Friday, August 12, 2011

Post 52: Principles for Pious Living (2 of 2)

This is the final part of the Summary of concepts portrayed in the Vachanas we have posted so far. We hope that you will revisit all the 50 Vachanas. You can access all of them at this blog site.   
Equality
Sharanas preached and practiced ‘equality’ among all irrespective of the profession, gender, caste, status in society, wealth, etc...  Basavanna said “No one is inferior to me; No one is superior to devotees of the Lord”.
Kaayaka (auspicious and unselfish service)
Inaction is not a choice. Everyone must earn their living (Dignity of labor). It is better to be a tax payer, rather than a welfare recipient from the society.  We must put 100% interest/effort/sincerity into whatever we are doing. We must perform our duties as a service to God (Work is worship). Work is Kailaasa, the abode of Shiva. We must create heaven here through our service (Work is heaven). All professions are equally important to the society and no profession is inferior (Equality).
Daasoha (Sharing)
Community and individuals are not separate and we have obligations to ourselves, our family and the community we live in. Minimizing our wants and needs is a must. We must excel in our profession, must meet the needs of the family and must share the rest with the community. Sharing has three aspects (trividha Daasoha):  tanu (body), mana(mind), dhana (wealth). The first corresponds to physical help to community, the second is the sharing of knowledge and the third is the sharing of wealth. The sharing is done through the triad:  Linga (God), Jangama (wandering ascetics) and Guru (teacher). The first implies that the community is ‘God’ and sharing with community is the service to God. Jangamas are individuals devoted to the selfless service of the community, and they must be supported in their work. Teacher helps us in sharing the knowledge.

 ಸಮಾನತೆ, ಕಾಯಕ ಮತ್ತು ದಾಸೋಹ
ಶರಣರು ಜಾತಿ ಭೇದ ಲಿಂಗಭೇದವನ್ನು ಒಪ್ಪಿದವರೇ ಅಲ್ಲ.  ಶಿವ ಭಕ್ತರಾಗಿ  ಆತ್ಮೋನ್ನತಿಯಲ್ಲಿ ತೊಡಗಿದವರೆಲ್ಲ ಒಂದೆ ಜಾತಿ. ಕೆಲಸಗಳು ಸಹ ಮೇಲು ಕೀಳೆಂದು ತಾರತಮ್ಯ ಮಾಡಿದವರಲ್ಲ. ಅಕ್ಕಿ ಆಯುವುದು, ಕಟ್ಟಿಗೆ ಮಾರುವುದು, ಬಟ್ಟೆ ಮಡಿಮಾಡುವುದು, ಚಪ್ಪಲಿ ಹೊಲಿಯುವುದು. ಕಿನ್ನರಿ ನುಡಿಸುವುದು ಅಥವಾ ಮಂತ್ರಿ ಕೆಲಸ ಮಾಡುವುದು ಎಲ್ಲವೂ ಸರಿಸಮಾನವೇ. ಯಾವುದೂ ಮೇಲಲ್ಲ ಯವುದೂ ಕೀಳಲ್ಲ.  ಯಾವುದೇ ಕೆಲಸವಾಗಲಿ  ಅದನ್ನು ಮಾಡುವ ದೃಷ್ಟಿ ಪವಿತ್ರವಾಗಿರಬೇಕು ಎಂದರು ಅವರು.  ಈಶ್ವರನ ಸೇವೆ ಎಂದು ಕೊಂಡು ಮಾಡುವ ಅಥವಾ, ಮಾಡುವವನು ತಾನಲ್ಲ ಎಂಬ ಭಾವನೆಯಿಂದ ಮಾಡುವ ಕೆಲಸ ಉದಾತ್ತವಾಗುತ್ತದೆ. ಅದು ಕೇವಲ ಕೆಲಸವಾಗದೆ  ಕಾಯಕ ವಾಗುತ್ತದೆ.
ನಾವು ಮಾಡುವುದೆಲ್ಲವನ್ನೂ ಈಶ್ವರನು ಒಪ್ಪಬೇಕು ಅದು ಮುಖ್ಯ. ಈಶ್ವರನು, ಸತ್ಯ ಶುದ್ಧ ಕಾಯಕವನ್ನು ಮಾತ್ರ ಒಪ್ಪುತ್ತಾನೆ. ವಂಚನೆ, ದುರಾಸೆಯಿಂದ ಮಾಡುವ ಕೆಲಸ ಕಾಯಕವಲ್ಲ. ಅಂತಹ ಕೆಲಸಮಾಡುವವರಿಂದ ಆತನು ದೂರ ಸರಿಯುತ್ತಾನೆ. ಸಂಗ್ರಹ ಬುದ್ಧಿ ಪಾಪಕ್ಕೆ ಹಾದಿ ಮಾಡಿಕೊಡುವುದು. ನಾವು ಸಂಗ್ರಹ ಮಾಡುವುದರಿಂದ ಅಗತ್ಯವಿರುವವನಿಗೆ ಮೋಸವಾಗುತ್ತದೆ. ಪ್ರತಿಯೊಬ್ಬನೂ ತನಗೆ ಅಗತ್ಯವಾಗಿ ಬೇಕಾದುದಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನದಕ್ಕೆ ಆಸೆಪಡುವುದು ಈಶ್ವರನೊಪ್ಪದ ಮಾತು. ಈಶ್ವರನೊಪ್ಪದ ಬದುಕಿನಿಂದೇನು ಫಲ? ಆಸೆಯಿಂದ ಮಾಡುವ ಕೆಲಸ ಕಾಯಕವಾಗುವುದಿಲ್ಲ.  ಇದನ್ನು ಅರಿತು ಚಿತ್ತವನ್ನು ಶುದ್ಧವಾಗಿಟ್ಟುಕೊಂಡವನಿಗೆ ಎಲ್ಲೆಡೆಯೂ ಲಕ್ಷ್ಮಿ ಕಂಡು ಬರುತ್ತಾಳೆ. ಏಕೆಂದರೆ ಆತನು ತನ್ನದಲ್ಲದ ವಸ್ತುವನ್ನು ಬಯಸುವುದಿಲ್ಲ. ತನಗೆ ಅವಶ್ಯಕವಾದುದನ್ನು ತನ್ನ ದುಡಿಮೆಯಿಂದ ತಾನು ಪಡೆದುಕೊಳ್ಳುವುದರಿಂದ ಆತನ ಆತ್ಮ ಸಂಪೂರ್ಣವಾಗಿ ತೃಪ್ತವಾಗಿರುತ್ತದೆ. ಆ ದುಡಿಮೆಯಲ್ಲಿಯೇ ಆತನು ಗುರು, ಲಿಂಗ, ಜಂಗಮರ ಸೇವೆಯೂ ಮಾಡುತ್ತಾನೆ. ಇಂತಹವನಿಗೆ ಯಾವ ಕೊರತೆಯೂ ಇರುವುದಿಲ್ಲ.
 ವಾಸ್ತವಾಗಿ ಬದುಕಿನ ಅವಶ್ಯಕತೆಗಳು ಬಹಳ ಕಡಿಮೆ. ನಾವುಗಳೆಲ್ಲರೂ ನಮಗೆ ಬೇಡದೆ ಇರುವುದನ್ನೆಲ್ಲ, ಮನೆಯಲ್ಲಿ, ಮನದಲ್ಲಿ ತುಂಬಿಸಿಕೊಂಡು, ಅದರ ನಿರ್ವಹಣೆಯಲ್ಲಿಯೇ ತೊಡಗಿ ತೊಳಲಾಡುತ್ತೇವೆ. ಅದೇ ನಮ್ಮ ಜೀವನದ ಬಹು ಮುಖ್ಯ ಉದ್ದೇಶವಾಗುತ್ತದೆ. ನಾನು ಏನೋ ಬಹು ಮಹತ್ತರವಾದ ಕೆಲಸ ಮಾಡುತ್ತಿದ್ದೇನೆ ಎಂಬ ಭ್ರಮೆ ಹುಟ್ಟಿಸುತ್ತದೆ. ಇಂತಹ ಭ್ರಮೆಯಿಂದ ಮದಮತ್ತರಾಗಿರುತ್ತೇವೆ. ಚಿತ್ತ ಶುದ್ಧತೆಯು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಭಕ್ತನಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೋನ್ನತಿ. ಅದರ ಹಂಬಲವನ್ನು ಬಿಟ್ಟು ಆತನಿಗೆ ಇನ್ನಾವದೂ ಬೇಕಾಗಿಲ್ಲ. ಹೀಗಾಗಿ ಆತನು ಮಾಡುವ ಕಾಯಕವು ಉದಾತ್ತತೆಯನ್ನು ಪಡೆದುಕೊಳ್ಳುತ್ತದೆ. ಆ ಕಾಯಕದಿಂದ ಬರುವ ದ್ರವ್ಯವು ಕಾಯಕದ ಸಂಭಾವನೆಯಾಗದೆ ಪ್ರಸಾದವಾಗುತ್ತದೆ. ಅದರಲ್ಲಿ ತನಗೆ ಅಗತ್ಯವಾದಷ್ಟನ್ನು ಮಾತ್ರವಿಟ್ಟು ಕೊಂಡು ಉಳಿದುದನ್ನು ತನ್ನ ಬದುಕಿಗೆ ದಾರಿ ದೀಪವಾದ ಸಮಾಜಕ್ಕೆ ಅರ್ಪಿಸುವುದು ನಿಜವಾದ ಕಾಯಕ. ಹಾಗಾದರೆ ತಮಗೆ ಬಳುವಳಿಯಾಗಿ ಬಂದುದರಲ್ಲಿ ದಾಸೋಹ ಮಾಡುವುದು ಕಾಯಕವಾಗಲಿ ಅಥವಾ ಶುದ್ಧ ದಾಸೋಹವಾಗಲಿ  ಆಗುವುದಿಲ್ಲ. ಅದು ದಾನ ಅನ್ನಿಸಿಕೊಳ್ಳಬಹುದು. ದಾನ ಮಾಡುವುದು ತಪ್ಪಲ್ಲ. ದಾನ ಮತ್ತು ದಾಸೋಹದಲ್ಲಿ ಅಂತರವಿದೆ. ದಾನ ಮಾಡುವಾಗನಾನು ದಾನ ಮಾಡುತ್ತಿದ್ದೇನೆಎನ್ನುವ ಅಹಂ ಭಾವವಿರುತ್ತದೆ. ಆದರೆ ದಾಸೋಹ ಮಾಡುವಲ್ಲಿ  ಕೃತಕೃತ್ಯಭಾವ ವಿರುತ್ತದೆ.  ದಾಸೋಹ ಮಾಡಿ ತಾನು ಉಪಕಾರ ಮಾಡುತ್ತಿಲ್ಲ, ಉಪಕೃತನಾಗುತ್ತಿದ್ದೇನೆ ಎನ್ನುವ ಭಾವವಿರುತ್ತದೆ.

ಕಾಯಕ ಮತ್ತು ದಾಸೋಹದ ವಿಷಯ ಹೇಳುತ್ತ  ಪ್ರೊ. ಟಿ. ಅರ್. ಮಹದೇವಯ್ಯನವರು “....ಕಾಯಕ ಮತ್ತು ದಾಸೋಹ ತತ್ವಗಳು ಬೇರೆ ಬೇರೆಯಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಒಂದು ಇನ್ನೊಂದಕ್ಕೆ ಪೂರಕ, ಪೋಷಕ. ಒಂದು ಗಳಿಕೆಯ ಮಾರ್ಗವಾದರೆ ಇನ್ನೊಂದು ಬಳಕೆಯ ಮಾರ್ಗ. ಕಾಯಕದಲ್ಲಿ ದುಡಿಮೆಯ ಫಲ ಕಂಡರೆ ದಾಸೋಹದಲ್ಲಿ ಹಂಚಿ ಉಣ್ಣುವ ಕೃತಕೃತ್ಯತೆಯಿದೆ. ಹೀಗೆ ಇವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯ ಸೂತ್ರಗಳು.
ದಾಸಃ ಅಹಂದಾಸೋಹಃ - ನಾನು ದಾಸನಾಗಿದ್ದೇನೆ ಎಂಬ ಮನಸ್ಥಿತಿಯಿಂದ ಜನ ಸೇವೆ ಮಾಡುವುದು. ಇದಕ್ಕೆ  ಶರಣರು ಹೊಸ ಅರ್ಥವನ್ನು ಟಂಕಿಸಿದ್ದಾರೆ. ತನ್ನ ತನು ಮನ ಧನಗಳನ್ನು (ತ್ರಿವಿಧಗಳನ್ನು) ಗುರು ಲಿಂಗ ಜಂಗಮಕ್ಕೆ ( ತ್ರಿವಿಧಕ್ಕೆ) ನಿರಹಂಕಾರ ಬುದ್ಧಿಯಿಂದ , ಸೇವಾ ಮನೋಭಾವದಿಂದ ಅರ್ಪಿಸಿ, ಪ್ರಸಾದವನ್ನು  ತಾನು ಸ್ವೀಕರಿಸುವುದು ಎಂದರ್ಥ. ಅಂದರೆ ಕಾಯಕ ಕೃತಾರ್ಥವಾಗುವುದು ದಾಸೋಹದಲ್ಲಿ  ಎಂದು ಹೇಳುತ್ತಾರೆ.

ದಾಸೋಹದಲ್ಲಿ ನೀಡುವವರು ಮತ್ತು ನೀಡಿಸಿಕೊಳ್ಳುವವರು ಯಾರೂ ಇರುವುದಿಲ್ಲ. ಏಕೆಂದರೆ ನೀಡುವವರಿಗೆ, ಏನೂ ತನ್ನದಲ್ಲ, ಎಲ್ಲವೂ ಆ ಶಿವನಿಗೆ ಸೇರಿದ್ದು, ತಾನು ಏನೂ ಮಾಡುತ್ತಿಲ್ಲ, ಆ ಶಿವನೇ ತನ್ನಿಂದ ಎಲ್ಲವನ್ನೂ ಮಾಡಿಸುತ್ತಿದ್ದಾನೆ ಎನ್ನುವ ಭಾವ ಇರುತ್ತದೆ. ಹಾಗೂ ಮಾಡಿಸಿಕೊಳ್ಳುವ ಜಂಗಮನಿಗಂತೂ ಎಲ್ಲವೂ ಕೇವಲ ಶಿವಮಯವಾಗಿ ಕಾಣುತ್ತದೆ. ಶಿವನಲ್ಲದೆ ಇರುವುದು ಬೇರೇನೂ ಕಾಣುವುದೇ ಇಲ್ಲ. ತಾನು ತನ್ನದೆಂಬ ಭಾವ ಸಂಪೂರ್ಣವಾಗಿ ಇಲ್ಲವಾಗಿರುವುದರಿಂದ ಮಾಡಿಸಿಕೊಂಬುವವನು ಕೂಡ ಆ ಶಿವನೇ ಆಗಿರುತ್ತಾನೆ. ಹೀಗಾಗಿ ಕೊಡುವಾತ ಕೊಂಬಾತಆ ಶಿವನೇ ಹೊರತು ತಾನಲ್ಲ. ನಾನುಎಂಬುದನ್ನು ಮರೆತು ಮಾಡುವ ಪ್ರತಿಯೊಂದು ಕೆಲಸವೂ ಕಾಯಕ ಮತ್ತು ದಾಸೋಹವಾಗುತ್ತದೆ.  ಇಂದು ದಾಸೋಹದ ಅರ್ಥ ಸಂಕುಚಿತಗೊಂಡಿದೆ. ದಾಸೋಹವೆಂದರೆ ಕೇವಲ ಊಟಕ್ಕೆ ಹಾಕುವುದು ಎಂಬ ಅರ್ಥ ಉಳಿದುಕೊಂಡಿದೆ. ಪ್ರೊಫೆಸರ್ ಟಿ. ಆರ್. ಮಹದೇವಯ್ಯನವರು ದಾಸೋಹವೆಂದರೆ ಬರಿ ಆಹಾರ ದಾನವಲ್ಲ, ಇದಕ್ಕೆ ವಿಶಾಲವಾದ ಅರ್ಥವಿದೆ. ಉಳ್ಳವರು ಇಲ್ಲದವರಿಗೆ ನೀಡುವುದು, ತಿಳಿದವರು ತಿಳಿಯದವರಿಗೆ ಕಲಿಸುವುದು, ಹತಾಶರಾದವರ ಎದೆಯಲ್ಲಿ ಆಶಾಜ್ಯೋತಿಯನ್ನು ಬೆಳಗಿಸುವುದು. ಬಲ್ಲಿದವರಾದವರು ಅಶಕ್ತರಿಗೆ ನೆರವಾಗಿ ಸಬಲಗೊಳಿಸುವುದು, ಕೀಳರಿಮೆಯಿಂದ ಮೂಲೆಗುಂಪಾದವರಿಗೆ ತಲೆ ಎತ್ತಿ ನಿಲ್ಲುವ ಆತ್ಮ ವಿಶ್ವಾಸ ಮೂಡಿಸುವುದು, ಜಡರಾದವರಿಗೆ, ನವೋತ್ಸಾಹ, ಕ್ರಿಯಾಶೀಲತೆಯನ್ನುಂಟುಮಾಡುವುದು, ಸುಪ್ತ ಪ್ರತಿಭೆಗಳ ಪ್ರಕಾಶನಕ್ಕೆ ಸೂಕ್ತ ಪ್ರೋತ್ಸಾಹ ನೀಡುವುದು, ಇವೆಲ್ಲವೂ ಸೇರುತ್ತವೆ, ಇವುಗಳ ಲಾಭ ಸಮಾಜಕ್ಕೆ, ದೇಶಕ್ಕೆಎಂದು ಹೇಳುತ್ತಾರೆ.

ಶರಣರು ಈ ಲೋಕವನ್ನು, ಈ ಸಮಾಜವನ್ನು, ಈ ಬದುಕನ್ನು ಕಡೆಗಣಿಸಲಿಲ್ಲ. ಅವರು ಅದನ್ನು ಪೂರ್ತಿಯಾಗಿ ಸ್ವೀಕರಿಸಿ ಅದರ ಕಲ್ಯಾಣ ಮತ್ತು ಆತ್ಮೋನ್ನತಿಯಲ್ಲಿ ತೊಡಗಿದರು. ಈ ನಿಟ್ಟಿನಲ್ಲಿ ಅವರು ಕೈಗೊಂಡ ಕಾಯಕ ಮತ್ತು ದಾಸೋಹಗಳು ಅತ್ಯಂತ ಉದಾತ್ತವಾದ ವಿಚಾರಗಳು.
ಈಶ್ವರನು ಒಪ್ಪಬೇಕು ಅದು ಮುಖ್ಯ. ಈಶ್ವರನು, ಸತ್ಯ ಶುದ್ಧ ಕಾಯಕವನ್ನು ಮಾತ್ರ ಒಪ್ಪುತ್ತಾನೆ. ವಂಚನೆ, ದುರಾಸೆಯಿಂದ ಮಾಡುವ ಕೆಲಸ ಕಾಯಕವಲ್ಲ. ಅಂತಹ ಕೆಲಸಮಾಡುವವರಿಂದ ಆತನು ದೂರ ಸರಿಯುತ್ತಾನೆ

No comments:

Post a Comment