Friday, December 2, 2011

Vachana 66: Tannuva husimaadi - The Lord within


ತನ್ನುವ ಹುಸಿ ಮಾಡಿ ಇನ್ನೊಂದ ದಿಟ ಮಾಡುವ ಅಣ್ಣಂಗೆ ನಂಬುಗೆ ಇನ್ನಾವುದೋ?
ತನ್ನೊಳಗಿದ್ದ ಘನವ ತಾ ತಿಳಿಯಲರಿಯದೆ
ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆದೆನೆಂಬ ಅಣ್ಣ ಗಾವಿಲನೆಂದಾತ ಅಂಬಿಗರ ಚೌಡಯ್ಯ

TRANSLITERATION

tannuva husimaaDi innoMda diTa maaDuva aNNaMge naMbuge innaavudO?
tannoLagidda ghanava taa tiLiyalariyade
parabrahmakke taleyanikki tegedeneMba aNNa gaavilaneMdaata aMbigara couDayya


CLICK HERE TO HEAR IT

http://www.youtube.com/watch?v=w5VQi4IWAJ8

TRANSLATION (Words)

tannuva ( one’s own self) husi maaDi (to consider as false) innoMda (the other) dita maaDi ( to consider as true) aNNaMge (for the elder brother) naMbuge (the belief) innaavudO? (which other) (who knows what is the belief ?)
tannoLagidda (which lies within) ghanava ( the profound ) taa (self) tiLiyalariyade ( not knowing how to understand, to be aware of )
parabrahmakke (of the ultimate Brahma) taleyikki (who puts his head at the feet) tegeneneMba (and gets up) aNNa ( the elder brother) gaavila ( is a fool) eMdaata (says) aMbigara couDayya (Ambigara Choudayya)


TRANSLATION

What other belief prompts the (elder) brother to consider self to be false and the other to be true?
Not being aware of the profound which lies within (self),
the (elder) brother who puts his head on the feet of the ultimate Brahma and gets up is a fool, says Ambigara Choudayya


COMMENTARY

Sharana Ambigara Choudayya says that those who do not recognize the Lord within and tries to find Him elsewhere are indeed fools. He questions as to which belief prompts one to falsify what is within and go after the one outside? According to him, not being aware of the Lord within, if one bows his head at the perceived Brahma (the Ultimate) outside, he is indeed a fool. Note the humility of Sharana Choudayya, when he refers to others as ‘elder brother’ (aNNa) even when he is pronouncing their act to be foolish.

We visualize God to be in various forms and create statues, worship them with all sorts of offerings, chant hundreds of names we give them, and immerse in Bhajans and discussions. We believe that we are reaching the Lord through all these activities. We never question the belief that led us to these activities. We never find time to think about what we are doing. We just follow these rituals mechanically. These activities come easy to us. Turning our attention inwards is very difficult. It requires tremendous effort to set our mind on the path of finding the profound within us. In our busy lives of making each minute count, we never strive for the solitude and concentration needed to probe within and find that inner self – the true Lord!

Let us take a U-turn and journey towards the Lord within us!


KANNADA COMMENTARY

ಅಂಬಿಗರ ಚೌಡಯ್ಯನವರು,  ತನ್ನ ಒಳಗೆ ಇರುವ  ದೇವರನ್ನು ಗುರುತಿಸದೆ ಹೊರಗೆ ಅವನನ್ನು ಕಾಣುವ ವ್ಯಕ್ತಿಯನ್ನು ಹೆಡ್ಡ ಎಂದು ಹೇಳುತ್ತಾರೆ. ತನ್ನ ಒಳಗೆ ಇರುವವನನ್ನು ಇಲ್ಲವೆಂದು  ಬಗೆದು, ಬೇರೆಯದನ್ನು ಸತ್ಯವೆಂದು ಬೆಗೆಯುವುದಕ್ಕೆ ಯಾವ ನಂಬುಗೆ ಆತನಿಗೆ ಎಡೆಮಾಡಿಕೊಟ್ಟಿದೆಯೋ? ಯಾವ ಮಾತನ್ನು ನಂಬಿ ಆತನು ತನ್ನ ಒಳಗನ್ನು ಮರೆಯುತ್ತಾನೆಯೋ? ತನ್ನ ಒಳಗನ್ನೇ ತಿಳಿಯಲು ಅರಿಯದವನು  ಹೊರಗೆ ಪರಬ್ರಹ್ಮನಿದ್ದಾನೆ ಎಂದು ಬಲು ಭಕ್ತಿಯಲ್ಲಿ ಆತನಿಗೆ ತಲೆಬಾಗಿಸಿ ಏಳುವವನು ಮಹಾ ಮೂರ್ಖನೇ ಸರಿ ಎನ್ನುತ್ತಾರೆ ಅಂಬಿಗರ ಚೌಡಯ್ಯನವರು.


ನಾವೆಲ್ಲರೂ ಮಾಡುವುದು ಇದನ್ನೇ. ನಮ್ಮ ನಮ್ಮ ಒಳಗನ್ನು ನೋಡಿಕೊಳ್ಳುವ ಇಚ್ಛೆಯಾಗಲಿ,  ಪುರಸೊತ್ತಾಗಲಿ ಇಲ್ಲದೆ, ಬಹಳ ಸುಲಭವಾದ ದಾರಿಯನ್ನು ಹುಡುಕಿಕೊಳ್ಳುತ್ತೇವೆ. ಅದೇ ಅವನನ್ನು ಹೊರಗೆ ಕಾಣುವುದು- ಮಹಾ ಮಹಾ ಗ್ರಂಥಗಳಲ್ಲಿ, ದೇವಸ್ಥಾನಗಳಲ್ಲಿ, ಸತ್ಸಂಗಗಳಲ್ಲಿ, ಭಜನೆಗಳಲ್ಲ್ಲಿ, ಅನುಷ್ಟಾನಗಳಲ್ಲಿ, ವ್ರತಗಳಲ್ಲಿ, ಪೂಜೆಗಳಲ್ಲಿ  ಇಂತಹ ಇನ್ನೂ ಹತ್ತಾರು ವಿಧಗಳಲ್ಲಿ ದೇವರನ್ನು ಹುಡುಕಿ ಹೋಗುತ್ತೇವೆ.  ಅಲ್ಲಿ ದೊರೆಯುವ ಮೇಲು ನೋಟದ ವಿಚಿತ್ರವಾದ ಸುಖವನ್ನು  ಮಹತ್ವದ್ದು ಎಂದುಕೊಳ್ಳುತ್ತೇವೆ. ದೇವರಿಗೆ ಹತ್ತಿರವಾಗಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನಿಜವಾಗಿಯೂ ನಮಗೆ  ಇಂತಹದುರಲ್ಲಿ  ತೊಡಗಿಸುವುದು ಯಾವುದು? ಯಾವ ನಂಬುಗೆ ನಮ್ಮನ್ನು ಹೀಗೆ ಮಾಡಲು ಹಚ್ಚುತ್ತದೆ? ಆ ನಂಬುಗೆಗೆ ಆಧಾರವಾವುದು? ಆ ನಂಬುಗೆಯನ್ನು ನಾವು ಯಾವಗಲಾದರೂ ಪ್ರಶ್ನಿಸುತ್ತೇವೆಯೆ?  ಇಲ್ಲ. ಏಕೆಂದರೆ, ನಾವು ಸೋಮಾರಿಗಳು.  ನಮಗೆ ಸುಲಭವಾದ ದಾರಿ ಬೇಕು. ಇನ್ನೊಬ್ಬರು ಹೇಳಿದುದನ್ನು ನಂಬುವುದು ಬಹು ಸುಲಭ. ನಾವಾಗಿಯೇ ಕಂಡುಕೊಳ್ಳುವುದು ಬಲು ಕಷ್ಟ. ಏಕೆಂದರೆ ಅದಕ್ಕೆ ಪುರಸೊತ್ತು, ಆತ್ಮಬಲ ಮತ್ತು ಮನಸ್ಸಿನ ಪ್ರಶಾಂತತೆ ಬೇಕು.  ಇದನ್ನು ಸಾಧಿಸುವುದು  ಇಂದಿನ  ಬಿಡುವಿರದ, ಅನೇಕ ಒತ್ತಡಗಳುಳ್ಳ ಅತ್ಯಂತ ವ್ಯಸ್ತ
ಬದುಕಿನಲ್ಲಿ ಅಸಂಭವವೇ ಸರಿ. ಹಾಗಾದರೆ ಕೈ ಚೆಲ್ಲಿ ಕುಳಿತುಬಿಡುವುದೇ?  ಅಥವಾ ಅದರಿಂದ ಹೇಗಾದರೂ ಮಾಡಿ ಬಿಡುವು ಮಾಡಿಕೊಳ್ಳುವುದೇ? ಎರಡೂ ನಮಗೆ ಬಿಟ್ಟದ್ದು. ಸದಾ ನಾವು ಸುಲಭದ ಉಪಾಯ ಹುಡುಕುತ್ತೇವೆ.  ನಮ್ಮಲ್ಲೇ ಇರುವ ಆ ಘನವನ್ನು ತಿಳಿಯುವ ಬಗೆಯೇ ನಮಗೆ ಗೊತ್ತಿಲ್ಲ. ಅದಕ್ಕಾಗಿ ಪ್ರಯತ್ನವೂ ಮಾಡುವುದಿಲ್ಲ.  ಅದನ್ನು ತಿಳಿದುಕೊಳ್ಳುವ ಇಚ್ಛೆಯೂ ಇಲ್ಲ.  ಹೊರಗಿರುವ  ಯವ್ಯಾವುದಕ್ಕೋ  ಪರಬ್ರಹ್ಮವೆಂದು ಹೆಸರಿಟ್ಟು ಅತಿ ಭಕ್ತಿಯಿಂದ ಶಿರವಿಟ್ಟು ನಮಿಸುತ್ತೇವೆ, ದೇವರನ್ನು ಪಡೆದೆವೆಂದು ತೃಪ್ತರಾಗುತ್ತೇವೆ. ಇಂತಹವರನ್ನೇ ಚೌಡಯ್ಯನವರು ಗಾವಿಲ, ಎಂದರೆ ಹೆಡ್ಡನೆಂದು ಕರೆದಿರುವರು.  ಹೊರಗೆ ಏನೋ  ಇರುವುದು, ಎಂದರೆ  ಅದಕ್ಕೆ ಪ್ರತಿಯಾಗಿ ಒಳಗೆ ಏನೋ ಇದೆಯೆಂದಾಯಿತಲ್ಲವೇ?  ಅಂದರೆ ಹೊರಗೆ ಮತ್ತು ಒಳಗೆ ಎಂಬ ಭೇದ ಭಾವ ಇದೆಯಂತಾಯಿತಲ್ಲವೆ?  ಈ ಭೇದವನ್ನು, ಈ ಅಂತರದ ಕಂದಕವನ್ನು ಮುಚ್ಚುವುದೇ  ಬಯಲು.  ಈ ಕಂದಕವನ್ನು ಮುಚ್ಚುವ ಬಗೆ ಹೇಗೆ ಎಂದು ಅನ್ವೇಷಿಸುವುದು ಉಚಿತವಲ್ಲವೇ?










1 comment:

  1. I like the simple yet comprehensive and concise commentary both in Kannada by Leela and the English version by Shiva for this vachana. They explain the meaning well.

    Thanks,

    ReplyDelete