Friday, September 23, 2011

Vachana 56: Kaayakke nelalaagi kaadittu maaye - Illusion

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು

TRANSLITERATION

kAyakke neLalAgi kADittu mAye!
prANakke manavAgi kADittu mAye!
manakke nenahAgi kADittu mAye!
nenahiMge arivAgi kADittu mAye!
jagada jaMguLige beMgOlanetti kADittu mAye!
cennamallikArjuna, nInoDDida mAyeyanArU gelabAradu

CLICK HEAR TO HEAR IT (FOR READING ALONG)

http://www.youtube.com/watch?v=r7I9P1I-E_8

CLICK HERE FOR A MUSICAL RENDERING OF THE VACHANA

http://www.raaga.com/player4/?id=236839&mode=100&rand=0.8464657521420922

TRANSLATION

kAyakke (to body) neLalAgi(as shadow) kADittu(has troubled) mAye!(illusion)
prANakke(to life) manavAgi(as mind) kADittu(has troubled) mAye!(illusion)
manakke(to mind) nenahAgi(as memory) kADittu(has troubled) mAye!(illusion)
nenahiMge(to memory) arivAgi(as intellect) kADittu(has troubled) mAye!(illusion)
jagada(of the Universe) jaMguLige(to herd of people) beMgOlanetti(raising a whip) kADittu(has troubled) mAye!(illusion)
cennamallikArjuna,(Lord cennamallikArjuna) nInoDDida(cast by you) mAyeyan (illusion)ArU(no one) gelabAradu(can conquer)

Maye (illusion) has troubled the body as shadow!
Maye has troubled the life (breath) as mind!
Maye has troubled the mind as memory!
Maye has troubled the memory as intellect!
Maye has troubled the people of the Universe with raising whip!
Oh Lord, cennamallikArjuna, no one can conquer the Maye cast by you!

COMMENTARY

The word maya is derived from the Sanskrit roots ma ("not") and ya ("that"). Maya is generally translated as ‘illusion’. ‘Maye’ signifies the feminine personification of ‘Maya’. Maye (Illusion) is a result of ignorance. It makes one perceive something that ‘is’ as ‘is not’ and something that ‘is not’ as ‘is’.

In this Vachana, Sharane Akkamahadevi describes how Maye has taken over all aspects of our being. She acknowledges that Maye is cast by the Lord and no one can escape from it. Akka says, just as the Maye troubles the body as shadow, Maye troubles (manifests) as mind to life (breath), as memory to mind, and as intellect to memory. The body-mind-intellect complex constitutes our existence. The shadow always follows the ‘body’. It appears in various shapes and sizes depending on the position of the body and the light over and around it. We use our body to create shadows and enjoy the various shapes we can deploy. Sometimes we are scared of it, when we are not aware that it is our own shadow. We also know that we cannot get rid of the shadow. Our breath brings ‘life’ to the body and activates our ‘mind’. It is well known that the mind is a monkey and is always active, creating hundreds of pleasant and unpleasant thoughts. Thoughts lead to actions. Actions bring us joy or sorrow. Unless we are disciplined enough to cultivate our mind, we are always subject to the ups and downs the mind creates. We are blessed with ‘memory’ that allows us to create the bank of our experiences. Recalling pleasant experiences make us happy, while the unpleasant ones contribute to anger, sorrow and other negative traits. We cannot get rid of memories most of the time even if we try. Along with mind and memory, we are blessed with the ‘intellect’ that allows us to discriminate between the good and the bad and generally drives us towards what we want to justify. If we consider the body-mind-intellect complex is the pure bliss in its inherent state, Maye disturbs that state. Thus, Maye brandishes her whip on the whole Universe commanding everyone in all aspects of their lives, and conceals the God within us. Consider an illusion of a rope being mistaken for a snake in the darkness. Just as this illusion gets destroyed when true knowledge of the rope is perceived, Maya gets destroyed when one perceives the knowledge of the Lord within. The only solution for us is to remove the ignorance leading to this illusion and follow the path for self-realization. We will address this path in subsequent postings of vachanas by Akka and other Sharanas.

Let us strive to realize the self and remove the ignorance to overcome Maya

KANNADA COMMENTARY

ಮಾಯೆ ಎನ್ನುವುದಕ್ಕೆ ನಿಘಂಟುವಿನಲ್ಲಿ ಮುಖ್ಯವಾಗಿ ಅಜ್ಞಾನ, ಅತಿಯಾದ ಪ್ರೀತಿ, ವ್ಯಾಮೋಹ, ಭ್ರಮೆ, ಭ್ರಾಂತಿ, ಮೋಸ, ಕಪಟ, ಎಂಬ ಅರ್ಥಗಳನ್ನು ಕೊಟ್ಟಿದೆ. ಈ ಎಲ್ಲವುಗಳಿಗೆ ಅಜ್ಞಾನವೇ ಕಾರಣ. ಅಜ್ಞಾನವು, ಇಲ್ಲದಿರುವುದನ್ನು ಇದೆ ಎಂಬ ಭ್ರಾಂತಿಯನ್ನುಂಟುಮಾಡುತ್ತದೆ. ಈ ಭ್ರಾಂತಿಯಿಂದ ಜೀವ ಮೋಸಹೋಗಿ ಬಾಧೆಪಡುತ್ತದೆ.

ಯುಕ್ತಿ ಭಕ್ತಿ, ಅಭ್ಯಾಸ ಭಕ್ತಿ, ಮುಕ್ತಿ ಭಕ್ತಿ, ನಿತ್ಯ ಭಕ್ತಿ ಇತ್ಯಾದಿ ಭಕ್ತಿಗಳಲ್ಲಿ ತೊಡಗುವುದು ಒಂದು ರೀತಿಯಿಂದ ಸುಲಭ. ಆದರೆ ನಿಜ ಭಕ್ತಿ ಅಳವಡುವುದು ಸುಲಭ ಸಾಧ್ಯವಲ್ಲ. ಅದರ ಕಾರಣ ಮಾಯೆ. ಪ್ರಪಂಚದ ಜನರು ಮಾಯೆಯಿಂದ ಯಾವ ಯಾವ ರೀತಿಯಲ್ಲಿ ಕೋಟಲೆಗೊಳಗಾಗುತ್ತಾರೆ ಎಂಬುದನ್ನು ಇಲ್ಲಿ ಅಕ್ಕಮಹಾದೇವಿ ವಿಷದವಾಗಿ ವರ್ಣಿಸಿದ್ದಾಳೆ. ದೇಹಕ್ಕೆ ನೆರಳು ಸದಾ ಅಂಟಿಕೊಂಡಿರುವಂತೆ ಪ್ರಾಣಕ್ಕೆ ಮನಸ್ಸು, ಮನಕ್ಕೆ ನೆನಪು, ನೆನಪಿಗೆ ಬುದ್ಧಿಯಾಗಿ ಮಾಯೆ ಕಾಡುತ್ತದೆ. ಈ ರೀತಿಯಾಗಿ ಮಾಯೆಯು ಮಾನವನ ಪ್ರತಿಯೊಂದು ಆಯಾಮದಲ್ಲಿ ತೋರುತ್ತದೆ. ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಎತ್ತುಗಳನ್ನು ತನಗೆ ಒಪ್ಪುಗೆಯಾಗುವಂತೆ ಓಡಿಸುವ ಯಜಮಾನನಂತೆ ಇಡೀ ಪ್ರಪಂಚದ ಜನರನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಈ ಮಾಯೆಯನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಾಳೆ.

ದೇಹವಿದ್ದಲ್ಲಿ ನೆರಳು ಇದ್ದೇ ಇರುತ್ತದೆ. ಚಿಕ್ಕದಾಗಿ, ದೊಡ್ಡದಾಗಿ, ಉದ್ದವಾಗಿ, ಗಿಡ್ಡವಾಗಿ, ಬೃಹತ್ತಾಗಿ, ಇದ್ದೂ ಇಲ್ಲದಂತಾಗಿ, ಹಿಂದೆ, ಮುಂದೆ, ಅಕ್ಕಪಕ್ಕಕ್ಕೆ ಹೋಗಿ, ಬಂದು, ನಾನಾ ರೀತಿಯಲ್ಲಿ ಅದು ಇದ್ದೇ ಇರುತ್ತದೆ. ನೋಡಲು ಹೇಗೇ ಕಂಡರೂ ಅದು ನಮ್ಮ ನೆರಳೇ. ಅದರಿಂದ ಭಯ ಪಡುವ ಅಥವಾ ಅದರ ಬಗೆ ಬಗೆಯ ಆಕಾರಗಳನ್ನು ನಿಜವೆಂದೇ ನಂಬುವ ಅವಶ್ಯಕತೆಯಿಲ್ಲ. ಈ ತಿಳುವಳಿಕೆಯಿಂದ ನೆರಳಿನ ಕಾಟದಿಂದ ಬಿಡುಗಡೆ ಪಡೆಯಬಹುದು. ಆದರೆ ಅದರ ಜ್ಞಾನವಿಲ್ಲದವರು ಅದರ ಪ್ರಭಾವದಿಂದ ಕಷ್ಟಪಡುತ್ತಾರೆ. ಅದೇ ತರಹ ಮಾಯೆ ಕೂಡ ನಮ್ಮೊಟ್ಟಿಗೆ ಇದ್ದೇ ಇರುತ್ತದೆ. ಅದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಅಕ್ಕ ಅದು ನಮ್ಮನ್ನು ಆವರಿಸಿರುವ ವಿಧವನ್ನು ಹೇಳುತ್ತಾಳೆ. ಪ್ರಾಣವಿರುವವರೆಗೆ ಮನಸ್ಸು ಇದ್ದೇ ಇರುತ್ತದೆ. ಅದು ತನ್ನ ಸುತ್ತಮುತ್ತವಿರುವುದೆಲ್ಲವನ್ನು, ತನಗೆ ಬೇಕಾದದ್ದು ಮತ್ತು ಬೇಡವಾದದ್ದು, ಎಲ್ಲವನ್ನು, ಪಂಚೇಂದ್ರಿಯಗಳ ಅನುಭವದ ಮೂಲಕ ತನ್ನಲ್ಲಿ ತುಂಬಿಕೊಳ್ಳುತ್ತದೆ. ಮತ್ತು ಆ ಎಲ್ಲದರ ಭಾರದಿಂದ ಕುಗ್ಗುತ್ತದೆ, ಗೊಂದಲಗೊಳ್ಳುತ್ತದೆ, ಕಿರಿಕಿರಿಗೊಳ್ಳುತ್ತದೆ, ಕೆಲವೊಮ್ಮೆ ಉಬ್ಬಿಯೂ ಹೋಗುತ್ತದೆ. ಇಂತಹ ಮನಸ್ಸು ವ್ಯಕ್ತಿಯನ್ನು ಆಳುತ್ತದೆ. ಅದರ ಈ ಎಲ್ಲ ಆಯಾಮಗಳು ವಾಸ್ತವವಾದವಲ್ಲ. ಆದರೆ, ಅದರ ಪರಿಣಾಮವು ಕಾಡುವಿಕೆಯಾಗುತ್ತದೆ. ಮನಸ್ಸು ಇಲ್ಲವಾದಾಗ ಮಾತ್ರ ಅಥವಾ ಮನಸ್ಸಿನ ವ್ಯಾಪಾರ ಸ್ಥಗಿತಗೊಂಡಾಗ ಮಾತ್ರ ಅದರ ಕಾಟ ಇಲ್ಲವಾಗುತ್ತದೆ. ಆದರೆ ಮನಸ್ಸು ಸ್ಥಗಿತಗೊಳ್ಳುವದು ಸಾಧ್ಯವೆ? ಉಸಿರಾಟವನ್ನು ನಿಲ್ಲಿಸಿದಾಗ ಮನಸ್ಸು ತನ್ನ ವ್ಯಾಪರವನ್ನು ನಿಲ್ಲಿಸುತ್ತದೆ. ಇದನ್ನು ನಾವು ಎಲ್ಲರೂ ಪ್ರಯೋಗ ಮಾಡಿ ನೋಡಬಹುದು. ಕೆಲವು ಕ್ಷಣಗಳವರೆಗೆ ಉಸಿರಾಟವನ್ನು ನಿಲ್ಲಿಸಿದಾಗ ಮನಸ್ಸು ತನ್ನ ಅಲೆದಾಟವನ್ನು ನಿಲ್ಲಿಸುತ್ತದೆ. ಆದರೆ ಉಸಿರಾಟವನ್ನು ಕೆಲ ಕ್ಷಣಗಳಿಗಿಂತ ಹೆಚ್ಚಿಗೆ ನಿಲ್ಲಿಸುವುದು ಸಾಧ್ಯವಿಲ್ಲ. (ಯೋಗಿಗಳಿಗೆ ಇದು ಕೆಲಮಟ್ಟಿಗೆ ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.) ಆದ್ದರಿಂದ ಮನಸ್ಸಿನಿಂದ ಬಿಡುಗಡೆಯಿಲ್ಲ. ಅದು ನಮ್ಮನ್ನು ಮಾಯೆಯಾಗಿ ಕಾಡುತ್ತದೆ ಎನ್ನುತ್ತಾಳೆ ಅಕ್ಕ. ಆದರೆ ಈ ಮಾಯೆ ಅಷ್ಟಕ್ಕೆ ನಿಲ್ಲುವಿದಿಲ್ಲ. ಅದು ಮನಸ್ಸಿಗೆ ನೆನಪಾಗಿ ಕಾಡುತ್ತದೆ. ನಮ್ಮ ಅನುಭವಗಳೆಲ್ಲ ನೆನಪಾಗಿ ಮಾರ್ಪಾಟುಗೊಂಡು ಮನದಲ್ಲಿ ಮನೆಮಾಡುತ್ತವೆ. ಮನಸ್ಸು ನೆನಪುಗಳ ಆಗರವಾಗುತ್ತದೆ. ಅದು, ಬೇಕಾದ ಮತ್ತು ಬೇಡವಾದ ನೆನಪುಗಳಿಂದ ತುಂಬಿಹೋಗುತ್ತದೆ, ತುಂಬಿಕೊಳ್ಳುತ್ತಲೇ ಇರುತ್ತದೆ. ಮನಸ್ಸು ತೆರವಾಗಿದ್ದಾಗ ಮಾತ್ರ ಅಲ್ಲಿ ಶಿವತತ್ವ ಅಳವಡಲು ಸಾಧ್ಯವಾಗುತ್ತದೆ. ಆದರೆ, ಮನಸ್ಸು ತೆರವಾಗಿರಲು ಅವಕಾಶಕೊಡದೆ ನೆನಪುಗಳು ಮಾಯೆಯಾಗಿ ಕಾಡುತ್ತವೆ. ಮತ್ತು ಈ ನೆನಪುಗಳಿಗೆ ಬುದ್ಧಿ ಮಾಯೆಯಾಗಿ ಕಾಡುತ್ತದೆ. ಬುದ್ಧಿ, ನೆನಪುಗಳನ್ನು “ಮಧುರ, ರಮ್ಯ, ಆಹ್ಲಾದಕರ, ಕಹಿ, ಭಯಂಕರ, ಅಸಹ್ಯ, ಜುಗುಪ್ಸಾತ್ಮಕ” ಇತ್ಯಾದಿಯಾಗಿ ವಿಂಗಡಿಸಿ ಕೆಲವು ನೆನಪುಗಳು ಬೇಕು ಕೆಲವು ನೆನಪುಗಳು ಬೇಡ ಎಂದುಕೊಳ್ಳುತ್ತದೆ. ನೆನಪುಗಳಿಗೆ ಒಳ್ಳೆಯ ಮತ್ತು ಕೆಟ್ಟ ಎಂಬ ಹಣೆಪಟ್ಟಿಯನ್ನು ಕಟ್ಟಿ ಬೇಕು ಬೇಡವೆಂದು ಹೇಳುತ್ತಲೇ ಇರುತ್ತದೆ. ಅನುಭವಗಳನ್ನು ನೆನಪುಗಳಾಗಿ ಸಂಚಯಿಸಿ ಅವುಗಳಲ್ಲಿ ಕೆಲವನ್ನು ಪುನಃ ಪುನಃ ಅನುಭವಿಸಬೇಕು ಎನ್ನುವ ಆಸೆಗೆ ತುತ್ತಾಗುತ್ತದೆ. ಇನ್ನು ಕೆಲವನ್ನು ಬೇಡವೆಂದು ತಿರಸ್ಕರಿಸಿ ಅವುಗಳಿಂದ ದೂರ ಓಡುವುದರಲ್ಲಿ ತೊಡಗುತ್ತದೆ. ಒಮ್ಮೆ ಕಹಿ ಅನುಭವ ಕೊಟ್ಟ ಪ್ರಸಂಗ ಇನ್ನೊಮ್ಮೆ ಸಿಹಿ ಅನುಭವ ಕೊಡಲೂ ಬಹುದು. ಹೀಗಾಗಿ ನೆನಪುಗಳು ಎಲ್ಲವೂ ನಿಜವೆಂದು ನಂಬಲು ಸಾಧುವಲ್ಲ. ಅವುಗಳು ವಾಸ್ತವವಾದ ಚಿತ್ರವನ್ನು ಕೊಡುವುದಿಲ್ಲ. ಆದರೆ, ನೆನಪುಗಳು ಯಾರ ಮಾತುಗಳನ್ನೂ ಕೇಳುವುದಿಲ್ಲ. ಎಲ್ಲ ರೀತಿಯ ನೆನಪುಗಳು ಆಗಾಗ ಮೇಲೆದ್ದು ಕಾಡುತ್ತಲೇ ಇರುತ್ತವೆ. ಈ ನೆನಪುಗಳಿಂದ ಜೀವ ಘಾಸಿಗೊಳ್ಳುತ್ತದೆ. ಈ ರೀತಿಯಾಗಿ ಮನಸ್ಸು, ನೆನಪು ಮತ್ತು ಬುದ್ಧಿಗಳು ಜೀವಕ್ಕೆ ಮಾಯೆಯಾಗಿ ಕಾಡುತ್ತವೆ. ಬೆನ್ನಿನ ಮೇಲೆ ಬಾರುಕೋಲನ್ನು ಎತ್ತಿ ಓಡಿಸುವ ಯಜಮಾನನಂತಿರುತ್ತದೆ ಮಾಯೆ. ಈ ಮಾಯೆಯನ್ನು ಒಡ್ಡಿರುವವನು ಚೆನ್ನಮಲ್ಲಿಕಾರ್ಜುನನೆ. ಅವನು ಒಡ್ಡಿದ ಈ ಮಾಯೆಯ ಲೀಲೆಗೆ ಎಲ್ಲರೂ ಒಳಗಾಗುತ್ತಾರೆ. ಅದರ ವಶವಾಗದೆ ಇರುವುದು ಈ ಪ್ರಪಂಚದ ಮಾನವರಿಗೆ ಅಸಾಧ್ಯವಾದದ್ದು ಎಂದು ಅಕ್ಕಮಹಾದೇವಿ ಒಂದು ಹಂತದಲ್ಲಿ ಹೇಳುತ್ತಾಳೆ. ಆದರೆ,ಮುಂದೆ ಆ ಮಾಯೆಗೆ ತಾನು ಅಂಜುವವಳಲ್ಲವೆಂದೂ ಹೇಳುತ್ತಾಳೆ. ಅದನ್ನು ಮುಂದೆ ನೋಡೋಣ.


4 comments:

  1. This makes absolute sense. The commentary explains the meaning of the vachana very well. It is seeing through maye, "seeing the rope" that is impossible. I look forward to Akka's vachanas which will shed light on the rope, so I may see it for what it is.

    ReplyDelete
  2. Aah, if we could get rid of maya, ego and the works, we too would be like the sanyasins and the sharanas. But, all we can do is to try. And then perhaps, some day ...

    Thanks.

    Meera

    Wow!! super uncle!
    loved it! Keep them coming! :)

    Regards,
    Swathi

    ReplyDelete
  3. The nelalu .. here is the world as a manifestation of the body ( of five senses... and so on )
    Prana undelines the formation of mind... the inner most layer of mind is composed of memories ( chitta)
    Such memories are always 'witnessed' by the concious self.
    The concious self is seperated from the unconcious unconcious self by the ' illusioonaory power that emanates from the lord himself.
    The lord and his maaya are inseperable here. therefore winning over this maaya is not the aim ... the aim is to surrender to it.
    Arivige praana maaye
    praanakke ahankara maaye
    Ahankarake chitta maaye
    Chittake .. mana maaye
    Manakke deha maaye ..
    Dehakke samsara maaye...
    thus maaya ... takes the world... by its stick....:)

    ReplyDelete
  4. ದೇವಜಿಯವರೆ, ನೀವು ಬರೆದ ಮೊದಲ ವಾಕ್ಯದ ವ್ಯಾಖ್ಯಾನ ಅರ್ಥಪೂರ್ಣವಾಗಿದೆ. ಧನ್ಯವಾದಗಳು.

    ReplyDelete