ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಂಬುದೆ?
ಕಡೆಗೀಲು ಬಂಡಿಗಾಧಾರ-
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡ ಶರಣರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.
TRANSLITERATION
kaḍegīlillada baṁḍi hoḍegeḍuvudu māṁbude?
kaḍegīlu baṁḍigādhāra-
kaḍudarpavērida oḍaleṁba baṁḍige
mrḍa śaraṇara nuḍigaḍaṇavē kaḍegīlu kāṇā rāmanātha.
CLICK HERE TO HEAR IT:
TRANSLATION
kaḍegīlillada (without the cotter – a wedge which is at the end of the axel to keep the wheel in its place ) baṁḍi (the cart) hoḍegeḍuvudu (over turn) māṁbude (will it not)?
kaḍegīlu(cotter) baṁḍigādhāra(is the support for the cart)-
kaḍudarpavērida (swollen with pride) oḍaleṁba (known as body) baṁḍige(the cart)
mrḍa śaraṇara(Devotees of Shiva) nuḍigaḍaṇavē (sayings) kaḍegīlu(cotter) kāṇā(you see) rāmanātha (Lord rāmanātha).
Wouldn’t a cart without the cotter (holding its wheels in place) turn over?
Cotter is the support for the cart!
For this cart known as body (life) swollen with pride, Shiva’s devotees’ saying is the cotter!
You see! Lord Ramanatha.COMMENTARY
This is a vachana from Sharana Daasimayya, probably the earliest (Tenth century) of the Vachana writers. A weaver by profession (Jedara Daasimayya - weaver Daasimayya) through his intense devotion and practice of kaayaka came to be known as Devara Daasimayya (God’s Daasimayya). Legend has it that he comes from a town with a temple dedicated to Shiva worshipped by Rama (Raamanaatha). Hence his signature ‘Ramanatha’ in all the vachanas he wrote.
This probably should have been the first vachana in our blog highlighting the importance and purpose of vachanas. Daasimayya stresses the role vachanas are intended to play in one’s life. He equates vachanas to the cotter that holds the wheels of a cart in place. The cart would overturn if the cotter is broken or lost. A body (or life) swollen with pride and ego is like a cart which has its cotter missing. Daasimayya says that vachanas serve as the cotter to bring the life back in balance. Sharanas depicted their experiences and observations on the contemporary society and its behavior in their vachanas. The purpose of vachanas was to bring the ultimate knowledge needed to make one successful in the spiritual path of realizing the Self, in a language and the mode accessible to commoners.
It is said that we become successful in our career and wealth building, our ego swells unless tempered appropriately. So is our pride as we find ourselves successful in building our families. Vachanas can be instrumental in tempering of ego-pride clash in one’s life.
Let us make vachanas cotter our cart of life!
KANNADA COMMENTARY
ಇದು ದಾಸಿಮಯ್ಯನವರ ವಚನ. ಇಲ್ಲಿ ಅವರು ಶರಣರ ನುಡಿಯ ಮಹತ್ವವನ್ನು ಉದಾಹರಣೆ ಸಹಿತ ಹೇಳುತ್ತಿದ್ದಾರೆ. ಬಂಡಿಗೆ ಕಡೆಗೀಲು (ಬಂಡಿಯ ಚಕ್ರಗಳನ್ನು ಸಿಕ್ಕಿಸಿರುವ ಮರದ ಭಾಗದ ಕೊನೆಗೆ ಸಿಕ್ಕಿಸುವ ಮೊಳೆ.) ಆಧಾರ. ಕಡೆಗೀಲಿಲ್ಲದಿದ್ದರೆ ಬಂಡಿಯ ಚಕ್ರಗಳು ಉರುಳಿ ಹೋಗಿ ಬಂಡಿ ಮಗುಚಿ ಬೀಳುತ್ತದೆ. ಅದೇ ರೀತಿ ಕಡು ದರ್ಪವೇರಿದ ಒಡಲು, ಎಂದರೆ ಗರ್ವದಿಂದ ಬೀಗುವ ಈ ಜೀವ, ದೇಹವೆಂಬ ಬಂಡಿಗೆ ಶಿವಶರಣರ ನುಡಿಗಳೇ ಕಡೆಗೀಲು ಎನ್ನುತ್ತಾರೆ.
ಚಕ್ರಗಳಿಂದಲೇ ಬಂಡಿ ಓಡುತ್ತದೆ. ಈ ಚಕ್ರಗಳು ಕಡೆಗೀಲಿನಿಂದ ತಮ್ಮ ನಿರ್ದಿಷ್ಟ ಸ್ಥಾನದಲ್ಲಿ ನಿಂದು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಕಡೆಗೀಲು ಇಲ್ಲದೆ ಹೋದರೆ ಚಕ್ರಗಳು ಕಳಚಿಕೊಂಡು ಬಂಡಿಯು ಬಿದ್ದು ಹೋಗುತ್ತದೆ. ಅದೇ ರೀತಿ ನಮ್ಮ ದೇಹ, ಜೀವನವೆಂಬ ಬಂಡಿಗೆ ಶರಣರ ನುಡಿಗಳು ಕಡೆಗೀಲಿನಂತೆ ಇವೆ. ಅವರ ಅನುಭವದ, ಅನುಭಾವದ ನುಡಿಗಳು ಕಡೆಗೀಲಿನಂತಿದ್ದು, ಬಂಡಿ ಸರಾಗವಾಗಿ ಹೋಗುವಂತೆ ಮಾಡುತ್ತವೆ, ತಮ್ಮ ಗುರಿಯನ್ನು ಮುಟ್ಟುವಂತೆ ಮಾಡುತ್ತವೆ. ಇಲ್ಲದಿದ್ದರೆ ಆಸೆ ಆಕಾಂಕ್ಷೆಗಳ ಮದವೇರಿದ ನಮ್ಮ ಬದುಕು, ಅಡ್ಡಾದಿಡ್ಡಿಯಾಗಿ ಓಡಿ ಬಿದ್ದು ನಾಶಹೊಂದುತ್ತದೆ. ನಮ್ಮನ್ನು ಸರಿದಾರಿಗೆ ಹಚ್ಚಲು ಶರಣರ ನುಡಿಗಳ ಭಂಡಾರವೇ ಇದೆ. ಹೆಜ್ಜೆಹೆಜ್ಜೆಗೂ ಎಚ್ಚರಿಸುವಂತಹ, ಬದುಕಿನ ಪ್ರತಿಯೊಂದು ಆಯಾಮದಲ್ಲಿಯೂ ಶಿಸ್ತನ್ನು ಅಳವಡಿಸಲು ಬರುವಂತಹ ವಚನಗಳನ್ನು ಹೇಳಿದ್ದಾರೆ ಶರಣರು. ಭೌತಿಕತೆಯ ದರ್ಪವೇರಿ ದೇವರನ್ನು, ಅನುಭಾವದ ಸೌಂದರ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ನಮಗೆ ತಮ್ಮ ವಚನಗಳ ಮೂಲಕ ಶರಣರು ನಮ್ಮನ್ನು ಎಚ್ಚರಿಸಿದ್ದಾರೆ.
“ಕಡುದರ್ಪವೇರಿದ ಒಡಲೆಂಬ ಬಂಡಿ” ಹೇಗಿರುತ್ತದೆ ಎಂಬುದನ್ನು ನೋಡೋಣ. ಪ್ರತಿಯೊಬ್ಬ ಸಾಮಾನ್ಯನ ಬದುಕಿನಲ್ಲಿ ಒಂದು ವಿಚಿತ್ರವಾದ ಘಟ್ಟವಿರುತ್ತದೆ. ಅದು: ತನಗೆ ಎಲ್ಲ ತಿಳಿದಿದೆ, ತಾನು ತಿಳಿದುದೇ ಸರಿ, ಬೇರೆಯವರೆಲ್ಲ ಮೂರ್ಖರು, ಅವರು ಮಾಡುತ್ತಿರುವುದೆಲ್ಲ ತಪ್ಪು, ತಾನು ಮಾಡುತ್ತಿರುವುದು ಮಾತ್ರ ಉತ್ತಮವಾದದ್ದು, ಎಲ್ಲರೂ ತನ್ನನ್ನೇ ಅನುಸರಿಸಬೇಕು, ತನ್ನ ಆಸೆ ಆಕಾಂಕ್ಷೆಗಳು, ಬಯಕೆಗಳು, ಕೋಪ, ಅಹಂಕಾರಗಳು ನ್ಯಾಯಸಂಗತವಾದವುಗಳು. ತನ್ನ ಆಚರಣೆಯೇ ಶ್ರೇಷ್ಠ, ತನ್ನ ಮಾತುಗಳೇ ಯೋಗ್ಯವಾದವುಗಳು, ಇತರರ ಮಾತುಗಳು ನಿರರ್ಥಕವಾದವುಗಳು, ತಾನು ಯಾರಿಗೂ, ಯಾವುದಕ್ಕೂ ತಲೆಬಗ್ಗಿಸಲೇಬೇಕಾಗಿಲ್ಲ, ಎಂದೆಲ್ಲ ಯೋಚಿಸಿ ಒಣ ಹಮ್ಮಿನಿಂದ ತಲೆಯೆತ್ತಿ ನಡೆಯುವ ಪ್ರ ವೃತ್ತಿ. ಇಂತಹ ಘಟ್ಟದಲ್ಲಿರುವ ವ್ಯಕ್ತಿ ಯಾರ ಮಾತೂ ಕೇಳ. ಸಾಮಾನ್ಯವಾಗಿ ಈತನು ಕೊನೆಯವರೆಗೂ ಹಾಗೇ ಇದ್ದುಬಿಡುತ್ತಾನೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ಬದುಕಿನ ಸೋಲುಗಳು ಅವನನ್ನು ಘಾಸಿಮಾಡಿದರೂ ಅವನ ಕಡುದರ್ಪ ಅವನು ಅದನ್ನು ಗುರುತಿಸದೆ ತನ್ನದೇ ರೀತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಅವನ ನಾಶ ಕಟ್ಟಿಟ್ಟದ್ದು. ಅವನ ಬದುಕು ಕಡೆಗೀಲಲಿಲ್ಲದ ಬಂಡಿಯಂತಾಗುತ್ತದೆ.
ಆದರೆ ಕೆಲವರು ತಮ್ಮ ಈ ದರ್ಪವನ್ನು ಗುರುತಿಸುತ್ತಾರೆ. ತಾವು ತುಳಿಯುತ್ತಿರುವ ಮಾರ್ಗ ಸರಿಯಿರಲಿಕ್ಕಿಲ್ಲವೆಂಬ ಭಾವ ಎಲ್ಲೋ ಮನದ ಮೂಲೆಯಲ್ಲಿ ಮನೆ ಮಾಡಿರುತ್ತದೆ. ಅವರಿಗೆ ಶರಣರ ನುಡಿಗಳು ಬೆಳಕಿನಂತೆ ತೋರುತ್ತವೆ. ಆ ನುಡಿಗಳು ಕಿವಿಗೆ ಬೀಳದೆ ಹೋಗಿದ್ದರೆ ಅವರ ಬದುಕು ಸಹ ನಿರರ್ಥಕವಾಗುತ್ತಿತ್ತು. ಆದರೆ ಆ ಸೂಳ್ನುಡಿಗಳು ಅವರ ಬಾಳನ್ನೇ ಪರಿವರ್ತಿಸಿ ಮೇಲೆ ಹೇಳಿದ ಘಟ್ಟದಿಂದ ಅವರು ಹೊರಬರುವಂತೆ ಮಾಡುತ್ತವೆ. ಅವರ ಬದುಕೇ ಬದಲಾಗುತ್ತದೆ. ಅವರಿಗೆ ಶರಣರ ನುಡಿಗಳು ಬಂಡಿಯ ಕಡೆಗೀಲಿನಂತೆ ರಕ್ಷಣೆಯನ್ನೊದಗಿಸುತ್ತವೆ. ಗುರಿಯಿಲ್ಲದೆ ಓಡುತ್ತಿರುವ ಅವರ ಬದುಕಿಗೆ ಬೆಳಕಿನೆಡೆಗೆ ಹೋಗುವ ತವಕ ಉಂಟಾಗುತ್ತದೆ.
ಆದ್ದರಿಂದ ಶರಣರ ನುಡಿಗಳಿಗೆ ಅಪಾರ ಮಹತ್ವವಿದೆ.
No comments:
Post a Comment