Friday, November 25, 2011

Vachana 65: Nanninda Aridenembene - I and You together

ನನ್ನಿಂದ ಅರಿದೆನೆಂಬೆನೇ ನನ್ನಿಂದ ಅರಿದವನಲ್ಲ
ನಿನ್ನಿಂದ ಅರಿದೆನೆಂಬೆನೇ ನಿನ್ನಿಂದ ಅರಿದವನಲ್ಲ
ಅದೇನು ಕಾರಣವೆಂದರೆ ಕಣ್ಣ ಬೆಳಗು ಸೂರ್ಯನ ಬೆಳಗು ಕೂಡಿ ಕಾಂಬಂತೆ
ನನ್ನ ನಿನ್ನರಿವಿನ ಸಂಬಂಧ ಬೆಂಬಳಿಯಲಿ ಅರಿದೆನು ಕಾಣಾ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ

TRANSLITERATION

nanniMda arideneMbenE nanniMda aridavanalla
ninniMda arideneMbenE ninniMda aridavanalla
adEnu kaaraNaveMdare kaNNa beLagu sUryana beLagu kUDi kaaMbaMte
nanna ninnarivina saMbaMdha beMbaLiyali aridenu kaaNaa nijaguru svataMtrasiddhaliMgEshvara

CLICK HERE TO HEAR IT:

TRANSLATION (WORDS)
nanniMda (through me , by myself) aridenu (learnt, understood, gained knowledge) embenE (shall I say) nanniMda(through me , by myself) aridavanu (one who has understood) alla (not)
ninniMda (through you, by you ) aridenu(learnt, understood, gained knowledge) embenE (shall I say) ninniMda(through you, by you ) aridavanu (one who has understood) alla (not)
adEnu(what is) kaaraNavu (the reason) eMdare (if said) kaNNa beLagu (the light in the eye)sUryana beLagu(Sun light) kUDi (together with) kaaMbaMte (like seeing )
nanna( mine ) ninna (your) arivina ( knowledge of) saMbaMdha(relationship) beMbaLiya
(together , with the help of) aridenu (I understood) kaaNaa (you see) nijaguru (Perfect teacher) svataMtra (Independent) siddhaliMgEshvara (Lord siddhaliMgEshvara)

TRANSLATION

Shall I say “I understood by myself?” I did not!
Shall I say “I understood through you?”I did not!
The reason is, just as the light in the eye and the Sunlight together aid the sight,
I understood with the help of the relation between my and your knowledge (awareness), you see, Lord siddhaliMgEshvara!

COMMENTARY

In our previous posting, sharana Thontada Siddalingeswara Swami advocated erasing the I (ego) and you (illusion) duality to achieve self-realization. In this Vachana, Sharana Swatantra Siddalingeswara (a disciple of Thontada Siddalingeswara Swami) says that a good understanding of ‘I’ and ‘you’ and the relation between the two are essential to move us towards self-realization. He says, “I did not gain the self-awareness by myself. Neither I gained the awareness through just you. Just as seeing anything requires both Sunlight (or corresponding external illumination) and the light in the eye (internal nerve mechanism between the eye and the brain), I gained the awareness with the help of the relation between (or togetherness of) my awareness and your awareness”.
The common interpretation of this Vachana is that the process of self-realization requires both external and internal awareness. Both should develop in tandem and should aid each other to achieve the ultimate. In this context the ‘I’ is the individual and the ‘you’is the Lord within.
In the context of the ‘I and you gap’of our daily lives, this Vachana calls for the understanding of the ‘relation’between our awareness and that of others’. Our lives are based on ‘relations’.We relate ourselves with others in one form or the other. Even an ascetic, who has sacrificed all worldly assets, tends to think of his past and his relations with beings around him. The way we treat others and the way others’ actions affect us are all functions of our relations with each other. These relations contribute to love, violence, hatred, jealousy, affection, etc., which in turn determines our happiness, sadness, and mental and physical pleasures and pressures. When we closely examine these, we might infer for instance, that the negative results are due to the way we might have hurt others in the past. This realization would make us be careful in our behavior with others to make sure that we do not hurt them again. While we succeed in our efforts to gain good relation, this change in our mode of operation may or may not bring happiness to us. The key then is to gain a full understanding of both sides of the relation, and develop the attitudes and living styles that bring comfort to both sides.

Let us walk together in each other’s shoes and develop fruitful relations!

KANNADA COMMENTARY

ನಾನು ನೀನು ಎಂಬ ದ್ವೈತಭಾವ ಅಳಿದು ಐಕ್ಯ ಭಾವ ಅಳವಡಬೇಕಾದರೆ ನನ್ನಮತ್ತುನಿನ್ನಎರಡರ ಅಗತ್ಯವಿದೆ ಎಂದು ಹೇಳುತ್ತಾರೆ ಶರಣ ಸ್ವತಂತ್ರ ಸಿದ್ಧಲಿಂಗೇಶ್ವರರು. ಇವರು ತೋಂಟದ ಸಿದ್ಧಲಿಂಗೇಶ್ವರ ಶಿಷ್ಯರು. ಕೇವಲನನ್ನಎಂಬ ಅಹಂಕಾರದಿಂದ ಅರಿವು ಉಂಟಾಗಲಿಲ್ಲ. ಮತ್ತು ಕೇವಲನಿನ್ನಎಂಬ ಬೇರ್ಪಡಿಕೆಯ ಭಾವದಿಂದಲೂ ಅರಿವು ಉಂಟಾಗಲಿಲ್ಲ, ಎನ್ನುತ್ತಾರೆ. ಅದಕ್ಕೆ ಒಂದು ಉದಾಹರಣೆ ಕೊಡುತ್ತಾರೆ - ನಾವು ಏನಾದರು ನೋಡಬೇಕಾದರೆ ದೈಹಿಕವಾದ ಕಣ್ಣಿನ ಜ್ಯೋತಿಯೂ ಬೇಕು ಮತ್ತು ಸೂರ್ಯನ ಬೆಳಕೂ ಬೇಕು. ಸೂರ್ಯನ ಬೆಳಕು ಇದ್ದು ಕಣ್ಣ ಜ್ಯೋತಿ ಇಲ್ಲದಿದ್ದಲ್ಲಿ ಏನೂ ಕಾಣುವುದಿಲ್ಲ. ಅದೇ ರೀತಿಯಾಗಿ ಕಣ್ಣಜ್ಯೋತಿ ಇದ್ದು ಸೂರ್ಯನ ಬೆಳಕು ಇಲ್ಲದಿದ್ದಲ್ಲಿಯೂ ಏನೂ ಕಾಣುವುದಿಲ್ಲ. ಒಟ್ಟಿನಲ್ಲಿ ಕಣ್ಣಿಗೆ ವಸ್ತುವಿನ ದರ್ಶನವಾಗಬೇಕಾದರೆ ಒಳಗಣ ಕಣ್ಣ ಜ್ಯೋತಿ ಮತ್ತು ಹೊರಗಣ ಬೆಳಕು ಎರಡರ ಅವಶ್ಯಕತೆಯೂ ಇರುತ್ತದೆ. ಅದೇ ರೀತಿಯಾಗಿ ತನ್ನ ತಾನರಿಯಲು ಮೊದಲಿಗೆನನ್ನಮತ್ತುನಿನ್ನದರ ಅವಶ್ಯಕತೆಯೂ ಇದೆ. ನನ್ನ ಎಂಬ ಅಹಂಕಾರ ಮತ್ತು ನಿನ್ನ ಎಂಬ ಮಾಯೆ, ಎರಡರ ಸಂಬಂಧವನ್ನು ಅರಿಯಬೇಕಾಗುತ್ತದೆ, ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗೇಶ್ವರ ಶರಣರು.
ನನ್ನ ನಿನ್ನ ಅರಿವಿನ ಸಂಬಂಧವೆಂದರೇನು?
ಬದುಕು ಇರುವುದೇ ಸಂಬಂಧದಲ್ಲಿ. ಜಗತ್ತಿನಲ್ಲಿ ಎಲ್ಲವೂ ಒಂದಲ್ಲ ಒಂದರೊಂದಿಗೆ ಸಂಬಂಧ ಹೊಂದಿರುತ್ತದೆ. ಎಲ್ಲವನ್ನೂ ಬಿಟ್ಟ ಸಂನ್ಯಾಸಿಯೂ ತನ್ನ ಗತದೊಂದಿಗೆ ಮತ್ತು ತನಗೆ ಆಹಾರ, ಬಟ್ಟೆ ಇತ್ಯಾದಿ ಕೊಡುವ ಮನುಷ್ಯನೊಂದಿಗೆ ಸಂಬಂಧ ಹೊಂದಿರುತ್ತಾನೆ. ಸಂಬಂಧದಲ್ಲಿ ನಾನು ಮತ್ತು ನೀನು ಇರುತ್ತವೆ. ನಾನು ನಿನ್ನೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ, ಪ್ರೀತಿ, ದ್ವೇಷ, ಅಸೂಯೆ, ಮೋಹ, ಆತ್ಮೀಯತೆ, ಹಿಂಸೆ ಇತ್ಯಾದಿಗಳಿರುತ್ತವೆ. ಅವುಗಳಿಂದ ನೋವು, ಸಂತೋಷ, ದುಃಖ, ನಲಿವು, ಮಾನಸಿಕ ಮತ್ತು ದೈಹಿಕ ಬಳಲಿಕೆ, ಒತ್ತಡ ಇತ್ಯಾದಿಗಳು ಉಂಟಾಗುತ್ತವೆ. ಎಲ್ಲ ಸಂಬಂಧಗಳ ಕನ್ನಡಿಯಲ್ಲಿ ನಾನು ಮತ್ತು ನೀನು ಎಂದರೆ ಏನು ಎಂಬುದನ್ನು ಅರಿಯಬಹುದು. ನಾನು ಏಕೆ ಇನ್ನೊಬ್ಬರಿಗೆ ನೋವುಂಟುಮಾಡುತ್ತೇನೆ? ಅಥವಾ ನನಗೆ ಏಕೆ ನೋವುಂಟಾಗುತ್ತಿದೆ? ಎಂದು ಯೋಚಿಸಿದರೆ ಅಲ್ಲಿ ನಮ್ಮ ಬದುಕಿನಲ್ಲಿ ಹಿಂದೆ ನಮಗಾದ ನೋವುಗಳು ಕಾಣುತ್ತವೆ, ನಾನೇ ನನ್ನ ಬಗ್ಗೆ ಮಾಡಿಕೊಂಡ ರೂಪ (image) ಕಾಣುತ್ತದೆ. ರೂಪಕ್ಕೆ ಧಕ್ಕೆಯಾದಾಗ ನನಗೆ ನೋವುಂಟಾಗುತ್ತದೆ. ಇದೇ ರೀತಿ ನಾವು ಅಥವಾ ನೀವು ಇತರರ ನೋವಿಗೆ ಕಾರಣರಾಗುತ್ತೇವೆ. ಸಂಬಂಧದ ಕನ್ನಡಿಯಲ್ಲಿ ಸರಿಯಾಗಿ ಗಮನಿಸಿದಾಗ ನಮ್ಮ ದುಃಖ, ಕಾತರತೆ, ನೋವು, ಖಿನ್ನತೆ, ಒಂಟಿತನ, ಅಹಂಕಾರ, ಅಸೂಯೆ ಎಲ್ಲವೂ ಇವುಗಳ ಕಾರಣಗಳೆಂದು ಕಂಡುಬರುತ್ತವೆ. ನಮಗೆ ಹಿಂದೆ ಯಾವಾಗಲೋ ಆದ ನೋವು ಇನ್ನೊಮ್ಮೆ ಆಗಬಾರದು ಎಂಬ ಎಚ್ಚರಿಕೆವಹಿಸುತ್ತದೆ ನಮ್ಮ ನಡವಳಿಕೆ. ಎಚ್ಚರಿಕೆಯ ನಡವಳಿಕೆ ಇನ್ನೊಬ್ಬರಿಗೆ ನೋವುಂಟಾಗುವಂತೆ ಮಾಡಬಹುದು. ಅದು ನಮ್ಮನ್ನು ನೋವಿನಿಂದ ಖಂಡಿತವಾಗಿಯೂ ರಕ್ಷಿಸುವುದಿಲ್ಲ, ಅಥವಾ ಅದರಿಂದ ನಮಗೆ ಆನಂದ ಉಂಟಾಗುವುದಿಲ್ಲ. ಎಲ್ಲವನ್ನೂ ಆಳವಾಗಿ ಮತ್ತು ಯಾವ ಪೂರ್ವಗ್ರಹ (prejudice)ವೂ ಇಲ್ಲದೆ ಗಮನಿಸಿದಾಗ ನಾವು, ನಾನು ಮತ್ತು ನೀನು ಅನ್ನು ಅರಿಯಬಹುದು. ವಸ್ತುವನ್ನು ನೋಡಲು ಕಣ್ಣೊಳಗಿನ ಜ್ಯೋತಿ ಮತ್ತು ಸೂರ್ಯನ ಬೆಳಕಿನ ಅವಶ್ಯಕತೆಯಿರುವಂತೆ, ನನ್ನಲ್ಲಿರುವ ಅಹಂಕಾರ ಮತ್ತು ನಿನ್ನ ಎಂಬಲ್ಲಿ ಇರುವ ಬೇರ್ಪಡಿಕೆಯ ಭಾವ, ಎರಡನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಎರಡರಿಂದ ನಾನು ಅರಿವನ್ನು ಪಡೆದೆ ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗಶ್ವರರು. ನಾವು ಎಲ್ಲವನ್ನೂ ಬೌದ್ಧಿಕವಾಗಿ ಮಾತ್ರ ಅರಿಯುತ್ತೇವೆ. ಆದರೆ ಅದನ್ನು ನಿಜವಾಗಿ ಅರಿಯುವ ಅವಶ್ಯಕತೆಯಿದೆಯಲ್ಲವೇ?


1 comment:

  1. Dear Sajjan Shiva,
    I have been reading your commentary and analysis of the vachanaas since the beginning. I have been enjoying reading it thoroughly. I do not know what to say about your commentaries. But i can only say it is excellent. I have not read any other therefore it seems like you have indepth understanding of the vachanaas and the experiences of life also and therefore you connect the original lines to life and explain. Thank you and please send the mail along with the postings you have been sending.
    Thanking you,
    Saraswathi B M

    ReplyDelete