಿಸುವುದು. ಅಂದರೆ, ಗಮನಿಸುವುದರಿಂದ ನನಗೆ ಇಂತಿಂತಹದು ಲಭ್ಯವಾಗಬೇಕು, ದೇವರು ಸಿಗಬೇಕು ಎಂದೆಲ್ಲ ಆಶಿಸದೆ ಕೇವಲ ಗಮನಿಸುವುದು. ಈ ರೀತಿಯಾಗಿ ನಿಷ್ಠೆಯಿಂದ ಗಮನಿಸುವುದರಿಂದ ಸಾಮಾನ್ಯವಾಗಿ ಕಂಡುಬರದ ಅನೇಕ ಸೂಕ್ಷ್ಮ ವಿಷಯಗಳು ಗಮನಕ್ಕೆ ಬರುತ್ತವೆ. ಈ ಸ್ಥಿತಿಯಲ್ಲಿ ಗಮನಿಸುವವ ಮತ್ತು ಗಮನಿಸಿದ ವಿಷಯವೆಂಬ ಭೇದವಿರುವುದಿಲ್ಲ. ಆದ್ದರಿಂದ ಇದು ತಪ್ಪು ಅಥವಾ ಇದು ಸರಿ ಎಂಬಂತಹ ಭಾವಗಳು ಇರುವುದಿಲ್ಲ. ಇದ್ದದ್ದು ಇದ್ದಂತೆ ತೋರಿಬರುವುದು. ಇದರಿಂದ ಎಲ್ಲ ರೀತಿಯ ಭೇದ ಭಾವಗಳು, ತನುಗುಣಗಳು ಅಳಿಯುತ್ತವೆ, ಮನದಲ್ಲಿಯ ಭ್ರಾಂತಿಗಳು ಅಳಿಯುತ್ತವೆ, ಆ ನಿಷ್ಠೆಯೇ ಜ್ಞಾನದ ದಾರಿಯನ್ನು ತೋರುವುದರ ಮೂಲಕ ಲಿಂಗವು ಒಲಿಯುವಂತೆ ಮಾಡುತ್ತದೆ ಎನ್ನುತ್ತಾರೆ ಷಣ್ಮುಖ ಸ್ವಾಮಿಗಳು. ಅಂದರೆ, ಯಾವುದು ನಿಜವಾದ ಜ್ಞಾನ ಎಂಬುದರ ಅರಿವಾಗುತ್ತದೆ ಎನ್ನುತ್ತಾರೆ. ಆದ್ದರಿಂದ ನಾವು ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಹರಿದ ಗೋಣಿಯಂತಾಗುತ್ತೇವೆ, ಪಟ್ಟಣದಲ್ಲಿದ್ದೂ ಭಯಕ್ಕೆ ತುತ್ತಾಗುತ್ತೇವೆ.
No comments:
Post a Comment