ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ!
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ!
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ!
ಅಗಮ್ಯ ಅಪ್ರಮಾಣ ಅಗೋಚರ ಅಪ್ರತಿಮ ಲಿಂಗವೇ,
ಕೂಡಲಸಂಗಮದೇವಯ್ಯ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.
TRANSLITERATION
jagadagala mugilagala migeyagala nimmagala!
pAtALadiMdattatta nimma SrIcaraNa!
brahmAMDadiMdattatta nimma SrImakuTa!
agamya apramANa agOcara apratima liMgavE,
kUDalasaMgamadEvayya,
enna karasthalakke baMdu cuLukAdirayya.
CLICK TO HEAR IT:
http://www.youtube.com/watch?v=VjvZchUt6Bk
A MUSICAL RENDERING
http://www.raaga.com/player4/?id=168654&mode=100&rand=0.013282552311677964
TRANSLATION
jagat (Universe) agala (width) mugilu (sky) agala migeya (beyond Universe) agala nimma (your) agala(width)!
pAtALadiMda (under world) attatta(beyond) nimma SrIcaraNa (sacred feet)!
brahmAMDadiMda (upper world, Brahma's abode) attatta nimma SrImakuTa (sacred crown)!
agamya (beyond comprehension) apramANa (beyond any measure) agOcara (beyond visibility) apratima (beyond comparison) liMgavE (linga),
kUDalasaMgamadEvayya,
enna (my) karasthalakke(on the palm) baMdu (arrived) cuLukAdirayya (became a speck).
Your wideness exceeds the wideness of the Universe and sky, and stretches beyond!
Your sacred feet go beyond the depth of the underworld!
Your sacred crown reaches beyond the heavens!
You are beyond comprehension from our senses, beyond any measure, beyond our sensual visibility and incomparable!
Lord kUDalasaMgamadEva,You shrunk into a speck and arrived on to my palm!
COMMENTARY
In previous posting we mentioned that Istalinga represented the merger of the individual soul with the Universal soul and is an icon to aid us in the development of God mindedness. Basavanna expands on the significance of Istalinga in this vachana and says “Oh! Lord, you are boundless, limitless and formless. Yet, I reach you through my Istalinga on my palm”. This vachana is a beautiful compilation of the characteristics of the Lord who is beyond the expression through our speech and perception of our mind. The first three lines express the all pervasive and vast nature of the Lord. The next two lines express the inability of our sense organs to fathom the largesse of the Lord. The last line expresses the ultimate humility and thankfulness of Basavanna for the Lord who has appeared as Istalinga on his palm. Istalinga is thus an icon of the omnipotent, omniscient and omnipresent Lord.
It is said that Istalinga is the flower (form) while the Pranalinga (the Lord within us) is the fragrance (formless). We can see the flower, but can only realize the fragrance! Istalinga is the mirror while the Pranalinga is the image in it. Worshipping Istalinga is thus, meditating on it to realize the Pranalinga, the Lord within.
Basavanna advocated wearing Istalinga on the body so it is available always as an aid to meditate upon the Lord. It is interesting that people started worshipping the icon as the God and eventually attached more importance to the rituals for such worship, forgetting what the icon stood for.
Let us utilize the icon to take us towards the goal of realizing the Lord within!
KANNADA COMMENTARY
ಹೊತ್ತಾರೆ ಎದ್ದು ಶಿವಲಿಂಗನ ದೃಷ್ಟಿಯಾರೆ ನೋಡಿದಾಗ ಬವಣ್ಣನವರಿಗೆ ಕಂಡುಬಂದದ್ದು ಈ ವಚನದಲ್ಲಿ ಅಭಿವ್ಯಕ್ತವಾಗಿದೆ:
“ಹೇ ಕೂಡಲ ಸಂಗಮದೇವ! ನಿಮ್ಮ ಹರವು ಜಗದಗಲವಾಗಿದೆ. ನಿಮ್ಮ ಹರವು, ಕೇವಲ ಜಗತ್ತಿನ ಭೂಮಿಯಮೇಲೆ ಮಾತ್ರ ಅಲ್ಲ, ಅದು ಮುಗಿಲಿನ ತುಂಬ ತುಂಬಿಕೊಂಡಿದೆ. ಅಷ್ಟೇ ಅಲ್ಲ ಅದು ಜಗತ್ತು ಮತ್ತು ಆಕಾಶವನ್ನು ಮೀರಿ ವಿಸ್ತರಿಸಿಕೊಂಡಿದೆ. ಪಾತಾಳದ ಆಳದ ಎಲ್ಲೆಯನ್ನೂ ಮೀರಿ ಹೋಗಿವೆ ನಿಮ್ಮ ಶ್ರೀ ಚರಣಗಳು, ಕೇವಲ ಆಕಾಶವೇ ಅಲ್ಲದೆ ಇಡೀ ಬ್ರಹ್ಮಾಂಡವನ್ನೂ ಮೀರಿ ಹೋಗಿದೆ ನಿಮ್ಮ ಶ್ರೀ ಮಕುಟ” ಎಂದು ಕೂಡಲ ಸಂಗಮನ ವ್ಯಾಪ್ತಿಯನ್ನು ಹೇಳುತ್ತಾರೆ. ಆದರೂ ಅವರ ಮನಸ್ಸು ತೃಪ್ತಿಗೊಂಡಿಲ್ಲ. ಈ ಸೃಷ್ಟಿಯಲ್ಲಿರುವ ಅವನ ವಿಸ್ತಾರದ ರೂಹನ್ನು ಯಾವ ರೀತಿಯಾಗಿ ಹೇಳಿದರೂ ಅದು ಕಡಿಮೆಯೆ ಅನ್ನಿಸುತ್ತದೆ ಅವರಿಗೆ. “ಅಗಮ್ಯನು; ಯಾರೂ ಹೋಗಿ ಮುಟ್ಟಲಾರದ, ಅಪ್ರಮಾಣ; ಯಾವ ಅಳತೆಗೂ ಸಿಗದ, ಅಗೋಚರ; ಯಾರ ಕಣ್ಣಿಗೂ ಕಾಣದ ಮತ್ತು ಅಪ್ರತಿಮ; ಏಕಮೇವಾದ್ವಿತೀಯವಾದ ಲಿಂಗವೇ ನೀವು ಈ ಸಣ್ಣ ರೂಪದಲ್ಲಿ ನನ್ನ ಕರಸ್ಥಲಕ್ಕೆ ಬಂದಿರುವಿರಿ” ಎಂದು ಆನಂದತುಂದಿಲರಾಗಿ ತಮ್ಮ ಸೌಭಾಗ್ಯವನ್ನು ನೆನೆಯುತ್ತಾರೆ.
“ಎಲ್ಲವೂ ಲಿಂಗಮಯವಾಗಿದೆ. ಲಿಂಗವಲ್ಲದ ಏನೇನೂ ಇಲ್ಲ ಈ ಸೃಷ್ಟಿಯಲ್ಲಿ” ಎಂಬ ಭಾವ ಒಬ್ಬ ಹಿರಿಯ ಅನುಭಾವಿಯದು. ನಮ್ಮಂತಹ ಸಾಮಾನ್ಯರು ಅದನ್ನು ಹೇಗೆ ಅರ್ಥಮಾಡಿಕೊಳ್ಳುವುದು??? ನಮ್ಮ ಅರಿವು ನಮಗೆ ಕಾಣುವುದಿಲ್ಲ. ನಾವು ಸದಾ ಭ್ರಮೆಯಲ್ಲಿ ಓಲಾಡುತ್ತಿರುತ್ತೇವೆ. “ಅಜ್ಞಾನದಿಂದ ಭ್ರಮೆಗೊಂಡು ತಿರುಗುತಿಪ್ಪ ಜೀವನಿಗೆ ತಾನು ಶಿವನೆಂಬ ನಿಜದರಿವು ತಲೆದೋರದು” ನಿಮ್ಮ ಒಳಗೆ ನೀವು ನೋಡಬೇಕು, ನಿಮ್ಮ ಪರವಾಗಿ ಈ ಕೆಲಸ ಮತ್ತೊಬ್ಬರು ಕೈಕೊಳ್ಳುವುದು ಸಾಧ್ಯವಿಲ್ಲ............. ನೀವು ನಿರ್ಮಲವಾದರೆ ನಿಮ್ಮ ದೇಹ, ಕರಣ, ಇಂದ್ರಿಯ, ಅಜ್ಞಾನ, ಅಹಂಭಾವ ಇವು ಬಹುಮಟ್ಟಿಗೆ ತೊಳೆದು ಹೋದಂತೆಯೆ. ಇಲ್ಲಿ ಒಳಗೆ ನೋಡುವುದು ತೊವಲ ಕಣ್ಣಲ್ಲ. ಈ ಕಣ್ಣಿಗೆ ಒಳಗೆ ಹೇಗೆ ಕಂಡೀತು? ಜ್ಞಾನ ದೃಷ್ಟಿಯಿಂದ ಅಂತರ್ಮುಖವಾಗಿ ನೋಡಿದರೆ “ಅನ್ಯವಿಲ್ಲ ಕಾಣಿರಣ್ಣಾ”. ತನಗೆ ಅನ್ಯವಾದ ಬೇರೊಂದು ವಸ್ತು ಬ್ರಹ್ಮಾಂಡದಲ್ಲಿಯೇ ಇಲ್ಲ. ”ಎಲ್ಲೆಲ್ಲಿ ನೀವೇ ಕಾಣಿರಣ್ಣಾ!” ಇದೊಂದು ಮಾನವನ ಮನ, ಬುದ್ಧಿ ನಿಲುಕದ ದರ್ಶನ.” (ಶೂನ್ಯ ಸಂಪಾದನೆಯ ಪರಾಮರ್ಶೆ ಸಂಗ್ರಹ - ಸಂ. ಶ್ರೀ. ಭೂಸನೂರಮಠ)
ಮನಸ್ಸನ್ನು ಶಾಂತಗೊಳಿಸುವುದೇ ಇದಕ್ಕೆ ಉಪಾಯ. ಮನಸ್ಸು ಶಾಂತವಾದಾಗ ಮಾತ್ರ ಬೇರೇನನ್ನಾದರು ಕಂಡುಕೊಳ್ಳುವ ಸಾಧ್ಯತೆಯಿರುತ್ತದೆ. ಇಲ್ಲದಿದ್ದರೆ ಸದಾ ನಮ್ಮ ಭ್ರಮೆಗಳೆ ನಮ್ಮೆದುರು ತಾಂಡವವಾಡುತ್ತಿರುತ್ತವೆ. ನಮ್ಮ ತೊಗಲಿನ ಕಣ್ಣುಗಳಿಗೆ ಕಾಣುವುದಷ್ಟೇ ಸತ್ಯವೆಂದುಕೊಂಡು ನಾವು ಅಜ್ಞಾನದಲ್ಲಿಯೇ ಮುಳುಗಿರುತ್ತೇವೆ. ನಮ್ಮ ಭ್ರಮೆಗಳು ಯಾವುವು ಮತ್ತು ಅವು ಹೇಗೆ ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಅಜ್ಞಾನವನ್ನು ಅರಿಯಲು ಸಹ ನಮಗೆ ಆಳವಾದ ಹಂಬಲವಿರಬೇಕು.
“ ತಾನು ಯಾರು? ತನ್ನ ನಿಜಸ್ವರೂಪವೇನು? ಜಗತ್ತಿನಲ್ಲಿ ತಾನು ಪೂರೈಸಬೇಕಾದ ಮಣಿಹವಾವುದು? ತನಗೂ ಜಗತ್ತಿಗೂ ಇರುವ ಸಂಬಂಧವೇನು? ತನ್ನ ಸ್ವಸ್ಥಲವಾವುದು? ಎಂಬುದು ತನ್ನ ಒಳಗೆ ತಾನೇ ಉದಯವಾಗಿ, ಸ್ವಯಂ ವೇದ್ಯವಾಗಿ ತೋರುವ ಆತ್ಮವಿದ್ಯೆಯೇ ಅನುಭಾವ................ ನಾವು ನಮ್ಮ ವ್ಯವಹಾರದ ಅನುಕೂಲಕ್ಕಾಗಿ ಬೊಡ್ಡೆ, ಶಾಖೆ,ಪತ್ರ, ಪುಷ್ಪ. ಫಲವೆಂದು ವಿಂಗಡಿಸಿ ಕರೆದರೂ ವೃಕ್ಷದ ಒಂದುತನಕ್ಕೆ ಯಾವ ಭಂಗವೂ ಇಲ್ಲ. ............... ಪಂಚಭೂತಗಳ ಹಾಗೂ ವಿಶ್ವದ ವಿಜ್ಞಾತ ಮತ್ತು ಅವಿಜ್ಞಾತ ಶಕ್ತಿಗಳ ಮೊಲೆವಾಲನ್ನುಂಡು ರೂಪುಗೊಂಡಿರುವ ನಾನು ವಿಶ್ವ ಶಕ್ತಿಗಳ ಕಾರುಣ್ಯ ಶಿಶು. ನನ್ನಂತೆ ನೀವು. ಅವರು, ಅವು ಎಂದು ಮಾನವನಿಂದ ಕರೆಸಿಕೊಂಡಿರುವ ಸಣ್ಣ ದೊಡ್ಡ ಭೂತ ವಸ್ತುಗಳೆಲ್ಲ ಆ ವಿಶ್ವ ಶಕ್ತಿಯ ಕೂಸುಗಳೆ. ನವಿಲಿನ ತತ್ತಿಯಲ್ಲಿ ನವಿಲಿನ ಅಕಾರ, ಗರಿ, ತುರಾಯಿ, ವಿವಿಧ ಬಣ್ಣಗಳ ಬೆಡಗು ಅಡಗಿರುವಂತೆ ಶೂನ್ಯದಲ್ಲಿ ವಿಶ್ವದ ಅನಂತ ವೈಭವ ಅಡಗಿಕೊಂಡಿದೆ. ನವಿಲು ಒಂದು ಪಿಂಡಾಂಡ. ವಿಶ್ವ ಪ್ರಪಂಚ ಬ್ರಹ್ಮಾಂಡ. ಅದು ಬ್ರಹ್ಮನ ಅಳತೆಗೆಟ್ಟ ಬಹು ದೊಡ್ಡ ತತ್ತಿ.” (ಶೂನ್ಯ ಸಂಪಾದನೆಯ ಪರಾಮರ್ಶೆ ಸಂಗ್ರಹ - ಸಂ. ಶ್ರೀ. ಭೂಸನೂರಮಠ)
ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ ಈ ಮೇಲೆ ಹೇಳಿದ್ದೆಲ್ಲವೂ ನಮ್ಮ ಬುದ್ಧಿಗೆ ನಿಲುಕಬಹುದು. ಆದರೆ ಅದನ್ನು ಆತ್ಮಸಾತ್ ಮಾಡಿಕೊಳ್ಳಬೇಕಾದದ್ದು ಮುಖ್ಯ. ಅದನ್ನು ಅನುಭಾವಕ್ಕೆ ತಂದುಕೊಳ್ಳಬೇಕಾದರೆ ಮುಖ್ಯವಾಗಿ ಬೇಕಾದದ್ದು ಅರಿವು. ಅದಕ್ಕಾಗಿಯೇ ಬಸವಣ್ಣನವರು “ತನ್ನ ತಾನರಿಯದ ಜ್ಞಾನವೆಲ್ಲ ಅಜ್ಞಾನ ಕಾಣಣ್ಣ “ ಎಂದು ಹೇಳಿರುವರು. ನಮ್ಮ ದೈಹಿಕ ಚಕ್ಷುಗಳಿಗೆ ಕಾಣದ ಅದನ್ನು ಅರಿವಿನ ಚಕ್ಷುಗಳಿಂದ ಕಾಣಬೇಕು.
A very beautiful vachana by basavanna. But nowadays people just wear ishtalinga for the sake of sampradaya and have forgotten that the ishtalinga which he or she wears is the lord within him/her(the jyotirlinga).
ReplyDeleteWhen we have ishtalinga on our body there is no need to go to temples and pilgrimages.