Friday, April 8, 2011

Vachana 34 : Aasattenalasidenendare - Breaking Karmic Cycle

ಆಸತ್ತೆನಲಸಿದೆನೆಂದರೆ ಮಾಣದು,
ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,
ಏವೆನೇವೆನೆಂದರೆ ಮಾಣದು
ಕಾಯದ ಕರ್ಮದ ಫಲಭೋಗವು
ಕೂಡಲಸಂಗನ ಶರಣರು ಬಂದು
"ಹೋ ಹೋ ಅಂಜದಿರಂಜದಿರು" ಎಂದರಾನು ಬದುಕುವೆನು

TRANSLITERATION

AsattenalasideneMdare mANadu,
bEsatte beMbiddeneMdare mANadu,
EvenEveneMdare mANadu,
kAyada karmada PalaBOgavu,
kUDalasaMgana SaraNaru baMdu,
"hO hO aMjadiraMjadiru" eMdarAnu badukuvenu

 CLICK TO HEAR IT

http://www.youtube.com/watch?v=47yMr5GzASU

TRANSLATION

Asattenu (tired) alasidenu(weary) eMdare (if said) mANadu(does not let go),
bEsatte (bored) beMbiddenu (begged or pleaded) eMdare(if said) mANadu(does not let go),
Even (what shall I do) Evenu (what shall I do) eMdare(if said) mANadu(does not let go),
kAyada(body’s) karmada(karma’s) PalaBOgavu(fruits, consequences),
kUDalasaMgana (Lord KudalaSangama’s) SaraNaru(devotees) baMdu(arrived),
"hO hO(oh, you) aMjadiru (do not fear) aMjadiru(do not fear)" eMdare ( if said) Anu( I) badukuvenu( will survive)

(The word ‘karma’ in the following stands for ‘fruits or consequences of karma, our prior actions).
My karma won’t leave me alone even when I am tired and weary!
My karma won’t leave me alone even when I am bored and I plead!
My karma won’t leave me alone even when I am helpless and don’t know what to do!
Oh! Lord KudalaSangama! when your devotees assure me not to fear, I will survive.

COMMENTARY

When things do not go our way, we attribute that to ‘Karmic theory’. We think that it is because of our accumulated Karma from our previous actions. This kind of attribution to Karma extends so much that we start saying that even our ‘destiny’ i.e. consequences of what I might do in future are all predetermined. Thus we try to get away from taking responsibility for our actions. We feel helpless and cannot escape from consequences of our Karma. Basavanna addresses such a state of mind and says that we can survive the consequences of karma through the company of the devotees of the Lord. The company of devotees sets us in the path of acquisition of knowledge to see within and develop ourselves into individuals performing right actions. With such knowledge one can succeed in breaking the cause –effect-cause of Karmic theory.

Karmic theory has received intense scrutiny and attention over the time immemorial. Here is an excerpt from Talks by J. Krishnamurti in Colombo, Ceylon 1957 on this topic:

What do we mean by karma? The word itself, as you know, means to act, to do. You never act without a cause, or without a motive, or without being compelled by circumstances. You act either under the influence of the past, of a thousand yesterdays, or because you are pushed in a particular direction by the pressure of immediate circumstances. That is, there is a cause and an effect. ……. Now, is the cause ever fixed, and the effect already determined? In the case of an acorn, a seed, there is a fixed cause and a fixed effect. An acorn can never become a palm tree, it will always produce an oak. We think in the same way about karma. Having done something yesterday, which is the cause, I think the effect of that action today is predetermined, fixed. But is it? Is the cause fixed? And is the effect fixed? Does not the effect of a cause become in its turn the cause of still another effect? …….. We know that action has a cause. I am ambitious; therefore, I do something. There is a cause and there is an effect. Now, does not the effect become the cause of a future action? Surely, there is never a fixed cause, nor a fixed effect. Each effect, undergoing innumerable influences and being transformed by them, becomes the cause of still another effect. So there is never a fixed cause and a fixed effect, but a chain of cause-effect-cause.
You did something yesterday which had its origin in a previous cause, and which will lead to certain consequences tomorrow; but in the meantime the consequences, being subject to innumerable pressures, influences, have undergone a change. You think that a given cause will produce a fixed effect, but the effect is never exactly the same because something has happened between the two. So there is a continuous chain of cause becoming effect, and effect becoming cause. ………. this chain of cause-effect becoming another cause can be broken at any time, and that the mind can be free of karma. Through understanding the whole process of the mind which is conditioned by the past, you will see for yourself that the effect of the past in the present or in the future is never fixed, never absolute, and final. To think that it is final is degradation, ignorance, darkness. Whereas, if you see the significance of cause-effect becoming again the cause, then because that whole process is for you a living, moving thing, you can break it at any time; therefore, you can be free of the past. ………. you can immediately transform yourself.


Let us strengthen our spiritual path with the company of devotees and break the karmic cycle!

KANNADA COMMENTARY

“ಈ ಕಾಯದ ಕರ್ಮದ ಫಲದಿಂದ ಬಿಡುಗಡೆ ನನಗೆ ಸಾಧ್ಯವಾಗುತ್ತಿಲ್ಲ. ಅಯ್ಯೋ ನನಗೆ ಶ್ರಮವಾಯಿತು, ಇದರಿಂದ ನಾನು ದಣಿದಿದ್ದೇನೆ. ಇದರ ಜೊತೆ ಹೆಣಗಾಡಿ ಬೇಸತ್ತಿದ್ದೇನೆ, ಅಯ್ಯೋ ಇದರಿಂದ ನನ್ನನ್ನು ಬಿಡಿಸು ಎಂದು ಕೇಳಿಕೊಂಡರೂ ಈ ಕರ್ಮದ ಫಲ ನನ್ನನ್ನು ಬಿಡದು. ನಾನಿನ್ನು ಏನೂ ಮಾಡಲಾರೆ, ಅದನ್ನು ನಾನು ಅನುಭೋಗಿಸಲೇ ಬೇಕಾಗಿದೆ.. ಇನ್ನೇನು ಮಾಡಲಿ ಇನ್ನೇನು ಮಾಡಲಿ” ಎಂದು ಜೀವ ಅಳಲುತ್ತದೆ. ಇಂತಹ ಸಮಯದಲ್ಲಿ ಶರಣರು ಬಂದು “ ಅಂಜದಿರು ಅಂಜದಿರು” ಎಂದು ಹೇಳಿದರೆ ನನಗೆ ಬದುಕುವ ಬಲ ಬರುತ್ತದೆ, ಎನ್ನುತ್ತಾರೆ ಬಸವಣ್ಣನವರು.

ಕರ್ಮ ಎಂದರೇನು ಎನ್ನುವುದರ ಬಗ್ಗೆ ನಮ್ಮ ಗ್ರಂಥಗಳಲ್ಲಿ ಬೇಕಾದಷ್ಟು ಚರ್ಚೆ ನಡೆದಿದೆ. ಕರ್ಮ ಎಂದರೆ, ನಾವು ಹಿಂದೆ ಅಥವಾ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವೆಂದೂ, ಅದನ್ನು ಏನು ಮಾಡಿದರೂ ಬದಲಾಯಿಸಲಾಗದು ಎಂದೂ, ಅದನ್ನು ಅನುಭವಿಸಿಯೇ ತೀರಬೇಕೆಂದು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಹೀಗಾಗಿ ಒಂದು ರೀತಿಯ ನಿರಾಶೆಯ ಸ್ಥಿತಿ ಉಂಟಾಗುತ್ತದೆ. ನಾವು ಕರ್ಮದ ಮುಂದೆ ನಿಸ್ಸಹಾಯಕರಾಗುತ್ತೇವೆ. ಮುಂದೆ ಯೋಚಿಸುವುದೇ ಇಲ್ಲ. ಕರ್ಮವೆಂದರೇನು? ದಾರುಣವಾದ ಅದರ ಫಲವನ್ನು ಅನುಭವಿಸಲೇ ಬೇಕೇ? ಅದರಿಂದ ಹೇಗೆ ಮುಕ್ತರಾಗಬಹುದು, ಎಂಬುದನ್ನು ಜಿಡ್ಡು ಕೃಷ್ಣಮೂರ್ತಿಯವರು ತಮ್ಮ ಒಂದು ಭಾಷಣದಲ್ಲಿ ಬಹಳ ಸುಲಭವಾಗಿ ಅರ್ಥವಾಗುವಂತೆ, ಬಹು ಮಹತ್ವಪೂರ್ಣವಾದ ಮಾತನ್ನು ಹೇಳುತ್ತಾರೆ. ಅದನ್ನು ಇಲ್ಲಿ ಉದ್ಧರಿಸುವುದು ಸೂಕ್ತವೆನಿಸುತ್ತದೆ:

“ಕರ್ಮವೆಂದರೇನು? ನಿಮಗೆಲ್ಲ ತಿಳಿದಿರುವಂತೆ ಆ ಪದದ ಅರ್ಥವೇ ಕಾರ್ಯ ಮಾಡು, ಕೃತ್ಯವೆಸಗು ಎಂದು. ಯಾರೂ ಕಾರಣವಿಲ್ಲದೆ, ಉದ್ದೇಶವಿಲ್ಲದೆ ಅಥವಾ ಪರಿಸ್ಥಿತಿಯ ಒತ್ತಡವಿಲ್ಲದೆ ಕಾರ್ಯ ಮಾಡುವುದಿಲ್ಲ.................... ಅಂದರೆ, ಅಲ್ಲಿ ಕಾರಣ ಮತ್ತು ಕಾರ್ಯವಿದೆಯೆಂದರ್ಥ.................... ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ, ಕಾರಣವು ಸದಾ ನಿಗದಿತವಾಗಿರುತ್ತದೆಯೇ? ಮತ್ತು ಕಾರ್ಯವು ಮೊದಲೇ ಖಚಿತಗೊಂಡಿರುತ್ತಯೇ? ನಿರ್ಧರಿಸಲಾಗಿರುತ್ತದೆಯೇ? .......ಮರದ ಬೀಜದ ವಿಷಯದಲ್ಲಿ ಕಾರಣ ಮತ್ತು ಕಾರ್ಯ ಮೊದಲೇ ನಿಗದಿತವಾಗಿರುತ್ತವೆ. ಮಾವಿನ ಬೀಜದಿಂದ ಬೇವಿನ ಮರಬೆಳೆಯುವುದಿಲ್ಲ. ಅದು ಎಂದಿಗಾದರೂ ಮಾವಿನ ಮರವೇ ಆಗುತ್ತದೆ. ನಾವು ಕರ್ಮದ ಬಗ್ಗೆಯೂ ಇದೇ ರೀತಿಯಾಗಿ ಯೋಚಿಸುತ್ತೇವೆ ಅಲ್ಲವೇ? ನಿನ್ನೆಯ ದಿನ ಏನೋ ಮಾಡಿರುವುದರಿಂದ (ಅದು ಕಾರಣ) ಇಂದಿನ ಕಾರ್ಯವು ಮೊದಲೇ ನಿಗದಿತವಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ. ಆದರೆ ಅದು ಹಾಗಿದೆಯೇ? ಕಾರಣ ಕಾರ್ಯಗಳೂ ಮೊದಲೇ ನಿರ್ಧರಿತವಾಗಿರುತ್ತವೆಯೇ? ಕಾರಣದ ಕಾರ್ಯವು ಮತ್ತೆ ಕಾರಣವಾಗಿ ಇನ್ನೊಂದು ಕಾರ್ಯಕ್ಕೆ ಆಸ್ಪದ ಮಾಡಿಕೊಡಲಾರದೆ? .........
“.... ಖಂಡಿತವಾಗಿಯೂ ನಿಗದಿತವಾದ ಕಾರಣ ಅಥವಾ ಕಾರ್ಯವಾಗಲಿ ಇಲ್ಲ. ಪ್ರತಿಯೊಂದು ಪರಿಣಾಮವು ಅಸಂಖ್ಯ ಪ್ರಭಾವಕ್ಕೊಳಗಾಗುತ್ತದೆ, ಮತ್ತು ಅವುಗಳಿಂದ ಬದಲಾವಣೆಹೊಂದುತ್ತದೆ, ಇನ್ನೊಂದು ಕಾರ್ಯದ ಕಾರಣವಾಗುತ್ತದೆ. ಆದ್ದರಿಂದ ಮೊದಲೇ ನಿಗದಿತವಾದ ಕಾರಣವಾಗಲಿ ಅಥವಾ ಕಾರ್ಯವಾಗಲಿ ಇಲ್ಲವೇ ಇಲ್ಲ. ಬದಲಾಗಿ ಕಾರಣ ಮತ್ತು ಕಾರ್ಯದ ಸರಪಣಿಯಾಗಿರುತ್ತದೆ. ......... ಆದರೆ, ಕಾರಣ-ಪರಿಣಾಮ ಮತ್ತೆ ಕಾರಣವಾಗುವುದನ್ನು ನೀವು ಕಂಡುಕೊಂಡರೆ, ಅದರ ಇಡೀ ಪ್ರಕ್ರಿಯೆಯು ನಿಮಗೆ ಒಂದು ಜೀವಂತವಾದ, ಚಲನೆಶೀಲ ವಿಷಯವಾಗುತ್ತದೆ, ನೀವು ಅದನ್ನು ಯಾವಾಗಬೇಕಾದರೂ ನಿಷ್ಕ್ರಿಯಗೊಳಿಸಬಹುದು.(ಮುರಿಯಬಹುದು)........... ಕಾರಣ, ಪರಿಣಾಮವು ಇನ್ನೊಂದು ಕಾರಣವಾಗುವ ನಿರಂತರವಾದ ಸರಪಣಿಯನ್ನು ಯಾವಾಗ ಬೇಕಾದರೂ ಕಿತ್ತೊಗೆಯಬಹುದು.” (ಜಿಡ್ಡು ಕೃಷ್ಣಮೂರ್ತಿಯವರು ೧೯೫೭ರಲ್ಲಿ, ಸಿಲೋನಿನಲ್ಲಿ ಮಾಡಿದ ಭಾಷಣದಿಂದ ಆಯ್ದ ಭಾಗದ ಅನುವಾದ.)

ಈ ರೀತಿಯಾಗಿ ತಿಳಿಸಿ ಹೇಳಿ, ಕರ್ಮದ ಹಿಡಿತದಿಂದ ಪಾರಾಗಲು ಸಹಾಯ ಮಾಡುವಂತಹವರು ಶರಣರು. ಅಂತಹ ಶರಣರು ಬಂದು “ಅಂಜದಿರು ಅಂಜದಿರು” ಎಂದು ಹೆಳಿ ಅದರಿಂದ ಬಿಡಿಸಿಕೊಳ್ಳುವ ದಾರಿಯನ್ನು ತೋರಿಸಿದರೆ ಬದುಕುವುದು ಸುಲಭವಾಗುತ್ತದೆ ಎನ್ನುತ್ತಾರೆ ಬಸವಣ್ಣನವರು.


No comments:

Post a Comment