ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೋ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೇ ಭಂಗ
ಭಾವಿಸಿದ ಭಾವನೆಗಿಂತ ಸಾವುದೇ ಲೇಸು ಕಾಣಾ ಗುಹೇಶ್ವರಾ
TRANSLITERATION
otti haNNa mADidaDe adettaNa ruciyappudO?
kAmisi kalpisi BAvisidaDe adE BaMga
BAvisida BAvanegiMta sAvudE lEsu kANA guhESvarA
CLICK HERE TO HEAR IT:
http://www.youtube.com/watch?v=PDf_77izXRY
TRANSLATION
otti ( by pressing) haNNa mADidaDe (if ripened) adettaNa(how can it be) ruciyappudO (delicious)?
kAmisi (wanting, longing) kalpisi (imagining) BAvisidaDe (assuming) adE(that is) BaMga (incorrect)
BAvisida(to have an assumed) BAvanegiMta(instead of the assumption) sAvudE(dying) lEsu(is better) kANA(you see) guhESvarA(the Lord of caves)
Can a raw fruit be ripened and made delicious by pressing it?
It is wrong to long (want), imagine and assume!
Dying is better than being full with assumptions, you see, the Lord of Caves!
COMMENTARY
A fruit should take its natural course and ripe. Only then it is delicious to consume. If we did not let it ripe, but press it and squeeze it in an effort to ripen it faster, we succeed in making it softer, but not delicious. It is better not to eat such squeezed raw fruit, since we will never experience its true taste. Longing for the taste of the fruit, imagining its taste, and assuming that we can get it through our efforts of pressing it, do not yield the proper result. The fruit must be ripe to be delicious.
Along the same lines, in achieving the spiritual maturity, imagining, longing and assuming that we have achieved it is not the way. In this Vachana, Allama Prabhu says that dying is better than just imagining, longing and assuming spiritual maturity. Imagination, longing and assumption are due to our thoughts and purturbances of the mind. They are not natural. When these disturbances are relieved, one attains the natural calmness of the mind. Just as the fruit requires an environment favorable for it to ripe and become delicious, the devotee needs an environment attain the calmness. This state of a true devotee on attaining spiritual maturity is like a ripened fruit. He becomes one with the Lord who is beyond imagination, beyond assumptions and beyond longings.
Let us 'let it happen'!
KANNADA COMMENTARY
ಇಲ್ಲಿ ಅಲ್ಲಮಪ್ರಭುಗಳು ಮಾನವನ ಮನಸ್ಸು ವಿಚಾರಕ್ಕೆ ಒಳಗಾಗಿ ಏನೇನು ಮಾಡಿ ಮೋಸಹೋಗುತ್ತದೆ ಎನ್ನುವುದನ್ನು ಸುಂದರವಾದ ಉದಾಹರಣೆಸಹಿತ ತಿಳಿಸುತ್ತಾರೆ. ಕಾಯಿಯನ್ನು ಒತ್ತಿ ಒತ್ತಿ ಹಣ್ಣು ಮಾಡಿದರೆ ಅದಕ್ಕೆ ಸಹಜವಾಗಿ ಪಕ್ವವಾದ ಹಣ್ಣಿನ ರುಚಿ ಬರಲು ಸಾಧ್ಯವೆ? ಒತ್ತಿದ್ದರ ಪರಿಣಾಮವಾಗಿ ಗಟ್ಟಿಯಾದ ಕಾಯಿ ಮೃದುವಾಗುತ್ತದೆಯೆ ಹೊರತು ಅದರಲ್ಲಿನ ತಿರುಳಿಗೆ ಪಕ್ವವಾದ ಹಣ್ಣಿನ ರುಚಿ ಬರಲು ಸಾಧ್ಯವಿಲ್ಲ. “ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೇ ಭಂಗ” ಎಂದರೆ, ಪಕ್ವವಾದ ಹಣ್ಣಿನ ರುಚಿಯನ್ನು ಆಶಿಸಿ, ಅದರ ರುಚಿಯ ಕಲ್ಪನೆ ಮಾಡಿಕೊಂಡು, ಅದನ್ನು ನಾನು ನನ್ನ ಪ್ರಯತ್ನದಿಂದ ಹೇಗಾದರೂ ಪಡೆಯುತ್ತೇನೆ ಎಂದು ಭಾವಿಸುವುದೇ ತಪ್ಪು. ಏಕೆಂದರೆ ಇಲ್ಲಿ ನಡೆಯುವುದೆಲ್ಲವೂ ಮನದಲ್ಲಿ, ವಿಚಾರಗಳಲ್ಲಿ. ಬಯಸುವುದು, ಕಲ್ಪಿಸಿಕೊಳ್ಳುವುದು ಮತ್ತು ಭಾವಿಸುವುದು ಎಲ್ಲವೂ ವಿಚಾರದಲ್ಲಿ ನಡೆಯುತ್ತದೆ. ವಾಸ್ತವವು ವಿಚಾರಗಳಿಂದ ಭಿನ್ನವಾಗಿರುತ್ತದೆ. ವಿಚಾರವು ಸಹಜವಾದುದಲ್ಲ. ಅಂದರೆ ಅದು ಅನೇಕ ನೆನಪುಗಳ ಮತ್ತು ಹಿಂದೆ ಆದ ಅನುಭವಗಳ ಪರಿಣಾಮವಾಗಿರುತ್ತದೆ. ಎಲ್ಲರ ಅನುಭವಗಳು ಮತ್ತು ನೆನೆಪುಗಳು ಒಂದೇ ರೀತಿಯಾಗಿರುವುದಿಲ್ಲ. ಅವು ಆಯಾ ವ್ಯಕ್ತಿಯ ಹಿನ್ನೆಲೆಯನ್ನು ಅವಲಂಬಿಸಿರುತ್ತವೆ. ಅವು ದೇಶ ಮಾತು ಕಾಲದ ಮಿತಿಗೆ ಒಳಗಾಗಿರುತ್ತವೆ. ಆದ್ದರಿಂದ ವಿಚಾರವನ್ನು ನಂಬುವುದು ಎಂದರೆ ಮೋಸಹೋಗುವುದೆಂದೇ ಅರ್ಥ. ಹಣ್ಣಿಗಾಗಿ ಆಸೆ ಪಡುವುದು, ಅದರ ರುಚಿಯ ಕಲ್ಪನೆ ಮಾಡಿಕೊಳ್ಳುವುದು ಮತ್ತು ಕಾಯಿಯಿಂದ ಹಣ್ಣು ಪಡೆಯುತ್ತೇನೆ ಎಂದು ಭಾವಿಸುವುದು ಎಲ್ಲವೂ ವಿಚಾರದ ಪರಿಣಾಮ. ಇದರಿಂದ ದೋಷವುಂಟಾಗುತ್ತದೆ. ಹಣ್ಣು ಪಡೆಯಲಾಗುವುದಿಲ್ಲ. ನಿಜವಾದ ಹಣ್ಣಿನ ರುಚಿ ಆಸ್ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಮಪ್ರಭುಗಳು “ ಭಾವಿಸಿದ ಭಾವೆನೆಗಿಂತ ಸಾವುದೇ ಲೇಸು “ ಎಂದು ಹೇಳುತ್ತಾರೆ.
ಈ ಉದಾಹರಣೆ ಬದುಕಿನ ಎಲ್ಲ ವಿಷಯಗಳಿಗೂ ಅನ್ವಯವಾಗುತ್ತದೆ. ಇಂದ್ರಿಯಗಳನ್ನು ತುಳಿದಿಟ್ಟು ಅವುಗಳನ್ನು ಗೆದ್ದಿದ್ದೇನೆ ಎಂದುಕೊಳ್ಳುವುದು, ಭಕ್ತಿಯ ಆಡಂಬರ ಮಾಡಿ ಮಹಾ ಭಕ್ತನಾಗಿದ್ದೇನೆ ಎಂದುಕೊಳ್ಳುವುದು, ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಜ್ಞಾನಿಯಾಗಿದ್ದೇನೆ ಎಂದುಕೊಳ್ಳುವುದು ಇತ್ಯಾದಿ ಎಲ್ಲವೂ “ಕಾಮಿಸಿ, ಕಲ್ಪಿಸಿ, ಭಾವಿಸಿ ಭಂಗ” ತಂದುಕೊಳ್ಳುವುದೇ ಆಗಿದೆ.
ಈ ರೀತಿಯಾಗಿ ಅವಾಸ್ತವಾದ ಭಾವನೆಗಳಲ್ಲಿ ಮುಳುಗುವುದು, ಎಂದರೆ , ಆಶಿಸುವುದು, ಕಲ್ಪಿಸಿಕೊಳ್ಳುವುದು ಮತ್ತು ಪಡೆಯುತ್ತೇನೆ ಅಥವಾ ಪಡೆದಿದ್ದೇನೆ ಎಂದುಕೊಳ್ಳುವುದು ಎಲ್ಲವೂ ಭಾವನೆಗಳೇ ಹೊರತು ವಾಸ್ತವವಲ್ಲ. ನಾವೇ ಏನೋ ಭಾವಿಸಿಕೊಂಡು ಆ ಭಾವನೆಗಳ ಅವಾಸ್ತವತೆಯಲ್ಲಿ ಬದುಕುವುದಕ್ಕಿಂತ ಸಾವೇ ಲೇಸು ಎನ್ನುತ್ತಾರೆ ಅಲ್ಲಮರು.
ಹಾಗಾದರೆ ಬದುಕಿನಲ್ಲಿ ಏನನ್ನೂ ಆಶಿಸಬಾರದೆ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ನಾವು ಕೆಲವು ಗುರಿಗಳನ್ನು ಹೊಂದಿ ಅವುಗಳನ್ನು ಸಫಲಗೊಳಿಸಲು ಪ್ರಯತ್ನಿಸುವುದು ಸಹಜ. ಅವು ಲೌಕಿಕ ದೃಷ್ಟಿಯಲ್ಲಿ ಮುಖ್ಯವಾಗಿರುವಂತಹವು. ಉದಾಹರಣೆಗೆ- ನಾನು ಡ್ರೈವಿಂಗ್ ಕಲಿಯಬೇಕು, ನಾನು ಇಂತಿಂತಹ ಪದವಿಯನ್ನು ಪಡೆಯಬೇಕು ಇತ್ಯಾದಿ. ಇಲ್ಲಿ ಆಶಿಸುವುದು, ಕಲ್ಪಿಸುವುದು, ಭಾವಿಸುವುದು ಎಲ್ಲವೂ ನಡೆಯುತ್ತದೆ. ಆದರೆ ಅದೇ ಬದುಕಲ್ಲ. ಇಂದಿನ ಬದುಕಿನಲ್ಲಿ ಅವುಗಳ ಅವಶ್ಯಕತೆಯನ್ನು ಅರಿಯಬೇಕು. ಆದರೆ ಅವುಗಳ ಮಿತಿಯನ್ನೂ ಅರಿತಿರಬೇಕು. ತನ್ನ ತಾ ಅರಿಯುವುದರಿಂದ ಉಂಟಾಗುವ ಜ್ಞಾನದ ಮುಂದೆ ಅದರ ಕ್ಷುಲ್ಲಕತೆಯನ್ನು ತಿಳಿದು ವಿಚಾರಗಳ ಬದುಕಿನಿಂದ ತನ್ನನ್ನು ತಾ ಬಿಡಿಸಿಕೊಂಡು ಸಹಜವಾಗಿರಬೇಕು, ಎಂಬುದು ಈ ವಚನದ ಆಶಯ. ಮುಂದಿನ ವಚನದಲ್ಲಿ ವಿಚಾರದ ಬಗ್ಗೆ ವಿಷದವಾಗಿ ತಿಳಿಯೋಣ.
Even though, I understand the word meaning. I don't get this Vachana. Is this about not getting wrapped up with the fruit of the action but concentrating on the act itself?
ReplyDeleteಇಲ್ಲ ಇದು ಕಾರ್ಯ ಮತ್ತು ಪರಿಣಾಮದ ಬಗ್ಗೆ ಅಲ್ಲ. ಇಲ್ಲಿ ಅಲ್ಲಮಪ್ರಭುಗಳು "ಅರಿವಿನ"ಬಗ್ಗೆ ಹೇಳುತ್ತಿದ್ದಾರೆ. ತನ್ನನ್ನು ತಾನು ಅರಿಯುವುದು ಸಹಜವಾಗಿ ಆಗಬೇಕೆ ಹೊರತು ಪ್ರಯತ್ನದಿಂದ ಸಾಧಿಸುವುದಲ್ಲ. ಪ್ರಯತ್ನವು ಬುದ್ಧಿಯ ಕಸರತ್ತಾಗುತ್ತದೆ, ಅಂದರೆ ಒತ್ತಿ ಹಣ್ಣು ಮಾಡಿದಂತಾಗುತ್ತದೆ. ಸಹಜವಾಗಿ ಹಣ್ಣಾಗಲು ಅದಕ್ಕೆ ಬೇಕಾದ ವಾತಾವರಣದ ಅವಶ್ಯಕತೆಯಿರುತ್ತದೆ, ಕೃತ್ರಿಮತೆಯದಲ್ಲ. ವಿಚಾರ, ಮನಸ್ಸು , ಬುದ್ಧಿ ಎಲ್ಲವೂ ಮಾನವ ನಿರ್ಮಿತ, ಸಹಜವಾದವಲ್ಲ , ಅವೆಲ್ಲವೂ ಕಲ್ಪನೆ ಮತ್ತು ಭಾವನೆಯ ಮೇಲೆ ನಿಂತಿರುವಂತಹವು. ಅವು ವಾಸ್ತವವಲ್ಲ. ಆದ್ದರಿಂದ ವಾಸ್ತವತೆಯನ್ನು ಕಂಡುಕೊಳ್ಳಬೇಕು. ವಾಸ್ತವತೆಯನ್ನು ಕಂಡುಕೊಳ್ಳಲು ಮನಸ್ಸು ಸ್ತಬ್ಧವಾಗಬೇಕು. ಆ ವಾತಾವರಣವನ್ನು ಸೃಷ್ಟಿಸಿದರೆ ಮುಂದಿನದು ಸಹಜವಾಗಿ ನಡೆಯುತ್ತದೆ , ಎಂದು ಹೇಳುತ್ತಾರೆ ಅಲ್ಲಮರು.
ReplyDeleteThank you for that explanation. So we have to create the environment that will allow our personal/spiritual growth. I think we have all experienced that. "Sharanara sanga", is certainly one such environment. We have to create the environment that is conducive to our development.
ReplyDeleteತನ್ನ ತಾನರಿಯಲು ಏನು ಮಾಡಬೇಕೆಂದು ಹೇಳುವುದು ಬಲು ಕಷ್ಟ. ಏಕೆಂದರೆ ನಾವು ಏನೇ ಹೇಳಿದರೂ ಅದು ಭಾಷೆಯಮೂಲಕವೇ ಹೇಳಬೇಕು. ಮತ್ತು ಭಾಷೆಯು ಬಹು ಸೀಮಿತವಾದದ್ದು. ಆದರೆ "ಅರಿವು" ವಿಚಾರ, ಭಾಷೆ,ಭಾವನೆಗಳನ್ನು ಮೀರಿರುವಂತಹುದು.ನಮ್ಮ ಮನಸ್ಸನ್ನು ತೆರವಾಗಿಟ್ಟುಕೊಳ್ಳುವುದು ಮುಖ್ಯ. ಮನಸ್ಸು ಮೌನವಾಗಬೇಕು. ಅದು ಸಹಜವಾಗಿಯೇ ಆಗಬೇಕು. ಅದನ್ನು ವಿಚಾರದಿಂದ ಮಾಡಲು ಬರುವುದಿಲ್ಲ. ವಿಚಾರದಿಂದ ಮಾಡುವುದು ಎಂದರೆ ಕಾಯಿಯನ್ನು ಒತ್ತಿ ಹಣ್ಣು ಮಾಡಿದಂತೆ.
ReplyDeleteThe first line is addressed to the aspirant.
ReplyDeleteAllama talks here about the spiritual sadhana. This cant be forced upon the mind or body by the ego. How can it be lead to the ripening of the fruit? if it does not dawn upn the saadhaka that he is forcing it.
the second line is addresed to his own reflection on the first line .
If you desire( Kaamisi) liberation is it enough ? If you imagine( Kalpana) liberation does it happen ? Oh my beloved mind when are you going to realise that the very object of realization is decimated if you do so ?
The third line is and offering to the last word ie guheshwara.
Isnt death of ' i ' ie the ego better than them ?
Guheshwara:
The Self illuminant "self" manifest when the the successive absractions of the world, the body , the mind and the ego are - negotiated as mere concepts .Concepts of what ? Conceptts of the very self that is the cave , unseeen and un mnifest to the fice senses.
ದೇವಜಿಯವರೆ, ಇಲ್ಲಿಯೂ ಕೂಡ ನಿಮ್ಮ ವ್ಯಾಖ್ಯಾನ ಚೆನ್ನಾಗಿದೆ. ಅದಕ್ಕಾಗಿ ಧನ್ಯವಾದಗಳು.
ReplyDelete