Friday, December 17, 2010

Vachana 18 Nare Kennege - Worship

ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ;

ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ;

ಕಾಲ ಮೇಲೆ ಕೈಯನೂರಿ, ಕೋಲ ಹಿಡಿಯದ ಮುನ್ನ;

ಮುಪ್ಪಿಂದೊಪ್ಪವಳಿಯದ ಮುನ್ನ;ಮೃತ್ಯು ಮುಟ್ಟದ ಮುನ್ನ

ಪೂಜಿಸು ಕೂಡಲಸಂಗಮದೇವನ.


TRANSLITERATION


nare kennege, tere gallake, shareera gUDuvOgada munna;

hallu hOgi bennu baagi, anyarige haMgagada munna;

kaala mEle kaiyannUri, kOla hiDiyada munna;

mRutyu muTTada munna;

poojisu kUDalasaMgamadEvana.


CLICK TO HEAR IT

http://www.youtube.com/watch?v=NyMSOQFYDJoTRANSLATION

nare (Grey hair) kennege (cheeks) , tere(wrinkle) gallake(chin),
shareera(Body) gUDu (skeleton) vOgada(becoming) munna(before);
hallu(Teeth) hOgi(fallen) bennu(back) baagi(bent)
anyarige (on others) haMgagada(not becoming burden) munna(before);
kaala(legs) mEle(on) kaiyannUri(support of hands)
kOla(stick) hiDiyada(supported by) munna(before);
mRutyu(death) muTTada(attacking) munna(before)
poojisu(worship, realize) kUDalasaMgamadEvana (the Lord).Before the facial hair turns grey, before the chin wrinkles,

Before the body becomes a skeleton,

Before losing teeth, back bent,

and becoming a burden on others,

Before having to support the body by hands on the knees

and needing a walking stick,

Before the attack of death,

Worship the Lord Kudala Sangama Deva!COMMENTARY

Basavanna is stressing the importance of becoming a devotee of the Lord (developing God mindedness) early in our lives, rather than assuming that such realization can wait until old age, and after all the other mundane life’s responsibilities are satisfied. We have addressed the concepts of equanimity and God mindedness in our earlier postings. In general, we tend to think that being equanimous implies that we should not enjoy life’s treasures and develop dispassion towards worldly material. We tend to feel that the youth is reserved for enjoying life, there is plenty of time to become God minded, and it is only reserved for old people. Basavanna is asking us to get away from such thinking. He sketches the state of our being as we age (grey hair, wrinkled skin, skeletal body, lost teeth, bent back, walking stick for support, becoming burden on others, etc.) to imply that we will have plenty to worry about during the old age. As such, we should not postpone striving to realize God to that stage. We will have lost the strong will, inclination, patience, determination, and physical capability that were part of our youth. All these are necessary to accomplish anything in our lives and realizing God should be a goal from the beginning.

The story of a businessman who was in the last hours of his life illustrates how we are attached to our mundane lives. He calls upon each of his children: Is Rama here? Is Krishna here? Is Lakshmi here? All three answer in affirmative. Immediately, the businessman reacts “If all of you are here, who is minding the store?” There is never a good time divert ourselves a little from our routine duties, unless we strive to make it a point to develop a devotional attitude.

We would like to revisit the concept of becoming a devotee, developing God mindedness or realizing God. It is not just a routine worship of an idol, although such worship would serve as a stepping stone. It is the realization of the soul within us. Our soul (Aatma) is a spark from the Universal soul (Paramaatma). When we realize that each and every activity of ours affects other souls, we become universal men. It is the true ‘worship’ of the Lord that Basavanna is advocating.

LET US BE PASSIONATE AND ENERGETIC IN WHAT WE DO. LET US INVOLVE THE LORD IN OUR LIVES FROM DAY ONE!


FOR THOSE OF YOU WHO CAN READ KANNADA

ಮನಸ್ಸನ್ನು ಸಮ ಸ್ಥಿತಿಯಲ್ಲಿಟ್ಟುಕೊಳ್ಳುವುದು ಮತ್ತು ದೇವನನ್ನು ಒಲಿಸಿಕೊಳ್ಳುವುದು ಬಹಳ ಮುಖ್ಯವೆಂಬುದನ್ನು ಹಿಂದಿನ ವಚನಗಳಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಆದರೆ ನಮ್ಮಲ್ಲಿ, ಮನಸ್ಸನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳುವುದೆಂದರೆ, “ಸುಖ ಅನುಭೋಗಿಸುವುದಲ್ಲ, ಎಲ್ಲದರ ಬಗ್ಗೆ ವೈರಾಗ್ಯ ತಾಳುವುದು”ಎಂಬ ತಿಳಿವಳಿಕೆಯಿದೆ. ಅಲ್ಲದೆ, “ತಾರುಣ್ಯವಿರುವುದೇ ಸುಖ ಭೋಗಿಸುವದಕ್ಕಾಗಿ, ದೇವರನ್ನು ಒಲಿಸಿಕೊಳ್ಳಲು ಬೇಕಾದಷ್ಟು ಸಮಯವಿದೆ, ಅದೆಲ್ಲ ವಯಸ್ಸಾದ ಮುದುಕರಿಗೆ ಮಾತ್ರ ಅವಶ್ಯಕವಾದದ್ದು” ಎಂಬ ತಪ್ಪು ಕಲ್ಪನೆಯೂ ಇದೆ. ಇದರಿಂದಾಗಿ, ಕಣ್ಣಿಗೆ ಕಾಣುವ ಲೋಕದ ಹಿಂದೆ ಅಡಗಿರುವ ಸೂಕ್ಷ್ಮವಾದ ಸತ್ಯವನ್ನು ಕಂಡುಕೊಳ್ಳಲು ವೃದ್ಧಾಪ್ಯವೇ ತಕ್ಕದ್ದು ಎಂಬ ಮೂಢ ಭಾವವಿದೆ. ಅಂತಹವರನ್ನು ಕುರಿತೇ ಬಸವಣ್ಣನವರು ಈ ಮೇಲಿನ ವಚನವನ್ನು ಹೇಳುತ್ತಿದ್ದಾರೆ.


ಕೆನ್ನೆಯ ಮೇಲೆ ಬಿಳಿ ಕೂದಲು ಕಂಡುಬರುವುದಕ್ಕೆ ಮೊದಲು, ಗಲ್ಲದ ಮೇಲಿನ ಚರ್ಮ ಸುಕ್ಕುಗಟ್ಟುವುದಕ್ಕೆ ಮೊದಲು, ಶರೀರವು ವೃದ್ಧಾಪ್ಯದಿಂದ ತನ್ನ ಕಸುವನ್ನು ಕಳೆದುಕೊಂಡು ಮೂಳೆಗಳ ಗೂಡಿನಂತಾಗುವ ಮೊದಲು, ಬಾಯಲ್ಲಿಯ ಹಲ್ಲುಗಳೆಲ್ಲ ಬಿದ್ದು ಹೋಗಿ, ಬೆನ್ನು ಬಾಗಿ, ನೆಟ್ಟಗೆ ನಿಲ್ಲಲು ಬಾರದೆ ಕೈಯಲ್ಲಿ ಕೋಲು ಹಿಡಿದು ಕೊಳ್ಳುವ ಪರಿಸ್ಥಿತಿ ಬರುವ ಮೊದಲು, ಪರರ ಹಂಗಿನೊಳಗಾಗದ ಮೊದಲು, ಮುಪ್ಪಿನಿಂದ ದೇಹದ ತೇಜಸ್ಸು ಮತ್ತು ಮನಸ್ಥೈರ್ಯ ಅಳಿದು ಮರಣಹೊಂದುವ ಮೊದಲು, ದೇವನನ್ನು ಪೂಜಿಸು ಎಂದು ಹೇಳುತ್ತಾರೆ ಬಸವಣ್ಣನವರು.


ಮುಪ್ಪಿನ ನೈಜ ವರ್ಣನೆಯ ಮೂಲಕ ಆ ಸಮಯದಲ್ಲಿ ಉಂಟಾಗುವ ಅಸಹಾಯಕತೆಯನ್ನು ಮನಮುಟ್ಟುವಂತೆ ತಿಳಿಸುತ್ತಾರೆ. ತಾರುಣ್ಯದಲ್ಲಿ ಕಂಡು ಬರುವ ಛಲ, ಬಲ, ಸ್ಥೈರ್ಯ, ಧೈರ್ಯ, ಉತ್ಸಾಹ, ಆತ್ಮವಿಶ್ವಾಸ ಎಲ್ಲವೂ ಮುಪ್ಪಿನಲ್ಲಿ ಒಂದೊಂದಾಗಿ ಅಳಿಯುತ್ತ ಹೋಗುತ್ತವೆ.
“ದೇವರನ್ನು ಒಲಿಸಿಕೊಳ್ಳುವುದು, ಪೂಜಿಸುವುದು ತುರ್ತಾಗಿ ಮಾಡಬೇಕಾದ ಕೆಲಸವಲ್ಲ. ಅದನ್ನು ಆಮೇಲೆ ಮಾಡಿದರಾಯಿತು” ಎಂದುಕೊಂಡು ಅದನ್ನು ಮುಂದೂಡುತ್ತ ಹೋದರೆ, ಅದನ್ನು ಮುಪ್ಪಿನಲ್ಲಿ ಮಾಡಲಾಗುವುದಿಲ್ಲ. ಮುಪ್ಪಿನಲ್ಲಿ, ಬದುಕಿನ ಬಗ್ಗೆ ಮೋಹ, ಚಿಂತೆ, ಗೊಂದಲ, ಇತ್ಯಾದಿಗಳಿಂದ ದೇಹ ಮತ್ತು ಮನಸ್ಸು ಜರ್ಜರಿತವಾಗಿರುತ್ತದೆ. ಮನಸ್ಸು ಮತ್ತು ದೇಹವು ದುರ್ಬಲವಾದಾಗ ಯಾವುದನ್ನೂ ನಿರಂತರವಾಗಿ ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ. ಅಶಕ್ತತೆಯಿಂದ ನರಳುವಂತಾಗುತ್ತದೆ, ಪ್ರತಿಯೊಂದು ಕೆಲಸಕ್ಕೂ ಪರರನ್ನು ಅವಲಂಬಿಸಬೇಕಾಗುತ್ತದೆ. ಈ ಅವಲಂಬನೆಯ ಭಾವ ವ್ಯಕ್ತಿಯನ್ನು ದೀನನ್ನಾಗಿ ಮಾಡುತ್ತದೆ. ಯಾವುದೇ ಕೆಲಸ ಮಾಡಲು ಬೇಕಾದ ಆತ್ಮ ಸ್ಥೈರ್ಯವಿಲ್ಲದಂತಾಗುತ್ತದೆ. ಇದು ಮುಪ್ಪಿನ ವಾಸ್ತವಿಕ ಸ್ಥಿತಿ. ಇಲ್ಲಿ, ಪೂಜಿಸುವುದರಿಂದ ಅಥವಾ ದೇವರನ್ನು ಒಲಿಸಿಕೊಳ್ಳುವುದರಿಂದ ಏನು ಲಾಭ ಎಂಬ ಪ್ರಶ್ನೆ ಹುಟ್ಟಬಹುದು. ಇದಕ್ಕೆ ಉತ್ತರವಾಗಿ ನಾವು ಹಿಂದೆ ಉಲ್ಲೇಖಿಸಿದ ವಚನಗಳನ್ನು ನೋಡ ಬಹುದು. ಕೋಪ, ಮೋಹ, ಅಜ್ಞಾನ ಇತ್ಯಾದಿಗಳಿಂದ ನಾವು ನರಳುವ ರೀತಿಯನ್ನು ಆ ವಚನಗಳು ತಿಳಿಸುತ್ತವೆ. ಅವುಗಳಿಂದ ಬಿಡುಗಡೆ ಹೊಂದಬೇಕಾದರೆ ನಮಗೆ ಬೇರೆ ದಾರಿಯೇ ಇಲ್ಲ. ದೇವನನ್ನು ಒಲಿಸುಕೊಳ್ಳುವುದೇ ಅನಿವಾರ್ಯವಾದ ಮಾರ್ಗ. ಈ ಮಾರ್ಗವನ್ನು ಅನುಸರಿಸಿದರೆ ಇಡಿ ಜೀವನವು ಜ್ಞಾನದಿಂದ ಶ್ರೀಮಂತಗೊಳ್ಳುತ್ತದೆ, ಬಾಳು ಬೇಳಕಾಗುತ್ತದೆ. ಆದ್ದರಿಂದ ಬಹಳ ಸಾಧಾರಣವೆಂದು ತೋರಿಬಂದರೂ ಈ ವಚನ ಬಹು ಮುಖ್ಯವಾಗುತ್ತದೆ. “ದೇವರನ್ನು ಒಲಿಸಿಕೊಳ್ಳುವುದು” ಅಥವಾ “ದೇವರನ್ನು ಪೂಜಿಸು” ಅಂದರೇನು ಎಂಬ ಪ್ರಶ್ನೆ ಹುಟ್ಟುತ್ತದೆ. ಹಾಗೆಂದರೆ, ಕಣ್ಣಿಗೆ ಕಾಣುವುದರ ಹಿಂದೆ ಅಡಗಿರುವ ಸೂಕ್ಷ್ಮ ಆದರೆ ಅಗಾಧವಾದ ಸತ್ಯವನ್ನು ಕಂಡುಕೊಳ್ಳುವುದು ಎನ್ನಬಹುದು. ಹಾಗೆ ಮಾಡಲು ಬೇಕಾಗುವ ಶ್ರದ್ಧೆ, ದೃಢತೆ, ಛಲ, ಮತ್ತು ಆತ್ಮಶಕ್ತಿಯ ಬಗ್ಗೆ ಬಸವಣ್ಣನವರು ಅನೇಕ ವಚನಗಳಲ್ಲಿ ಹೇಳಿದ್ದಾರೆ. ಆ “ಅರಿವು” ಸಾಮಾನ್ಯರಿಗೆ ಕೂಡಲೆ ಉಂಟಾಗುವುದಿಲ್ಲ. ಅದರಲ್ಲಿ ಅಪಾರವಾದ ಶ್ರದ್ಧೆಯನ್ನು ಹೊಂದಿರಬೇಕಾಗುತ್ತದೆ. ಯಾವುದೇ ವಿಷಯದಲ್ಲಿ ಶ್ರದ್ಧೆಯಿಡಬೇಕಾದರೆ ಮನಸ್ಸು ಶಾಂತವಾಗಿರಬೇಕಾಗುತ್ತದೆ. ಶಾಂತವಾದ ಮನಸ್ಸಿನಲ್ಲಿ ಹೊಸದೇನನ್ನೋ ಕಂಡುಕೊಳ್ಳುವ ಸಿದ್ಧತೆಯುಂಟಾಗುತ್ತದೆ. ಮನಸ್ಸು ಶಾಂತವಾಗಲು ಶಿಸ್ತು ಬಹು ಮುಖ್ಯ. ನಮ್ಮೆಲ್ಲರ ಜೀವನದಲ್ಲಿ ಆಗೊಮ್ಮೆ ಈಗೊಮ್ಮೆ ಕಂಡುಬರುವ ಶಿಸ್ತಲ್ಲ ಅದು. ಅಥವಾ ನಾವು ಶಿಸ್ತು ಎಂದುಕೊಂಡದ್ದು ಬೇರೆಯವರ ಮೂಲಕ, ಒಂದು ವ್ಯವಸ್ಥೆಯ ಮೂಲಕ ನಮ್ಮ ಮೇಲೆ ಹೇರಿರುವಂಥಹದ್ದು. ಆ ವ್ಯವಸ್ಥೆ ಇಲ್ಲವಾದಲ್ಲಿ ಆ ಶಿಸ್ತು ಕೂಡ ಇಲ್ಲವಾಗುತ್ತದೆ. ಇಂತಹ ಶಿಸ್ತಿನಿಂದ ಏನೇನೂ ಪ್ರಯೋಜನವಿಲ್ಲ. ಸ್ವತಂತ್ರವಾಗಿ ಅಂತರಂಗದಲ್ಲಿ ಅರಳುವ ಶಿಸ್ತು ಮುಖ್ಯವಾದದ್ದು. ಅದು ಜೀವನದ ಪ್ರತಿಯೊಂದು ಅಂಗದಲ್ಲಿ ಕಂಡುಬರುವ ಶಿಸ್ತು. ಆ ಶಿಸ್ತನ್ನು ಸಾಧಿಸಲು ದೃಢತೆ ಮತ್ತು ಛಲ ಬೇಕು. ಈ ಎಲ್ಲದರಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಆತ್ಮ ಶಕ್ತಿ ಬೇಕು. ಮತ್ತು ಮೇಲೆ ಹೇಳಿದ ಆ ಎಲ್ಲವನ್ನು ಕೈಗೂಡಿಸಿಕೊಳ್ಳಲು ಮುಪ್ಪು ಅಡ್ಡಿಯಾಗುತ್ತದೆ. ಆದ್ದರಿಂದ ಮುಪ್ಪಿನಿಂದ ಒಪ್ಪವು ಅಳಿಯದ ಮುನ್ನ ಪ್ರತಿಯೊಬ್ಬನು ಆ ಮೇಲಿನದನ್ನು ಸಾಧಿಸಬೇಕಾಗುತ್ತದೆ. ಅದನ್ನು ಬದುಕಿನ ಅಂತಿಮ ಕಾಲದವರೆಗೂ ನೂಕುವ ಮೂರ್ಖತೆಯನ್ನು ಮೆರೆಯಬಾರದು ಎನ್ನುತ್ತಾರೆ ಬಸವಣ್ಣನವರು.

No comments:

Post a Comment