Our intention in starting this Blog was to concentrate on one vachana each week, so that readers can reflect on its message during the week and attempt to internalize it as far as possible. Hope we have succeeded in meeting that goal over the last 50 weeks. These 50 postings along with the summaries in this and the next posting should serve as a yearlong study and reflection. It is important to note that the source of inspiration for Sharanas in developing these vachanas is their ‘experience and observation (Anubhava)’ of the contemporary society and its behavior. These experiences prompted them to seek the spiritual path and made each Sharana into an ‘Anubhaavi’ (realized or conditioned soul - a rough translation of the word). As such, the principles portrayed by these vachanas form the basis for the man to succeed in his spiritual journey of self-realization. We will try to highlight the main tenets portrayed by Sharanas in these summary postings. Our sincere hope is that you will revisit the 50 postings as you read these summaries.
This world is Creator’s workshop
This world is real. We are in it. The creator has provided it for our use. We must make this into heaven by righteous practices. Wrong practices make this into hell. There is no other world – the concept of that other world of immortals (Devas) is imaginary. Even if such a world exists, sharanas say that ‘those who fit in this world also fit in that world’. Sharanas gave utmost importance to morality, truth and righteous behavior, which in turn form the bases for self-realization. They advocated being fully in this world, and facing the challenges of life with truth, hard work and dedication. They believed in making this into a joyous world, rather than ignoring this world in the pursuit of heaven in afterlife.
Inner and Outer Purity
Our body is the temple where the Lord resides - we should keep it strong and fit. The mind triggers all our activities and behaviors - disciplining the mind is essential. Sharanas provided us the means of purification of the body -mind complex. It is through eliminating the seven traits (do not steal, do not kill, do not be angry with anyone, do not feel disgust of anyone, do not indulge in self praise, do not humiliate anyone..), thinking carefully about each word we utter (like a pearl in a necklace,…), greeting and making everyone welcomed (Please come, how are you,…), realizing that we cannot straighten all the ills of society (Lokada Donka…) , eliminating anger, etc.. They said that the righteous behavior invoked by the above characteristics, is the ‘internal’ and ‘external’ purity needed to reach the Lord (i.e achieve self-realization).
Compassion
Compassion is the root of Dharma (the right principle). We must not hurt anyone and must be compassionate to fellow beings and animals. Being compassionate is usually viewed as just offering money to poor, food to hungry, shelter to homeless, and in general helping the old lady cross the road safely. Sharanas’ definition of compassion goes a bit further. It extends to finding the root cause of the suffering and providing the knowledge to the sufferer to come out of it.
God/Worship/Rituals
God is within us and within everyone around us. The individual souls are sparks of the super soul – the conglomeration of souls is God. Realizing the God within should be our goal. We have built temples, provided various forms and images to God and engrossed in multitude of rituals. We tend to believe a drying out stream, a stone serpent, a neem tree, a metal statue that heat can melt away, as God. Sharanas advocated knowledge-based contemplation/meditation as the way to worship and realize God. They provided the Istalinga as an icon to aid such meditation and contemplation They emphasized that the body is the temple and the Lord is within us, and we should make it fit for Him through our knowledge and self-realization. Merging with Him is the ultimate goal in life. They called this merger as shoonya sampaadane, the completeness, and Linga-Anga Saamarasya.
We will cover kaayaka, daasoha, equality and other concepts in the next posting.
SUMMARY IN KANNADA
ಇಲ್ಲಿಯವರೆಗೆ ನಾವು ೫೦ ವಚನಗಳನ್ನು ಉಲ್ಲೇಖಿಸಿದ್ದೇವೆ. ಅವುಗಳಲ್ಲಿ ಹೇಳಿರುವ ವಿಷಯವನ್ನು ಈ ಕೆಳಕಂಡಂತೆ ಹೇಳಬಹುದು:
ಮರ್ತ್ಯಲೋಕವು ಕರ್ತಾರನ ಕಮ್ಮಟ
ಕರ್ತಾರನ ಈ ಕಾರ್ಯಾಗಾರದಲ್ಲಿ ಚಲಾವಣೆಯಲ್ಲಿ ಇಲ್ಲದ ನಾಣ್ಯ ಬೇರೆ ಕಡೆಯೂ ನಡೆಯುವುದಿಲ್ಲ. ಈ ಲೋಕದವರಿಗೆ ಒಪ್ಪಿಗೆಯಾಗುವಂತೆ ಬಾಳದವನಿಗೆ ಆ ಲೋಕದಲ್ಲಿಯೂ ಸ್ಥಾನವಿರುವುದಿಲ್ಲ. ಆದ್ದರಿಂದ ನಾವೆಲ್ಲರೂ, “ಪರ”ದಲ್ಲಿ ಸಲ್ಲಬೇಕಾದರೆ “ಇಹ”ದಲ್ಲಿ ಸಲ್ಲುವಂತೆ ಬಾಳಬೇಕು. “ಇಹ”ದಲ್ಲಿ ಸಲ್ಲದಂತೆ ಬಾಳುವೆಯನ್ನು ನಡೆಸಿ “ಪರ”ದಲ್ಲಿ ಸ್ಥಾನವನ್ನು ಪಡೆಯುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅಂದರೆ ಈ ಜಗತ್ತನ್ನು
ಪೂರ್ತಿಯಾಗಿ ನಿರ್ಲಕ್ಷಿಸಿ, ಇಲ್ಲಿಯದೆಲ್ಲವನ್ನು ಕಡೆಗಣಿಸಿ ಕೇವಲ “ಪರ”ವನ್ನು ಸಾಧಿಸುವವರಿಗೆ ಕೊನೆಯಲ್ಲಿ ಇಹವೂ ಪರವೂ ಇಲ್ಲದಂತೆ ಆಗುತ್ತದೆ, ಎನ್ನುತ್ತಾರೆ ಬಸವಣ್ಣನವರು. ದಿನ ನಿತ್ಯದ ಬದುಕನ್ನು ಬಿಟ್ಟು ಓಡಿ ಹೋಗುವದನ್ನು ಶರಣರು ಒಪ್ಪುವುದಿಲ್ಲ. ಬಂದುದನ್ನು ಧೀರರಂತೆ ಸ್ವೀಕರಿಸುವುದೇ ಉಪಾಯ. ಬದುಕನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುವ ಛಲ ಮತ್ತು ಆತ್ಮವಿಶ್ವಾಸ ಇದ್ದವರು ಯಶಸ್ವಿಯಾಗುತ್ತಾರೆ. ಅವರಿಗೆ ಭೌತಿಕ ಜೀವನದಲ್ಲಿ ನೆಮ್ಮದಿಯುಂಟಾಗಿ ದೇವರ ಬಗ್ಗೆ ಶ್ರದ್ಧೆ ಹುಟ್ಟುವ ಅವಕಾಶವಿರುತ್ತದೆ.
ಸದಾಚಾರ
ಆತ್ಮೋನ್ನತಿಗೆ ಅಂತರಂಗ ಮತ್ತು ಬಹಿರಂಗ ಶುದ್ಧಿಯು ಬಹು ಮುಖ್ಯ. ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಹಿಂಸೆ ಮಾಡುವುದು, ಇತರರನ್ನು ಹಳಿಯುವುದು, ತನ್ನನ್ನು ಹೊಗಳಿಕೊಳ್ಳುವುದು, ಅನ್ಯರನ್ನು ಕಂಡು ಅಸಹ್ಯ ಪಡುವುದು,ಇವು ಮಾನವನನ್ನು ಅಧಃ ಪತನಕ್ಕೆ ನೂಕುತ್ತವೆ. ಆದರೆ ಇವುಗಳನ್ನು ತ್ಯಜಿಸುವುದರಿಂದ ಅಂತರಂಗ ಮತ್ತು ಬಹಿರಂಗವು ಶುದ್ಧವಾಗಿದ್ದು ಆತ್ಮೋನ್ನತಿಗೆ ದಾರಿಮಾಡಿಕೊಡುತ್ತವೆ. ಶರಣರು ಸದಾಚಾರಕ್ಕೆ ಬಹು ಪ್ರಾಮುಖ್ಯತೆ ಕೊಟ್ಟಿರುವರು. ಸಮಾಜದಲ್ಲಿ ಇತರನ್ನು ನೋಯಿಸದೆ, ತಾನು ಅಹಂಕಾರದಿಂದ ಬೀಗದೆ ಇರುವುದು ಸೂಕ್ತ. ಕೋಪವು ಅನಾಹುತಕಾರಿಯಾದದ್ದು, ಅದು ಮೊದಲು ತನ್ನನ್ನೇ ನಾಶಮಾಡುತ್ತದೆ, ಆದ್ದರಿಂದ ಅದನ್ನು ಬಿಟ್ಟುಬಿಡುವುದು ಮೇಲು. ಇತರರಿಗೆ ಬುದ್ಧಿ ಹೇಳುವುದಕ್ಕಿಂತ ತಮ್ಮ ತಪ್ಪುಗಳನ್ನು ತಾವು ಗುರುತಿಸಿ ಸರಿಪಡಿಸಿಕೊಳ್ಳುವುದು ಮುಖ್ಯ.
ದಯವೇ ಧರ್ಮದ ಮೂಲ
ದಯೆ ಎಂದರೆ ದುಃಖದಲ್ಲಿ ಮುಳುಗಿದವರಿಗೆ ಸಹಾಯ ಮಾಡುವುದು ಅಂದರೆ, ಒಬ್ಬ ಮನೆಯಿಲ್ಲದ ಬಡವನಿಗೆ ಮನೆ ಕಟ್ಟಿ ಕೊಡುವುದು, ಹೊಟ್ಟೆಗಿಲ್ಲದವನಿಗೆ ಊಟಹಾಕುವುದು, ಬಂಧುವಿನ ಸಾವಿನಿಂದ ಅಳುವವನಿಗೆ ಸಾಂತ್ವನ ಹೇಳುವುದು ಇತ್ಯಾದಿಗಳು ದಯೆತೋರುವ ವಿಧಾನಗಳು. ಆದರೆ ಇವುಗಳು ಯಾರ ದುಃಖವನ್ನೂ ನಿಜವಾಗಿಯೂ ದೂರಮಾಡುವುದಿಲ್ಲ. ಇವುಗಳೆಲ್ಲವೂ ಮೇಲ್ಮೈಯ ಮತ್ತು ತಾತ್ಕಾಲಿಕವಾದ ಉಪಾಯಗಳು ಮಾತ್ರ. ದುಃಖವನ್ನು ಸಂಪತ್ತಿನಿಂದ, ಕ್ಷಣಿಕವಾದ ಕನಿಕರದಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಬಹು ಆಳವಾದದ್ದು. ಮೇಲ್ನೋಟಕ್ಕೆ ಬಡತನವೇ ದುಃಖಕ್ಕೆ ಕಾರಣವೆಂದು ತೋರಿಬಂದರೂ ಆಳವಾಗಿ ಯೋಚಿಸಿದಾಗ ಅಜ್ಞಾನವೇ ಅದಕ್ಕೆ ಕಾರಣವೆಂಬುದು ತಿಳಿಯುತ್ತದೆ. ದುಃಖದ ನಿಜವಾದ ನಿವಾರಣೆಗೆ ಸತ್ಯದ ಅರಿವು ಬಹು ಮುಖ್ಯ. ಈ ಅರಿವನ್ನು ಪಡೆಯುವುದು ಮತ್ತು ಇತರರು ಪಡೆಯುವಂತೆ ಮಾಡುವುದೇ ನಿಜವಾದ ದಯೆ. ಅದೇ ನಿಜವಾದ ಧರ್ಮ. ಸತ್ಯದ ಅರಿವು ಎಲ್ಲರೂ ಪಡೆಯುವದರಲ್ಲಿ ಸಹಾಯವಾಗುವಂತೆ ಅನುಭವ ಮಂಟಪವನ್ನು ಕಟ್ಟಿದರು ಶರಣರು. ಅಜ್ಞಾನದಲ್ಲಿ ಮುಳುಗಿ ದುಃಖದಲ್ಲಿ ತೊಳಲುವವರನ್ನು ಆತ್ಮೋನ್ನತಿಯಡೆಗೆ ಕರೆದೊಯ್ಯುವುದೇ ನಿಜವಾದ ದಯೆಯ ಲಕ್ಷಣ.
ಸ್ಥಾವರ ಪೂಜೆ
ಜನರು ಮೂರ್ತಿ ಪೂಜೆಯನ್ನೇ , ಅವುಗಳ ಸೌಂದರ್ಯವನ್ನು ಉಪಾಸಿಸುವುದೇ ಭಕ್ತಿಯೆಂದುಕೊಳ್ಳುತ್ತಾರೆ. ಇನ್ನು ಕೆಲವರು ಮದಕೆ ದೈವ, ಮೊರ ದೈವ ಎಂದು ನಾನಾ ವಸ್ತುಗಳನ್ನು ಪೂಜಿಸುತ್ತಾರೆ, ಇನ್ನು ಕೆಲವರು ಬತ್ತಿ ಹೋಗುವ ನೀರನ್ನು ಇಲ್ಲವೆ ಒಣಗಿ ಹೋಗುವ ಮರವನ್ನು ದೇವರೆಂದು ಪೂಜಿಸುತ್ತಾರೆ, ಈ ರೀತಿ ಕಾಲದ ಕಟ್ಟೆಳೆಗೆ, ಪ್ರಕೃತಿಯ ನಿಯಮಕ್ಕೆ ಒಳಪಟ್ಟು ನಾಶವಾಗವ ವಸ್ತುಗಳನ್ನು ದೇವರು ಎಂದು ನಂಬುವುದು ಮೂರ್ಖತನವೆಂದು ಹೇಳುತ್ತಾರೆ ಶರಣರು. ನಿಜವಾದ ದೇವರು ತನ್ನಲ್ಲಿಯೇ ಸಹಜವಾಗಿ ಐಕ್ಯನಾಗಿರುತ್ತಾನೆ. ಅವನನ್ನು ವಿಗ್ರಹಗಳಲ್ಲಿ ಅಥವಾ ಬೇರೆಲ್ಲಿಯೂ ಹುಡುಕುವ ಅವಶ್ಯಕತೆಯಿಲ್ಲ. ತನ್ನ ಅಂತರಂಗದಲ್ಲಿಯೇ ಇರುವ ಅವನನ್ನು ಕಂಡುಕೊಳ್ಳುವುದೇ ನಿಜವಾದ ಭಕ್ತಿ ಎನ್ನುತ್ತಾರೆ ಬಸವಣ್ಣನವರು. ದೇವಾಲಯ ಕಟ್ಟುವುದಕ್ಕಿಂತ ನಿಮ್ಮ ದೇಹವನ್ನೇ ದೇವರಿಗಾಗಿ ಅಣಿಗೊಳಿಸಿ, ನಿಮ್ಮ ನಡೆ ನುಡಿಯಿಂದ ಅದನ್ನು ಪವಿತ್ರಗೊಳಿಸಿ, ದೇಹವನ್ನೇ ದೇಗುಲವನ್ನಾಗಿ ಮಾಡಿರಿ, ಎಂದು ಹೇಳುತ್ತಾರೆ ಬಸವಣ್ಣನವರು.
ಸಮಾನತೆ, ಕಾಯಕ ಮತ್ತು ದಾಸೋಹದ ಬಗ್ಗೆ ಮುಂದಿನ ಭಾಗದಲ್ಲಿ ನೋಡೋಣ.
No comments:
Post a Comment