ಘ್ರಾಣೇಂದ್ರಿಯ ವಿಷಯದಿಂದೆ ಭ್ರಮರ ಕೆಡುವುದು, ಸಂಪಿಗೆಯ ಪುಷ್ಪದಲ್ಲಿ!
ರಸನೇಂದ್ರಿಯ ವಿಷಯದಿಂದೆ ಮತ್ಸ್ಯ ಕೆಡುವುದು, ಜಾಲಗಾರನ ಬಲೆಯಲ್ಲಿ!
ನಯನೇಂದ್ರಿಯ ವಿಷಯದಿಂದೆ ಪತಂಗ ಕೆಡುವುದು, ದೀಪದ ಜ್ವಾಲೆಯಲ್ಲಿ!
ತ್ವಗಿಂದ್ರಿಯ ವಿಷಯದಿಂದೆ ಗಜವು ಕೆಡುವುದು, ರಾಜನ ಕೃತಕದಲ್ಲಿ!
ಶ್ರವಣೇಂದ್ರಿಯ ವಿಷಯದಿಂದೆ ಎರಳೆ ಕೆಡುವುದು, ಬೇಟೆಗಾರನ ಸರಳಿನಲ್ಲಿ!
ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ ಬಂಧನಕ್ಕೊಳಗಾದವು!
ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯಾ ಅಖಂಡೇಶ್ವರಾ?
TRANSLITERATION
GrANEMdriya viShayadiMde Bramara keDuvudu, saMpigeya puShpadalli!
rasanEMdriya viShayadiMde matsya keDuvudu, jAlagArana baleyalli!
nayanEMdriya viShayadiMde pataMga keDuvudu, dIpada jvAleyalli!
tvagiMdriya viShayadiMde gajavu keDuvudu, rAjana kRutakadalli!
SravaNEMdriya viShayadiMde eraLe keDuvudu, bETegArana saraLinalli!
iMtI prANigaLu oMdoMdu viShayadiMde baMdhanakkoLagAdavu!
paMcEMdriya viShaya vyApAradalli laMpaTarAda manujaru keTTa kEDanEneMbenayyA aKaMDESvarA?
CLICK HERE TO HEAR IT:
http://www.youtube.com/watch?v=p6ESC38SMgg
TRANSLATION
GrANEMdriya (sense organ of smell ) viShayadiMde (through the object of, becoming a victim of, because of) Bramara (Bee) keDuvudu (will be destroyed), saMpigeya (Champaka) puShpadalli (in the flower)!
rasanEMdriya (sense organ of taste) viShayadiMde (because of) matsya (fish) keDuvudu (will be destroyed), jAlagArana (fisherman’s) baleyalli (in the net)!
nayanEMdriya (sense organ of sight) viShayadiMde (because of) pataMga (moth) keDuvudu (will be destroyed), dIpada (of the lamp) jvAleyalli (in the flame)!
tvagiMdriya (sense organ of touch) viShayadiMde (because of) gajavu (Elephant) keDuvudu (will be destroyed), rAjana (of King’s) kRutakadalli (in the trick)!
SravaNEMdriya (sense organ of hearing) viShayadiMde (because of) eraLe (Deer) keDuvudu (will be destroyed), bETegArana (Hunter’s) saraLinalli (in the arrows)!
iMtI (Thus) prANigaLu (animals) oMdoMdu (just one) viShayadiMde (because of) baMdhanakkoLagAdavu (imprisoned, fell in the trap)!
paMcEMdriya (five organs) viShaya (influence, effect) vyApAradalli(in dealing with) laMpaTarAda (self-indulgent) manujaru (men) keTTa kEDanEneMbenayyA (what can I say about the way they are destroyed) aKaMDESvarA (Lord Master of the Universe)?
A victim of the sense organ of smell, the Bee dies in Champaka flower!
A victim of the sense organ of taste, the fish gets trapped in Fisherman’s net!
A victim of the sense organ of sight, the Moth dies in the flame of a lamp!
A victim of the sense organ of touch, the Elephant gets trapped in King’s trickery!
A victim of the sense organ of hearing, the Deer dies by hunter’s arrows!
Thus, animals get destroyed as victims of a single sense organ!
What can I say about the way of destruction of self-indulgent men with five sense organs, Oh! Lord Master of the Universe!
COMMENTARY
In this Vachana, Sharana Shanumuka Swamy comments on how complex a web we weave and gets trapped in to it, through our five sense organs. He illustrates the destructive power of each sense organ through examples of animals with one dominant sense organ in them. The Bee endowed with an intense sense of smell (Nose), gets attracted by the fragrance of the Champaka flowers, gets intoxicated and dies. The fish tries to grab the tasty bait (Tongue) and gets trapped in fisherman’s net. It takes only the organ of sight (Eye) for the Moth to get attracted to the flame of the lamp, to get burnt in it. Elephants are known to enjoy rubbing (Touch) their bodies against each other. It is said that Kings used this sense of touch to attract male elephants to female elephants, to trap them. Deer are known to follow the music (Ear). Hunters use the sense of their hearing to attract them and kill them. If a single sense organ can bring destruction to each of these animals, Shanmuka Swamy wonders what would be the fate of the man with five sense organs.
Man has five times the risk of becoming a victim of his sense organs compared to animals. The obvious message then is that we should train ourselves in utilizing our sense organs to the appropriate level and not become victims of the temptations brought about by them.
It is interesting to note that the animals destroy themselves as victims of their dominant sense organs. The man on the other hand not only creates the web around himself, but also contributes to the destruction of his environment. For example, to satisfy his taste (hunger) he kills other animals and destroys plants more than necessary and causes their extinction. To make himself comfortable (touch), he has created various devices that in turn have contributed to enlarged carbon foot prints, global warming, etc.
We will look at other Sharanas' views on this topic in subsequent postings.
Let us be aware of the consequences of our senses running amuck, to prevent destruction of ourselves and to protect the balance of the nature!
KANNADA COMMENTARY
ಷಣ್ಮುಖಸ್ವಾಮಿಗಳು ಇಲ್ಲಿ ಮಾನವನ ಬಂಧನಗಳ ಸಂಕೀರ್ಣತೆಯನ್ನು (complexity) ಮನದಟ್ಟಾಗುವಂತೆ ಉದಾಹರಣೆಸಹಿತ ತಿಳಿಸುತ್ತಿದ್ದಾರೆ. ಘ್ರಾಣೇಂದ್ರಿಯ(ಮೂಗು)ಕ್ಕೆ ವಶವಾಗಿ ಭ್ರಮರವು (ದುಂಬಿ) ಸಂಪಿಗೆ ಹೂವಿನ ಪರಿಮಳಕ್ಕೆ ಮನಸೋತು ಅಳಿಯುತ್ತದೆ, ರಸನೇಂದ್ರಿಯ(ನಾಲಗೆ)ಕ್ಕೆ ವಶವಾಗಿ ಮೀನು ಮೀನುಗಾರನು ಹಾಕಿದ ಆಹಾರವನ್ನು ತಿನ್ನುಲು ಹೋಗಿ ಬಲೆಯಲ್ಲಿ ಸಿಕ್ಕಿಕೊಳ್ಳುತ್ತದೆ, ನಯನೇಂದ್ರಿಯ(ಕಣ್ಣು)ಕ್ಕೆ ವಶವಾಗಿ ಪತಂಗವು ದೀಪದ ಜ್ವಾಲೆಗೆ ಬಲಿಯಾಗುತ್ತದೆ, ತ್ವಗಿಂದ್ರಿಯ(ಚರ್ಮ)ಕ್ಕೆ ವಶವಾಗಿ ಆನೆಯು ರಾಜನ ಮೋಸ ತಿಳಿಯದೆ ಹೆಣ್ಣಾನೆಯ ಸ್ಪರ್ಶಸುಖ ಬಯಸಿ ಬಂಧನಕ್ಕೆ ಒಳಗಾಗುತ್ತದೆ, ಶ್ರವಣೇಂದ್ರಿಯ(ಕಿವಿ)ಕ್ಕೆ ವಶವಾಗಿ ಎರಳೆಯು ಬೇಟೆಗಾರನು ಬೀಸಿದ ಬಲೆಗೆ ತುತ್ತಾಗುತ್ತದೆ, ಹೀಗೆ ಈ ಪ್ರಾಣಿಗಳೆಲ್ಲ ತಮ್ಮ ಒಂದೊಂದು ಇಂದ್ರಿಯಗಳಿಗೆ ವಶವಾಗಿ ಬಂಧನಕ್ಕೆ ಒಳಗಾಗಿ ನಾಶವಾಗುತ್ತವೆ. ಮಾನವನು ಐದೂ ಇಂದ್ರಿಯಗಳಿಗೆ ವಶನಾಗಿ ಕೆಟ್ಟ ಕೇಡನ್ನು ಹೇಗೆ ವರ್ಣಿಸುವುದು ಎಂದು ಕೇಳುತ್ತಾರೆ ಷಣ್ಮುಖಸ್ವಾಮಿಗಳು.
ಭ್ರಮರವು ದೂರದಿಂದ ಸಂಪಿಗೆಯ ಗಂಧಕ್ಕೆ ಮರುಳಾಗಿ ಅದರ ಹತ್ತಿರ ಹೋಗುತ್ತದೆ. ಆದರೆ ಸಂಪಿಗೆಯ ಕಟು ಗಂಧದಿಂದ ನಾಶ ಹೊಂದುತ್ತದೆ. ಮೀನು ತಾನು ಬಲೆಯಲ್ಲಿ ಬಿದ್ದುಬಿಡುತ್ತೇನೆ ಎಂಬುದರ ಅರಿವಿಲ್ಲದೆ ನಾಲಗೆಯ ಚಪಲಕ್ಕೆ ಮೀನುಗಾರನು ಎಸೆದ ಆಹಾರವನ್ನು ತಿನ್ನಲು ಹೋಗಿ ನಾಶವಾಗುತ್ತದೆ. ಪತಂಗವು ದೀಪದ ಜ್ವಾಲೆಯ ಬಣ್ಣಕ್ಕೆ ಸೋತು ಅದರ ಹತ್ತಿರ ಹೋಗಿ ತನ್ನ ರೆಕ್ಕೆಗಳನ್ನು ಸುಟ್ಟುಕೊಂಡು ನಾಶಹೊಂದುತ್ತದೆ. ಆನೆಯು ದೂರದಲ್ಲಿ ನಿಂತ ಹೆಣ್ಣಾನೆಯ ಸ್ಪರ್ಶ ಸುಖವನ್ನು ಅನುಭವಿಸುವ ಆಸೆಯಿಂದ ಅದರ ಹತ್ತಿರಕ್ಕೆ ಹೋಗಿ ರಾಜನ ಮೋಸಕ್ಕೆ ತುತ್ತಾಗಿ ಬಂಧನಕ್ಕೊಳಗಾಗುತ್ತದೆ. ಜಿಂಕೆಯು ಸಂಗೀತದಿಂದ ಆಕರ್ಷಣೆಗೊಂಡು ಬೇಟೆಗಾರನ ಬಲೆಗೆ ಬೀಳುತ್ತದೆ. ಈ ಉದಾಹರಣೆಗಳಲ್ಲಿ ನಾವು, ಒಂದೊಂದು ಪ್ರಾಣಿಯು ಒಂದೊಂದೇ ಇಂದ್ರಿಯಕ್ಕೆ ವಶವಾಗಿ ನಾಶಹೊಂದುವುದನ್ನು ನೋಡುತ್ತೇವೆ. ಆದರೆ ಮಾನವನೆಡೆಗೆ ನೋಡಿದಾಗ ವಸ್ತು ಸ್ಥಿತಿ ಬೇರೆಯಾಗಿದೆ. ಮಾನವನು ತನ್ನ ಐದೂ ಇಂದ್ರಿಯಗಳಿಗೆ ವಶನಾಗಿದ್ದಾನೆ. ಶಬ್ದ, ರಸ, ರೂಪ, ಗಂಧ ಮತ್ತು ಸ್ಪರ್ಶ ಗಳ ಸುಖಕ್ಕೆ ಆಕರ್ಷಿತನಾಗಿ ಅವುಗಳನ್ನು ಪಡೆಯಲು ಆತನು ಏನೇನು ಮಾಡುವುದಿಲ್ಲ? ಒಂದೊಂದು ಇಂದ್ರಿಯಗಳಿಗೆ ವಶವಾದ ಪ್ರಾಣಿಯೇ ನಾಶವಾಗುತ್ತದೆ. ಇನ್ನು ಐದೂ ಇಂದ್ರಿಯಗಳಿಗೆ ವಶವಾದವನ ಸ್ಥಿತಿಯನ್ನು ವರ್ಣಿಸಲು ಸಾಧ್ಯವೆ? ಆತನು ಕೇವಲ ಅವುಗಳ ವಶವಾಗಿಲ್ಲ. ಅವುಗಳ ವಶವಾಗುವ ಚಟಕ್ಕೆ ಸಿಕ್ಕಿದ್ದಾನೆ. ಆತನು ಪದೇ ಪದೇ ಅವುಗಳ ವಶವಾಗುತ್ತಾನೆ. ಆತನ ನಾಶ ಯವ್ಯಾವ ರೀತಿಯಲ್ಲಿ ನಡೆಯಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಷಣ್ಮುಖಸ್ವಾಮಿಗಳು.
ನಾವೆಲ್ಲರೂ “ನಾವೇನೂ ಮೇಲೆ ಹೇಳಿದ ಪ್ರಾಣಿಗಳಂತೆ ಇಂದ್ರಿಯಗಳಿಗೆ ವಶವಾಗಿ ನಾಶ ಹೊಂದುತ್ತಿಲ್ಲ. ಆದ್ದರಿಂದ ಈ ಮಾತು ನಮಗೆ ಅನ್ವಯವಾಗುವುದಿಲ್ಲ” ಎಂದುಕೊಳ್ಳಬಹುದು. ಆದರೆ ಕೇವಲ ದೈಹಿಕವಾಗಿ ಬಂಧನಕ್ಕೆ ಒಳಗಾಗುವುದು ಮತ್ತು ದೈಹಿಕವಾಗಿ ಸಾಯುವುದು ಮಾತ್ರ ಸಾವಲ್ಲ. ಚೆನ್ನಾಗಿ ಗಮನಿಸಿದಾಗ ನಮಗೆ ತಿಳಿದು ಬರುವುದೇನೆಂದರೆ ಇಂದ್ರಿಯಗಳಿಗೆ ವಶನಾಗಿ ಮೇಲೆ ಹೇಳಿದ ಪ್ರಾಣಿಗಳಂತೆ ಮಾನವನು ತಾನು ಮಾತ್ರ ನಾಶ ಹೊಂದುತ್ತಿಲ್ಲ, ಅವುಗಳ ದಾಸನಾಗಿ ತನ್ನೊಂದಿಗೆ ಸಮಸ್ತ ಜೀವರಾಶಿಯನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದಾನೆ. ಅವನು ತನ್ನ ನಾನಾ ಆಸೆಗಳಿಗೆ ವಶನಾಗಿ ಪರಿಸರವನ್ನು ನಾಶಮಾಡತ್ತಿರುವುದನ್ನು ನೋಡಿದರೆ ಇದು ತಿಳಿದುಬರುತ್ತದೆ. ಆತನ ಪ್ರತಿಯೊಂದು ಚಟುವಟಿಕೆಯು ದೊಡ್ಡ “ಹೆಜ್ಜೆ ಗುರುತು” (carbon footprint) ಮೂಡಿಸುತ್ತಿದೆ. ಆತನ ನಾಲಗೆ ರುಚಿಗಾಗಿ ಅನೇಕ ಪ್ರಾಣಿಗಳು ಜೀವತೆರುತ್ತಿವೆ, ನಿರ್ವಂಶವಾಗುತ್ತಿವೆ. ಆತನ ಸ್ವಾರ್ಥಕ್ಕಾಗಿ ಆತನು ಬಳಸುತ್ತಿರುವ ಅನೇಕ ವಸ್ತುಗಳು ಜಗತ್ತಿನಲ್ಲಿ ಕಸದ ಬೆಟ್ಟವನ್ನೇ ನಿರ್ಮಿಸುತ್ತಿವೆ, ತನ್ನ ಕಣ್ಣುಗಳನ್ನು ತಣಿಸಲು ಆತನು ಬಳಸುತ್ತಿರುವ ದೀಪಗಳು ಮಾಡತ್ತಿರುವ ನಾಶವನ್ನು ವರ್ಣಿಸಲಾಗದು. ರಾತ್ರಿಯನ್ನು ಕೃತಕ ದೀಪಗಳಿಂದ ಹಗಲಾಗಿ ಪರಿವರ್ತಿಸಿ ತನ್ನ ಬುದ್ಧಿಮತ್ತೆಗೆ ತಾನೆ ಗರ್ವಪಡುವ ಆತನು ಆ ದೀಪಗಳಿಂದ ಕತ್ತಲೆಯಲ್ಲಿ ಬದುಕುವ ವಿವಿಧ ಜೀವಿಗಳು ಹೇಳ ಹೆಸರಿಲ್ಲದೆ ನಾಶ ಹೊಂದಿರುವುದರಬಗ್ಗೆ ಆಲೋಚಿಸುವುದಿಲ್ಲ. ಆತನು ಬಳಸುವ ವಸ್ತುಗಳು ಭೂಮಿಯ ನೀರನ್ನು, ಗಾಳಿಯನ್ನು, ಸಮಸ್ತ ವಾತಾವರಣವನ್ನು ಕಲುಷಿತಗೊಳಿಸಿ ಕೇವಲ ಆತನಿಗೆ ಮಾತ್ರ ಹಾನಿಯುಂಟು ಮಾಡುತ್ತಿಲ್ಲ, ಮುಂಬರುವ ಮಾನವನ ಎಲ್ಲ ಪೀಳಿಗೆಯವರನ್ನು ಅನಂತ ಕಷ್ಟಕ್ಕೆ ಈಡು(target) ಮಾಡುತ್ತಿವೆ, ಸಮಸ್ತ ಜೀವಜಾಲಕ್ಕೆ(web of life) ಆಪತ್ತಾಗಿ ಪರಿಸರದ ಸಂತುಲನ (balance)ವನ್ನು ಕೆಡಿಸುತ್ತಿವೆ. ಇದೆಲ್ಲ ಇಂದ್ರಿಯಗಳಿಗೆ ವಶವಾಗಿ ತಾನು ಮಾತ್ರ ನಾಶಹೊಂದುವ ಪ್ರಾಣಿಗಳ ನಡತೆಗಿಂತಲೂ ಬಲು ವಿನಾಶಕಾರಿ. ಆದ್ದರಿಂದಲೇ ಷಣ್ಮುಖಸ್ವಾಮಿಗಳು “ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯಾ ಅಖಂಡೇಶ್ವರಾ?” ಎನ್ನುವ ಉದ್ಗಾರದಲ್ಲಿಯೇ ಎಲ್ಲವನ್ನೂ ಹೇಳಿದ್ದಾರೆ.
ಹಾಗಾದರೆ ಇಂದ್ರಿಯ ಸುಖವನ್ನು ಅನುಭವಿಸುವುದೇ ಮಹಾ ಅಪರಾಧವೇ? ಇಂದ್ರಿಯಗಳನ್ನು ಸಂಪೂರ್ಣವಾಗಿ ತುಳಿದಿಡಬೇಕೆ? ಆ ಬಗ್ಗೆ ವಚನಕಾರರು ಏನು ಹೇಳಿದ್ದಾರೆ ಎಂಬುದನ್ನು ಮುಂದಿನ ವಚನದಲ್ಲಿ ನೋಡೋಣ.
This vachana is powerful! The interpretation (environmental, natural resources cost aspect)is amazing. It shows how greedy, reckless and uncaring the human beings are. How self-serving we are and how little we care about all else.
ReplyDeleteThanks for the beautiful commentary!
Sajjan Shiva avarige
ReplyDeleteI am enjoying your blog thoroughly. You have created an effective way of presenting Vachanas. This is a ready package for use in chapter meetings.
Particularly, I appreciate your explanation in terms of application in our modern life.
Thanks
G Ayya
Maya Chandra wrote: "This Vachana is just too amazing. I enjoyed reading it and the interpretation. Keep up the good work !"
ReplyDelete