Friday, October 7, 2011

Vachana 58: Honnu Maye Embaru - Desire is Illusion

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ

TRANSLITERATION

honnu mAyeyeMbaru honnu mAyeyalla
heNNu mAyeyeMbaru heNNu mAyeyalla
maNNu mAyeyeMbaru maNNu mAyeyalla
manada muMdaNa ASeyE mAye kANA guhESvara

CLICK HERE TO HEAR IT:

http://www.youtube.com/watch?v=tDPhaQ4QcFw

TRANSLATION

honnu (Gold) mAye (illusion) yeMbaru (they say) honnu (Gold) mAyeyalla (is not illusion)
heNNu (woman) mAye (illusion) yeMbaru (they say) heNNu (woman) mAyeyalla (is not illusion)
maNNu (Earth, land) mAye (illusion) yeMbaru (they say) maNNu (Earth, land) mAyeyalla (is not illusion)
manada (of the mind) muMdaNa (before, arising) ASeyE (the desire is) mAye (illusion) kANA (you see) guhESvara (the Lord of Caves)

They say Gold (wealth) is Maye (Illusion), it is not!
They say woman is Maye, she is not!
They say land is Maye, it is not!
Desire arising in the mind is Maye, Oh Lord of Caves!

COMMENTARY

Gold, woman (man) and land symbolize everything we strive to possess in our lives. Gold represents the wealth. Woman (to man, and man to woman) represents the relationships and conquest of desirable individuals. Land represents the properties and territorial acquisitions. Our state of happiness and sorrow depends on how much of these we possess. We blame these as illusion, especially when things do not go our way in terms of possessing these. In this popular Vachana, Allama Prabhu says that gold, woman(man), and land are not the illusion, but the desire in us to possess them is the illusion.

Consider the case of a gold bar lying on the road. A passerby desirous of wealth would immediately pick it up. He might even try to make sure that no one else saw him picking it up, with the fear that they may claim it back. He will be immediately high with joy of this sudden increment in wealth. Another passerby who is not enamored by Gold will either simply walk away from it or try to find the owner to return it. Either way, he is not disturbed by the Gold bar. So, it is not the Gold that created the ebb and tide in individuals, but the desire for possessing it!

Let us rightsize our desires!

KANNADA COMMENTARY

ಶೂನ್ಯಸಿಂಹಾಸನಾಧೀಶ್ವರರಾದ ಅಲ್ಲಮ ಪ್ರಭುಗಳು ಇಲ್ಲಿ ಮಾಯೆಯನ್ನು ಅದರ ನಾನಾ ರೂಪಗಳಿಂದ ನಗ್ನ ಗೊಳಿಸಿ ಅದನ್ನು ತನ್ನ ನಿಜರೂಪದಲ್ಲಿ ನಮ್ಮೆದುರಿಗೆ ಬಿಂಬಿಸುತ್ತಾರೆ. ಥಳಥಳನೆ ಹೊಳೆದು ಎಲ್ಲರ ಕಣ್ಣು ಕೋರೈಸುವ ಚಿನ್ನವನ್ನು ಜನರು ಮಾಯೆ ಯೆನ್ನುವರು. ತನ್ನ ಲಾವಣ್ಯ, ಸೌಂದರ್ಯ ಮತ್ತು ಹಾವಭಾವಗಳಿಂದ ಆಕರ್ಷಿಸುವ ಹೆಣ್ಣನ್ನು ಮಾಯೆಯೆನ್ನುವರು (ಇಲ್ಲಿ ಲೋಕದಲ್ಲಿ ಬಳಕೆಯಲ್ಲಿರುವ ಮಾತನ್ನು ಮಾತ್ರ ಹೇಳುತ್ತಿರುವರು, ಅದನ್ನ್ನು ಅಕ್ಷರಶಃ ತೆಗೆದುಕೊಳ್ಳದೆ, ಅಂದರೆ, ಗಂಡಿಗೆ ಹೆಣ್ಣು ಮಾಯೆಯಾಗುವಂತೆ ಹೆಣ್ಣಿಗೆ ಗಂಡು ಮಾಯೆಯಾಗುತ್ತಾನೆ ಎಂದು ತೆಗೆದುಕೊಳ್ಳದೆ ಹೋದರೆ ಅದು ನಮ್ಮ ಮೂರ್ಖತನವಾಗತ್ತದೆ.) ಸಮೃದ್ಧಿಯನ್ನು ಕೊಡುವ ಮಣ್ಣು ಮಾಯೆಯೆಂಬುವರು. ಆದರೆ ಅಲ್ಲಮಪ್ರಭುಗಳು ಇವಾವೂ ಮಾಯೆಯಲ್ಲ, ಇವುಗಳ ಬಗ್ಗೆ ನಾವು ಬೆಳೆಸಿಕೊಂಡ ಆಸೆಯೇ ಮಾಯೆಯೆನ್ನುವರು.

ಚಿನ್ನ ಎಂತೆಂತಹವರನ್ನೂ ಮರುಳುಗೊಳಿಸುತ್ತದೆ, ಅದರ ಆಕರ್ಷಣೆಗೆ ಒಳಗಾಗದವರೇ ಇಲ್ಲ, ಅದಕ್ಕಾಗಿ ಜನರು ಏನನ್ನೂ ಮಾಡಲು ಸಿದ್ಧರಾಗುತ್ತಾರೆ ಎಂಬಂತಹ ಮಾತುಗಳನ್ನು ನಾವು ಕೇಳುತ್ತೇವೆ. ಚಿನ್ನಕ್ಕೆ ಸುಂದರವಾದ ಬಣ್ಣವಿದೆ, ಅದು ತುಕ್ಕು ಹಿಡಿಯುವುದಿಲ್ಲ, ಅದಕ್ಕೆ ಕೆಲ ಔಷಧೀಯ ಗುಣಗಳೂ ಇವೆ, ಅದು ಅತ್ಯಂತ ಬೆಲೆಬಾಳುವ ವಸ್ತು, ಅದರಿಂದ ನಾನಾ ಆಭರಣಗಳನ್ನು ಮಾಡಬಹುದು, ಅದು ಇತರ ಲೋಹಗಳಿಗೆ ಹೋಲಿಸಿದರೆ ಬಹು ಮೃದುವಾದದ್ದು ಎಂಬುದರಿಂದ ಅದರ ಈ ಗುಣಗಳ ಅರಿವಿರುವ ಜನರು ಅದಕ್ಕಾಗಿ ಮರುಳುಗೊಳ್ಳುತ್ತಾರೆ. ಅದನ್ನು ಧರಿಸಿ ತಾನೇ ಚಿನ್ನವಾದೆನೆಂಬ, ತನ್ನ ಸಮಾನರಿಲ್ಲೆಂಬ ಭ್ರಮೆಯಲ್ಲಿರುತ್ತಾರೆ. ಅದೇ ರೀತಿ, ಹೆಣ್ಣು ಗಂಡುಗಳು ಕೂಡ. ಗುಣ, ಸೌಂದರ್ಯ, ಯೌವನ, ಅವರಿಂದ ತನಗಾಗುವ ಉಪಯೋಗ ಮತ್ತು ಸುಖಗಳಿಗಾಗಿ ಹೆಣ್ಣು ಗಂಡುಗಳು ಪರಸ್ಪರ ಆಕರ್ಷಣೆಗೊಳಗಾಗುತ್ತಾರೆ. ಇನ್ನು ಭೂಮಿ. ಅದು ಕೊಡುವ ಸಮೃದ್ಧಿ ಅಪಾರವಾದದ್ದು. ಅದನ್ನು ತನ್ನದಾಗಿಸಿಕೊಳ್ಳಬೇಕು, ತಾನು ಅದರ ಒಡೆಯನೆನಿಸಿಕೊಳ್ಳಬೇಕು, ಅದರ ಸಮೃದ್ಧಿಯನ್ನು ತನ್ನ ಪೀಳಿಗೆಯವರಿಗಾಗಿ ಕಾದಿಡಬೇಕು ಎಂದು ಬಯಸುತ್ತಾನೆ. ಹಾಗೆ ಮಾಡಿದಾಗ ಅವರು ನಿರುಮ್ಮಳವಾಗಿ ಬದುಕುತ್ತಾರೆ ಎನ್ನುವ ಭ್ರಮೆಗೆ ಒಳಗಾಗುತ್ತಾನೆ. ಇದನ್ನೆಲ್ಲ ನೋಡಿ ಜನರು ಹೊನ್ನು, ಹೆಣ್ಣು (ಗಂಡು) ಮತ್ತು ಮಣ್ಣುಗಳನ್ನು ಮಾಯೆಯೆಂದರು. ಆದರೆ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಇನ್ನೊಂದೇ ಸತ್ಯ ಗೋಚರವಾಗುತ್ತದೆ. ಹೊನ್ನು, ಹೆಣ್ಣು, ಮಣ್ಣುಗಳು ನಿಸರ್ಗದಲ್ಲಿಯ ಅನೇಕ ವಸ್ತು ಮತ್ತು ಜೀವಿಗಳಂತೆ ಸಾಮಾನ್ಯವಾದವುಗಳು. ಅವುಗಳ ಬಗ್ಗೆ ನಾವು ತಳೆದ ಭಾವನೆಗಳಿಂದ, ಅವು ನಮಗೆ ಅತಿ ಆಕರ್ಷಕವಾಗಿ ಕಾಣುತ್ತವೆ. ಆದ್ದರಿಂದ ಅವುಗಳ ಸ್ವಾಮ್ಯ ನಮಗೆ ಅಪಾರ ಸುಖಕೊಡುತ್ತವೆ, ಆ ಸುಖ ಶಾಶ್ವತವಾದದ್ದು ಎನ್ನುವ ಭ್ರಮೆ ಹುಟ್ಟಿಸುತ್ತವೆ. ಅದು ಸತ್ಯವಾಗಿರದೆ ಕೇವಲ ಭ್ರಮೆಯಾಗಿರುವುದರಿಂದ ಅದರಿಂದ ನಾವು ಆಶಿಸಿದ ಸುಖ ಸಿಗದೆ ಭ್ರಮನಿರಸನವಾಗುತ್ತದೆ. ಎಷ್ಟೋಸಲ ಭ್ರಮನಿರಸನವಾದರೂ ಅದನ್ನು ಅರಿತುಕೊಳ್ಳದೆ, ಮತ್ತೆ ಮತ್ತೇ ಅದರ ಆಸೆಗೆ ಒಳಗಾಗುತ್ತೇವೆ. ವಾಸ್ತವವಾಗಿ ಆ ವಸ್ತುಗಳು ಕೇವಲ ವಸ್ತುಗಳಾಗಿವೆ. ನಾವು ನಮ್ಮ ಆಸೆಗಳ ಕಾರಣದಿಂದ ಅವುಗಳಿಗೆ ಅತಿ ಹೆಚ್ಚಿನ ಬೆಲೆ ಕೊಡುತ್ತೇವೆ. ಮತ್ತು ಅವುಗಳನ್ನು ಮಾಯೆ ಎಂದು ಕರೆಯುತ್ತೇವೆ. ಒಂದು ವೇಳೆ ಆ ವಸ್ತುಗಳೇ ಮಾಯೆಯಾಗಿದ್ದಿದ್ದರೆ ಎಲ್ಲರೂ, ಯಾರೇ ಆದರೂ, ಅವುಗಳನ್ನು ನೋಡಿದ ಕೂಡಲೆ ಅವುಗಳ ಮಾಯೆಯೆಗೆ ತುತ್ತಾಗಬೇಕು. ಆದರೆ ಹಾಗಾಗುವುದಿಲ್ಲ. ಒಬ್ಬನಿಗೆ ಅತಿ ಆಕರ್ಷಕವಾಗಿ ಕಂಡ ಆಭರಣ, ಹೆಣ್ಣು, ಗಂಡು, ಭೂಮಿ ಇನ್ನೊಬ್ಬನಿಗೆ ಹಾಗೆ ಕಂಡು ಬರುವುದಿಲ್ಲ.ಅಷ್ಟೇ ಅಲ್ಲದೆ ಅನೇಕರು ಹೊನ್ನು, ಹೆಣ್ಣು, ಮಣ್ಣುಗಳ ಮೋಹಕ್ಕೆ ಒಳಗಾಗುವುದಿಲ್ಲ. ಇದಕ್ಕೆ ಕಾರಣವೇನು? ಅವುಗಳಿಗೆ ತುತ್ತಾಗುವ ವ್ಯಕ್ತಿಯ ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸಿದಾಗ ವ್ಯಕ್ತಿಯ ಆಸೆಯೇ ನಿಜವಾದ ಮಾಯೆ ಎಂಬುದು ಅರಿವಾಗುತ್ತದೆ. ವ್ಯಕ್ತಿಯ ಮನದಲ್ಲಿ ಆಸೆಯಿರದಾಗ ಈ ಯಾವ ವಸ್ತುಗಳೂ ಆತನ ಮೇಲೆ ಯಾವ ಪರಿಣಾಮವೂ ಬೀರಲಾರವು. ಆಸೆಯಿಂದ ತುಂಬಿದ ವ್ಯಕ್ತಿಯು ತನ್ನ ಆಸೆಗಳನ್ನು ಪೂರೈಸುವ ಅದೇ ಗುಣಗಳನ್ನು ಹೊಂದಿದ ಇತರ ವಸ್ತುಗಳ ಮೋಹಕ್ಕೂ ಒಳಗಾಗುತ್ತಾನೆ. ಈ ಎಲ್ಲವನ್ನೂ ಗಮನಿಸಿದಾಗ ಮೂಲತಃ ಯಾವ ವಸ್ತುವೂ ಸ್ವತಃ ಮಾಯೆಯಲ್ಲ. ಆಯಾ ವಸ್ತುಗಳ ಬಗ್ಗೆ ನಮ್ಮ ಮನದಲ್ಲಿರುವ ಆಸೆಯೇ ಮಾಯೆ ಎಂಬುದು ತಿಳಿದುಬರುತ್ತದೆ. ಈ ರೀತಿಯಾಗಿ ಅಲ್ಲಮಪ್ರಭುಗಳು “ಮಾಯೆ”ಯ ಬಗ್ಗೆ ನಮ್ಮ ಮನದಲ್ಲಿದ್ದ ಭ್ರಮೆಯನ್ನು ಬಾಳೆಯ ಹಣ್ಣಿನ ಸಿಪ್ಪೆ ಸುಲಿವಂತೆ ಸುಲಿದು ಸ್ಪಷ್ಟಪಡಿಸಿದ್ದಾರೆ.


No comments:

Post a Comment