Friday, December 3, 2010

Vachana 16 : Jnanarahitanaagi kriye - Knowledgeful Action

ಜ್ಞಾನ ರಹಿತನಾಗಿ ಕ್ರಿಯೆ ಏನೆಷ್ಟು ಮಾಡಿದಡೇನು.



ಅದು ಕಣ್ಣಿಲ್ಲದವನ ನಡತೆಯಂತೆ


ಕ್ರಿಯಾರಹಿತನಾಗಿ ಜ್ಞಾನಿಯಾದಡೇನು


ಅದು ಕಾಲಿಲ್ಲದವನ ಇರವಿನಂತೆ


ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನ ನಿಜವ ಬೆರೆಸುವೊಡೆ


ಜ್ಞಾನವು ಕ್ರಿಯೆಯೂ ಎರಡೂ ಬೇಕು.





TRANSLITERATION


j~jAna (knowledge) rahitanAgi(without) kriye(action)

EneShTu(however many) mADidaDEnu (performs)

adu (that) kaNNilladavana(Blind man's) naDateyaMte(activity)

kriyA (action) rahitanAgi(without) j~jAni (knowledegable) yAdaDEnu(becomes)

adu (that) kAlilladavana(legless man's) iravinaMte(behavior)

nijaguru(true teacher) svataMtra siddhaliMgESvarana (Lord's name)

nijava (truth) beresuvoDe(to be combined)

j~jAnavu(knowledge) kriyeyU(action) eraDU(both) bEku(needed, essential).


j~jAna rahitanAgi kriye EneShTu mADidaDEnu
adu kaNNilladavana naDateyaMte
kriyArahitanAgi j~jAniyAdaDEnu
adu kAlilladavana iravinaMte
nijaguru svataMtra siddhaliMgESvarana nijava beresuvoDe
j~jAnavu kriyeyU eraDU bEku.


CLICK TO HEAR IT
http://www.youtube.com/watch?v=-KyiltFRvqE

TRANSLATION

What is the use if, bereft of knowledge, one performs many actions?
It is like a blind man's walk (movement).
What is the use if, one gains knowledge, but remains actionless?
It is like the existence of a legless man.
In order to know the reality of Lord Swatantra Siddhalingeswara,
both knowledge and action are essential.


COMMENTARY


This vachana is from sharana Swatantra Siddhalingeswara (as indicated by his signature and reference to the Lord). In the previous posting on selfless action, we saw several qualifications for our actions. We do not have any choice, but to act; the action should be selfless; one should perform an action with pure dedication to the greater good. This vachana adds another qualification to the path of action: the action must be coupled with appropriate knowledge.


The vachana compares action without knowledge to a blind man's walk. In general, a blind man cannot find his way around easily; he cannot avoid the objects in his way and runs into them. But, once he acquires a simple stick or a seeing eye dog, his movements become more organized. Similarly, just accumulation of knowledge, without corresponding action is compared to the existence of a legless man. He cannot move around and hence cannot participate in an action even though he has all the knowhow. He has to acquire a means for moving around, to put his knowledge to work on an appropriate action.


The last sentence of the vachana emphasizes that both knowledge and action are needed in a spiritual aspirant.
There are typically three basic questions that we need to address regarding any action: What are we performing? How do we perform it (Do we have the knowhow?) and what good does it bring to us and to those around us? We can probe further with questions such as: why am I doing this? Is this for my satisfaction or just to exhibit to others? What good comes out of this? Am I doing this just to earn a living? Am I doing this, or someone else is forcing me to do this? Am I qualified to do this? Is this for the betterment of the society? Answers to such questions provide us with the knowledge appropriate for the action. They might also influence the action itself.


Mere accumulation of knowledge does not serve any purpose. In fact, it can make the individual more egotistic. When the knowledge is made to dictate actions, those actions become purer and meaningful. Such actions in turn reinforce the knowledge. Action and knowledge when combined move the man towards godliness!


We have been addressing knowledge and action in a materialistic sense so far. Basavanna while advocating knowledge based action and living, says that the supreme knowledge is the knowledge of SELF!

Let us be knowledgeable in what we do! Let us perform knowledgeful actions to bring the heaven to Earth!


FOR THOSE OF YOU WHO CAN READ KANNADA

ಜೀವನಿಗೆ ಜ್ಞಾನ ಮತ್ತು ಕ್ರಿಯೆ ಎರಡೂ ಬೇಕು. ಕೇವಲ ಕ್ರಿಯೆ ಅಥವಾ ಕೇವಲ ಜ್ಞಾನದಿಂದ ಹೆಚ್ಚಿನ ಲಾಭವಿಲ್ಲ ಎಂಬುದನ್ನು ಸ್ವತಂತ್ರ ಸಿದ್ಧಲಿಂಗೇಶ್ವರರು ಇಲ್ಲಿ ಒಳ್ಳೆಯ ಉದಾಹರಣೆಯ ಮೂಲಕ ತಿಳಿಸುತ್ತಾರೆ. ಜ್ಞಾನರಹಿತನಾಗಿ ಎಷ್ಟು ಕ್ರಿಯೆ ಮಾಡಿದರೂ ಲಾಭವಿಲ್ಲ. ಅದು ಕುರುಡನ ನಡೆಯಂತೆ. ಕುರುಡನಿಗೆ ತಾನು ಎತ್ತ ಹೋಗುತ್ತಿದ್ದೇನೆ ಎಂಬುದು ತಿಳಿಯುವುದಿಲ್ಲ. ಕಣ್ಣು ಕಾಣದ ಕಾರಣ ಅಲ್ಲಿಯೇ ಸುತ್ತುತ್ತಿರುತ್ತಾನೆ ಅಥವಾ ಗೊತ್ತಿಲ್ಲದ ದಿಕ್ಕಿಗೆ ಹೋಗುತ್ತಾನೆ. ಅದೇ ರೀತಿ ತಿಳುವಳಿಕೆಯಿಲ್ಲದೆ ಕೆಲಸ ಮಾಡುವವನು ಏನನ್ನೂ ಸಾಧಿಸಲಾಗುವುದಿಲ್ಲ. ತಾನು ಯಾವ ಕೆಲಸ, ಏಕೆ, ಯಾರಿಗಾಗಿ, ಹೇಗೆ ಮಾಡುತ್ತಿದ್ದೇನೆ, ಎಂಬುದನ್ನು ಯೋಚಿಸದೆ, ತಿಳಿದುಕೊಳ್ಳದೆ ಕೆಲಸ ಮಾಡುವುದು ಕುರುಡನ ನಡೆಯಂತೆಯೇ ಸರಿ. ತಾನು ಯಾವ ಕೆಲಸ ಮಾಡುತ್ತಿದ್ದೇನೆ? ಅದರಿಂದ ಯಾರಿಗಾದರು ಹಾನಿಯಾಗುತ್ತಿದೆಯೇ? ಏಕೆ ಮಾಡುತ್ತಿದ್ದೇನೆ? ನನ್ನ ದೇಹ ಅಥವಾ ಬುದ್ಧಿಯ ವ್ಯಾಯಾಮಕ್ಕಾಗಿಯೆ? ಹಣ ಗಳಿಸಲಿಕ್ಕಾಗಿಯೆ? ನನ್ನ ಕುಟುಂಬದವರನ್ನು ಪೋಷಿಸುವುದಕ್ಕಾಗಿಯೆ? ಸಮಾಜಕ್ಕೆ ಸಹಾಯ ಮಾಡುವುದಕ್ಕಾಗಿಯೆ? ಆತ್ಮದ ಉನ್ನತಿಗಾಗಿಯೆ? ಈ ಕೆಲಸದಿಂದ ನನ್ನ ಆತ್ಮೋನ್ನತಿಯಾಗುತ್ತಿದೆಯೆ? ಕೆಲಸ ಮಾಡುತ್ತಿರುವವನು ನಾನೆಯೇ? ಅಥವಾ ನನ್ನ ಮೂಲಕ ಯಾವುದೋ ಶಕ್ತಿ ಈ ಕೆಲಸ ಮಾಡಿಸುತ್ತಿದೆಯೆ? ನಾನು ಮಾಡುವ ಕೆಲಸದಲ್ಲಿ ನನಗೆ ನಿಜವಾದ ಪ್ರೀತಿಯಿದೆಯೆ? ಈ ಕೆಲಸ ಮಾಡುವ ಸಾಮರ್ಥ್ಯ ನನಗಿದೆಯೆ? ಈ ಕೆಲಸದಲ್ಲಿ ನಾನು ನನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದೇನೆಯೆ? ನನ್ನಲ್ಲಿ ಈ ಕೆಲಸದ ಬಗ್ಗೆ ಅರ್ಪಣಾಭಾವ ಇದೆಯೆ? ಎಂಬಂತಹ ವಿಷಯಗಳ ಬಗ್ಗೆ ತಿಳುವಳಿಕೆ ಇರಬೇಕು. ಎಲ್ಲರು ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ನಾನೂ ಮಾಡಬೇಕು, ಅದಕ್ಕಾಗಿ ಎನೋ ಮಾಡಿದರಾಯಿತು, ಎಂದುಕೊಂಡು ಯಾವುದೋ ಕೆಲಸವನ್ನು ಯಾಂತ್ರಿಕವಾಗಿ ಮಾಡುವುದು ಕುರುಡನ ನಡೆಯಂತೆ ಆಗುತ್ತದೆ. ಕುರುಡನಿಗ ಕಣ್ಣು ಕಾಣದೆ ಇರುವುದರಿಂದ ತಾನು ಎತ್ತ ಹೋಗುತ್ತಿದ್ದೇನೆ ಎಂಬುದರ ಅರಿವೇ ಇರುವುದಿಲ್ಲ. ಅಂದರೆ ಕುರುಡನಿಗೂ ಮತ್ತು ಆತನ ನಡೆಗೂ ಸಂಬಂಧವಿರದಂತೆ ಜ್ಞಾನವಿಲ್ಲದ ವ್ಯಕ್ತಿಗೂ ಮತ್ತು ಆತನ ಕ್ರಿಯೆಗೂ ಯಾವಸಂಬಂಧವೂ ಇರುವುದಿಲ್ಲ. ಆತನ ನಿಜವಾದ ಇರವೇ ಬೇರೆ ಮತ್ತು ಆತನ ಕ್ರಿಯೆಯೇ ಬೇರೆಯಾದಾಗ ಆತನ ಕ್ರಿಯೆಯ ಪರಿಣಾಮವೇನಾಗುತ್ತದೆ ಎಂದು ಊಹಿಸಿಕೊಳ್ಳಬಹುದು.


ಹಾಗೆಂದು ಜ್ಞಾನವೇ ಮುಖ್ಯವೆಂದುಕೊಂಡು ಕ್ರಿಯಾರಹಿತನಾಗಿ ಸದಾ ಜ್ಞಾನದ ಚಿಂತನೆಯಲ್ಲಿಯೇ, ಅದರ ಮಥನದಯಲ್ಲಿಯೇ ಸಮಯ ಕಳೆಯುವವನ ಬದುಕು ಕಾಲಿಲ್ಲದವನ ಬದುಕಿನಂತಾಗುತ್ತದೆ, ಕಾಲಿಲ್ಲದವನ ಬದುಕು ಬಲು ಕಷ್ಟ. ಅವನು ಎಲ್ಲಿಯೂ ಹೋಗಲಾರ, ಮುಂದುವರಿಯಲಾರ. ಕುಳಿತಲ್ಲಿಯೇ ಇರುತ್ತಾನೆ. (ಕಾಲಿಲ್ಲದಿರುವವರು ಅನೇಕ ಸಾಧನೆಗಳನ್ನು ಮಾಡುತ್ತಾರೆ ,ಆಧುನಿಕ ಸಾಧನಗಳನ್ನು ಬಳಸಿ ಕಾಲಿದ್ದವರಂತೆಯೇ ಬದುಕುತ್ತಾರೆ. ಅಂದರೆ ಅವರು ಕ್ರಿಯಾಶೀಲರಾಗಿದ್ದಾರೆ ಎಂದರ್ಥ. ಅವರಿಗೆ ಮೇಲಿನ ಮಾತು ಅನ್ವಯಿಸುವುದಿಲ್ಲ.) ಕ್ರಿಯಾರಹಿತನಾದವನು ಇದ್ದಲ್ಲಿಯೇ ಇರುತ್ತಾನೆ. ಆತನ ಬದುಕು ವಿಕಸಿತವಾಗುವುದಿಲ್ಲ. ಕೇವಲ ಜ್ಞಾನದಿಂದ ಯಾವ ಪ್ರಯೋಜನವೂ ಇಲ್ಲ. ಆ ಜ್ಞಾನವು ಕ್ರಿಯೆಯ ಹೊನಲಾಗಿ ಹರಿಯಬೇಕು. ಅದರಿಂದ ತನಗೆ, ಇತರರಿಗೆ ಚೈತನ್ಯ ದೊರೆಯಬೇಕು. ಆಗ ಅದು ಅರ್ಥಪೂರ್ಣವಾಗುತ್ತದೆ. ಕೇವಲ ಬುದ್ಧಿಯ ಬೆಳವಣಿಗೆ, ಪರಿಪೂರ್ಣ ಬೆಳವಣಿಗೆಯಾಗುವುದಿಲ್ಲ. ಅದು ಅಹಂಕಾರದ ಮೊಟ್ಟೆಯಾಗುತ್ತದೆ. ಕ್ರಿಯೆ ಮತ್ತು ಜ್ಞಾನ ಒಂದಕ್ಕೊಂದು ಪೂರಕವಾದವುಗಳು. ಬದುಕು ದೇವತ್ವಕ್ಕೇರಬೇಕಾದರೆ ಜ್ಞಾನ ಮತ್ತು ಕ್ರಿಯೆಗಳ ಸಮನ್ವಯವಾಗಬೇಕು. ಅದೇ ಎಲ್ಲದರ ಸಹಜ ಸ್ವರೂಪ. ಜ್ಞಾನದಿಂದ ಕ್ರಿಯೆ ಘನತೆಹೊಂದುತ್ತದೆ, ಮೇಲು ಕೀಳೆಂಬ ಭಾವ ಅಡಗುತ್ತದೆ, ಕ್ರಿಯೆ ಶುದ್ಧವಾಗಿ ಅದರಲ್ಲಿ ಪವಿತ್ರತೆಯ ಭಾವ ಅಳವಡುತ್ತದೆ ಮತ್ತು ಕ್ರಿಯಯಿಂದ ಜ್ಞಾನ ಗಟ್ಟಿಗೊಳ್ಳುತ್ತದೆ, ವೃದ್ಧಿಯಾಗುತ್ತದೆ, ಉದಾತ್ತವಾಗುತ್ತದೆ. ಅಲ್ಲಿ ಅಹಂಭಾವವಿರುವುದಿಲ್ಲ. ಕ್ರಿಯೆ ಮತ್ತು ಜ್ಞಾನ ಎರಡೂ ಒಟ್ಟುಗೂಡಿ ಮಾನವನನ್ನು ದೇವತ್ವಕ್ಕೇರಿಸಿ ದೇವತ್ವದ ಭಾವವನ್ನು ಪ್ರಸರಿಸುತ್ತವೆ.


ಈ ಎಲ್ಲವೂ ಭೌತಿಕ ಬದುಕಿಗೆ ಸಂಬಂಧಪಟ್ಟವುಗಳು. ಭೌತಿಕ ಜ್ಞಾನವು ಎಷ್ಟೇ ಆದರು ಬಹು ಸೀಮಿತವಾದದ್ದು. ಯಾವುದೋ ಒಂದು ಕ್ಷೇತ್ರದಲ್ಲಿ ಪಡೆದ ಜ್ಞಾನವು ಆ ಕ್ಷೇತ್ರದಲ್ಲಿ ಅಥವಾ ಅದಕ್ಕೆ ಸಂಬಂಧಪಟ್ಟ ಕೆಲ ಕ್ಷೇತ್ರಗಳಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಅದರಿಂದ ಅದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗುವುದಿಲ್ಲ. ಈ ಎಲ್ಲವನ್ನೂ ಮೀರಿದ ಜ್ಞಾನ ಒಂದಿದೆ. ಅದನ್ನೇ ಶರಣರು ನಿಜವಾದ ಜ್ಞಾನವೆಂದು ಕರೆಯುವುದು. ತನ್ನ ತಾನರಿಯದ ಜ್ಞಾನವೆಲ್ಲ ಅಜ್ಞಾನ ಕಾಣಾ ಕೂಡಲಸಂಗಮದೇವ ಎನ್ನುತ್ತಾರೆ ಬಸವಣ್ಣನವರು.

1 comment:

  1. Veerashaiva Dharma is different from dvaita philosophy and advaita philosophy. We say we are shiva-shakthi vishishtadvaita which means we give importance to both kriya(Work) and jnana(Knowledge)...Thnx to the uploader of this vachana...

    ReplyDelete