ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
TRANSLITERATION
kAlali kaTTida guMDu, koraLali kaTTida beMDu!
tElalIyadu guMDu, muLugalIyadu beMDu!
iMtappa saMsAraSaradhiya dAMTisi
kAlAMtakanE kAyO, kUDalasaMgayya!
CLICK HERE TO HEAR IT:
TRANSLATION
kAlali (to the leg) kaTTida (tied) guMDu (round rock), koraLali (to the neck) kaTTida(tied) beMDu!(pith - the central spongy tissue of the stem of a plant; material that floats)
tElalIyadu (doesn’t allow to float) guMDu(round rock), muLugalIyadu(doesn’t allow to drown) beMDu!(pith)
tElalIyadu (doesn’t allow to float) guMDu(round rock), muLugalIyadu(doesn’t allow to drown) beMDu!(pith)
iMtappa (this kind of, such) saMsAraSaradhiya(ocean of life) dAMTisi (help me to cross)
kAlA(time, death) aMtakanE (one who ends) kAyO(protect me), kUDalasaMgayya!(lord of the meeting rivers)
With the rock tied to the leg and the pith tied to the neck,
the rock doesn’t allow floating and the pith doesn’t allow drowning !
help me cross this ocean of life and protect me, Oh! ender of time (death), Lord kUDalasaMgayya!
COMMENTARY
Basavanna paints a beautiful picture of the duality of life in this Vachana. We have been set free to traverse the ocean of life with a rock tied to the leg and a pith tied to the neck. The rock does not allow us to float and the pith does not allow us to drown. Basavanna prays the Lord to give us the strength to withstand the floating and drowning and to successfully cross the ocean of life. Simply put, Basavanna is praying the Lord to give him strength to be equanimous under the ups and downs of life.
It is interesting to probe the meanings of the rock and the pith a bit further. We strive to be famous and wealthy. We desire to be praised by everyone. We are angry that things are not moving according to our wishes. Our ego says that we can do anything and whatever we say is right. We develop a great attachment to all these worldly affairs and start believing this is the real life. We believe that all this is real and permanent and are thus drowned in this ocean of life. If we can closely examine the desires, wealth, fame, ego, etc. and realize that everything we have is temporary and could vanish before we know, we gain the knowledge and confidence to stay undisturbed with the ups and downs. That is the equanimity, we should strive for.
Let us not sink in the worldly affairs!
KANNADA COMMENTARY
ಇದು ಬಹು ಸುಂದರವಾದ ವಚನ. ಸಂಸಾರದಲ್ಲಿರುವ ವ್ಯಕ್ತಿಯ ಕರುಣಾಜನಕವಾದ ಸ್ಥಿತಿಯನ್ನು ಅತ್ಯಂತ ಪ್ರಭಾವಪೂರ್ಣವಾಗಿ ವರ್ಣಿಸುತ್ತದೆ. ಒಬ್ಬ ವ್ಯಕ್ತಿಯ ಕಾಲಲ್ಲಿ ಗುಂಡು ಹಾಗೂ ಕೊರಳಲ್ಲಿ ಬೆಂಡು ಕಟ್ಟಿದೆ. ಗುಂಡಿನ ಭಾರ ಆತನನ್ನು ಶರಧಿಯ ತಳಕ್ಕೆ ಕೊಂಡೊಯ್ಯುತ್ತದೆ, ಆದರೆ ಬೆಂಡು ಮೇಲಕ್ಕೆ ಕೊಂಡೊಯ್ಯುತ್ತದೆ. ಗುಂಡು ತೇಲಲು ಬಿಡುವುದಿಲ್ಲ ಮತ್ತು ಬೆಂಡು ಮುಳುಗಲು ಬಿಡುವುದಿಲ್ಲ. ಸಂಸಾರ ಶರಧಿಯಲ್ಲಿ ಈ ರೀತಿಯಾಗಿ ಸಿಕ್ಕಿಕೊಂಡಿರುವ ತನ್ನನ್ನು ಕಾಪಾಡು ಎಂದು ಬಸವಣ್ಣನವರು ಕೂಡಲಸಂಗಮನನ್ನು ಕೇಳಿಕೊಳ್ಳುತ್ತಾರೆ.
ಇಲ್ಲಿ ಗುಂಡು ಮತ್ತು ಬೆಂಡು ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ನಾನು ಕೀರ್ತಿವಂತನಾಗಬೇಕು, ಧನಿಕನಾಗಬೇಕು, ಎಲ್ಲರೂ ತನ್ನನ್ನು ಹೊಗಳುವಂತಾಗಬೇಕು ಎನ್ನುವಂತಹ ಆಸೆ ಆಕಾಂಕ್ಷೆಗಳು, ನನ್ನಿಷ್ಟದಂತೆ ನಡೆಯಲಿಲ್ಲವೆಂಬ ಕೋಪ ತಾಪಗಳು, ಎಲ್ಲವೂ ನನ್ನಿಷ್ಟದಂತೆ ನಡೆಯುತ್ತದೆ, ನಾನು ಏನೂ ಬೇಕಾದರೂ ಮಾಡಬಲ್ಲೆ, ನನ್ನ ಮಾತೇ ಸರಿ ಎಂಬಂತಹ ಹಮ್ಮು ಬಿಮ್ಮುಗಳು, ಧನ ಸಂಪತ್ತು, ಮಡದಿ ಮಕ್ಕಳು, ನೆಂಟರು ಇಷ್ಟರು, ಮನೆ ಮಾರುಗಳ ಸುಖದಲ್ಲಿ ಮುಳುಗಿ ಅದೇ ನಿಜವಾದದ್ದು ಎಂದು ನಂಬುವಂತೆ ಮಾಡುವ ಮಾಯಾಮೋಹಗಳು, ಅಥವಾ ಇವುಗಳಿಂದ ಉಂಟಾಗುವ ದುಃಖಗಳಿಂದ ತೊಳಲುವಂತೆ ಮಾಡುವ ಜಂಜಾಟಗಳು, ಗೋಳಾಟಗಳು___ಇವೆಲ್ಲವು ವ್ಯಕ್ತಿಯನ್ನು ಸಂಸಾರದಲ್ಲಿ ಮುಳುಗುವಂತೆ ಮಾಡುವುದರಿಂದ ಅವು ಭಾರವಾದ ಗುಂಡು.
ಕೋಪ ತಾಪ, ಹಮ್ಮು ಬಿಮ್ಮು, ಧನ ಸಂಪತ್ತು, ಮಡದಿ ಮಕ್ಕಳು, ನೆಂಟರು ಇಷ್ಟರು, ಮನೆ ಮಾರುಗಳ ಮಾಯಾ ಮೋಹ, ಬದುಕಿನ ಜಂಜಾಟಗಳು, ಗೋಳಾಟಗಳು ಯಾವುವೂ ಶಾಶ್ವತವಲ್ಲ, ಅವುಗಳು ಆಗಾಗ ಬಂದು ಹೋಗುವಂತಹವು, ಅವುಗಳಿಗೆ ಯಾವುದೇ ಗಟ್ಟಿಯಾದ ನೆಲೆ ಇಲ್ಲ, ಅವುಗಳನ್ನು ನಿಜವೆಂದು ನಂಬುವುದು ಮೂರ್ಖತನ, ಅವುಗಳನ್ನು ಮೀರಿದ ಸತ್ಯ ಏನೋ ಇರಲೇಬೇಕು, ಅದು ಯಾವುದು ಎನ್ನುವ ತವಕ ಮತ್ತು ಅರಿವು ಇವುಗಳನ್ನು ಮೀರಿ ನಿಲ್ಲುವಂತೆ ಮಾಡುವುದೇ ಬೆಂಡು. ಆದರೆ ಈ ತಿಳುವಳಿಕೆ ಇನ್ನೂ ಪೂರ್ತಿಯಾಗಿ ನೆಲೆನಿಂತಿಲ್ಲವಾದ್ದರಿಂದ ಆಗಾಗ ಮಾತ್ರ ಹೊಳೆದು ಹೋಗುತ್ತದೆ. ಅದು ಆಗಾಗ ಮಾತ್ರ ಬಂದು ತಾತ್ಕಾಲಿಕವಾಗಿ ತೇಲುವಂತೆ ಮಾಡುತ್ತದೆ. ಅದು ಬೆಂಡು. ಒಮ್ಮೆ ಸಂಸಾರದಲ್ಲಿ ಮುಳುಗುವ ಇನ್ನೊಮ್ಮೆ ಅದರಿಂದ ಮುಕ್ತವಾಗಿ ತೇಲುವ ಸ್ಥಿತಿಯು ಅತ್ಯಂತ ನೋವಿನಿಂದ ಕೂಡಿರುತ್ತದೆ. ಏಕೆಂದರೆ ಸಂಸಾರದಲ್ಲಿ ಮುಳುಗಿದಾಗ ಮನದ ಯಾವುದೋ ಮೂಲೆಯಲ್ಲಿ ಸೂಕ್ಷ್ಮವಾಗಿ “ಇದು ಶಾಶ್ವತವಾದ ಸುಖವಲ್ಲ” ಎಂಬ ಭಾವನೆ ಇದ್ದು ಸಂಸಾರದ ಸುಖವನ್ನು ಪೂರ್ತಿಯಾಗಿ ಅನುಭವಿಸಲು ಬಿಡುವುದಿಲ್ಲ. ಅದೇ ರೀತಿಯಾಗಿ, ಸಂಸಾರದಿಂದ ದೂರವಾದಾಗ ಮನದ ಮೂಲೆಯಲ್ಲಿ ಅದರ ವ್ಯಾಮೋಹ ಮನೆಮಾಡಿರುತ್ತದೆ. ಅದು ಪೂರ್ತಿಯಾಗಿ ತೇಲಲು ಬಿಡುವುದಿಲ್ಲ. ಈ ರೀತಿಯಾದ ಇಬ್ಬಂದಿಯಲ್ಲಿ ಸಿಕ್ಕಿಕೊಂಡಿರುವುದರಿಂದ ವ್ಯಕ್ತಿಯ ಜೀವ, ದೇಹವನ್ನು, ರುಂಡ ಮುಂಡಗಳನ್ನು, ಎರಡು ವಿರುದ್ಧ ದಿಕ್ಕಿಗೆ ಎಳೆದಾಗ ಅನುಭವಿಸುವ ನೋವನ್ನು ಅನುಭವಿಸುತ್ತದೆ. ಅದಕ್ಕಾಗಿಯೇ ಬಸವಣ್ಣನವರು “ಈ ರೀತಿಯ ಸಂಸಾರ ಶರಧಿಯನ್ನು ದಾಟಿಸಿ ಕಾಯೋ ಕಾಲಾಂತಕನೆ” ಎಂದು ಕೂಡಲಸಂಗಮನಲ್ಲಿ ಕೇಳಿಕೊಳ್ಳುತ್ತಾರೆ.
ಇಲ್ಲಿ ಅವರು ಬಳಸಿದ “ಕಾಲಾಂತಕ” ಎಂಬ ಪದ ಬಹಳ ವಿಶಿಷ್ಟವಾದದ್ದು. ಇದರಲ್ಲಿ ಎಲ್ಲರಿಗೂ ಗೊತ್ತಿರುವಂತೆ ಎರಡು ಪದಗಳಿವೆ ಕಾಲ + ಅಂತಕ, ಎಂದರೆ ಕಾಲವನ್ನು ಅಂತ್ಯಗೊಳಿಸುವವನು ಅಥವಾ ಅಂತಗೊಳಿಸುವಂತಹದು ಎಂದು. ಕಾಲ ಎಂಬ ಪದಕ್ಕೆ ಸಮಯ ಮತ್ತು ಮೃತ್ಯು ಎಂಬ ಅರ್ಥಗಳೂ ಇವೆ. ಇಲ್ಲಿ ನನಗೆ ಸಮಯ ಮತ್ತು ಮೃತ್ಯು ಒಂದೇ ಎಂದು ಹೆಳುವ ಜಿಡ್ಡು ಕೃಷ್ಣಮೂರ್ತಿಯವರ ಮಾತುಗಳು ನೆನಪಾಗುತ್ತವೆ. ಅವರುಹೇಳುತ್ತಾರೆ ಸಮಯ ಮತ್ತು ಮೃತ್ಯು ಮಾನವನ ವಿಚಾರದಿಂದ ಹುಟ್ಟ್ಟಿದೆ ಎಂದು. ಏಕೆಂದರೆ ವಿಚಾರ ಹೇಳುತ್ತದೆ- ನಾನು ಇಂದು ಹೀಗೆ ಇದ್ದೇನೆ ಆದರೆ ಬೇರೆ ಏನೋ ಆಗಬೇಕು ಎಂದು. ಈ ವಿಚಾರ ಬದುಕಿನಲ್ಲಿ ಒಡಕನ್ನುಂಟುಮಾಡುತ್ತದೆ. ಈ ವಚನದಲ್ಲಿ ಬಸವಣ್ಣನವರು ಇದನ್ನೇ ಹೇಳುತ್ತಿರುವರು. ಬಾಳನ್ನು ತೇಲುವುದು ಮತ್ತು ಮುಳುಗುವುದರಲ್ಲಿ ವಿಭಜನೆಗೊಂಡಿದೆ. ಇದು ಸಮಯದ ಪ್ರಭಾವ. ವರ್ತಮಾನ ಮತ್ತು ಭವಿಷ್ಯದ ಒಡಕು. ನಾನು ಮುಳುಗುತ್ತಿದ್ದೇನೆ,ತೇಲಬೇಕು ಎನ್ನುವ ಹಾರೈಕೆ. ಹಾರೈಕೆ ವಿಚಾರದ ಪರಿಣಾಮ. ವಿಚಾರವು ಸದಾ ಒಡಕನ್ನುಂಟುಮಾಡುವುದು. ವಿಚಾರವೆಂದರೆ ಸಮಯ, ಕಾಲ. ಇದರ ಅರಿವುಳ್ಳ ಬಸವಣ್ಣನವರು ಕಾಲಾಂತಕನನ್ನು ನೆನೆಯುತ್ತಾರೆ. ಎಂದರೆ ಬಯಲು. ಮುಳುಗುವುದು ಮತ್ತು ತೇಲುವುದರ ನಡುವಿನ ಸಂದನ್ನು ಮುಚ್ಚುವಿಕೆ, ಎಲ್ಲವನ್ನೂ ಒಂದುಗೂಡಿಸಿ ಬಯಲಾಗುವಿಕೆಯೆ ಕಾಲದ ಅಂತ್ಯ.
The first thing that came to my mind when I read about the stone and the pith is that the stone is the attachment and the pith is the liberation. As I read on that's what it boiled down to. All is well said, now just have to bring it into life :-)
ReplyDeleteMeera Shah
Excerpt from Ramakrishna Mission literature: The heavier scale of a balance goes down while the lighter rises up. Similarly, he who is weighed down by the many cares and anxieties of the world sinks down into it, while he who has fewer rises up towards the feet of the Lord.
Meera