Saturday, September 17, 2011

Vachana 55: Shiva Bhaktiyembudu – Types of Devotion


ಶಿವ ಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ
ಮೂಗರು ಕಂಡ ಕನಸಿನಂತಿಪ್ಪುದು ಕಾಣಿರೆ
ಹೇಳೀ ಕೇಳಿ ಮಾಡುವುದು ಯುಕ್ತಿ ಭಕ್ತಿ
ಸಾಧಕಾಂಗದಿಂದ ಮಾಡುವುದು ಅಭ್ಯಾಸ ಭಕ್ತಿ
ಮನ ಕೂರ್ತು ಮಾಡುವುದು ಮುಕ್ತಿ ಭಕ್ತಿ
ಕೇಡಿಲ್ಲದೆ ಮಾಡುವುದು ನಿತ್ಯ ಭಕ್ತಿ
ಇದ್ದಂತಿದ್ದು ನಿಜವಪ್ಪುದು ನಿಜ ಭಕ್ತಿ
ಈ ನಿಜದಲ್ಲಿ ಭರಿತರು ಸೌರಾಷ್ಟ್ರ ಸೋಮೆಶ್ವರಾ ನಿಮ್ಮ ಶರಣರು


TRANSLITERATION

Siva BaktiyeMbudu yuktiya pariyaMtalla
mUgaru kaMDa kanasinaMtippudu kANire
hELI kELi mADuvudu yukti Bakti
sAdhakAMgadiMda mADuvudu aByAsa Bakti
mana kUrtu mADuvudu mukti Bakti
kEDillade mADuvudu nitya Bakti
iddaMtiddu nijavappudu nija Bakti
I nijadalli Baritaru saurAShTra sOmeSvarA nimma SaraNaru


CLICK HERE TO HEAR IT:

http://www.youtube.com/watch?v=LxGwOEh7COs

TRANSLATION

Siva BaktiyeMbudu (devotion towards God is) yuktiya(a strategy) pariyaMtalla (not like)
mUgaru(dumb) kaMDa(seen, dreamt) kanasinaMtippudu(like a dream) kANire(you see)
hELI kELi(notifying and inquiring) mADuvudu(performing) yukti(strategic, planned) Bakti(devotion),
sAdhakAMgadiMda(with bodily diligence) mADuvudu(performing) aByAsa(habitual, routine) Bakti,(devotion)
mana(mind) kUrtu(with love) mADuvudu(performing) mukti(freedom) Bakti(devotion),
kEDillade(without fail) mADuvudu(performing) nitya(scheduled) Bakti(devotion),
iddaMtiddu(being as is, being oneself) nijavappudu(becoming reality) nija(true) Bakti(devotion),
I(this) nijadalli(in the truth) Baritaru(filled) saurAShTra sOmeSvarA(Lord saurAShTra sOmeSvarA) nimma(Your) SaraNaru (devotees)


Devotion to God is not like a strategy, it is like the dream of the dumb, you see
Devotion attached with notifications and inquiries is strategic devotion
Devotion performed with bodily diligence is habitual or routine devotion
Devotion performed with love is freedom (eternity) seeking devotion
Devotion performed without fail (routinely) is scheduled devotion
Being as is (oneself), with the self becoming the truth (reality) is the true devotion
Lord saurAShTra sOmeSvarA, your devotees are filled with this truth!


COMMENTARY

Vachana 53 addressed the qualifications for one to be initiated into devotional path and Vachana 54 stressed the characteristics of the true devotion. In this Vachana, Sharana Aadayya looks at various types of devotions we cultivate, and addresses true devotion.

We tend to deploy various strategies in worshipping God. We promise to offer 1001 flowers, gold necklace to the Lord, offer chanting His names all day long, offer various types of sweets and savories, etc. In return, we ask Him to give us wealth, health, success, etc. It is always a give and take. We advertise our worshipping mode to show to others; we inquire to get other modes of worship from others. Aadayya says that these strategies do not result in true devotion to the Lord. The devotion is like the dream of a dumb. The dumb experiences his dreams himself, but will not be able to convey them to others. He is silent and completely ‘within himself’. Similarly, the true devotion is experienced by oneself. It cannot be explained to others or explained by others.

We torture our bodies in the name of devotion through fasting, circling the shrine innumerable times, dancing while chanting God’s names, worshipping without fail on a regular (routine) basis, and even with full of love towards God. Such bodily diligence is simply a routine or habitual devotion.

In all these forms of devotion we exhibit our wants and don’t wants and selfish motives. We build the mountains of wants and don’t wants with a deep valley between them. The true devotion fills the valley and erases the distinction between the wants and don’t wants and unifies our lives. It is the state ‘being as is’ or ‘finding the self’ and ‘the self becoming the truth or reality’. Aadayya says that the true devotees of the God are filled with such self-realization and they are one with the Lord. They have achieved the ‘linga-anga saamarasya’ (one with the Lord) or ‘bayalu’ (the completeness).


Let us strive to downplay the strategic, routine, ritualistic worship and achieve ‘being as is’.

KANNADA COMMENTARY

ಇದು ಆದಯ್ಯನವರ ವಚನ. ಇಲ್ಲಿ ಅವರು, ಸಾಮಾನ್ಯರು ಯಾವುದನ್ನು ಭಕ್ತಿ ಎಂದು ಪರಿಗಣಿಸುತ್ತಾರೆಯೋ ಅದನ್ನು ವಿಶ್ಲೇಷಿಸುತ್ತ ನಿಜವಾದ ಭಕ್ತಿ ಯಾವುದು ಎಂಬುದನ್ನು ಹೇಳುತ್ತಾರೆ. ಯುಕ್ತಿಯಿಂದ ಮಾಡುವುದು ಶಿವಭಕ್ತಿಯಲ್ಲ. ಶಿವ ಭಕ್ತಿಯು, ಮೂಗರು ಕಂಡ ಕನಸಿನಂತೆ ಇರುತ್ತದೆ. ಅದರ ಬಗ್ಗೆ ಹೇಳಿಕೊಳ್ಳುವುದು ಸಾಧ್ಯವಿಲ್ಲ. ಭಕ್ತಿಯ ಬಗ್ಗೆ ಹೇಳಿಕೊಂಡು ಮಾಡುವುದು ಯುಕ್ತಿಯ ಭಕ್ತಿಯಾಗುತ್ತದೆ, ಸಾಧನೆಯ ಮೂಲಕ ಮಾಡುವುದು ಅಭ್ಯಾಸದ ಭಕ್ತಿಯಾಗುತ್ತದೆ, ದೇವರ ಬಗ್ಗೆ ಪ್ರೀತಿಯಿಂದ ಮಾಡುವುದು ಮುಕ್ತಿ ಪಡೆಯಬೇಕೆಂಬ ಆಸೆಯಿಂದ ಮಾಡುವಂತಹ ಭಕ್ತಿಯಾಗುತ್ತದೆ. ಯಾವ ಕೆಡುಕೂ ಆಗಬಾರದು ಎಂದು ಮಾಡುವುದು ನಿತ್ಯ ಭಕ್ತಿ. ಆದರೆ ತಾನು ಇದ್ದಂತೆ ಇದ್ದು ತಾನು ತಾನೇ ತಾನಾಗಿರುವುದು ನಿಜಭಕ್ತಿ. ಅಂತಹ ನಿಜ ಭಕ್ತಿಯಿಂದ ತುಂಬಿ ತುಳುಕುತ್ತಿದ್ದಾರೆ ಶರಣರು, ಎನ್ನುತ್ತಾರೆ ಆದಯ್ಯನವರು.

ಸಾಮಾನ್ಯವಾಗಿ ಜನರು, ತಮ್ಮ ಮನಸ್ಸಿನಲ್ಲಿ ಯಾವುದೋ ಹರಕೆಯನ್ನು ಹೊತ್ತು ಅದನ್ನು ತೀರಿಸಲು ನಾನಾ ಪೂಜೆಗಳನ್ನು ಸಲ್ಲಿಸುತ್ತಾರೆ, ಅಥವಾ, ನಾನು ಇಂತಿಂತಹ ಪೂಜೆಗೈಯುತ್ತೇನೆ ನೀನು ನನಗೆ ಇಂತಿಂತಹದನ್ನು ನೀಡು ಎನ್ನುತ್ತಾರೆ. ಇಂತಹ ಭಕ್ತಿ ಯುಕ್ತಿ ಭಕ್ತಿಯಾಗುತ್ತದೆ. ಆದರೆ ನಿಜವಾದ ಭಕ್ತಿಯು ಅಂತಹದುಲ್ಲ. ಅದು ಮೂಗರು ಕಂಡ ಕನಸಿನಂತಿರುತ್ತದೆ ಎನ್ನುತ್ತಾರೆ ಆದಯ್ಯನವರು. ಮೂಗರಿಗೆ ಮಾತು ಬರುವುದಿಲ್ಲ. ತಾವು ನೋಡಿದುದನ್ನು, ಅನುಭವಿಸಿದುದನ್ನು ಇತರರಿಗೆ ಹೇಳುವುದು ಅವರಿಗೆ ಕಷ್ಟವಾಗುತ್ತದೆ. ಅವರುಗಳು ಸಂಕೇತದ ಭಾಷೆಯ ಮೂಲಕ ಅಲ್ಪ ಸ್ವಲ್ಪ ಹೇಳಬಹುದು, ಆದರೆ ಪೂರ್ಣವಾಗಿ ಎಲ್ಲವನ್ನು ವ್ಯಕ್ತಗೊಳಿಸಲಾಗುವುದಿಲ್ಲ. ನಿಜ ಜೀವನದ ಘಟನೆಗಳನ್ನು ಹೇಗೋ ಕಷ್ಟಪಟ್ಟು ವಿವರಿಸಬಹುದು. ಏಕೆಂದರೆ ಎಲ್ಲರ ಬದುಕಿನ ಅನುಭವಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಹೇಳುವವರು ಸ್ವಲ್ಪ ವ್ಯಕ್ತಪಡಿಸಿದರೂ ಸಾಕು ಕೇಳುಗರು ತಮ್ಮ ಅನುಭವದ ಅಧಾರದ ಮೇಲೆ ಅದನ್ನು ಅರ್ಥೈಸಿಕೊಳ್ಳಬಹುದು. ಆದರೆ ಮೂಗರು ತಾವು ಕಂಡ ಕನಸನ್ನು ವಿವರಿಸುವುದಂತು ಸಾಧ್ಯವೇ ಇಲ್ಲ ಎನ್ನುತ್ತಾರೆ ಆದಯ್ಯನವರು. ಏಕೆಂದರೆ, ಕನಸು ಸಾಮಾನ್ಯ ಬದುಕಿಗಿಂತ ಭಿನ್ನ ವಾಗಿರುತ್ತದೆ. ಮತ್ತು ಪ್ರತಿಯೊಬ್ಬನ ಕನಸುಗಳು ವಿಭಿನ್ನ ವಾಗಿರುತ್ತವೆ. ಇತರರು ಅವುಗಳನ್ನು ಊಹಿಸುವುದು ಸಾಧ್ಯವಿಲ್ಲ. ಕನಸಿನಲ್ಲಿ ನಡೆಯುವುದೆಲ್ಲವೂ ತರ್ಕಬದ್ಧವಾಗಿರುವುದಿಲ್ಲ. ತರ್ಕಬದ್ಧವಾಗಿಲ್ಲದೇ ಇರುವುದನ್ನು ಮೂಗರು ಸಂಕೇತಗಳಿಂದ ವಿವರಿಸುವುದು ಅಸಾಧ್ಯವಾದದ್ದು. ನಿಜವಾದ ಭಕ್ತಿಯೂ ಕೂಡ ಅದೇ ರೀತಿಯಾಗಿರುತ್ತದೆ ಎನ್ನುತ್ತಾರೆ ಆದಯ್ಯನವರು. ಆ ಅನುಭಾವವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಅಶಕ್ಯವಾದದ್ದು. ಇನ್ನು, ಹೇಳಿ ಕೇಳಿ ಮಾಡುವುದು ಯುಕ್ತಿ ಭಕ್ತಿ ಎನ್ನುತ್ತಾರೆ ಅವರು. ಈ ಮೊದಲೇ ಹೇಳಿದಂತೆ, ನಾನು ಇಂತಿಂತಹ ಪೂಜೆ ಮಾಡುತ್ತೇನೆ ನೀನು ನನಗೆ ಇಂತಿಂತಹ ಫಲಗಳನ್ನು ಕರುಣಿಸು, ಅಥವಾ, ಇಂತಿಂತಹ ದಿನದಂದು ಇಂತಿಂತಹ ದೇವರ ಪೂಜೆ ಮಾಡುವುದು ಶುಭ. ಆದ್ದರಿಂದ ನಾನು ಅದನ್ನು ಮಾಡುತ್ತೇನೆ ಎಂದುಕೊಂಡು ಮಾಡುವುದೆಲ್ಲವೂ ಯುಕ್ತಿ ಭಕ್ತಿಯಾಗುತ್ತದೆ. ಸಾಧಕಾಂಗದಿಂದ ಮಾಡುವುದು ಎಂದರೆ ಪ್ರತಿನಿತ್ಯ ನಾನಿದನ್ನು ಮಾಡುತ್ತೇನೆ ಅಂದುಕೊಂಡು ಸಾಧನೆ ಮಾಡುವುದು ಅಭ್ಯಾಸದ ಭಕ್ತಿ ಎನ್ನುತ್ತಾರೆ. ಹಾಗಾದರೆ ಪ್ರತಿ ನಿತ್ಯ ಭಕ್ತಿ ಮಾಡಬಾರದೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಪ್ರತಿನಿತ್ಯ ಮಾಡಬಾರದು ಎಂದಲ್ಲ. ಆದರೆ ಹಾಗೆ ಮಾಡುವಾಗ ಅದು ಕೇವಲ ಅಭ್ಯಾಸಮಾತ್ರವಾಗಿ ಉಳಿಯಬಾರದು. ಉದಾಹರಣೆಗೆ, ಅಭ್ಯಾಸ ಬಲದಿಂದ ಬಾಯಿಯಿಂದ ಮಂತ್ರಗಳು ಬರುತ್ತಲೇ ಇರುತ್ತವೆ ಆದರೆ ಮನಸ್ಸು ಮಾತ್ರ ಎಲ್ಲೋ ಇರುತ್ತದೆ. ಹೀಗೆ ಅದು ಅಭ್ಯಾಸಮಾತ್ರವಾದಾಗ ತನ್ನ ಹೊಸತನವನ್ನು ಕಳೆದುಕೊಂಡು ಯಾಂತ್ರಿಕವಾಗುತ್ತದೆ. ಮತ್ತು ಯಾಂತ್ರಿಕ ಭಕ್ತಿ ನಿಜವಾದ ಭಕ್ತಿಯಲ್ಲ ಎಂಬುದು ಇಲ್ಲಿಯ ಭಾವ. ದೇವರ ಮೇಲೆ ಪ್ರೀತಿ ಹುಟ್ಟಿ ಭಕ್ತಿ ಮಾಡುವುದು ಮುಕ್ತಿ ಭಕ್ತಿ ಎನ್ನುತ್ತಾರೆ. ಏನು ಹಾಗೆಂದರೆ? ದೇವರ ಮೇಲೆ ಪ್ರೀತಿಯಿಡುವುದು ತಪ್ಪೇ? ಇದರ ಉತ್ತರಕ್ಕಾಗಿ ನಾವು ಮೊದಲು ಪ್ರೀತಿ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಂದು ನಾವು ಪ್ರೀತಿಯನ್ನು ಅತ್ಯಂತ ಸೀಮಿತವಾದ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇವೆ. ಯಾರು ನಮ್ಮೊಂದಿಗೆ ನಮ್ಮ ಇಷ್ಟಬಂದಂತೆ ನಡೆದುಕೊಳ್ಳುತ್ತಾರೆಯೋ, ನಮ್ಮೊಂದಿಗೆ ನಮಗಿಷ್ಟವಾಗುವಂತೆ ಮಾತನಾಡುತ್ತರೆಯೋ ಅವರನ್ನು ನಾವು ಪ್ರೀತಿಸುತ್ತೇವೆ. ಇಲ್ಲವೆ ಯಾರನ್ನು ಕಂಡರೆ ನಮಗೆ ಭಯವಾಗುತ್ತದೆಯೋ ಅವರನ್ನು ನಾವು ಒಲಿಸಲು ಪ್ರಯತ್ನಿಸುತ್ತ ಆ ಭಾವವನ್ನು ಪ್ರೀತಿ ಎನ್ನುತ್ತೇವೆ. ಯಾರ ಬಗ್ಗೆ ನಮಗೆ ಮೋಹವಿರತ್ತದೆಯೋ ಅವರ ಬಗೆಗಿನ ಆ ಮೋಹವನ್ನೇ ಪ್ರೀತಿ ಎನ್ನುತ್ತೇವೆ. ಹೀಗಾಗಿ ಮೋಹ, ಭಯ, ನಮ್ಮ ಹಾರೈಕೆ ಇತ್ಯಾದಿಗಳನ್ನು ಪ್ರೀತಿಯೆನ್ನುತ್ತೇವೆ. ಆದರೆ ಇವು ಯಾವುವೂ ಪ್ರೀತಿಯಲ್ಲ. ನಿಜವಾದ ಪ್ರೀತಿ ಈ ಎಲ್ಲವನ್ನೂ ಮೀರಿರುವಂತಹದು. ಇಲ್ಲಿ ವ್ಯಕ್ತಿಗೆ ಸಂಸಾರದ ಭಯವಿದೆ. ಆತನು ಅದರಿಂದ ಮುಕ್ತಿ ಪಡೆಯಲು ಇಷ್ಟಪಡುತ್ತಾನೆ. ಅದಕ್ಕಾಗಿ ಆತನು ದೇವರ ಬಗ್ಗೆ “ಪ್ರೀತಿ”ಹೊಂದಿ ಭಕ್ತಿ ಮಾಡುತ್ತಾನೆ. ಆದ್ದರಿಂದ ಅದು ಮುಕ್ತಿಗಾಗಿ ಮಾಡುವ ಭಕ್ತಿಯಾಗುತ್ತದೆ.

ತನಗೆ ಕೇಡಾಗದಿರಲಿ ಎಂಬ ಭಾವದಿಂದ ಮಾಡುವುದು ಪ್ರತಿದಿನ ಮಾಡುವ ನೇಮದ ಭಕ್ತಿಯಾಗುತ್ತದೆ. ಅದನ್ನು ತಪ್ಪಿಸಿದರೆ ಕೇಡಾಗುತ್ತದೆ ಎನ್ನುವ ಭಾವ, ಭಯ, ಅದನ್ನು ತಪ್ಪಿಸದೆ ಪ್ರತಿನಿತ್ಯ ನಿಯಮದಿಂದ ಮಾಡಿಸುತ್ತದೆ. ಅದು ನಿಜವಾದ ಭಕ್ತಿಯಲ್ಲ.

ಈ ಎಲ್ಲ ರೀತಿಯ ಭಕ್ತಿಯಲ್ಲಿ, “ಹೀಗಿರಬೇಕು, ಹೀಗಿರಬಾರದು, ಇದು ಬೇಕು ಇದು ಬೇಡ, ಇದು ಕಳೆದು ಹೋಗಬಾರದು, ಇದು ಕೆಡಬಾರದು” ಎಂಬಂತಹ ಭಾವ ಅಥವಾ ಒಂದಿಲ್ಲ ಒಂದು ಸ್ವಾರ್ಥವಿರುತ್ತದೆ. ಈ ರೀತಿಯ ಬೇಕು ಬೇಡಗಳ ವಲಯದಲ್ಲಿ ಇರುವಂತಹುವುದು ನಿಜಭಕ್ತಿ ಹೇಗಾಗುತ್ತದೆ? ನಿಜವಾದ ಭಕ್ತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಇದ್ದಂತಿದ್ದು ನಿಜವಪ್ಪುದು ನಿಜ ಭಕ್ತಿ, ಈ ನಿಜದಲ್ಲಿ ಭರಿತರು ಸೌರಾಷ್ಟ್ರ ಸೋಮೆಶ್ವರಾ ನಿಮ್ಮ ಶರಣರು. ಈ ಬೇಕು ಬೇಡಗಳ ಸುಳಿಗೆ ಸಿಲುಕದೆ, ಇದ್ದುದನ್ನು ಇದ್ದಂತೆ ಸ್ವೀಕರಿಸುವುದು, ತನ್ನ ಸ್ವರೂಪವನ್ನು ಕಂಡುಕೊಳ್ಳುವುದು ನಿಜವಾದ ಭಕ್ತಿ. “ಇರುವುದ”ನ್ನು ತಮ್ಮ ಇಚ್ಛೆಗನುಸಾರವಾಗಿ ಪರಿವರ್ತಿಸುವುದು ಎಂದರೆ, ಭಯ, ಚಿಂತೆ,ಪಲಾಯನ, ಸ್ವಾರ್ಥ ಇತ್ಯಾದಿಗಳಿಗೆ ಒಳಪಟ್ಟಂತೆ. ಇಡಿಯಾದುದನ್ನು ತನ್ನ ದೃಷ್ಟಿಗೆ ಸರಿಹೊಂದುವಂತೆ ಮಾರ್ಪಡಿಸುವುದು, ಎಂದರೆ ಅದನ್ನು ವಿಭಜಿಸುವುದಾಗುತ್ತದೆ. ಭಕ್ತಿ ವಿಭಜನೆ ಅಲ್ಲ. ಅದು ಎಲ್ಲವನ್ನೂ ಒಂದುಗೂಡಿಸುವುದಾಗಿದೆ. ಎಲ್ಲ ಬೇಕು ಬೇಡಗಳ ನಡುವಿನ ಅಂತರವನ್ನು ಮುಚ್ಚಿಹಾಕುವುದು, ಬಯಲು ಮಾಡುವುದು ಭಕ್ತಿ. ಬದುಕನ್ನು ಅಂತಹ ನಿರ್ಮಲವಾದ ಭಕ್ತಿಯಿಂದ ತುಂಬಿದ್ದಾರೆ ಶರಣರು ಎನ್ನುತ್ತಾರೆ ಆದಯ್ಯನವರು.




No comments:

Post a Comment