Friday, January 7, 2011

VACHNA 21: hottaare eddu shivaliMgadEvana - Shiva Linga

ಹೊತ್ತಾರೆ ಎದ್ದು ಶಿವಲಿಂಗದೇವನ

ದೃಷ್ಟಿಯಾರೆ ನೋಡದವನ ಸಂಸಾರವೇನವನ?

ಬಾಳುವೆಣನ ಬೀಳುವೆಣನ ಸಂಸಾರವೇನವನ?

ನಡೆವೆಣನ ನುಡಿವೆಣನ ಸಂಸಾರವೇನವನ? ಕರ್ತು ಕೂಡಲಸಂಗಮದೇವಾ,

ನಿಮ್ಮ ತೊತ್ತುಗೆಲಸವ ಮಾಡದವನ ಸಂಸಾರವೇನವನ?


TRANSLITERATION


hottaare eddu shivaliMgadEvana

dRuShTiyaare nODadavana saMsaaravEnavana?

baaLuveNana bILuveNana saMsaaravEnavana?

naDeveNana nuDiveNana saMsaaravEnavana? kartu kooDalasaMgamadEvaa,

nimma tottugelasava maaDadavana saMsaaravEnavana?


CLICK TO HEAR IT

http://www.youtube.com/watch?v=WitVikiMxh0


TRANSLATION

Hottaare(dawn) eddu (wake up) shivaliMgadEvana (Lord Shiva Linga)

dRuShTiyaare(with reverent eyes) nODadavana(one does not see) saMsaaravu (Life) Enavana(what is it for)?

baaLuva (living) heNana(corpse) bILuva (falling) heNana saMsaaravEnavana?

naDeva (walking) heNana nuDiva (speaking) heNana saMsaaravEnavana? Kartu(creator) kooDalasaMgamadEvaa,

nimma (your) tottugelasava(service) maaDadavana(one that does not) saMsaaravEnavana?



What good is the life of one who does not look at Shiva Linga with reverent eyes, very first at the dawn?

His life is like that of a lifeless, inert corpse.

His life is like that of a moving, talking corpse. Oh Lord Kudala Sangama Deva the creator,

what good is the life of one who does not partake in your service?



COMMENTARY

Basavanna is emphasizing the importance of worship of Shiva Linga in this vachana as a means of cultivating and living a devotional life. He says that our first order of duty in the morning after we wake up should be worshipping Linga. This will enable us to continue to lead a devotional day and devoting all our activities to the service of the Lord. Basavanna uses fairly harsh words to impress that a life without such intense devotion is worthless.

In the last posting we mentioned how we should look beyond the ritual worship of idols and realize the Shiva within us. But, this vachana advocates the worship of Shiva Linga, essentially an idol in the opinion of some. Shiva Linga, more commonly referred to as ‘Istalinga’ (‘Ista’ in Sanskrit means ‘adored’ or ‘desired’) is made up of light gray slate stone interior (representing the devotee) coated with fine durable thick black paste of ashes mixed with some suitable oil to withstand wear and tear. The coating called Kanthe (covering) is in the shape of a dome representing the Universe (or the Lord). Istalinga is thus an amorphous representation of ‘Lingaanga Saamarasya’ i.e. the merger of the devotee (Anga) with the God (Linga).

Basavanna witnessed the fury of idol worship, corresponding rituals, and the strong effects of caste system making humans unequal, very early in his life. He dedicated his life to eradicate the ill effects brought by them. He suggested that it is not necessary to worship idols in temples, as long as we can develop a devotional life. He popularized Istalinga as an icon representing the God within us. In fact, he advocated wearing of Istalinga (enclosed in a container – karadige) around the neck, so that one can pray where ever he is, without a temple or a priest to aid him.

During Linga worship, the devotee places the Linga on his palm, offers prayers and meditates upon it with the mantra “Om Namah Shivaaya” (my salutations to Lord Shiva), whose inner meaning is “Oh Lord, I am longing to merge with you”. The vachana emphasizes that the Linga worship should be performed at the dawn. It seems to be the optimal time for concentrating on God, since we will have rested in the night, will not have been disturbed by the occurring of the day yet, or tired due to all the work during the day by the evening. Beyond that, getting an early start with devotional attitude carries us through such practice the rest of the day.

Let us commit our lives to the service of God every morning through meditation upon the God within!


KANNADA COMMENTARY


ಈ ವಚನದಲ್ಲಿ ಬಸವಣ್ಣನವರು ಶಿವಲಿಂಗ ಪೂಜೆಯ ಮಹತ್ವವನ್ನು ಸಾರುತ್ತಿದ್ದಾರೆ. ನಸುಕಿನಲ್ಲಿಯೇ ಎದ್ದು ಶಿವಲಿಂಗದೇವನ ದೃಷ್ಟಿಯಾರೆ ನೋಡದವನ, ಪೂಜೆಗೈಯದವನ ಸಂಸಾರ ವ್ಯರ್ಥವಾದದ್ದು. ಅವನ ಬಾಳು ಜೀವವಿಲ್ಲದ ಹೆಣದಂತೆ, ಪ್ರಾಣಸಂಚಾರವಿಲ್ಲದೆ ಬಿದ್ದ ಹೆಣದಂತೆ. ಆತನು ನಡೆದಾಡುವ, ನುಡಿಯುತ್ತಿರುವ ಜೀವಚ್ಛವದಂತೆ. ಈ ಸೃಷ್ಟಿಯ ಕಾರಣಕರ್ತನಾದ ಕೂಡಲ ಸಂಗಮನ ಸೇವೆ ಮಾಡದವನ, ಆತನನ್ನು ಕೃತಜ್ಞತೆಯಿಂದ ನೆನೆಯದವನ ಸಂಸಾರದಲ್ಲಿ ಯಾವ ಸಾರವಿರುತ್ತದೆ? ಅಂತಹವನ ಸಂಸಾರ ಯಾವ ಪ್ರಯೋಜನಕ್ಕೆ? ಎಂದು ಕೇಳುತ್ತಾರೆ.

ಶಿವಲಿಂಗವನ್ನು ಪೂಜಿಸುವ ಮೊದಲು ಅದೇನೆಂದು ಅರಿಯುವುದು ಮುಖ್ಯ:

ಕಂತೆ ಕೂಡಿಸಿದ ಶಿವಲಿಂಗವು “ಬಾಹ್ಯ ಆಕಾರದಲ್ಲಿ ಗೋಳಕವಾಗಿ ಅದುವೆ ಬ್ರಹ್ಮಾಂಡದ ಇಲ್ಲವೆ ಆಕಾಶದ ಪ್ರತೀಕವಾಗಿದೆ. ಆದರೆ ಅದರ ಒಳಗಿನ ಆಕಾರವು ಮಾತ್ರ ಪೂಜೆಗೆ ಕುಳಿತ ಭಕ್ತನ ಆಕಾರದಲ್ಲಿದೆ. .... ಸಾಧಕನು ತನ್ನ ದೇಹದಲ್ಲಿಯೇ ದೇವನಿರುವನು ಎಂದು ಕಾಣುವನು. ತಾನು ತನ್ನ ಸ್ವರೂಪವನ್ನೇ ಪೂಜಿಸುತ್ತಿಹೆನೆಂಬ ರಹಸ್ಯವು ಈ ಇಷ್ಟಲಿಂಗಕ್ಕೆ ಇರುವ ಆಕಾರದಲ್ಲಿ ಹುದುಗಿದೆ. ..... ಬಾಹ್ಯ ಆಕಾರವು ಬ್ರಹ್ಮಾಂಡದ ರೂಪದಲ್ಲಿ, ಅಂತರಾಕಾರವು ಪಿಂಡಾಂಡದ ರೂಪದಲ್ಲಿದ್ದು, ಪಿಂಡ ಬ್ರಹ್ಮಾಂಡಗಳ ಐಕ್ಯವನ್ನು ಸಾಧಿಸುತ್ತಿದೆ ಈ ಲಿಂಗ. ಇಷ್ಟಲಿಂಗದ ಪೂಜೆ ಮತ್ತು ಅನುಸಂಧಾನಗಳಿಂದ ...... ಪ್ರಕಾಶದ ಸಾಕ್ಷಾತ್ಕಾರ ಉಂಟಾಗುವುದು.” ಎಂದು ಹೇಳುತ್ತಾರೆ ಶ್ರೀ ಶಿವಕುಮಾರ ಸ್ವಾಮಿಗಳು (ನವ ಕಲ್ಯಾಣಮಠ, ಧಾರವಾಡ)

ಯಾವುದೇ ಕೆಲಸವನ್ನು ಕುಂದಿಲ್ಲದೆ ನೆರವೇರಿಸಬೇಕಾದರೆ ಅದಕ್ಕೆ ಸರಿಯಾದ ಪೂರ್ವಸಿದ್ಧತೆ ಬೇಕೇ ಬೇಕು. ಪೂರ್ವಸಿದ್ಧತೆಯಿಲ್ಲದೆ ಮಾಡಿದ ಕೆಲಸದಲ್ಲಿ ಒಮ್ಮೊಮ್ಮೆ ಸಫಲತೆ ಸಿಕ್ಕಂತೆ ಕಂಡರೂ ಅದರಲ್ಲಿ ಕುಂದುಗಳಿರುತ್ತವೆ. ಪೂರ್ಣ ಯಶಸ್ಸನ್ನು ಗಳಿಸಲು ತಕ್ಕ ಪೂರ್ವಸಿದ್ಧತೆ ಬೇಕು. ಈ ಮಾತು ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಈ ಸಂಸಾರದಲ್ಲಿ ಸ್ಥಿತಪ್ರಜ್ಞನಾಗಿರಬೇಕಾದರೆ, ಸುಖದುಃಖಗಳನ್ನು ಸಮದೃಷ್ಟಿಯಿಂದ ಸ್ವೀಕರಿಸುವ ಕಲೆಯನ್ನು ಕೈಗೂಡಿಸಿಕೊಳ್ಳಬೇಕಾದರೆ, ಶಿವಾನುಭವವನ್ನು ಹೊಂದಬೇಕಾದರೆ ಪೂರ್ವ ಸಿದ್ಧತೆಯ ಅವಶ್ಯಕತೆ ಇದ್ದೇ ಇದೆ. ಈ ಎಲ್ಲವುಗಳನ್ನು ಹೊಂದಿದವನೇ ಈ ಲೋಕವನ್ನು ಕೈಲಾಸವಾಗಿಸಿಕೊಂಡು ಅಂಟಿಯೂ ಅಂಟದಂತಿರುತ್ತಾನೆ. ಅಂತಹ ಸ್ಥಿತಿಯನ್ನು ಹೊಂದಲು ಬೇಕಾದ ಪೂರ್ವ ಸಿದ್ಧತೆಯೇ ಶಿವಲಿಂಗಪೂಜೆ. ಭಕ್ತನು ಶಿವಲಿಂಗ ಪೂಜೆ ಮಾಡಬೇಕಾದದ್ದು ಅತ್ಯಾವಶ್ಯಕವೆಂದು ಬಸವಣ್ಣನವರು ಈ ವಚನದ ಮೂಲಕ ಹೇಳುತ್ತಾರೆ.

ಬೆಳಗಾಗುತ್ತಲೇ ನಿತ್ಯ ಬದುಕಿನ ಜಂಜಾಟಗಳು, ಗೊಂದಲಗಳು, ಸಮಸ್ಯೆಗಳು ಆರಂಭವಾಗುತ್ತವೆ. ಇಡೀ ದಿನವೆಲ್ಲ ಅವುಗಳನ್ನು ಅಪಕ್ವ ರೀತಿಯಿಂದ ಪರಿಹರಿಸುವುದರಲ್ಲಿ ಅಥವಾ ಅವುಗಳಿಗೆ ಹೊಂದಿಕೊಳ್ಳುವುದರಲ್ಲಿಯೇ ಕಳೆದು ಹೋಗುತ್ತದೆ. ರಾತ್ರಿಯಾಗುತ್ತಿದ್ದಂತೆ ಅವುಗಳಿಂದ ಘಾಸಿಯಾದ ಮನಸ್ಸು ಮತ್ತು ದೇಹ ವಿಶ್ರಾಂತಿಗಾಗಿ ಹಾತೊರೆಯುತ್ತದೆ. ನಿದ್ರೆ ಮತ್ತು ಕನಸಿನ ಲೋಕದ ನಡುವೆ ಉಯ್ಯಾಲೆಯಾಡುತ್ತ ತಾತ್ಕಾಲಿಕವಾದ ಭ್ರಮಾತ್ಮಕ ವಿಶ್ರಾಂತಿ ಪಡೆದು ಮತ್ತೆ ಮರುದಿನ ಯಥಾ ಪ್ರಕಾರ ಯಾವ ಸಿದ್ಧತೆಯೂ ಇಲ್ಲದೆ, ಅರಿವಿನ ಲವಲೇಶವೂ ಇಲ್ಲದೆ, ದಿನ ನಿತ್ಯದ ಬದುಕಿನ ಜಂಜಾಟಗಳನ್ನು ಎದುರುಗೊಳ್ಳುತ್ತದೆ. ಈ ಅರ್ಥವಿಲ್ಲದ ಕಾರ್ಯ ಚಕ್ರದಂತೆ ನಿರಂತರವಾಗಿ ತಿರುಗುತ್ತಲೇ ಇರುತ್ತದೆ. ಇದಕ್ಕೆ ಕೊನೆಯೇ ಇರುವುದಿಲ್ಲ. ಇಂತಹ ಚಕ್ರದಲ್ಲಿ ಸಿಕ್ಕಿಕೊಂಡವನು, ಬದುಕನ್ನು ಆಕ್ರಮಣಕಾರಿ ಅಥವಾ ರಕ್ಷಣಾತ್ಮಕ ದೃಷ್ಟಿಯಿಂದ ನೋಡುತ್ತಾನೆಯೇ ಹೊರತು ಮುಕ್ತಮನಸ್ಸಿನಿಂದಲ್ಲ. ಬದುಕಿನ ಪರಿಪೂರ್ಣತೆಯನ್ನು ಗ್ರಹಿಸದೆ, ಅನುಭವಿಸದೆ, ಆನಂದಿಂದ ವಂಚಿತನಾಗುತ್ತಾನೆ. ಇದ್ದೂ ಇಲ್ಲದವನಂತೆ ಇರುತ್ತಾನೆ. ಆತನ ಪ್ರತಿಯೊಂದು ಕ್ರಿಯೆಯೂ ಜ್ಞಾನರಹಿತವಾಗಿರುವುದರಿಂದ ಅದು ಜೀವರಹಿತವಾಗಿರುತ್ತದೆ. ಇದೂ ಒಂದು ಬದುಕೇ? ಎಂದು ಕೇಳುತ್ತಾರೆ ಬಸವಣ್ಣನವರು.

ಈ ಎಲ್ಲದರಿಂದ ಮುಕ್ತಿ ಪಡೆಯಬೇಕಾದರೆ ಅದಕ್ಕೆ ತಕ್ಕ ಪೂರ್ವ ಸಿದ್ಧತೆ ಬೇಕು. ಮನಸ್ಸು ಶಾಂತವಾಗಬೇಕು, ಇದ್ದುದನ್ನು ಇದ್ದಂತೆ ನೋಡುವ ಸಾಮರ್ಥ್ಯ ಬೇಕು. ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಪೂರ್ವ ಸಿದ್ಧತೆ ಬೇಕು. ಅದುವೇ ಶಿವಲಿಂಗ ಪೂಜೆ.

“ ಲಿಂಗವೆಂದರೆ ದೇಹ. ಸದಾಚಾರದಿಂದ, ಯುಕ್ತಾಯುಕ್ತ ಆಹಾರ ವಿಹಾರದಿಂದ, ದೇಹವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ......ಶರೀರ ಸ್ವಾಸ್ಥ್ಯವೇ ಎಲ್ಲ ಬಗೆಯ ಧರ್ಮಸಾಧನೆಗೆ ಅಗತ್ಯವಾಗಿದೆ. ..... ಅಭಕ್ಷ್ಯ ಭಕ್ಷಣ, ಅಪೇಯಪಾನ ನಿಷಿದ್ಧವಾದವುಗಳು. ಕೂಡಲಸಂಗನ ಒಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು. ಇದುವೇ ಅನ್ನಮಯ ಕೊಶ. ಗಿಡಕ್ಕೆ ಎರೆದ ನೀರು ರಾಸಾಯನಿಕ ಕ್ರಿಯೆಯಿಂದ ಆ ಗಿಡಕ್ಕೆ ಜೀವನ ರಸವಾಗಿ ಪರಿಣಮಿಸುವುದು. ..... ಸದಾಚಾರವೆಂಬ ನೀರಿನಿಂದ ಪ್ರಾಣಮಯಕೋಶವು ಶುದ್ಧವಾಗುವುದು. ಪ್ರಾಣಮಯ ಕೋಶವು ಶುದ್ಧವಾಗುವುದೆಂದರೆ, ಕಾಮನೆ ವಾಸನೆಗಳ ತೀವೃತೆಯು ಕಡಿಮೆಯಾಗಿ, ಪ್ರಾಣವು ಮನದ ಅಂಕಿತದಲ್ಲಿ ಬರಬೇಕು. ಇಂತಹ ಪರಿಶುದ್ಧವಾದ ಪ್ರಾಣದಲ್ಲಿ ಲಿಂಗವು ಗೋಚರಿಸುವುದು. ಲಿಂಗವೆಂದರೆ ಪರಿಶುದ್ಧವಾದ ಮನ. ಸಂಕಲ್ಪ ವಿಕಲ್ಪಗಳು, ಸಂಶಯವೃತ್ತಿಗಳೆಲ್ಲವು ಮನಸ್ಸಿನ ಧರ್ಮ. ಇವೆಲ್ಲವೂ ಅಳಿದು ಮನ ನಿರ್ಮಲ ಮತ್ತು ನಿಶ್ಚಲವಾದ ಹೊರತು ಅದು ಲಿಂಗವಾಗದು. ನಿರ್ಮಲ ನಿಶ್ಚಲ ಮನವೇ ಲಿಂಗ.” (ಶ್ರೀ ಶಿವಕುಮಾರ ಸ್ವಾಮಿ - ನವ ಕಲ್ಯಾಣಮಠ ಧಾರವಾಡ)

ನಿರ್ಮಲ ಮತ್ತು ನಿಶ್ಚಲವಾದ ಮನಸ್ಸನ್ನು ಹೊಂದಲು ನಸುಕಿನ ಸಮಯ ಬಹಳ ಪ್ರಶಸ್ತವಾದದ್ದು ಎಂಬ ವಿಷಯ ಎಲ್ಲರ ಅರಿವಿಗೆ ಬಂದಿರುತ್ತದೆ. ಹಿಂದಿನ ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ತಕ್ಕಮಟ್ಟಿಗೆ ಪ್ರಶಾಂತವಾಗಿ ಹೊಸತನವನ್ನು ಪಡೆದಿರುತ್ತದೆ. ಸೂರ್ಯೋದಯದ ನಂತರ ಬಾಹ್ಯ ಜಗತ್ತಿನ ಗೊಂದಲಗಳು ಆರಂಭವಾಗುವ ಮೊದಲೇ ಪ್ರಶಾಂತವಾದ ಸಮಯದಲ್ಲಿ ಶಿವಪೂಜೆಯೆಂಬ ಆಚರಣೆಯ ಮೂಲಕ ಮನಸ್ಸನ್ನು ನಿಶ್ಚಲಗೊಳಿಸುವ ಪ್ರಯತ್ನದಲ್ಲಿ ತೊಡಗುವುದು ಯುಕ್ತ. ಈ ರೀತಿಮಾಡದವನು ಜೀವಚ್ಛವವಾಗಿರುತ್ತಾನೆ ಎಂಬುದು ಬಸವಣ್ಣನವರ ಅಂಬೋಣ.

1 comment:

  1. After seeing the above vachana, I would like to cultivate the habit of getting up early in the morning and looking at shivalinga with half-closed eyes.

    ReplyDelete