ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯ!
ವೇದಪ್ರಿಯಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯ!
ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
TRANSLITERATION
naadapriya shivaneMbaru, naadapriya shivanallayya!
vEdapriya shivaneMbaru, vEdapriya shivanallayya!
naadava maaDida raavaNaMge areyaayuShavaayittu.
vEdavanOdida brahmana shira hOyittu.
naadapriyanU alla, vEdapriyanU alla,
bhaktipriya namma kUDala saMgamadEva.
CLICK TO HEAR IT
TRANSLATION
Naada(Music) priya(lover) shivanu (Lord Shiva) eMbaru(they say) naadapriya shivanu allayya(is not Sir)!
vEda(Veda) priya shivaneMbaru vEdapriya shivanallayya!
Naadava(music) maaDida(cultivated) raavaNaMge(to raavaNa) areyaayuShavaayittu(longevity halved).
vEdavanu (vEdas) Odida(read) brahmana(Brahma’s) shira(head) hOyittu(snipped).
naadapriyanU alla(is not Music lover), vEdapriyanU alla(is not lover of Vedas) ,
bhaktipriya(lover of Devotion) namma(our) kUDala saMgamadEva(Lord Kudala sangamadeva).
They say Lord Shiva is a music lover, He is not!
They say Lord Shiva is a lover of Vedas, He is not!
Although RaavaNa impressed the Lord with his music, his longevity was reduced in half!
Although Brahma expressed his immense expertise on Vedas, his head was snipped off!
Our Lord Kudala sangmadeva is not a music lover, He is not a lover of Vedas, He is a lover of Devotion!
COMMENTARY
The previous Vachana advocated making worship of the Lord (devotion) a part of our lives from the very beginning. Basavanna gave the highest place to devotion in the equipment of the spiritual seekers. He himself was known as Bhaktibhandari (treasurer of devotion). He refers to various forms of God people have invented to facilitate worship. It is obvious that we imagine God to have the same form as us. Each mythological episode adds a new attribute to God making His form vary to suit the episode. We have invented various forms of worship – with flowers and fruits, with elaborate offerings of food, with extensive chanting of His names, etc.
Basavanna uses two examples in this Vachana to illustrate that such practices are not important. Raavana, the ruler of Lanka was considered a great musician and an ardent devotee of Shiva. He fabricates a musical instrument using his nerves as strings and offers his music to Lord Shiva, who blesses him with longevity. Raavana eventually develops such a high ego that he starts thinking no end to his powers. He kidnaps Sita, the wife of Rama and demands that she marry him. This act was against all norms, and resulted in Lord Shiva withdrawing the longevity boon by cutting it in half.
Impressed by Brahma’s extensive knowledge of Vedas (the oldest scriptures of Hinduism), Shiva offered him the most important task of creation of the world. As he continued his work of creation, the ego in him developed to an extent to make him feel that he is much more powerful than the Lord who assigned him the important task. To control his ego, Lord Shiva had to snip one of Brahma’s heads off.
In both of these cases the humility that devotion brings was forgotten, thereby the means used to impress God (music, Vedas) did not serve the purpose. Basavanna concludes the Vachana saying that the Lord is simply a lover of devotion, and nothing else is needed to impress Him.
What is truly important for worship is the development of inner strength to be a devotee. Faith and humility are prime ingredients of true devotion. Without those, all other means used in worship will only enhance the ego, which in turn destroys us.
In recent postings, we have addressed three paths for God realization: action (karma), knowledge (jnaana) and devotion (bhakti). Action without knowledge does not produce proper results. Knowledge without proper action is not of any use. Devotion complements the knowledgeable action to complete us. All the three paths are essential for spiritual attainment and realization of the ultimate reality which we call Shiva. The paths are not exclusive of each other, but complementary. They constitute one spiritual path.
Let us follow the threefold path of action, knowledge and devotion to become humble, equanimous, and realize the Lord within us!
FOR THOSE OF YOU WHO CAN READ KANNADA
ಹಿಂದಿನ ವಚನದಲ್ಲಿ ನಾವು, ಬಸವಣ್ಣನವರು, ಒಟ್ಟಿನಲ್ಲಿ “ಮುಪ್ಪು ಅಡರುವ ಮೊದಲು ಕೂಡಲ ಸಂಗಮನನ್ನು ಪೂಜಿಸು” ಎಂದು ಹೇಳಿದುದನ್ನು ನೋಡಿದೆವು. ಇಲ್ಲಿ, ಪೂಜಿಸುವುದನ್ನು ಜನರು ಹೇಗೆ ಕಂಡಿದ್ದಾರೆಂಬುದನ್ನು ಹೇಳುತ್ತ ಕೂಡಲ ಸಂಗಮನು ಯಾವುದನ್ನು ಮೆಚ್ಚುತ್ತಾನೆ ಎಂಬುದನ್ನು ಹೇಳುತ್ತಾರೆ. ದೇವನನ್ನು ಒಲಿಸುಕೊಳ್ಳಲು ಅನೇಕರು ಅನೇಕ ಮಾರ್ಗಗಳನ್ನು ಅನುಸರಿಸಿದ್ದಾರೆ. ದೇವರಿಗೆ ಏನು ಇಷ್ಟವಾಗಬಹುದೆಂಬುದನ್ನು ಊಹಿಸಿ ಆತನ ಉಪಾಸನೆಗೆ ಅನೇಕ ದಾರಿಗಳನ್ನು ಹುಡುಕಿದ್ದಾರೆ. ನಾನಾ ವಿಧದ ವ್ರತ, ಉಪವಾಸ, ವಿವಿಧ ತರದ ಅರ್ಚನೆ, ಪೂಜೆ, ಭಿನ್ನ ಭಿನ್ನ ನಿಯಮಗಳ ಪಾಲನೆ, ಜಪ, ತಪ, ಭಜನೆ, ಕುಣಿತ ಅಲ್ಲದೆ ನಾದೋಪಾಸನೆ, ವೇದೊಪಾಸನೆ, ಮಂತ್ರೋಪಾಸನೆ ಇತ್ಯಾದಿಗಳನ್ನೂ ಅನುಸರಿಸಿದ್ದಾರೆ. ಈ ಎಲ್ಲವುಗಳು ನಿಷ್ಫಲವಾದವುಗಳು ಎಂಬುದನ್ನು ಬಸವಣ್ಣನವರು ಪೌರಾಣಿಕ ಉದಾಹರಣೆಗಳೊಂದಿಗೆ ತಿಳಿಸುತ್ತಾರೆ.
ಶಿವನು ನಾದಪ್ರಿಯನು ಎಂದು ಹೇಳುತ್ತಾರೆ. ಅದನ್ನು ನಂಬಿದ ರಾವಣನು ತನ್ನ ನರಗಳಿಂದ “ರಾವಣಹಸ್ತ”ವೆಂಬ ವಿಶೇಷವಾದ ವೀಣೆಯನ್ನು ನಿರ್ಮಿಸಿ ನಾದೋಪಾಸನೆಯನ್ನು ಕೈಗೊಂಡನು. ಆದರೆ ಪರಸತಿಯನ್ನು ಮೋಹಿಸಿ, ಸೀತೆಯನ್ನು ಕದ್ದು ದೋಷಿಯಾದ ಕಾರಣ ಅವನಿಗೆ ಪೂರ್ಣಾಯುಸ್ಸು ದಕ್ಕಲಿಲ್ಲ. ಆತನ ನಾದೋಪಾಸನೆ ನಿಷ್ಫಲವಾಯಿತು. ಅದೇ ರೀತಿ ಬ್ರಹ್ಮನು, ಶಿವನನ್ನು ವೇದಪ್ರಿಯನೆಂದು ಭಾವಿಸಿ ವೇದಗಳನ್ನು ಹೇಳಿ ತಾನೇ ಪರಬ್ರಹ್ಮನೆಂದುಕೊಂಡನು, ಮತ್ತು ಅಹಂಕಾರಮತ್ತನಾದನು. ಅದಕ್ಕಾಗಿ ಶಿವನು ಆತನ ಒಂದು ಶಿರವನ್ನೇ ಬಲಿ ತೆಗೆದು ಕೊಂಡನು. ಈ ರೀತಿಯಾಗಿ ಆತನ ಉದ್ದೇಶವೂ ಫಲಿಸಲಿಲ್ಲ.
ಈ ಈರ್ವರ ಉಪಾಸನೆ ಏಕೆ ಫಲಿಸಲಿಲ್ಲವೆಂದು ಯೋಚಿಸಿದರೆ ಒಂದು ವಿಷಯ ಹೊಳೆಯುತ್ತದೆ. ತನ್ನ ವಿಶೇಷವಾದ ವೀಣೆಯಿಂದ ತಾನು ಶಿವನನ್ನು ಒಲಿಸುತ್ತಿದ್ದೇನೆ ಎಂದು ರಾವಣನಿಗೆ ಬಹಳ ಅಹಂಕಾರ ಬಂದಿತ್ತು.ಆ ಅಹಂಕಾರದ ಮದದಲ್ಲಿ ತಾನು ಮಾಡಿದುದೆಲ್ಲ ಸರಿಯೆ ಎಂಬ ಭಾವ ಬೆಳೆಯಿತು. ಹೀಗಾಗಿ ತಾನು ಪರಸತಿಯನ್ನು ಮೋಹಿಸುವುದು ತಪ್ಪು ಎಂಬ ಅರಿವೇ ಆಗಲಿಲ್ಲ. ನೈತಿಕತೆಯನ್ನೇ ಮರೆತ ಅವನು. ಅಹಂಕಾರದ ಪರದೆ ಆತನನ್ನು ಕುರುಡನನ್ನಾಗಿ ಮಾಡಿತು. ಹೀಗಾಗಿ ಆತನ ವಿಶೇಷವಾದ ನಾದೋಪಾಸನೆ ಕೂಡ ಶಿವನನ್ನು ಪೂರ್ತಿಯಾಗಿ ಒಲಿಸಿ ಕೊಳ್ಳಲಿಲ್ಲ. ಅದೇ ರೀತಿಯಾಗಿ ವೇದವಿದನಾದ ಬ್ರಹ್ಮನಿಗೂ ಅಹಂಕಾರದ ಮದವೇರಿತು. ಇವರಲ್ಲಿ ಭಕ್ತಿಯುಂಟಾಗಲಿಲ್ಲ. ಭಕ್ತಿಯ ಮೂಲವಸ್ತು ವಿನಯ ಮತ್ತು ಶ್ರದ್ಧೆ. ಇದಲ್ಲದೆ ಯಾವುದೇ ರೀತಿಯಲ್ಲಿ ದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದರೆ ಅಲ್ಲಿ “ನಾನು” ಎಂಬ ಅಹಂಕಾರ ಮೂಡಿ ವ್ಯಕ್ತಿಯನ್ನು ನಾಶಗೊಳಿಸುತ್ತದೆ. ಇದನ್ನು ತಿಳಿಸುವುದಕ್ಕಾಗಿಯೇ ಬಸವಣ್ಣನವರು ಈ ಪೌರಾಣಿಕ ಉದಾಹರಣೆಗಳನ್ನು ಕೊಟ್ಟಿದ್ದಾರೆ. “ಭಕ್ತಿಪ್ರಿಯ ಶಿವನು” ಎಂದು ಹೇಳುತ್ತಾರೆ. ನಿಜವಾದ ಭಕ್ತಿ ವ್ಯಕ್ತಿಯನ್ನು ವಿನೀತನನ್ನಾಗಿ ಮಾಡುತ್ತದೆ. ಅಹಂಕಾರಕ್ಕೆ ಅಲ್ಲಿ ಸ್ಥಾನವಿರುವುದಿಲ್ಲ. ಅಂತಹ ಭಕ್ತಿಗೆ ಮಾತ್ರ ಶಿವನು ಒಲಿಯುತ್ತಾನೆ.
Many of us think from puranas that Lord Shiva is a music lover or we think that He is a lover of Vedas. But thanks to Basavanna for opening our eyes saying that he is Devotion Lover...
ReplyDelete