ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಣ್ಬುದೆ?
ಹುಲಿಗಂಜಿ ಹುತ್ತ ಹೊಕ್ಕಡೆ ಸರ್ಪ ತಿಂಬುದ ಮಾಣ್ಬುದೆ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಣ್ಬುದೆ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರನೇನೆಂಬೆ ಗುಹೇಶ್ವರಾ?
TRANSLITERATION
kaLLagaMji kADa hokkaDe huli tiMbuda mANbude?
huligaMji hutta hokkaDe sarpa tiMbuda mANbude?
kAlagaMji BaktanAdaDe karma tiMbuda mANbude?
iMtI mRutyuvina bAya tuttAda
vEShaDaMbakaranEneMbe guhESvarA?
CLICK TO HEAR IT
http://www.youtube.com/watch?v=CjzjCblJv-Y
TRANSLATION
kaLLage (of thief) aMji(afraid) kADa(jungle) hokkaDe(if entered) huli(tiger) tiMbuda(without consuming) mANbude(leave you alone, preventable)?
Hulige (of tiger) aMji(afraid) hutta(snake pit) hokkaDe(if entered) sarpa(snake) tiMbuda (without consuming) mANbude(preventable)?
kAlage (of death) aMji (afraid) Baktanu (devotee)AdaDe(becomes) karma (karma – outcome of previous actions) tiMbuda(without consuming) mANbude(leave us alone, preventable)?
iMtI(this way) mRutyuvina(death’s) bAya(mouth’s) tuttAda(food for)
vEShaDaMbakaranu (disguised people)EneMbe(what shall I call) guhESvarA(Lord of Caves, signature used Allama Prabhu)?
Being afraid of a thief if we enter a jungle, would a tiger leave us alone without clobbering!
Being afraid of the tiger if we enter a snake pit, would the snake leave us alone without gulping!
Being afraid of the death if we become devotees, would our karma leave us alone without consuming!
Alas, I pity these individuals disguised as devotees trying to escape from the jaws of death, Oh! Lord guhESvarA!
COMMENTARY
Allama Prabhu in this beautiful vachana stresses that the devotional attitude must come from within and for the right reasons. He comments on individuals taking on a devotional path out of the fear of death or other displeasures and says that such devotion will not save one from the death or the displeasure. He uses real life examples to illustrate how we flee from one fear, only to land in the threat of another. It is obvious that we take all the precautions possible to save our wealth being taken away by thieves. One such precaution would be to move into a jungle taking all the wealth with us hoping to hide from thieves. While this act saves us from the thief, it puts us in the danger of Tiger’s mouth. In turn, if we enter a snake pit to escape from the tiger, the snake would be after us. Along the same lines, getting disguised as a devotee will not bring us the freedom from death or karma (the fruits of our prior actions). A true devotee will have to cultivate the inner strength to combat them. Indeed, we cannot escape from death. But, living in the constant fear of death or developing a superficial devotional attitude with the hopes of combating it, are not the ways of true devotees. Our karma is a result of our past actions. The actions (effects) we perform are due to one or more reasons (causes). Causes create effects, which in turn become causes. The cause-effect cycle continues filling the karma bank. The only way to empty this bank is to develop the strength and realization to terminate the cause-effect cycle, by altering our actions to bring about the effects that do not recycle into further causes. This realization has to come from within the individual. A true devotee is such a realized individual. Such a realized individual does not fear death or displeasure!
Let us strive to wipe out the karma bank through knowledge and self discipline!
KANNADA COMMENTARY
ಬಹಳ ಸೊಗಸಾದ ವಚನವಿದು. ಭಯದಿಂದ ಪೀಡಿತನಾದವನ ಸ್ಥಿತಿಯನ್ನು ಉದಾಹರಣೆ ಸಹಿತವಾಗಿ ಬಹಳ ಸುಂದರವಾಗಿ ವಿವರಿಸಿದ್ದಾರೆ ಇಲ್ಲಿ. ಕಳ್ಳನಿಗೆ ಅಂಜಿ ಕಾಡನ್ನು ಹೊಕ್ಕರೆ ಕಾಡಿನಲ್ಲಿ ಹುಲಿಗೆ ತುತ್ತಾಗದೆ ಇರಲು ಸಾಧ್ಯವೆ? ಹುಲಿಯಿಂದ ತಪ್ಪಿಸಿಕೊಳ್ಳಲು ಹುತ್ತದ ಅಶ್ರಯ ಪಡೆದರೆ ಅಲ್ಲಿರುವ ಹಾವಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಅದೇ ರೀತಿ ಮರಣಕ್ಕೆ ಅಂಜಿ ಭಕ್ತನಾದರೆ ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಕೊನೆಗೂ ಅವರು ಮೃತ್ಯುವಿನ ತುತ್ತಾಗುತ್ತಾರೆ ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.
ಒಬ್ಬ ವ್ಯಕ್ತಿ, ಊರಲ್ಲಿದ್ದರೆ, ತನ್ನ ಸಂಪತ್ತು ಕಳವಾಗುತ್ತದೆ ಎಂದು ಚಿಂತಿತನಾಗುತ್ತಾನೆ. ಕಳ್ಳ ಕಾಡಿಗೆ ಬರಲಾರನು,ಅಲ್ಲಿ ಯಾವ ಭಯವೂ ಇರುವುದಿಲ್ಲ ಎಂದು ಯೋಚಿಸಿ ಆತನು ಕಾಡಿಗೆ ಹೋಗುತ್ತಾನೆ. ಅಲ್ಲಿ ಆತನ ಸಂಪತ್ತು ಸುರಕ್ಷಿತವಾಗಿರುತ್ತದೆ. ಏಕೆಂದರೆ ಕಾಡಿನ ಪಶುಗಳಿಗೆ ಆತನ ಸಂಪತ್ತಿನಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ಆದರೆ, ಸಹಜವಾಗಿಯೇ ಹುಲಿ, ಚಿರತೆಗಳು, ಆಹಾರವೆಂದು ಅವನನ್ನೇ ತಿನ್ನಲು ಬರುತ್ತವೆ. ಆಗ ಆತನು ಎದುರಿಗೆ ಕಂಡ ಹುತ್ತದಲ್ಲಿ ಅಡಗಿಕೊಳ್ಳುತ್ತಾನೆ. ಆದರೆ ಅಲ್ಲಿ ಹಾವು ಆತನನ್ನು ಕಚ್ಚಲು ಬರುತ್ತದೆ. ಹೀಗೆ ಒಂದು ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇನ್ನೊಂದು ಭೀತಿಗೆ ತುತ್ತಾಗುತ್ತಾನೆ. ಅದೇ ರೀತಿಯಾಗಿ, ಮರಣದ ಭಯದಿಂದ ವ್ಯಕ್ತಿಯು ಭಕ್ತನಾಗುತ್ತಾನೆ. ನೈಜ ಭಕ್ತಿಯಿಂದಲ್ಲ. ಕೇವಲ ತೋರಿಕೆಯ ಭಕ್ತಿಯನ್ನು ಕೈಗೊಳ್ಳುತ್ತಾನೆ. ಆದ್ದರಿಂದ ಕರ್ಮದಿಂದ ಬಿಡುಗಡೆಯ ದಾರಿ ಅವನಿಗೆ ತಿಳಿಯುವುದಿಲ್ಲ. ಕರ್ಮ ಎಂದರೆ ನಾವು ಮಾಡಿದುದರ ಫಲ ಎನ್ನಬಹುದು. ಅಂದರೆ, ಕಾರ್ಯ ಕಾರಣ ಸಂಬಂಧ. ನಾವು ಏನು ಮಾಡುತ್ತೇವೆಯೋ ಅದರ ಪರಿಣಾಮವನ್ನು ನಾವು ಅನುಭವಿಸಬೇಕು. ಕಾರ್ಯವು ಕಾರಣವಾಗುತ್ತದೆ, ಕಾರಣವು ಕಾರ್ಯವಾಗುತ್ತದೆ. ಹೀಗೆ ಇದು ನಡೆಯುತ್ತಲೇ ಇರುತ್ತದೆ. ಆದರೆ ನಾವು ಇಷ್ಟಪಟ್ಟರೆ ಕಾರ್ಯದ ಪರಿಣಾಮವನ್ನು ಬದಲಿಸಬಹುದು. ಅದನ್ನು ಬದಲಿಸಿದಾಗ ಅದು ಮತ್ತೆ ಕಾರಣವಾಗುವುದಿಲ್ಲ. ಅಂದರೆ ಕರ್ಮವು ಮುಂದುವರೆಯುವುದಿಲ್ಲ. ಪೂರ್ಣವಾದ ಅರಿವಿನಿಂದ, ಎಚ್ಚರದಿಂದ ಅದು ಸಾಧ್ಯವಾಗುತ್ತದೆ ಎನ್ನುತ್ತಾರೆ ಶರಣರು. ನಿಜವಾದ ಭಕ್ತನು ಶ್ರದ್ಧೆಯಿಂದ ತನ್ನ ತಾನರಿಯುವುದರಲ್ಲಿ ತೊಡಗಿಸಿಕೊಳ್ಳುತ್ತಾನೆ. ಆ ಅರಿವಿನಿಂದ ಆತನಿಗೆ ಈ ಭವದಿಂದ ಬಿಡುಗಡೆ ಪಡೆಯುವ ಕಲೆ ತಿಳಿಯುತ್ತದೆ. ಆಗ ಆತನ ಮನದ ಭೀತಿ ಅಳಿಯುತ್ತದೆ. ಇಲ್ಲದಿದ್ದಲ್ಲಿ ಒಂದಾದಮೇಲೊಂದರಂತೆ ಸಂಸಾರದ ದುಃಖಗಳು ಅವನನ್ನು ಮುಕ್ಕುತ್ತವೆ.
ನಾವೆಲ್ಲರು ಈ ವಚನವನ್ನು ಓದಿ, ಓಹೋ ಇದು ನಾವಲ್ಲ. ನಾವೇನೂ ಭಕ್ತನ ವೇಷ ಧರಿಸಿಲ್ಲ. ಎಂದು ಬೀಗಬಹುದು. ಆದರೆ ಈ ವಚನ ನಮಗೂ ಪ್ರಸ್ತುತವಾಗಿದೆ. ನಾವು ಭಕ್ತನ ವೇಷ ತೊಡದಿದ್ದರೂ ಬಹು ಸಭ್ಯರ, ಸುಶಿಕ್ಷಿತರ ಮುಖವಾಡ ತೊಡುತ್ತೇವೆ. ನಮಗೆ ಎಲ್ಲವೂ ತಿಳಿದಿದೆ ಎನ್ನುವಂತೆ ವರ್ತಿಸುತ್ತೇವೆ. ಆದರೆ ನಮ್ಮ ಮನದಲ್ಲಿ ಭೀತಿ ಮನೆಮಾಡಿಯೇ ಇರುತ್ತದೆ. ಮನದಲ್ಲಿ ಅಭದ್ರ ಭಾವ ಇರುತ್ತದೆ. ಅದನ್ನು ಅಳಿಸಲು ನಾವು ನಾನಾ ಉಪಾಯ ಮಾಡುತ್ತೇವೆ. ಉದಾಹರಣೆಗೆ, ಭೌತಿಕ ಭದ್ರತೆಗೆ ಸುರಕ್ಷಿತವಾದ ಮನೆ, ಕಷ್ಟಕ್ಕೆ ಒದಗಿ ಬರಲೆಂದು ಬ್ಯಾಂಕ್ ನಲ್ಲಿ ಹಣ, ಮನೆಯಲ್ಲಿ ಅನೇಕ ರೀತಿಯ ಸೌಕರ್ಯಗಳು, ಎಲ್ಲವನ್ನೂ ಮಾಡಿಕೊಳ್ಳುತ್ತೇವೆ, ಮತ್ತು ಅವುಗಳನ್ನು ಬೆಳೆಸಿಕೊಳ್ಳುತ್ತಲೇ ಇರುತ್ತೇವೆ. ಇದರಿಂದ ಭೌತಿಕವಾದ ಭಯ ಕೆಲಮಟ್ಟಿಗೆ ಮಾಯವಾಗಬಹುದು. ಆದರೆ ಮಾನಸಿಕ ಭಯ ಭೀತಿಗಳು, ಸಾವಿನ ಭಯ ಮತ್ತು ಖಿನ್ನತೆಗಳು ನಮ್ಮನ್ನು ಕಾಡುತ್ತವೆ, ನಮಗೆ ಗೊತ್ತಿಲ್ಲದೆ ನಮ್ಮ ಮನದಲ್ಲಿ ಮನೆಮಾಡಿಕೊಂಡಿರುತ್ತವೆ. ಕಾಡಿನಲ್ಲಿ ಹಿಂಸ್ರ ಪ್ರಾಣಿಗಳು ಇರುವಂತೆ. ಅವುಗಳ ಇರವು ನಮಗೆ ಬೌದ್ಧಿಕವಾಗಿ ತಿಳಿದಿರುತ್ತದೆ. ಆದರೆ ಅವುಗಳು ಎದುರಿಗೆ ಬಂದಾಗ ಮಾತ್ರ ನಮಗೆ ಪರಿಸ್ಥಿತಿಯ ಭೀಕರತೆಯ ಅರಿವಾಗುತ್ತದೆ ಮತ್ತು ನಾವು ದಿಗ್ಭ್ರಮೆಗೊಳ್ಳುತ್ತೇವೆ. ನಮ್ಮ ಮರೆವು ಅದರ ಕಾರಣ. ಅದೇ ಕರ್ಮ. ನಿಜವಾದ ಭದ್ರತೆಗೆ ನಾವು ಏನೇನೂ ಮಾಡುವುದಿಲ್ಲ. ಈ ಭಯಗಳನ್ನು ದೂರಮಾಡಲು ವ್ಯಕ್ತಿ ಸದಾ ಆಂತರಿಕವಾಗಿ ಎಚ್ಚರದಿಂದಿರಬೇಕಾಗುತ್ತದೆ. ಈ ಎಚ್ಚರಿಕೆಯೇ ನಿಜವಾದ ಭಕ್ತನ ಲಕ್ಷಣ. ಎಚ್ಚರಿಕೆಯ ನಟನೆಯಿಂದ ಏನೂ ಆಗದು.
Wow.....deep knowledge explained in such a simple manner....
ReplyDeleteThank you for the interpretation..
The following comments were submitted by Shobha Hiremath: on April 3rd, 2011
ReplyDeletePranam.
Happy Ugadi.
Hope U have started new venture to realise the public about ETERNAL TRUTH through KARMA THEORY.The idea & way of conveying it to the public is really apppreciable.I felt very happy by seeing ur innovative ideas.Pl continue it.
Have a nice day.