Friday, December 10, 2010

Vachana 17 : Ollenembudu Vairaagya - Achieving Equanimity


ಒಲ್ಲೆನೆಂಬುದು ವೈರಾಗ್ಯ,

ಒಲಿವೆನೆಂಬುದು ಕಾಯಗುಣ.

ಆವ ಪದಾರ್ಥವಾದರೇನು?

ತಾನಿದ್ದೆಡೆಗೆ ಬಂದುದ ಲಿಂಗಾರ್ಪಿತವ ಮಾಡಿ

ಭೋಗಿಸುವುದೇ ಆಚಾರ !

ಕೂಡಲಸಂಗಮದೇವನ

ಒಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು

TRANSLITERATION

Ollenu (do not want)  eMbudu (saying)  vairaagya (indifference; dispassion),
Olivenu (attracted to) eMbudu (saying) kaayaguNa (body’s nature)
aava (whichever) padaarthavu (material) aadarEnu (it is)
taanu (we) iddeDege(wherever are)  baMduda (arrives) liMgaarpitava (offer to Lord) maaDi (do)
bhOgisuvudE (enjoyinging)  AcAra! (right practice)!
kooDala saMgamadEvana (Lord Kudala Sangamadeva’s)
olisa (to satisfy) baMda(arrived)  prasaada (gracious gift) kaayava (body) keDisalu (deteriorate, spoil) aagadu (should not).


olleneMbudu vairaagya,
oliveneMbudu kaayaguNa
aavapadaarthavaadarEnu
taaniddeDege baMduda liMgaarpitava maaDi
bhOgisuvudE AcAra!
kooDala saMgamadEvana
olisa baMda prasaadakaayava keDisalaagadu.

CLICK TO HEAR IT

http://www.youtube.com/watch?v=aDU9eemJTKc

TRANSLATION
 Rejecting (what we receive) is indifference,
Getting attracted to (material) is the true nature of the body.
No matter what material it is
When it reaches us, offering it to the Lord
and enjoying it (later) is the right practice!
The body, a gracious gift (we have) to facilitate merger with the Lord Koodala Sangama Deva, should not be deteriorated!

COMMENTARY
In this vachana, Basavanna is stressing the achievement of equanimity in our lives. Rejecting everything that we come across shows an utter indifference. We encounter both sad and happy events in our lives. Running away from the society to escape from them is not practical in general. We tend to enjoy happy events and acquisitions. We are up in the air when things go our way. Most of us do not even worry that the happiness could be short lived. Some might be afraid of enjoying the happy event for the fear that it may not last. Sad events take us down to dumps. We try to escape from them and never accept that they could be short lived too. Getting swayed by the happenings around us is the true nature of the material body. The cycles of likes/dislikes and happiness/sadness deteriorate our body and take away our peace of mind.  Basavanna advocates offering whatever comes our way first to the Lord. It is believed that whatever offered to the Lord loses its happy/sad, good/bad nature and returned to the devotee as prasaada (the gracious gift). Enjoying this gift will in turn nourish the body and results in peace of mind. In fact, the body is a gracious gift given to us with the stipulation that it should be maintained and made strong enough to reach the Lord. The happy /sad cycles should not deteriorate it, thus taking it away from its inherent goal.
Essentially, the message of this vachana is to develop a mind set to accept ups and downs with equal ease and not to be swayed by them. Achieving such mind set is possible when we realize that all we own belongs to the Lord and all we do is in service of the Lord. That is the way to merge with the Lord. The Lord referred to here is the subtle truth behind all that is visible to us and that which is behind all causes and effects around us.


LET US NOT BE SWAYED BY UPS AND DOWNS! LET US GROW STRONG TO ACCEPT THEM!FOR THOSE OF YOU WHO CAN READ KANNADA

ಬದುಕಿನಲ್ಲಿ ಬಂದುದನ್ನು ಸಂತುಲಿತ ಮನೋಭಾವದಿಂದ ಸ್ವೀಕರಿಸುವ ಉಪಾಯವನ್ನು ಇಲ್ಲಿ ಹೇಳುತ್ತಾರೆ ಬಸವಣ್ಣನವರು.  ನನಗೆ ಇದು ಬೇಡ, ಎಂದು ಬಂದುದನ್ನು ತಿರಸ್ಕರಿಸುವುದು ಉದಾಸೀನತೆಯನ್ನು ತೋರಿಸುತ್ತದೆ.  ಉದಾಹರಣೆಗೆ - ಬದುಕಿನಲ್ಲಿ ಸುಖ ದುಃಖಗಳು ಬಂದೇ ಬರುತ್ತವೆ, ಅವು ನನಗೆ ಬೇಡ ವೆಂದು ಸಂಸಾರವನ್ನು ತೊರೆದು ಹೋಗುವುದು, ಅವುಗಳಬಗ್ಗೆ ಉದಾಸೀನತೆ ತೋರಿದಂತಾಗುತ್ತದೆ.  ಅಥವಾ ಇದು ನನಗೆ ಬಹು ಇಷ್ಟ ಎಂದು ಸಂತೋಷ ಪಡುವುದು ನಮ್ಮ ಕಾಯಗುಣ, ಅಂದರೆ ಇಂದ್ರಿಯಗಳಿಗೆ ವಶವಾದಂತೆ. ಈ ಎರಡೂ ಸಲ್ಲವು.  ಏಕೆಂದರೆ ಇದರಿಂದ ಜೀವನದಲ್ಲಿ ಇರುವುದರ ಬೆಗ್ಗೆ, ಬೇಕು ಬೇಡಗಳೆಂಬ ವಿರೋಧ ಭಾವ ಬೆಳೆಯುತ್ತದೆ.  ಇದು ಸಂತುಲಿತ ಭಾವವಲ್ಲ. ನಮಗೆ ಬೇಡವಾದದ್ದು ಬಂದರೆ ಮನಸ್ಸು ತಳಮಳಗೊಳ್ಳುತ್ತದೆ, ಘಾಸಿ ಗೊಳ್ಳುತ್ತದೆ, ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತದೆ, ಮತ್ತು ಬೇಕಾದುದನ್ನು ಪಡೆಯಲು ಹೆಣಗುತ್ತದೆ.  ಹಾಗೂ ನಮಗೆ ಬೇಕಾದದ್ದು ಬಂದರೆ ಮನಸ್ಸು ಹರ್ಷದಿಂದ ಹುಚ್ಚೆದ್ದು ಕುಣಿಯುತ್ತದೆ, ಸಂತೋಷದಲ್ಲಿ ಉನ್ಮತ್ತವಾಗುತ್ತದೆ, ಈ ಸುಖದ ಕ್ಷಣವೆಲ್ಲ್ಲಿ ನಾಶವಾಗುತಾದೆಯೋ ಎಂಬ ಭಯದ ನೆರಳಲ್ಲಿಯೇ ಇರುತ್ತದೆ.  ಈ ಎರಡೂ ಭಾವಗಳು ವ್ಯಕ್ತಿಯನ್ನು ಸಮಾಧಾನದಿಂದ ಇರಲು ಬಿಡುವುದಿಲ್ಲ. ಆದ್ದರಿಂದ ಇವುಗಳನ್ನು ಸಮಾನವಾಗಿ ಅನುಭವಿಸುವ ಉಪಾಯವನ್ನು ಹೇಳುತ್ತಾರೆ.  ಯಾವ ಪದಾರ್ಥವಾದರೇನು ಬಂದುದನ್ನು ದೇವರಿಗೆ ಅರ್ಪಿಸಿ ಆನಂತರ ಸ್ವೀಕರಿಸಬೇಕು.  ದೇವರಿಗೆ ಅರ್ಪಿಸಿದ ಬಳಿಕ ಅದು ತನ್ನ ಕೆಟ್ಟ ಅಥವಾ ಒಳ್ಳೆಯ ಗುಣಗಳನ್ನು ಕಳೆದು ಕೊಂಡು ಕೇವಲ ಪ್ರಸಾದವಾಗುತ್ತದೆ.  ಆ ಪ್ರಸಾದವನ್ನು ಭೋಗಿಸುವುದು ನ್ಯಾಯ. ಅದರಿಂದ ಈ ದೇಹಕ್ಕೆ, ಮನಸ್ಸಿಗೆ ಒಳ್ಳೆಯದಾಗುತ್ತದೆ, ಪುಷ್ಟಿ ದೊರೆಯುತ್ತದೆ.  ಈ ದೇಹವು ನಮಗೆ ದೊರಕಿರುವುದು, ದೇವನನ್ನು ಒಲಿಸಿ ಕೊಳ್ಳಲು. ದೇವನನ್ನು ಒಲಿಸಿ ಕೊಳ್ಳುವುದೆಂದರೇನು? ಎಂಬ ಪ್ರಶ್ನೆ ಹುಟ್ಟುತ್ತದೆ.  ಕಣ್ಣಿಗೆ ಕಾಣುವ ಸ್ಥೂಲ ಬದುಕಿನ ಹಿಂದೆ ಅಡಗಿರುವ ಸೂಕ್ಷ್ಮವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳುವ ಕಲೆ, ಪರವನ್ನು ಸಾಧಿಸಿಕೊಳ್ಳುವ ಕಲೆ.  ಪರವೆಂದರೆ ಆಕಾಶದಲ್ಲೆಲ್ಲಿಯೋ ಸ್ಥಿತವಾಗಿರುವ ಲೋಕವಲ್ಲ. ಕೆಲವು ನೀತಿ ನಿಯಮಗಳನ್ನು ಅಥವಾ ಧಾರ್ಮಿಕ ಆಚಾರಗಳನ್ನು ಪಾಲಿಸಿ ಸತ್ತನಂತರ ಪಡೆಯಬಹುದಾದ ಲೋಕವಲ್ಲ. ಕಣ್ಣಿಗೆ ಕಾಣುವುದರ ಹಿಂದೆ ಅಡಗಿರುವ ಸೂಕ್ಷ್ಮವಾದ ಆದರೆ ಅಗಾಧವಾದ ಪರಿಣಾಮವನ್ನುಂಟುಮಾಡುವ ಸತ್ಯ.  ಅದನ್ನು ಕಂಡುಕೊಳ್ಳುವುದಕ್ಕಾಗಿ ನಮಗೆ ದೊರಕಿದ ಈ ದೇಹವನ್ನು ಬೇಕು ಬೇಡಗಳ ಸುಳಿಗೆ ಸಿಲುಕಿಸಿ ಕೆಡಿಸಲಾಗದು ಎನ್ನುತ್ತಾರೆ ಬಸವಣ್ಣವರು.  ಏಕೆಂದರೆ ಅದನ್ನು ಸಾಧಿಸಲು ಅಪಾರವಾದ ಮನೋಬಲ ಬೇಕಾಗುತ್ತದೆ. ಬೇಕು ಬೇಡಗಳ ಸುಳಿಗೆ ಸಿಲುಕಿದ ಮನಸ್ಸು ನಿರಂತರವಾಗಿ ಹೋರಾಟದಲ್ಲಿ ತೊಡಗುವುದರಿಂದ ಅದರ ಬಲಗುಂದುತ್ತದೆ, ಅದು ದುರ್ಬಲವಾಗುತ್ತದೆ.  ಆದ್ದರಿಂದ ಬದುಕಿನಲ್ಲಿ ಬಂದುದನ್ನು ದೇವರ ಪ್ರಸಾದವೆಂದು ಸ್ವೀಕರಿಸಬೇಕು ಎಂದು ಹೇಳುತ್ತಾರೆ.  ವಿಜ್ಞಾನದ ದೃಷ್ಟಿಯಿಂದ ನೋಡಿದಾಗ, ಏಕಾಣು ಜೀವಿಯಿಂದ ವಿಕಾಸಗೊಂಡು ಮಾನವ ರೂಪುಗೊಂಡಿದ್ದಾನೆ.  ಇತರ ಪ್ರಾಣಿಗಳಿಗಿಲ್ಲದ ವಿಚಾರಶಕ್ತಿ ಮತ್ತು ಪ್ರಜ್ಞಾಶೀಲತೆ ಮಾನವನಿಗಿದೆ. ಮಾನವನ ಪ್ರಜ್ಞಾಶೀಲತೆ ಪೂರ್ತಿಯಾಗಿ ಅರಳುವುದೇ ಆತನ ಪರಿಪೂರ್ಣ ವಿಕಾಸ.  ಬದುಕಿನಲ್ಲಿ ಬೇಕು ಬೇಡಗಳ ಸುಳಿಗಳು ಅವನ ವಿಕಾಸದ ಹಾದಿಯಲ್ಲಿ ಅಡ್ಡಿಯಾಗುತ್ತವೆ.  ಅವುಗಳಿಂದ ಬಿಡುಗಡೆ ಪಡೆಯಲು ಬಸವಣ್ಣನವರ ಮಾತುಗಳೇ ನಮಗೆ ದಾರಿ ದೀಪವಾಗುತ್ತವೆ.

No comments:

Post a Comment