Saturday, April 23, 2011

Vachana 36: Devaloka Martyalokavembudu - Build Heaven on Earth


ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.

TRANSLITERATION

dEvalOka martyalOkaveMbudu bErilla kANiraNNa.
satyava nuDivudE dEvalOka!
mithyava nuDivudE martyalOka!
AcAravE svarga! anAcAravE naraka!
nIvE pramANa kUDalasaMgamadEva.


CLICK TO HEAR IT:

http://www.youtube.com/watch?v=MZSCcbh7oHg

TRANSLATION

dEvalOka (World of Gods) martyalOkavu(World of Mortals) eMbudu (so called) bErilla(not separate) kANiraNNa (you see).
Satyava(Truth) nuDivudE(speaking) dEvalOka!
Mithyava (untruth) nuDivudE(speaking) martyalOka!
AcAravE(good conduct) svarga! (heaven) anAcAravE(bad conduct) naraka!(hell)
nIvE(only you) pramANa(witness) kUDalasaMgamadEva (Lord kUDalasaMgamadEva).


The worlds of Gods and Mortals are not anywhere else, you see!
Speaking truth is the world of Gods!
Speaking untruth is the world of Mortals!
Good conduct is the heaven! Bad conduct is the hell!
Oh! Lord KudalaSangama, you are the witness!


COMMENTARY

In this popular Vachana, Basavanna emphasizes that it is up to us to create the type of environment we live in here on Earth, in this life. We always imagine a world of Gods where the rivers of nectar flow and Gods are always happy, singing and dancing. There is no fear of death or sorrow ever in that world. We imagine the world of mortals full of evil deeds and happenings. We visualize reaching one of these as destinations in our afterlife based on our deeds in this life. In this process, we forget the ‘present’. Along the same lines, we are conditioned to think that we reach either heaven or hell based on our conduct here on Earth. Basavanna insists that there is no separate God and Mortal worlds, neither there are hell and heaven. We create hell or heaven here on Earth. Good conduct and honesty create the heaven on Earth; bad conduct and dishonesty create hell. Essentially, we have one life to live; that is all we can control and enjoy. It is best to make it into a heaven through constant effort to do good deeds and honesty. Basavanna makes Lord KudalaSangama the witness for these facts. The Lord can be witness for our honesty, deeds and the state of mind as we create heaven or hell, when he is very close to us. Indeed, the Lord referred to here is the Lord within us. Essentially, it should be our goal in life to realize the Lord within us and strive to make Him the witness of our good deeds and honest living. We must create the heaven here on Earth; we must strive to make this world the world of Gods.


Let us live in the ‘present’, enjoy the ‘moment’ and build our heaven ‘here’ and ‘now’!


KANNADA COMMENTARY

ಶತಶತಮಾನಗಳು ಉರುಳುತ್ತಲೇ ಇವೆ. ಆದರೆ ಮಾನವನ ಮನಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡು ಬಂದಿಲ್ಲ. ದೇವಲೋಕ, ಮರ್ತ್ಯಲೋಕ, ಸ್ವರ್ಗ,ನರಕ, ಪಾಪ, ಪುಣ್ಯ ಇಂತಹ ನಾನಾ ವಿಷಯಗಳ ಬಗ್ಗೆ ಚಿಂತಿಸುತ್ತ ವರ್ತಮಾನವನ್ನೇ ಮರೆಯುತ್ತಾನೆ ಮಾನವ. ಸದ್ಯದ ಇರುವಿಕೆಯಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಾಗ ಮಾತ್ರ ದೇವಲೋಕ, ಮರ್ತ್ಯಲೋಕ, ಸ್ವರ್ಗ,ನರಕ, ಪಾಪ, ಪುಣ್ಯ ಇಂತಹ ನಾನಾ ವಿಷಯಗಳು ನಿರರ್ಥಕವೆಂದು ತಿಳಿದು ಬರುತ್ತದೆ. ಆದರೆ ಮಾನವನ ಮನಸ್ಸು, ಇಲ್ಲದೆ ಇರುವುದರ ಬಗ್ಗೆ ಯೋಚಿಸುವುದರಲ್ಲಿಯೇ ತನ್ನನ್ನು ತೊಡಗಿಸಿಕೊಂಡು ಈಗ ಇರುವುದನ್ನು ಮರೆತು ಬಿಡುತ್ತದೆ. ಪ್ರತಿಯೊಬ್ಬನು ತನ್ನ ಬದುಕಿನ ವರ್ತಮಾನದಲ್ಲಿ ಹೇಗೆ ನುಡಿಯುತ್ತಾನೆ, ಹೇಗೆ ನಡೆಯುತ್ತಾನೆ ಎಂಬುದು ಎಲ್ಲಕ್ಕಿಂತ ಮುಖ್ಯವಾದದ್ದು. ಅದನ್ನೇ ಬಸವಣ್ಣನವರು ಇಲ್ಲಿ ಹೇಳುತ್ತಾರೆ.


ದೇವಲೋಕ, ಮರ್ತ್ಯಲೋಕ, ಸ್ವರ್ಗ, ನರಕಗಳೆಂಬವು ದೂರದಲ್ಲಿ ಬೇರೆ ಎಲ್ಲಿಯೋ ಇರುವಂತಹವಲ್ಲ. ದೇವಲೋಕ. ಸ್ವರ್ಗ, ನರಕಗಳು ಸತ್ತನಂತರ ಮಾತ್ರ ಹೋಗುವಂತಹ ಸ್ಥಳಗಳಲ್ಲ. ಅವು ಇಲ್ಲಿಯೇ ಈಗಲೇ ಉಂಟಾಗುವಂತಹವುಗಳು. ಮೊದಲು ದೇವಲೋಕ, ಮರ್ತ್ಯಲೋಕ, ಸ್ವರ್ಗ, ನರಕವೆಂದರೇನು ಎಂದು ನೋಡೋಣ. ದೇವಲೋಕವೆಂದರೆ ಯಾವದೇ ರೀತಿಯ ದುಃಖ, ಕಷ್ಟಗಳೂ ಇಲ್ಲದ, ಮರಣವೇ ಇಲ್ಲದಂತಹ ಸ್ಥಳ. ಮರ್ತ್ಯವೆಂದರೆ ಸಾವು ಇರುವ ಲೋಕ. ಸ್ವರ್ಗವೆಂದರೆ ಸುಖದಸುಪ್ಪತ್ತಿಗೆ, ನರಕವೆಂದರೆ ನೋವಿನ ಆಗರ. ಅಷ್ಟೇ ಅಲ್ಲದೆ ಸತ್ತಮೇಲೆ ಹೊಂದುವಂತಹ ಲೋಕಗಳು. ಒಟ್ಟಿನಲ್ಲಿ, ಬದುಕಿನಲ್ಲಿ “ಇರುವುದ”ನ್ನು ಅರಿಯಲು ಒಂಟಾಗುವ ಸೋಮಾರಿತನದಿಂದ ಪಲಾಯನ ಮಾಡುವ ಮಾನವನ ಮನಸ್ಸು ನಿರ್ಮಿಸಿದ ಕಾಲ್ಪನಿಕ ಲೋಕಗಳಿವು.


ಸತ್ಯವ ನುಡಿಯುವುದೇ ದೇವಲೋಕ, ಸುಳ್ಳು ಅಥವಾ ಭ್ರಮಾತ್ಮಕವಾದದ್ದನ್ನು ಹೇಳುವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕವೆನ್ನುತ್ತಾರೆ ಬಸವಣ್ಣನವರು. ನೈತಿಕತೆ, ಆಚಾರಕ್ಕೆ ಅತ್ಯಂತ ಮಹತ್ವ ಕೊಟ್ಟಿದ್ದಾರೆ ಶರಣರು. ಆತ್ಮೋನ್ನತಿಗೆ ಮೂಲ ಆಧಾರವೇ ಸತ್ಯ. ಸತ್ಯ ಇರುವಲ್ಲಿ ನೈತಿಕತೆ ಮತ್ತು ಆಚಾರ ತಾನಾಗಿಯೇ ಅರಳುತ್ತದೆ. ಸತ್ಯ, ನೈತಿಕತೆ ಮತ್ತು ಒಳ್ಳೆಯ ಆಚಾರ ಇರುವಲ್ಲಿ ಭಯ, ನೋವು, ಸಾವಿಗೆ ಸ್ಥಾನವೇ ಇಲ್ಲ. ಆದ್ದರಿಂದ ಅದು ದೇವಲೋಕ ಮತ್ತು ಸ್ವರ್ಗಲೋಕವೇ ಹೌದು. ವಂಚನೆ, ಅಸತ್ಯ, ಅನೈತಿಕತೆ ಮತ್ತು ಅನಾಚಾರ ಮಾನವನನ್ನು ನೋವಿನ ಕೂಪಕ್ಕೆ ತಳ್ಳುತ್ತವೆ. ಒಂದು ವಂಚನೆ ಮುಚ್ಚಿ ಹಾಕಲು ಒಂದು ಸುಳ್ಳು, ಅದನ್ನು ಬಚ್ಚಿಡಲು ಇನ್ನೊಂದು, ಮತ್ತೊಂದು, ಮಗದೊಂದು, ಹೀಗೆ ಅದು ನಿರಂತರವಾಗಿ ಮುಂದುವರಿಯುತ್ತದೆ. ಮತ್ತು ವ್ಯಕ್ತಿ, ನಿರಂತರವಾಗಿ ಅಪ್ರಾಮಾಣಿಕತೆಯಲ್ಲಿ ತೊಡಗಿ ಅಪರಾಧಿ ಭಾವ, ಭಯ ಮತ್ತು ನೋವಿಗೆ ಶರಣಾಗುತ್ತನೆ. ಇದಕ್ಕಿಂತ ದೊಡ್ಡ ನರಕವಿನ್ನೆಲ್ಲಿ?


ತಾವು ಹೇಳಿದ ಈ ಮಾತಿಗೆ ಕೂಡಲಸಂಗಮನನ್ನೇ ಪ್ರಮಾಣವಾಗಿಸುತ್ತಾರೆ ಬಸವಣ್ಣನವರು. ಕೂಡಲಸಂಗಮನೆಂದರೆ ಯಾರು? ತನ್ನ ಪರಮ ಅರಿವೇ ಕೂಡಲಸಂಗಮ. ತನ್ನನ್ನೇ ತಾನು ಎಳೆ ಎಳೆಯಾಗಿ ಬಿಚ್ಚಿ ತೆರೆದು ನೋಡಿದಾಗ ಅಲ್ಲಿ ಕೇವಲ “ಇರುವುದು” ಮಾತ್ರವಿರುತ್ತದೆ. ಅಲ್ಲಿ ಪಾಪ, ಪುಣ್ಯ, ಸತ್ಯ, ಮಿಥ್ಯೆ, ತಪ್ಪು, ಸರಿ ಯಾವವೂ ಕಂಡು ಬರುವುದಿಲ್ಲ. ಈ ಮನಸ್ಥಿತಿಯೇ, ದೇವಲೋಕ, ಮರ್ತ್ಯಲೋಕ, ಸ್ವರ್ಗ, ನರಕಗಳು ಬೇರೆಯಿಲ್ಲ ಎನ್ನುವುದಕ್ಕೆ ಸಾಕ್ಷಿ. ಏಕೆಂದರೆ ಈ ಮನಸ್ಥಿತಿಯಲ್ಲಿ ಎಲ್ಲ ಭೇದ ಭಾವಗಳೂ ಅಳಿದುಹೋಗುತ್ತವೆ. ಅದಕ್ಕೇ ಬಸವಣ್ಣನವರು, ದೇವಲೋಕ ಮರ್ತ್ಯಲೋಕ ಬೇರೆಯೂ ಅಲ್ಲ, ಬೇರೆಲ್ಲಿಯೂ ಇಲ್ಲ್ಲವೆಂದು ಹೇಳುತ್ತಾರೆ. ಇದನ್ನು ಕಂಡುಕೊಳ್ಳುವುದು ನಮಗೆ ಬಿಟ್ಟದ್ದು.














No comments:

Post a Comment