Friday, September 30, 2011

VACHANA 57: Bittenendaru Bidadee Maye - Overcoming Illusion


ಬಿಟ್ಟೆನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ

TRANSLITERATION

biTTeneMdarU biDadI mAye!
biDadiddare beMbattittu mAye!
yOgige yOgiNiyAyittu mAye!
savaNaMge savaNiyAyittu mAye!
yatige parAkiyAyittu mAye!
ninna mAyege nAnaMjuvavaLalla
cennamallikArjunadEva, nimmANe

CLICK HERE TO HEAR IT:

http://www.youtube.com/watch?v=T1IBQOn3hG4

TRANSLATION

biTTeneMdarU(even if I abandon) biDadu (does not leave me) I(this) mAye!(illusion)
biDadiddare(if I don’t abandon) beMbattittu(follows, sticks to me) mAye!
yOgige(to an ascetic) yOgiNiyAyittu(becomes a female ascetic) mAye!
savaNaMge(to a Jain monk) savaNiyAyittu(becomes Jain nun) mAye!
Yatige(to a monk) parAkiyAyittu(sincerity of practices becomes) mAye!
Ninna(your) mAyege(illusion) nAnaMjuvavaLalla(I will not be frightened)
cennamallikArjunadEva,(Lord cennamallikArjunadEva) nimmANe (I swear upon you)

Even if I abandon, Maye (illusion) does not leave me!
If I don’t abandon, Maye follows (sticks to) me!
To an ascetic, Maye becomes a female ascetic!
To a Jain monk, Maye becomes a Jain nun!
To a monk, his sincerity of practices (rituals) becomes Maye!
Lord chennamallikarjuna, I will not be frightened by the Maye you have cast, I swear upon you!

COMMENTARY

In previous Vachana, Akkamahadevi addressed how Maye (illusion) envelops our body-mind-intellect complex, and said that no one can escape from Maye, cast by the Lord. Here, Akka expands on the traits of Maye in the context of individuals and their surroundings.

One school of thought urges us to treat this mortal world as an illusion and hence abandon it. Akka says that we cannot really abandon Maye. Even if we abandon Maye, she would still follow us. If we did not abandon, Maye exerts her influence on us for sure. Even an ascetic who has conquered his senses and achieved the control of his mind, gets attracted to a female ascetic who has also accomplished the same. Such is the power of Maye. In general, Maye envelops a man as a woman, and woman as a man. A monk who has given up his worldly possessions, who has achieved the control of his mind, and spends all his time in spiritual journey, runs the risk of becoming full of himself (i.e. Attacked by Maye), when his ego elevates to make him feel that “I have accomplished, I have conquered my mind, etc.”!

As a very simplified scenario, consider the case of a habitual smoker. Maye has enveloped him as his smoking habit. Once he realizes that smoking is bad for his health, he tries to quit the habit. Someone suggests to him that chewing gum at the urge for a smoke will help him stay away from smoking. Now he is habituated to chewing gum, another form of Maye. This is how Maye manifests in an alternate form when you want to abandon her. If the smoker does not want to abandon smoking, Maye continues to envelop him as his smoking habit.

The illusion of the rope lying in a dark alley, presenting itself as a serpent cannot be abandoned. When the light of awareness (that it is indeed a rope) shines on it, the illusion does not have the frightening effect any more.
While Akka says that no one can escape from Maye, she concludes this Vachana saying that she is not frightened by her. Akka is implying that she acknowledges the existence of Maye, and she is aware of the forms and modalities in which Maye persists and hence Maye cannot disturb her balance. The key then is ‘awareness’. Awareness fills the valley between the peaks of abandonment and non-abandonment, making both the aspects immaterial, thereby erasing the fear of illusion.

The concept of Maya was first introduced by the great ninth-century Hindu philosopher Adi Shankara. In Advaita Vedanta philosophy, Maya is the limited, purely physical and mental reality in which our everyday consciousness has become entangled. Maya is held to be an illusion, a veiling of the true, unitary Self — the Cosmic Spirit also known as Brahman. Please visit http://en.wikipedia.org/wiki/Maya_(illusion) for a review of the concept of Maya in various religions and beliefs.

Let us strive to develop the Awareness to overcome Maye and realize the Lord within!

KANNADA COMMENTARY

ಇಲ್ಲಿ ಅಕ್ಕಮಹಾದೇವಿ ಮಾಯೆಯ ವೈಚಿತ್ರ್ಯವನ್ನು ಅರಹುತ್ತಿದ್ದಾಳೆ. ಅದು ಬಿಟ್ಟೆನೆಂದರೂ ಬಿಡದು, ಬಿಡದಿದ್ದರಂತೂ ಬೆನ್ನಹಿಂದೆಯೇ ಬರುತ್ತದೆ. ಇಂತಹ ಮಾಯೆಯಿಂದ ಬಿಡಿಸಿಕೊಳ್ಳುವುದು ಹೇಗೆ? ಚಿತ್ತವೃತ್ತಿ ನಿರೋಧವನ್ನು ಸಾಧಿಸಿರುವಂತಹ ಯೋಗಿಯೂ ಯೋಗಿಣಿಯ ಮಾಯೆಗೆ ಒಳಗಾಗುತ್ತಾನೆ, ದೇಹವನ್ನು ಕಠಿಣವಾಗಿ ದಂಡಿಸಿ ಆಸೆ ಆಕಾಂಕ್ಷೆಗಳಿಗೆಲ್ಲ ತಿಲಾಂಜಲಿಯಿತ್ತ ಜೈನ ಸಂನ್ಯಾಸಿಯೂ ಸಹ ಜೈನ ಸಂನ್ಯಾಸಿನಿಯ ಮಾಯೆಗೆ ಒಳಗಾಗುತ್ತಾನೆ, ಮತ್ತು ಇಂದ್ರಿಯ ನಿಗ್ರಹ ಮಾಡಿರುವಂತಹ ಯತಿಯೂ ಸಹ ವ್ರತನಿಷ್ಠೆಯ ಮಾಯೆಗೆ ಒಳಗಾಗುತ್ತಾನೆ. ಇನ್ನು ಸಾಮಾನ್ಯರ ಪಾಡೇನು?


ಆದರೆ, ಹಿಂದಿನ ವಚನದಲ್ಲಿ ಮಾಯೆಯನ್ನು ಯಾರೂ ಗೆಲ್ಲಲಾರರು ಎಂದ ಅಕ್ಕ ಈ ವಚನದಲ್ಲಿ ತನ್ನ ಮಟ್ಟಿಗೆ ಅದರ ವಿರುದ್ಧವಾಗಿ ನುಡಿಯುತ್ತಾಳೆ. ಚೆನ್ನಮಲ್ಲಿಕಾರ್ಜುನನ ಮೇಲೆ ಆಣೆ ಮಾಡಿ ಮಹಾ ಮಹಾ ಯೋಗಿ, ಸಂನ್ಯಾಸಿ ಮತ್ತು ಯತಿಗಳನ್ನೂ ಬಿಡದೆ ಕಾಡುವಂತಹ ಮಾಯೆಗೆ ತಾನು ಅಂಜುವವಳಲ್ಲ ಎಂದು ಹೇಳುತ್ತಾಳೆ. ನಾವು ಬಿಟ್ಟೆವೆಂದರೂ ಮಾಯೆ ನಮ್ಮನ್ನು ಬಿಡದು. ಉದಾಹರಣೆಗೆ ನಾವು ಯಾವುದಕ್ಕೋ ಅಂಟಿಕೊಂಡಿರುತ್ತೇವೆ: ಅದು ಚಹ ಕುಡಿಯುವ ಚಟವೇ ಆಗಿರಬಹುದು, ಅಥವಾ ಯಾವುದೋ ಸುಂದರವಾದ ವಸ್ತುವನ್ನು (ವಸ್ತ್ರ, ಮನೆಗೆ ಬೇಕಾಗುವ ವಸ್ತು ಅಥವಾ ಇನ್ನಾವುದೋವಸ್ತುವನ್ನು) ಕಂಡಾಗ ಅದು ತನ್ನದಾಗಿಸಿಕೊಳ್ಳುವ ಆಸೆಯಿರಬಹುದು, ಅದನ್ನು ಗುರುತಿಸಿ ಇನ್ನು ಮೇಲೆ ನಾನು ಹಾಗೆ ಮಾಡುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ ಆ ಆಸೆ ಇನ್ನಾವುದೋ ರೂಪತಾಳಿ ನಮ್ಮ ಬೆನ್ನಟ್ಟುತ್ತದೆ. ಚಹದ ಬದಲಿಗೆ ಇನ್ನೇನೋ ಕುಡಿಯುತ್ತೇವೆ, ಸುಂದರವಾದ ವಸ್ತ್ರದ ಬದಲಿಗೆ ಇನ್ನೇನೋ ನಮ್ಮದಾಗಿಸಿಕೊಳ್ಳುತ್ತೇವೆ. ಹೀಗೆ ಮಾಯೆ ತನ್ನ ರೂಪ ಬದಲಿಸಿ ನಮ್ಮನ್ನು ಬೆನ್ನಟ್ಟುತ್ತದೆ. ಚಿತ್ತವೃತ್ತಿ ನಿರೋಧದಿಂದ ಯೋಗಿಯಾಗುತ್ತಾನೆ ವ್ಯಕ್ತಿ. ಚಿತ್ತದ ವೃತ್ತಿಗಳಾದ ಆಸೆ ಆಕಾಂಕ್ಷೆಗಳನ್ನು ಮೀರಿದ್ದೇನೆ ಎಂದುಕೊಳ್ಳುತ್ತಾನೆ. ಆದರೆ ತನಗೇ ಗೊತ್ತಿಲ್ಲದೆ ತನ್ನಂತೆ ಚಿತ್ತವೃತ್ತಿಯನ್ನು ನಿರೋಧಿಸಿದ ಯೋಗಿಣಿಯ ಆಕರ್ಷಣೆಗೆ ಒಳಗಾಗುತ್ತಾನೆ. ಹೀಗೆ ಆತನು ಬಿಟ್ಟಿದ್ದೇನೆ ಎಂದುಕೊಂಡರೂ ಆ ಮಾಯೆ ಬೇರೆಯ ರೂಪದಲ್ಲಿ ಸೂಕ್ಷ್ಮವಾಗಿ ಆತನನ್ನು ಕಾಡುತ್ತದೆ. ಜೈನ ಸಂನ್ಯಾಸಿ ಸಂಸಾರವನ್ನು ತ್ಯಜಿಸಿರುತ್ತಾನೆ,ದೇಹವನ್ನು ದಂಡಿಸಿರುತ್ತಾನೆ, ಕಠಿಣವಾದ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾನೆ, ಆದರೆ ಆತನಿಗೆ ಮಾಯೆ, ಜೈನ ಸಂನ್ಯಾಸಿನಿಯ ರೂಪದಲ್ಲಿ ಬಂದು ಮುತ್ತಿಕೊಳ್ಳುತ್ತದೆ. ತಾನು ಎಲ್ಲರಂತೆ ಲೌಕಿಕನಲ್ಲ, ಅಲೌಕಿಕದಲ್ಲಿ ಮಾತ್ರ ನನ್ನ ಆಸಕ್ತಿ, ಎಂದುಕೊಂಡವನು ತನ್ನಂತೆಯೇ ಲೌಕಿಕವನ್ನು ಬಿಟ್ಟ ಸಂನ್ಯಾಸಿನಿಯ ಆಕರ್ಷಣೆಗೆ ಒಳಗಾಗುತ್ತಾನೆ. ಯತಿಗೆ, ಇಂದ್ರಿಯ ನಿಗ್ರಹಮಾಡಿದವನಿಗೆ ವ್ರತನಿಷ್ಠೆಯೇ ಮಾಯೆಯಂತೆ ಕಾಡುತ್ತದೆ. ಇಂದ್ರಿಯ ನಿಗ್ರಹಕ್ಕಾಗಿ ಅನೇಕ ವ್ರತಗಳನ್ನು ಕೈಗೊಳ್ಳುತ್ತಾನೆ. ವ್ರತಗಳನ್ನು ಮಾಡುವಾಗ ಇಂದ್ರಿಯಗಳು ತನ್ನ ವಶದಲ್ಲಿವೆ ಎನ್ನಿಸುತ್ತದೆ. ಆದರೆ ಆ ವ್ರತನಿಷ್ಠೆಯೇ ಮಾಯೆಯಾಗುತ್ತದೆ. ತನ್ನ ವ್ರತನಿಷ್ಠೆಯನ್ನೇ ತಾನು ಪ್ರೀತಿಸಲು ತೊಡಗುತ್ತಾನೆ. ಅದೇ ಆತನಿಗೆ ಅಹಂ ಆಗಿ ಕಾಡುತ್ತದೆ. ಹೀಗೆ ಎಲ್ಲವನ್ನೂ ತ್ಯಜಿಸಿದ್ದೇವೆ ಎಂದುಕೊಳ್ಳುವಂತಹ ಯೋಗಿ, ಸವಣ ಮತ್ತು ಯತಿಗಳು ತಾವು ಬಿಟ್ಟಿದ್ದೇವೆ ಎಂದುಕೊಂಡರೂ ಮಾಯೆ ಅವರನ್ನು ಬಿಡದೆ ಅವರ ಇತರ ಮನೋಭೀಷ್ಟೆಗಳ ರೂಪದಲ್ಲಿ ಕಾಡುತ್ತದೆ. ವ್ಯಕ್ತಿಗೆ ಅದರ ಸುಳಿವನ್ನೂ ಕೊಡದೆ ತನ್ನ ಮಾಯೆಯಲ್ಲಿ ಅದು ಬಂಧಿಸುತ್ತದೆ. ಯಾವುದೋ ಒಂದು ಗಳಿಗೆಯಲ್ಲಿ ಎಲ್ಲವನ್ನು ತ್ಯಜಿಸಿ ಬಂದ ನಂತರ ತ್ಯಜಿಸಿದ ಬದುಕು ದಿನಗಳೆದಂತೆ ಯಾಂತ್ರಿಕವಾಗುತ್ತದೆ. ಮತ್ತು ತಾನು ಎಲ್ಲವನ್ನು ಬಿಟ್ಟುಬಂದಿದ್ದೇನೆ ಎನ್ನುವ ಅಹಂಕಾರ ಹುಟ್ಟಿಕೊಳ್ಳುತ್ತದೆ. ಅದನ್ನು ಬಿಟ್ಟುಬಂದಿದ್ದೇನೆ ಎನ್ನುವ ಅಹಂಕಾರವೇ ಮಾಯೆಯ ರೂಪದಲ್ಲಿ ಕಾಡತೊಡಗುತ್ತದೆ. ತಾನು ತನಗರಿವಿಲ್ಲದೆ ಯೋಗಿಣಿ, ಸವಣಿ ಮತ್ತು ವ್ರತನಿಷ್ಠೆಯ ಮಾಯೆಗೆ ಬಲಿಯಾಗುತ್ತಿದ್ದೇನೆ ಎಂಬುದರ ಅರಿವೂ ಆಗುವುದಿಲ್ಲ. ಬಿಟ್ಟವರ ಸ್ಥಿತಿಯೇ ಹೀಗಿರುವಾಗ ಬಿಡದಿದ್ದವರ ಪಾಡಂತೂ ಹೇಳತೀರದು. ಇದನೆಲ್ಲ ಬಹಳ ಹತ್ತಿರದಿಂದ, ಆಳವಾಗಿ ಗಮನಿಸಿದ ಅಕ್ಕ ಅದನ್ನು ಇಲ್ಲವಾಗಿಸುವ ಕಲೆಯನ್ನು ಅಳವಡಿಸಿಕೊಂಡಿದ್ದಳು. ಅದನ್ನು ಬಿಡುವುದೂ ಸರಿಯಲ್ಲ, ಮತ್ತು ಬಿಡದೆ ಇರುವುದೂ ಸರಿಯಲ್ಲ, ಏಕೆಂದರೆ ಎರಡೂ ಸಂದರ್ಭಗಳಲ್ಲಿ ಮಾಯೆ ವ್ಯಕ್ತಿಯನ್ನುಕಾಡುತ್ತದೆ, ಎಂಬುದನ್ನು ಅವಳು ಕಂಡುಕೊಂಡಿದ್ದಳು. ಬಿಡುವುದು ಮತ್ತು ಬಿಡದೆ ಇರುವುದು, ಎರಡೂ ವಿಭಜನೆಯನ್ನು ಸೂಚಿಸುತ್ತವೆ . ಅಂದರೆ ಆಕೆ, ಮಾಯೆ, ಯಾವ ಯಾವ ವಿಧದಲ್ಲಿ, ಎಲ್ಲೆಲ್ಲಿ, ಯಾವಾಗ ಯಾವಾಗ ಕಾಣಿಸಿಕೊಳ್ಳುತ್ತದೆ ಎಂಬುದನ್ನು, ಮಾಯೆಯ ಸಮಸ್ತ ಆಯಾಮಗಳನ್ನು ನಿರಂತರವಾಗಿ ಗಮನಿಸಿದ್ದಳೆಂದು ತೋರುತ್ತದೆ. ಅದಕ್ಕೆ ಬೇಕಾದ ನಿರಂತರವಾಗಿ ಜಾಗೃತವಾದ ಅರಿವು ಅವಳದಾಗಿತ್ತು. ತನ್ನ ಈ ಜಾಗೃತವಾದ ಅರಿವಿನಿಂದ “ಬಿಡಬೇಕು, ಬಿಡಬಾರದು” ಎನ್ನುವ ಭೇದವನ್ನು, ಅಂತರವನ್ನು ಬಯಲು ಮಾಡಿದಳು. ಅದರಲ್ಲಿ ಅಂತರವೇ ಇಲ್ಲದಿದ್ದ ಮೇಲೆ ಯಾವದನ್ನು ಬಿಡುವುದು ಯಾವುದನ್ನು ಹಿಡಿಯುವುದು? ಆಗ ಮಾಯೆ ತಾನಾಗಿಯೇ ಅಳಿಸಿಹೋಗುತ್ತದೆ. ಆಗ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ಮೇಲೆ ಆಣೆಮಾಡಿ ತಾನು ಅಂತಹ ಮಾಯೆಗೆ ಅಂಜುವವಳಲ್ಲವೆಂದು ಸಾರುತ್ತಾಳೆ.










No comments:

Post a Comment