Friday, April 29, 2011

Vachana 37: Kotta Kudureyaneralariyade – Not Knowing what we have!


ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ ನೆರೆ ಮೂರು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ?


TRANSLITERATION

koTTa kudureyanEralariyade
mattoMdu kudureya bayasuvavaru
vIrarU alla dhIrarU alla
idu kAraNa nere mUru lOkavellavU
hallaNava hottukoMDu baLaluttaidAre
guhESvaraneMba liMgavanavaretta ballarO?


CLICK TO HEAR IT
http://www.youtube.com/watch?v=4512BUy3uhM


TRANSLATION
koTTa (given) kudureyanu ( horse) Eralu (to ride) ariyade( not knowing)
mattoMdu ( another ) kudureya (horse) bayasuva( wanting) avaru( those)
veerarU ( are brave) alla(not) dheerarU( are courageous) alla(not)
idu ( due to this) kaaraNa(reason) nere( all ) mooru( three) lOkavellavU ( people of worlds )
hallaNava( the saddle) hottukoMDu ( carrying) baLaluttaidaare ( are tiring themselves out)
guhEshvaraneMba (namely gOhEshvara) liMgavanu( icon? God) avaru (they) etta (where ) ballarO (will they know)


Those who not knowing to ride the given horse
Wish for another horse
Are neither brave nor courageous
Due to this reason, people of all three worlds
Are tiring themselves out carrying the saddle
How would such people realize Lord guhEshvara?


COMMENTARY

Allama Prabhu uses an interesting example to illustrate the nature of the man. When we are given a horse, not wanting to ride the given horse, we tire ourselves out searching for another (more suitable) horse, carrying the saddle with us. Allama Prabhu asks how such people who are so pre-occupied, always looking for something else would realize the Lord within.
Brave and courageous individuals utilize the horse given to them to the best of its abilities to get their tasks performed. Others, while knowing that they need to ride the horse given to them, shy away from it and look for a more suitable horse. In this process, they spend all their life always looking for something else, carry the burden of the saddle with them and get tired.
We should accept life opportunities and resources as they come. We should utilize them as we see fit, to the best of our abilities. This is a better approach than spending our lives searching for something else that we have visualized to be better and more appropriate. The neighbor’s yard is always greener than ours. While we should appreciate the neighbor’s yard, we should strive to be contented with our yard and try to beautify it to the best of our abilities.
Along the same lines, we should realize that the Lord is embedded in all of us. Unless we accept this fact and strive to find Him with an appropriate spiritual frame of mind, we will not be able to realize Him. Success in this spiritual path requires calmness of mind and persistence. Being preoccupied with “something else” always does not meet these requirements. As AllamaPrabhu questions, if we have the pre-occupation of searching for something else in our material acquisitions, how can we find success in realizing the Lord within?


Let us strive to make best of what is !

KANNADA COMMENTARY


ಸ್ವಾರಸ್ಯಕರವಾದ ಉದಾಹರಣೆಯಿಂದ ಕೂಡಿದ ಈ ವಚನವು ಬಹಳ ಸುಂದರವಾಗಿದೆ. ತನ್ನ ಪಾಲಿಗೆ ಬಂದ ಕುದುರೆಯನ್ನು ಏರಲು ಅರಿಯದೆ ಬೇರೆ ಕುದುರೆ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ. ಈ ಕಾರಣದಿಂದಾಗಿ ಮೂರು ಲೋಕದ ಜನರೆಲ್ಲರೂ ತಮಗೆ ಬೇಕಾದ ಕುದುರೆಯನ್ನು ಹುಡುಕುತ್ತ ಜೀನನ್ನು ಹೊತ್ತುಕೊಂಡು ಕಾಯುತ್ತಿದ್ದಾರೆ. ಇಂತಹವರು ಗುಹೇಶ್ವರನನ್ನ್ನು ಹೇಗೆ ಅರಿಯಲು ಸಾಧ್ಯ? ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.


ಈ ಮಾತಿನ ಸ್ವಾರಸ್ಯವನ್ನು ನೋಡೋಣ. ತಮ್ಮ ಪಾಲಿಗೆ ಒಂದು ಕುದುರೆ ಬಂದಿದೆ. ಆದರೆ ಅದರ ಸವಾರಿಮಾಡುವ “ಅರಿವಿಲ್ಲ”. ಆದ್ದರಿಂದ ಬೇರೆ ಕುದುರೆಯನ್ನು ಬಯಸುತ್ತಾರೆ ಜನ. ಅಂದರೆ, ಅವರಿಗೆ ಕುದುರೆ ಸವಾರಿ ಮಾಡುವ ರೀತಿ ತಿಳಿದಿದೆ, ಆದರೆ ತನ್ನ ಪಾಲಿಗೆ ಬಂದ ಕುದುರೆಯ ಸವಾರಿ ಮಾಡುವ “ಅರಿವಿಲ್ಲ” ಅಂದರೆ ಆ ಕುದುರೆ ತನಗೆ ಇಷ್ಟವಾಗದೆ ಇರಬಹುದು. ಆದರೆ, ಅದು ತನ್ನ ಪಾಲಿಗೆ ಬಂದದ್ದರಿಂದ ಅದು ಹೇಗೇ ಇರಲಿ ಅದನ್ನು ಸವಾರಿ ಮಾಡಿ ತನ್ನ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳುವ “ಅರಿವು” ಇಲ್ಲವೆಂದು ಅರ್ಥ. ಅಂದರೆ, ಬದುಕನ್ನು ಬಂದಂತೆ ಸ್ವೀಕರಿಸಬೇಕು. ಬದುಕಿನಲ್ಲಿ ಪ್ರಸಂಗಗಳು ನಮ್ಮಿಷ್ಟದಂತೆ ಬರುವುದಿಲ್ಲ. ಬಂದ ಪ್ರಸಂಗಗಳನ್ನೇ ಸ್ವೀಕರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ವೀರರು, ಶೂರರು ತಮ್ಮ ಪಾಲಿಗೆ ಬಂದ ಕುದುರೆಯನ್ನು ತಮ್ಮ ಇಷ್ಟಕ್ಕನುಸಾರವಾಗಿ ಪಳಗಿಸಿಕೊಳ್ಳುತ್ತಾರೆ. ಅದೇ ರೀತಿ, ಅರಿವಿರುವವರು ಜೀವನದಲ್ಲಿಯ ಪರಿಸ್ಥಿತಿಗಳನ್ನು ತಮ್ಮಿಷ್ಟದಂತೆ ಬಳಸಿಕೊಳ್ಳುತ್ತಾರೆ. ಈ ಅರಿವಿನ ಅಭಾವದ ಕಾರಣ ಜನರು ಜೀನನ್ನು(ಕುದುರೆಯ ಬೆನ್ನ ಮೇಲೆ ಕುಳಿತುಕೊಂಡಾಗ ಅದರ ಬೆನ್ನು ಒತ್ತದಂತೆ ಹಾಕುವ ತೊಗಲಿನ ಸಾಧನವನ್ನು) ಹೊತ್ತುಕೊಂಡು ಅದನ್ನು ತನಗೆ ಬೇಕಾದ ಕುದುರೆಯ ಮೇಲೆ ಹಾಕಿ ಸವಾರಿ ಮಾಡಲು ಕಾಯುತ್ತಿರುತ್ತಾರೆ. ಇದನ್ನೆ, ಅಲ್ಲಮ ಪ್ರಭುಗಳು “ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ” ಎಂದು ಹೇಳುತ್ತಾರೆ. ತಮ್ಮ ಅನುಕೂಲತೆ , ಸೌಕರ್ಯ, ಸೌಲಭ್ಯಗಳ ಜೀನನ್ನು ಹೊತ್ತುಕೊಂಡು ಸವಾರಿ ಮಾಡಲು ಕುದುರೆಯನ್ನು ಹುಡುಕುತ್ತಿದ್ದಾರೆ. ಅಂದರೆ ಅವರು ಆಗಲೇ ತಮ್ಮ ಸುತ್ತ ಅನುಕೂಲತೆ, ಸೌಕರ್ಯ ಮತ್ತು ಸೌಲಭ್ಯಗಳ ಒಂದು ಗೋಡೆಯನ್ನು ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ಬದಲಾವಣೆ ಮಾಡುವುದಾಗಲಿ ಅದನ್ನು ಮೀರಿ ಹೋಗುವುದಾಗಲಿ ಅವರಿಗೆ ಇಷ್ಟವಿಲ್ಲ. ಈ ಕಾರಣದಿಂದ ಬದುಕಿನಲ್ಲಿ ತಮಗಿಷ್ಟವಾಗದ ಪ್ರಸಂಗಗಳಲ್ಲಿ ದೋಷಗಳನ್ನೆಣಿಸಿ ಅವುಗಳಿಂದ ತಪ್ಪಿಸಿಕೊಳ್ಳುತ್ತಾರೆ. ಅದು ಹೇಡಿಯಂತೆ ಪಲಾಯನ ಮಾಡುವುದಾಗುತ್ತದೆ. ಇಂತಹ ಜನರು ಅನುಕೂಲಕರ ಸನ್ನಿವೇಶಗಳಿಗಾಗಿ ಜೀವನ ಪೂರ್ತಿ ಕಾಯುತ್ತ ಕಳೆಯುತ್ತಾರೆ. ಅವರ ಮನಸ್ಸು ಸದಾ ಕಾಯುವುದರಲ್ಲಿಯೇ ನಿರತವಾಗಿರುವುದರಿಂದ ಬೇರಾವ ಕೆಲಸವೂ ಅವರಿಂದ ಸಾಧ್ಯವಾಗುವುದಿಲ್ಲ. ಮೂರುಲೋಕದವರೆಲ್ಲ ಇದನ್ನೇ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಅಲ್ಲಮ ಪ್ರಭುಗಳು.
“ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ?” ಎಂಬ ಮಾತು ಬಹಳ ಆಳವಾದ ಅರ್ಥವನ್ನು ಗರ್ಭೀಕರಿಸಿಕೊಂಡಿದೆ.
ಲಿಂಗವನ್ನರಿಯುವುದು ಎಂದರೆ ತನ್ನನ್ನೇ ತಾನರಿಯುವುದು. ಹಾಗೆಂದರೇನು ಎಂಬ ಪ್ರಶ್ನೆ ಹುಟ್ಟುತ್ತದೆ. ಕನ್ನಡಿಯಲ್ಲಿ ನೋಡಿಕೊಂಡರೆ ಸಾಲದೆ? ಹೌದು. ತನ್ನನ್ನು ತಾನು ಅರಿಯಲು ಕನ್ನಡಿ ನೋಡಿಕೊಳ್ಳಬೇಕು. ಆದರೆ ಅದು ಬಾಹ್ಯ ಕನ್ನಡಿಯಲ್ಲ. ಇದೆಲ್ಲವು ಅಂತರಂಗದಲ್ಲಿ ನಡೆಯುವಂತಹದು. ಇಲ್ಲಿ ನಡೆಯುವುದೆಲ್ಲವೂ ಅಮೂರ್ತ (abstract) ವಾದದ್ದು. ಅದಕ್ಕೆ ವಿಶೇಷವಾದ ಮನಸ್ಥಿತಿಯ ಅವಶ್ಯಕತೆಯಿರುತ್ತದೆ. ಇಲ್ಲಿ ಮನಸ್ಸು ನಿಶ್ಚಲ ವಾಗಿರಬೇಕಾದದ್ದು ಬಹು ಮುಖ್ಯ. ಮನಸ್ಸು ತನ್ನ ದಿನನಿತ್ಯದ ಮನೋವ್ಯಾಪಾರಗಳಲ್ಲಿ ಸಂಪೂರ್ಣವಾಗಿ ಮುಳುಗಿ ಹೋದಾಗ ಅದು ಸದಾ ಗೊಂದಲದಲ್ಲಿದ್ದು ಪ್ರಕ್ಷುಬ್ಧಗೊಂಡಿರುತ್ತದೆ, ಅದು ನಿಶ್ಶಬ್ದವಾಗುವುದು ಸಾಧ್ಯವಾಗುವುದಿಲ್ಲ. ದಿನ ನಿತ್ಯದ ಬದುಕನ್ನು ಬಿಟ್ಟು ಓಡಿ ಹೋಗುವದನ್ನು ಶರಣರು ಒಪ್ಪುವುದಿಲ್ಲ. ಹಾಗಾದರೆ ಬದುಕನ್ನು ಹೇಗೆ ಬದುಕಬೇಕು? ಬಂದುದನ್ನು ಧೀರರಂತೆ ಸ್ವೀಕರಿಸುವುದೇ ಉಪಾಯ. ಏನೇ ಬಂದರೂ ಅದನ್ನು ಪ್ರಸಾದವೆಂದು ಸ್ವೀಕರಿಸಿದಾಗ ಮನಸ್ಸಿನಲ್ಲಿ ಯಾವ ಚಿಂತೆಯೂ ಇರುವುದಿಲ್ಲ. ನಿಶ್ಚಿಂತವಾದ ಮನಸ್ಸು ಮೌನವಾಗುವ ಸಾಧ್ಯತೆಯಿರುತ್ತದೆ. ಆದರೆ ಸದಾ ತಮ್ಮ ಅನುಕೂಲತೆಗಳನ್ನೇ ಅರಸುತ್ತಿರುವ, ಅಥವಾ ಎಲ್ಲದರಲ್ಲಿ ದೋಷವನ್ನೇ ಎಣಿಸುತ್ತಿರುವ ಮನಸ್ಸು ಹೇಗೆತಾನೆ ಪ್ರಶಾಂತ ಮತ್ತು ನಿಶ್ಚಲವಾಗಲು ಸಾಧ್ಯ? ಬದುಕನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುವ ಛಲ ಮತ್ತು ಆತ್ಮವಿಶ್ವಾಸ ಇದ್ದವರು ಯಶಸ್ವಿಯಾಗುತ್ತಾರೆ. ಅವರಿಗೆ ಭೌತಿಕ ಜೀವನದಲ್ಲಿ ನೆಮ್ಮದಿಯುಂಟಾಗಿ ದೇವರ ಬಗ್ಗೆ ಶ್ರದ್ಧೆ ಹುಟ್ಟುವ ಅವಕಾಶವಿರುತ್ತದೆ. ಸ್ವತಃ ಯಾವ ಪ್ರಯತ್ನವೂ ಮಾಡದೆ, ತಮ್ಮ ಇಷ್ಟಕ್ಕೆ ಅನುಗುಣವಾದ ಬದುಕನ್ನು ಬಯಸುವವರು ತಮ್ಮ ಮನಸ್ಸಿನ ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾರೆ. ಅವರ ಇಡೀ ಜೀವನ ನಿರೀಕ್ಷೆಯಲ್ಲಿಯೇ ಕಳೆದುಹೋಗುತ್ತದೆ. ಅವರಿಗೆ ತನ್ನ ತಾ ಅರಿಯುವ ಅವಕಾಶವಾಗಲಿ ಆಸಕ್ತಿಯಾಗಲಿ ಇರುವುದಿಲ್ಲ. ಅಂತಹ ಮನಸ್ಸು ಲಿಂಗವನ್ನು ಅರಿಯಲು ಸಾಧ್ಯವೆ? ಎನ್ನುತ್ತಾರೆ ಅಲ್ಲಮ ಪ್ರಭುಗಳು.


2 comments:

 1. I think this is a very significant Vachana, It is important to understand that we should appreciate what is given to us, rather than chase what we don't have. We should make the distinction that, it does not mean that you accept everything and not do the necessary action to improve things. I take it as, we should appreciate what is given to us that cannot be changed, and we should work for what should be changed and accept the outcome whatever it may be. Otherwise we tend use acceptance as an excuse for laziness. Please comment.

  ReplyDelete
 2. The first line and the second : The aspirant does not know what to do with the ' upadesa' of the Guru. When they do not understand the teacher or his instruction , they want change ... guru hopping... method hopping... philosophy hopping.....are a part of it
  the third line : Tells about the basic nature of an aspirant who seeks liberation. He is indeed a Veera... because he has a waged a battle.. that cannot be seen ....and Dheera.. because he has the courage to endure the struggle alone.
  the fifth line : this speaks of the 'saddle' . the saddle here is the breath. Every one breathes. but how many know it as the gateway to liberation. To understand the 'origin of breath ; is more important than to control it. When it is controlled it becomes stressfull on the sadhaka.
  The last line unambiguously tells about the futility of such practices.....
  The cosmic crucible is the lord of the 'nothingness' that is but demanifested ego ...and every thing that is manifest because because of it ( I) ...how ill the aspirant ever know it ?

  ReplyDelete