Friday, September 2, 2011

Vachana 53: saganiya benakana maadi - Inner Development



ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲ್ಲಿ ಪೂಜಿಸಿದರೆ
ರಂಜನೆಯಹುದಲ್ಲದೆ, ಅದರ ಗಂಜಳ ಬಿಡದಣ್ಣ!
ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!!
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ ?

TRANSLITERATION

sagaNiya benakana mADi saMpigeyaraLalli pUjisidare
raMjaneyahudallade, adara gaMjaLa biDadaNNa!
maNNa pratimeya mADi majjanakkeredare
nicca kesarahudallade adaracciga biDadaNNa!!
lOkada mAnavaMge SivadIkSheya koTTare
A keTTavanEke sadBaktanahanu kUDalasaMgamadEvA ?

CLICK HERE TO HEAR IT:


TRANSLATION

sagaNiya (of cow dung) benakana (Ganesha) mADi (made) saMpigeyaraLalli (with Champaka flower – a fragrant flower)
pUjisidare (if worshipped) raMjaneyahudallade,( it is nothing other than entertainment) adara (its) gaMjaLa(stink of cattle urine) biDadaNNa!(will not cease to exist)

manna(of mud) pratimeya(idol) mADi (made) majjanakkeredare (if washed)
nicca (forever) kesarahudallade (it is nothing other than mud puddle) adaracciga (its original trait) biDadaNNa!!(will not disappear)
lOkada (of the world) mAnavaMge(to the man) SivadIkSheya (Shiva’s devotion) koTTre(initiated)
A(that) keTTavanEke(why would that corrupt man) sadBaktanahanu(will become a virtuos devotee) kUDalasaMgamadEvA ?(Lord of meeting rivers)

The Ganesha statue made of cow dung, when worshipped with Champaka flowers, provides nothing other than entertainment, let alone loses its stink of cattle urine!
The statue made of mud, when washed, provides nothing other than a mud puddle, let alone the mud losing its original trait!
Why would a common man initiated into becoming a devotee of Shiva, give up his corrupt ways and become a virtuous devotee? Oh Lord of meeting rivers!

COMMENTARY

In this Vachana, Basavanna highlights the difference between a common man (immersed in worldly ways) and a virtuous devotee. The commoner makes a statue of Lord Ganesha out of cow dung and worships it with the most fragrant flowers. The flower clad statue brings joy to him. But, even the staunch fragrance of the flowers cannot hide the stench of the cow dung. Similarly, an earthen statue becomes a mud puddle when it is washed with water as part of the worship. It does not give up its original trait of being the mud. Along the same lines, if a corrupt commoner is initiated to be a devotee of Shiva, he will not become a virtuous devotee.
Basavanna uses three important aspects in this Vachana - commoner, corrupt and virtuous devotee. The commoner tries to see the God in the statues made out of materials readily available (mud, dung, etc.). Although these materials took the form of the God, their basic trait remains the same. So is the trait of an ordinary man corrupted by his worldly ways. A virtuous devotee on the other hand, would have realized the Lord within and will have the courage to ignore the ritualistic, worldly ways.
It is said that the teacher appears when the student is ready for receiving the knowledge. The teacher also has to determine the intensity of the quest for knowledge before taking one as a student. As such, Basavanna is implying that initiating an individual who is still immersed in mundane materialistic ways into spiritual path is not worthwhile.




Let us strive to realize the Lord within and not depend on the materialistic images to do so!

KANNADA COMMENTARY

ಈ ವಚನದಲ್ಲಿ ಬಸವಣ್ಣನವರು ಲೋಕದ ಸಾಮಾನ್ಯ ಮನುಷ್ಯ ಮತ್ತು ಸದ್ಭಕ್ತನಿಗು ಇರುವ ವ್ಯತ್ಯಾಸವನ್ನು ತಿಳಿಸುತ್ತಾರೆ. ಸಾಮಾನ್ಯನು, ಸಗಣಿಯ ಬೆನಕನನ್ನು ಮಾಡಿ ಸಂಪಿಗೆಯ ಹೂವಿನಿಂದ ಪೂಜಿಸುತ್ತಾನೆ. ಹಾಗೆ ಮಾಡಿದಾಗ ಅದು ಕಣ್ಣಿಗೆ ಸೊಗಸಾಗಿ ಕಂಡು ಮನೋರಂಜನೆಯಾಗುತ್ತದೆ ಅಷ್ಟೆ. ಆದರೆ ಸಂಪಿಗೆಯ ತೀಕ್ಷ್ಣವಾದ ಗಂಧವೂ ಸಗಣಿಯ ವಾಸನೆಯನ್ನು ದೂರಮಾಡಲಾಗುವುದಿಲ್ಲ. ಅದೇ ರೀತಿಯಾಗಿ ಮಣ್ಣಿನ ಪ್ರತಿಮೆಯನ್ನು ಮಾಡಿ ಅದನ್ನು ಪೂಜಿಸುತ್ತಾನೆ. ಅದನ್ನು ನೀರಿನಿಂದ ತೊಳೆದರೆ ಅದು ಕೇವಲ ಕೆಸರನ್ನೇ ಕೊಡುತ್ತದೆ. ಅದು ತನ್ನ ಮೂಲ ಸ್ವಭಾವವನ್ನು ಬಿಡುವುದಿಲ್ಲ. ಅದೇ ರೀತಿಯಾಗಿ ಸಾಮಾನ್ಯನನಿಗೆ ಶಿವದೀಕ್ಷೆಯನ್ನು ಕೊಟ್ಟರೆ ಅವನು ಸದ್ಭಕ್ತನಾಗಲಾರ ಎನ್ನುತ್ತಾರೆ.


ಇಲ್ಲಿ “ಲೋಕದ ಮಾನವ” “ಕೆಟ್ಟವನು” “ಸದ್ಭಕ್ತನು” ಎಂಬ ಪದಗಳನ್ನು ಯಾರಿಗಾಗಿ ಬಳಸಿದ್ದಾರೆ ಎನ್ನುವುದನ್ನು ನೋಡೋಣ. “ಲೋಕದ ಮಾನವ” ಎಂದರೆ, ಸಾಮಾನ್ಯ ವ್ಯಕ್ತಿಯು ದೇವರನ್ನು ಬಾಹ್ಯ ವಸ್ತುಗಳಲ್ಲಿ ನೋಡಲು ಪ್ರಯತ್ನಿಸುತ್ತಾನೆ. ಅದಕ್ಕಾಗಿಯೇ ಸಗಣಿ, ಮಣ್ಣು ಅಥವಾ ಇತರ ವಸ್ತುಗಳಿಂದ ಪ್ರತಿಮೆಗಳನ್ನು ಮಾಡುತ್ತಾನೆ. ದೇವರ ಪ್ರತಿಮೆಯ ರೂಪ ಪಡೆದರೂ ಸಹ ಸಗಣಿ ಮತ್ತು ಮಣ್ಣು ಅಥವಾ ಇತರ ವಸ್ತುಗಳು ತಮ್ಮ ಮೂಲಗುಣವನ್ನು ಹೇಗೆ ಬಿಡುವುದಿಲ್ಲವೋ ಹಾಗೆಯೇ ಆ ಸಾಮಾನ್ಯ ವ್ಯಕ್ತಿಯು ಪೂಜೆ ಮಾಡಿದರೂ ತನ್ನ ಮೂಲಸ್ವಭಾವವಾದ ಮಾಯಾ ಮೋಹಗಳನ್ನು ಬಿಡುವುದಿಲ್ಲ. ಅವನ ಮನಃ ಪರಿವರ್ತನೆಯಾಗುವುದಿಲ್ಲ. ಆದರೆ ಸದ್ಭಕ್ತನು ಜಿಜ್ಞಾಸುವಾಗಿರುತ್ತಾನೆ. ಜಿಜ್ಞಾಸೆಯು ಅವನೆದುರು ವಾಸ್ತವಿಕತೆಯನ್ನು ತೆರೆದಿಡುತ್ತದೆ. ಮತ್ತು ಆತನು ಅದನ್ನು ಸ್ವೀಕರಿಸುತ್ತಾನೆ. ಆತನಲ್ಲಿ, ವಾಸ್ತವ ಅಲ್ಲದ್ದನ್ನು ಧಿಕ್ಕರಿಸುವ ಎದೆಗಾರಿಕೆಯಿರುತ್ತದೆ. ಅದು ಸದ್ಭಕ್ತನ ಲಕ್ಷಣ. ಅವಾಸ್ತವವಾದದ್ದನ್ನು ಧಿಕ್ಕರಿಸುವ ಧೈರ್ಯವಿಲ್ಲದವನನ್ನು ಬಸವಣ್ಣನವರು ಕೆಟ್ಟವನು ಎನ್ನುತ್ತಾರೆ. ಆತನ ಬುದ್ಧಿ ನಿಂತ ನೀರಿನಂತೆ ಕೆಟ್ಟುಹೋಗಿರುತ್ತದೆ. ಸ್ಥಾವರ ಪೂಜೆಯು ಕೇವಲ ಕಣ್ಣಿಗೆ ಹಬ್ಬ. ಅದಕ್ಕಿಂತ ಹೆಚ್ಚಿನ ಲಾಭವೇನೂ ಅದರಿಂದುಂಟಾಗುವುದಿಲ್ಲ.


ಇಂದು ನಾವು ನೋಡುತ್ತೇವೆ, ಹಬ್ಬ ಹರಿದಿನಗಳ ನೆಪದಲ್ಲಿ ಮೂರ್ತಿಪೂಜೆ ವೈಭವೀಕೃತಗೊಳ್ಳುತ್ತಿದೆ. ಮಣಗಟ್ಟಲೆ ಹೂವು ಹಣ್ಣುಗಳನ್ನಿಡುವುದು, ಅನೇಕಾನೇಕ ದೀಪಗಳನ್ನುರಿಸುವುದು, ಅನೇಕಸಲ ಪ್ಲಾಸ್ಟಿಕ್ಕಿನ ತೋರಣಗಳ ಬಳಕೆ, ಉಸಿರುಕಟ್ಟಿಸುವಂತಹ ರಾಸಾಯನಿಕಗಳಿಂದ ಮಾಡಿದ ಊದುಬತ್ತಿಗಳ ಮತ್ತು ವೈಭವೋಪೇತ ಪೂಜಾಸಾಮಗ್ರಿಗಳ ಬಳಕೆ, ತಾಂಬೂಲದ ನೆಪದಲ್ಲಿ ಬಳಕೆಗೆ ಬಾರದ ವಸ್ತುಗಳ ವಿತರಣೆ ಇತ್ಯಾದಿ. ಅರ್ಥವಿಲ್ಲದ ಇದನ್ನೆಲ್ಲ ಮಾಡಿ ಆಧ್ಯಾತ್ಮಿಕಲಾಭವಾಯಿತು ಎಂದು ಬೀಗುವ ಮನಸ್ಸು ಬೇರೆ. ಇದು ಭಕ್ತಿಯ ಆಡಂಬರ. ಇದೆಲ್ಲ ಆತ್ಮವಂಚನೆಯಲ್ಲದೆ ಮತ್ತೇನು? ಇಂತಹ ಆಡಂಬರದ ಪೂಜೆಯ ಮೂಲಕ ನಡೆಯುತ್ತಿರುವ ಪರಿಸರದ ಹಾನಿಯ ಬಗ್ಗೆ ನಾವು ಎಂದಾದರು ಯೋಚಿಸುತ್ತೇವೆಯೆ? ತಾವು ಮಾಡುತ್ತಿರುವುದು ಆತ್ಮವಂಚನೆ ಎಂಬ ಅರಿವು ಸಹ ಮೂಡುವುದಿಲ್ಲ. ಈ ರೀತಿಯಾಗಿ ತನ್ನ ನಡತೆಯನ್ನು ವಿಮರ್ಶಿಸದೆ ಅರ್ಥವಿಲ್ಲದ್ದರಲ್ಲಿ ತನ್ನನ್ನು ತೊಡಗಿಸಿಕೊಳ್ಳುವವನು ಕೆಟ್ಟವನು. ಏಕೆಂದರೆ ಅವನಿಂದ ಸ್ವತಃ ತನಗೇ ಆಗಲಿ ಅಥವಾ ಸಮಾಜಕ್ಕೇ ಆಗಲಿ ಯಾವ ಮಂಗಳವೂ ಆಗುವುದಿಲ್ಲ. ಅದಕ್ಕೆ ವಿರುದ್ಧವಾಗಿ ಪರಿಸರದ ಹಾನಿಯಾಗುತ್ತದೆ. “ತನಗೆ ಅವಶ್ಯಕತೆಯಿದ್ದಷ್ಟು ಮಾತ್ರ ತಾನು ತೆಗೆದುಕೊಳ್ಳಬೇಕು ಉಳಿದದ್ದನ್ನು ಸಮಾಜಕ್ಕೆ ಅರ್ಪಿಸಬೇಕೆ”ನ್ನುವ ಶರಣರ ನುಡಿಗೆ ಇಲ್ಲಿ ಸ್ಥಾನವೇ ಇರುವುದಿಲ್ಲ. ಮಣ್ಣ ಪ್ರತಿಮೆಯೇ ದೇವರೆಂದು ಪೂಜಿಸುವ ಅಜ್ಞಾನದಿಂದ, ಮೊಟ್ಟ ಮೊದಲಿಗೆ ಆಗುವ ಹಾನಿ ಎಂದರೆ ಅಹಂಕಾರದ ವಿಜೃಂಭಣೆ. ಅದು ಎಲ್ಲ ರೀತಿಯ ನಾಶಕ್ಕೂ ಮೂಲ. ಈ ರೀತಿಯ ಅಹಂಕಾರ ಉಳ್ಳವನು ಅದನ್ನು ತ್ಯಜಿಸಿ ಸದ್ಭಕ್ತನಾಗುವುದು ವಿರಳವೇ. ಅದಕ್ಕೇ ಬಸವಣ್ಣನವರು ಆ ಕೆಟ್ಟವನೇಕೆ ಸದ್ಭಕ್ತನಹನು ಎಂದು ಪ್ರಶ್ನಿಸುತ್ತಾರೆ.





No comments:

Post a Comment