Friday, December 31, 2010

Vachna 20 Aragu tiMdu karaguva daivava - Idol worship

ಅರಗು ತಿಂದು ಕರಗುವ ದೈವವ,

ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ?

ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ?

ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ?

ಸಹಜ ಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.


TRANSLITERATION

aragu tiMdu karaguva daivava,
uriya kaMDaDe muruTuva daivavaneMtu sariyeMbenayyA?
avasara baMdaDe mAruva daivavaneMtu sariyeMbenayyA?
aMjikeyAdaDe hULuva daivavaneMtu sariyeMbenayyA?
sahaja BAva nijaikya kUDalasaMgamadEvanobbane dEva.


CLICK TO HEAR IT

http://www.youtube.com/watch?v=ScwiXZJYcRs


TRANSLATION

Aragu (wax) tiMdu(eaten up) karaguva(melts) daivava(God),
Uriya (fire) kaMDaDe(contacted) muruTuva(loses shape) daivavanu (God) eMtu (how) sariyeMbenayyaa(can I accept, Sir)?
Avasara (need) baMdaDe(arises) maaruva(sell) daivavaneMtu sariyeMbenayyaa?
aMjikeyaadaDe(afraid) hULuva(bury) daivavaneMtu sariyeMbenayyaa?
sahaja bhaava nijaikya(one within us) kooDalasaMgamadEvanu(Lord) obbane(only) dEva(God).


The wax filled idols made of metal husk lose their shape as the wax melts away,
How can I accept the idols which melt when exposed to heat, as Gods?How can I accept the idols which are sold when need arises, as Gods?
How can I accept the idols which are buried (hidden) for the fear of being stolen, as Gods?The only God acceptable is the Lord kooDala saMgama dEva who resides within us!


COMMENTARY

Idol worship has been a common practice over the years and it has been equated to devotion. We have created various idols of Gods. We have transformed them into various shapes and forms to represent power, kindness, wealth etc. depending on the object and objectives for worship. We try to make idols out of precious metals, build expensive temples to house them, conduct elaborate rituals and festivals around them, all in the name of devotion. We are always proud that we possess much bigger and more expensive idols than the others.
In this vachana Basavanna is advocating turning to the God within us, rather than mistaking idol worship for devotion. After all, these idols made of silver or golden husk filled with wax within, and get deformed when exposed to heat. People do not hesitate to sell them when the need for money arises, and do not hesitate to hide them when there is a threat of theft. The idols are thus objects that we hold and discard. Basavanna asks “how can these idols which get destroyed in fire and invoke desire, jealousy, ego and fear in people can be considered as Gods?”

I recall a Swamiji talking about Shiva.  He said, it is nice to visualize Shiva with His serpent necklace, Goddess Ganga jumping out from His head, decorated with the Moon, at Kailaasa His abode, with His consort Parvathi by His side and the their two sons (Ganesha and Karthikeya) seated next to them. But it is more apt to concentrate on the Lord Shiva who is the peace and calmness within our hearts; Parvathi is the force (Kundalini Shakti) that runs through the seven Chakras within our body.

A true devotee does not need idols to cultivate devotion.  He strives to find the Lord within him; the Lord who is beyond the range of our five senses, but ever present as ‘aatma’ within us!


Let us enjoy swimming through the sea of idols and rituals, but keep our goals on reaching the true Lord within!


FOR THOSE OF YOU WHO CAN READ KANNADA


ಭಕ್ತಿಯನ್ನು ತಪ್ಪಾಗಿ ಅರ್ಥಮಾಡಿಕೊಂಡು ಜನರು, ಅದನ್ನು ಮೆರೆಯಲು ತಮ್ಮದೇ ಆದ ರೀತಿಗಳನ್ನು ಆರಿಸಿಕೊಳ್ಳುತ್ತಾರೆ. ಉದಾಹರಣೆಗೆ- ಮೂರ್ತಿ ಪೂಜೆ. ಮೂರ್ತಿ ಪೂಜೆಯನ್ನೇ ಭಕ್ತಿಯೆಂದರಿತು ಅದರಲ್ಲಿ ತೊಡಗುತ್ತಾರೆ. ಅದನ್ನು ವೈಭವಯುಕ್ತಗೊಳಿಸುತ್ತಾರೆ. ಮೂರ್ತಿಗಳನ್ನು ಬಂಗಾರ ಬೆಳ್ಳಿ ಕಂಚು ಮತ್ತು ಹಿತ್ತಾಳೆಯಂತಹ ಬೆಲೆಬಾಳುವ ಲೋಹಗಳಿಂದ ಮಾಡಿಸುತ್ತಾರೆ. ತಾವು ಅವುಗಳನ್ನು ಇಂತಿಂತಹ ಪ್ರತಿಷ್ಠಿತ ವ್ಯಕ್ತಿಗಳಿಂದ ಮಾಡಿಸಿದ್ದೇವೆ, ಅಥವಾ ಇಂತಿಂತಹ ಪ್ರತಿಷ್ಠಿತ ಸ್ಥಳದಿಂದ ತರಿಸಿದ್ದೇವೆ ಎಂದು, ಅವುಗಳು ತಮಗೆ ಸೇರಿದ್ದವೆಂದು ಬೀಗುತ್ತಾರೆ. ಅವುಗಳ ಸೌಂದರ್ಯವನ್ನು ಉಪಾಸಿಸುವುದೇ ಭಕ್ತಿಯೆಂದುಕೊಳ್ಳುತ್ತಾರೆ. ಅಂತಹವರನ್ನು ಕುರಿತೇ ಈ ವಚನವನ್ನು ಹೇಳಿದ್ದಾರೆ ಬಸವಣ್ಣನವರು.

ಒಳಗೆ ಅರಗು ತುಂಬಿ ಮೇಲೆ ಬೆಳ್ಳಿ ಮತ್ತು ಚಿನ್ನದ ತಗಡಿನಿಂದ ಮಾಡಿದ ಮೂರ್ತಿಗಳು ಬೆಂಕಿಯಲ್ಲಿ ಕರಗಿ ಹೋಗುತ್ತವೆ, ಅಥವಾ ಶಾಖಕ್ಕೆ ಮುರುಟಿಕೊಳ್ಳುತ್ತವೆ. ತಮ್ಮ ಮೂಲ ರೂಪವನ್ನು ಕಳೆದುಕೊಂಡು ವಿರೂಪಗೊಳ್ಳುತ್ತವೆ. ಕೆಲವರು ಬೆಲೆಬಾಳುವ ದೇವರ ಮೂರ್ತಿಗಳನ್ನು ಬಡತನ ಬಂದಲ್ಲಿ, ಇಲ್ಲವೆ ಹಣದ ಅವಶ್ಯಕತೆ ಇದ್ದಲ್ಲಿ ಮಾರಿಕೊಳ್ಳುತ್ತಾರೆ, ಇನ್ನು ಕೆಲವರು ಕಳ್ಳರಿಂದ ರಕ್ಷಿಸಲು ಬೆಲೆಬಾಳುವ ದೇವರ ಮೂರ್ತಿಗಳನ್ನು ನೆಲದಲ್ಲಿ ಹೂಳುತ್ತಾರೆ.( ಇದು ಆ ಕಾಲದ ಪರಿ. ಈಗ ಈ ಕಾಲಕ್ಕೆ ತಕ್ಕಂತೆ ಬೇರೆ ಬೇರೆ ಉಪಾಯಗಳನ್ನು ಮಾಡುತ್ತಾರೆ.) ಈ ರೀತಿಯಾಗಿ ಬೆಂಕಿಯಲ್ಲಿ ನಾಶವಾಗುವಂತಹ, ಮತ್ತು ಮಾನವನ ಮನದಲ್ಲಿ ಆಸೆ, ಅಸೂಯೆ, ಅಹಂಕಾರ ಮತ್ತು ಭಯಗಳನ್ನು ಹುಟ್ಟಿಸುವ ವಸ್ತುಗಳು ಹೇಗೆ ದೇವರಾಗಲು ಸಾಧ್ಯವೆಂದು ಕೇಳುತ್ತಾರೆ.

ಇಂದ್ರಿಯಗಳಿಗೆ ನಿಲುಕದವನಾದ ದೇವನನ್ನು, ಕೇವಲ ಅನುಭಾವಕ್ಕೆ ಲಭಿಸುವ ದೇವನನ್ನು, ಇಂತಹ ವಿಗ್ರಹಗಳ ಮೂಲಕ ಆರಾಧಿಸುವುದು ಸರಿಯೆ? ಯಾರೋ ಕಲಾವಿದ ತನ್ನ ಸೀಮಿತವಾದ ದೃಷ್ಟಿಯಿಂದ ದೇವರಿಗೆ ಕೊಟ್ಟ ವಿಗ್ರಹ ರೂಪ, ಸುಂದರವಾದ ಮಾತ್ರಕ್ಕೆ, ಬೆಲೆ ಬಾಳುವ ವಸ್ತುವಾದ ಮಾತ್ರಕ್ಕೆ, ಅದು ಆ ಸತ್ಯ ನಿತ್ಯ ಅವಿನಾಶಿ ದೇವರು ಹೇಗಾದೀತು. ಅದನ್ನು ಪೂಜಿಸಿ ತೃಪ್ತನಾಗುವವನು ನಿಜವಾದ ಭಕ್ತ ಹೇಗಾದಾನು? ಈ ಕೃತ್ರಿಮತೆಯಿಂದ, ಮೌಢ್ಯದಿಂದ ಅವನನ್ನು ಒಲಿಸಿಕೊಳ್ಳಲು ಸಾಧ್ಯವೆ? ಎಂಬ ಧ್ವನಿ ಈ ವಚನದಲ್ಲಿ ಅಡಗಿದೆ.

ನಿಜವಾದ ದೇವರು ತನ್ನಲ್ಲಿಯೇ ಸಹಜವಾಗಿ ಐಕ್ಯನಾಗಿರುತ್ತಾನೆ. ಅವನನ್ನು ವಿಗ್ರಹಗಳಲ್ಲಿ ಅಥವಾ ಬೇರೆಲ್ಲಿಯೂ ಹುಡುಕುವ ಅವಶ್ಯಕತೆಯಿಲ್ಲ. ತನ್ನ ಅಂತರಂಗದಲ್ಲಿಯೇ ಇರುವ ಅವನನ್ನು ಕಂಡುಕೊಳ್ಳುವುದೇ ನಿಜವಾದ ಭಕ್ತಿ ಎನ್ನುತ್ತಾರೆ ಬಸವಣ್ಣನವರು.

2 comments:

  1. A very clear thought of GOD by Basavanna. But nowadays who will follow it anyway? Everyone does idol worship and go to temples...!!!

    ReplyDelete
  2. hi, sm there are many people who follow the thoughts of Basavanna.

    when you know the truth then need to support and should not say like "Everyone does so..." try to educate the people and practice it.

    Thanks

    ReplyDelete