Friday, January 21, 2011

Vachana 23: Ashtavidharchaneya maadi - Gratify me, Oh! Lord

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯ? ನೀನು ಬಹಿರಂಗವ್ಯವಹಾರದೂರಸ್ಥನು!
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯ? ನೀನು ವಾಙ್ಮನಕ್ಕತೀತನು!
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯ? ನೀನು ನಾದಾತೀತನು!
ಭಾವಜ್ಞಾನದಿಂದೊಲಿಸುವೆನೆ ಅಯ್ಯ? ನೀನು ಮತಿಗತೀತನು!
ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೇ ಅಯ್ಯ?
ನೀನು ಸರ್ವಾಂಗಪರಿಪೂರ್ಣನು!
ಅಯ್ಯ ನಿನ್ನ ಒಲಿಸಲೆನ್ನಳವಲ್ಲ!
ನೀ ಒಲಿವುದೆ ಸುಖವಯ್ಯ ಚೆನ್ನಮಲ್ಲಿಕಾರ್ಜುನಯ್ಯ!

TRANSLITERATION

aShTavidhArcaneya mADi olisuvene ayya?
nInu bahiraMgavyavahAradUrasthanu!
aMtaraMgadalli dhyAnava mADi olisuvene ayya?
nInu vA~gmanakkatItanu
japastOtradiMda olisuvene ayya?
nInu nAdAtItanu
BAvaj~jAnadiMdolisuvene ayya?
nInu matigatItanu
hRudayakamalamadhyadalli iMbiTTukoMbenE ayya?
nInu sarvAMgaparipUrNanu
ayya ninna olisalennaLavalla
nI olivude suKavayya cennamallikArjunayya!


CLICK TO HEAR IT:

http://www.youtube.com/watch?v=HQUBVgGBaV8


TRANSLATION


aShTavidha (Eight kinds) Arcaneya (worship) mADi (perform) olisuvene (to gratify) ayya (Sir)?
nInu (you) bahiraMga (outwardly) vyavahAra (activities) dUrasthanu (away)!
aMtaraMgadalli (inwardly?) dhyAnava (meditate) mADi(perform) olisuvene ayya?
nInu vA~g (speech) manakke (mind) atItanu(beyond)
japa (chanting) stOtradiMda(songs of praise) olisuvene ayya?
nInu nAdA (melody) atItanu (beyond)
BAva(perception) j~jAnadiMda (from knowledge) olisuvene ayya?
nInu matige (intellect) atItanu
hRudaya(heart) kamala(lotus)madhyadalli( with in) iMbiTTukoMbenE ( make place) ayya?
nInu (you) sarva ( all) Amga ( organs) paripUrNanu (whole)
ayya ninna (you) olisalu ( to gratify ) enna (my) aLavalla(beyond my capacity)
nI(yourself) olivude(if you gratify) suKavu ( delight) ayya (sir) cennamallikArjunayya!


Shall I gratify you with eight kinds of worship, Oh Lord?
No, I cannot; you are far away from such outwardly activities!
Shall I gratify you with deep and inwardly meditation, Oh Lord?
No, I cannot; you are far beyond the stretches of speech and mind !
Shall I gratify you with chanting your names and praising you, Oh Lord?
No, I cannot; you are way beyond the reaches of melody!
Shall I gratify you with my innermost perception and knowledge of you, Oh Lord?
No, I cannot; you are beyond the limits of intellect!
Shall I make place for you in the lotus of my heart, Oh Lord?
No, I cannot; you are omnipresent and whole on your own!
Oh Lord! It is beyond my capability to gratify you!
I shall be delighted if YOU gratify me, Lord Cennamallikarjunayya!

COMMENTARY

In previous postings we addressed what Istalinga stood for and how it was transformed into the God to be worshipped rather than staying as an icon representing the Pranalinga, the Lord within us. As part of the worship we created idols in our own image, invented a multitude of rituals and began to offer flowers, fruits, water, milk, food (prasada), etc. to God. While these rituals and offerings might be needed initially to create the awareness of God, it is important to realize that the idol is not God; it is only a form designed to be perceived by our sense organs. We need to go beyond to realize the Lord within us. Akka Mahaadevi addresses this aspect in this beautiful vachana.

Akka addresses the rituals of offering water, flowers, music, food, etc. to God, and says that she cannot gratify the God (who is beyond all such materialistic involvement) with these rituals. He cannot be gratified by deep and inwardly meditation, since He is not perceivable by speech and mind. Our offering of Bhajans and singing His praise is not of much use since He is beyond the reaches of melody. He is beyond our intellect and as such cannot be reached through the innermost perception and knowledge of Him. Being omnipresent and whole, He cannot be made to reside in our heart. Finally, Akka begs the Lord to gratify her, since she does not have the capability to gratify Him.

If all our efforts to gratify Him fail, how can we realize Him? In all our efforts outlined above, we have created a mental image of God, we have visualized a form, a movement, a capability, strength, etc. which are attributes of our own to satisfy the limited range of our sense organs. We stay with the illusion that we have realized God. We need to stay clear of such illusions and keep an open mind and invite Him to gratify us. Once we develop such an open mind and attitude, the God will arrive to fill it!

Let us grow to be open minded and receive the Lord within!

KANNADA COMMENTARY

ಪೂಜೆಯಿಂದಲೇ ಎಲ್ಲರೂ ಭಕ್ತಿಯನ್ನು ಆಚರಿಸುತ್ತಾರೆ. ಮೊದಮೊದಲು ಅದೇ ಅತ್ಯಂತ ಮಹತ್ವದ್ದು ಎನಿಸುತ್ತದೆ. ಆದರೆ ದಿನಗಳೆದಂತೆ ಅದರ ಫಲ ಅತ್ಯಂತ ಸೀಮಿತವಾದದ್ದು ಎಂದು ತಿಳಿದು ಬರುತ್ತದೆ. ಜಲ, ವಿಭೂತಿ, ಗಂಧ, ಅಕ್ಷತೆ, ಪುಷ್ಪ, ಪತ್ರೆ, ನಾದ ಮತ್ತು ನೇವೇದ್ಯದಿಂದ ದೇವನನ್ನು ಒಲಿಸಲು ಸಾಧ್ಯವಿಲ್ಲ ಎಂಬುದು ಅರಿವಿಗೆ ಬರುತ್ತದೆ. ಆತನು ಕೇವಲ ಲಿಂಗಕ್ಕೆ ಸೀಮಿತನಾದವನಲ್ಲ, ಕಣ್ಣಿಗೆ ಕಾಣುವ ಈ ಲಿಂಗವೇ ದೇವರು ಎನ್ನಲು ಮನಸ್ಸು ಒಪ್ಪುವುದಿಲ್ಲ. ಕಣ್ಣಿಗೆ ಕಾಣುವ ಈ ಲಿಂಗದ ಹಿಂದಿನ ರಹಸ್ಯವನ್ನು ಭೇದಿಸುವ ನಿಟ್ಟಿನಲ್ಲಿ ಮನಸ್ಸು ತೊಡಗುತ್ತದೆ. ಆದರೆ ಇಂದ್ರಿಯಗಳಿಗೆ ನಿಲುಕದ ಆತನನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅಷ್ಟವಿಧವಾದ ಅರ್ಚನೆಯು ಎಷ್ಟೇ ಆದರೂ ಇಂದ್ರಿಯಗಳಿಗೆ ಸೀಮಿತವಾದದ್ದು ಎನಿಸುತ್ತದೆ. ಅಂತಹ ಸಮಯದಲ್ಲಿ ಅಕ್ಕಮಹಾದೇವಿ ಹೇಳಿದ ವಚನವಿದು:

“ಅಷ್ಟವಿಧವಾದ ಅರ್ಚನೆಯ ಮಾಡಿ ನಿನ್ನನ್ನು ಕೂಡಿಕೊಂಬೆನೆಂದುಕೊಂಡರೆ ನೀನು ಬಹಿರಂಗ ವ್ಯವಹಾರದಿಂದ ಬಲು ದೂರ ಇರುವವನು, ಬಹಿರಂಗದಲ್ಲಿ ಇಲ್ಲದ ನಿನ್ನನ್ನು ಧ್ಯಾನದಿಂದ ಒಲಿಸುತ್ತೇನೆ ಎಂದುಕೊಂಡರೆ ನೀನು ವಾಕ್ ಮತ್ತು ಮನಸ್ಸಿಗೇ ಸಿಗದವನು, ಇನ್ನು ಧ್ಯಾನಿಸುವುದೇನನ್ನು? ಜಪ ಮತ್ತು ಸ್ತೋತ್ರಗಳಿಂದ ನಿನ್ನನ್ನು ಒಲಿಸಿಕೊಳ್ಳುತ್ತೇನೆ ಎಂದುಕೊಂಡರೆ ನೀನು ಅವುಗಳ ನಾದವನ್ನು ಮೀರಿದವನು, ಭಾವ ಜ್ಞಾನದಿಂದ ಒಲಿಸುತ್ತೇನೆ ಎಂದುಕೊಂಡರೆ ನೀನು ಬುದ್ಧಿಗೆ ನಿಲುಕದವನು, ನಿನ್ನನ್ನು ನನ್ನ ಹೃದಯಕಮಲಲ್ಲಿ ಇಟ್ಟುಕೊಳ್ಳುವೆನೆಂದುಕೊಂಡರೆ ನೀನು ಎಲ್ಲದರಲ್ಲಿಯೂ ಪರಿಪೂರ್ಣನಾಗಿರುವೆ, ಅಂತಹ ನಿನ್ನನ್ನು ಎಲ್ಲದರಿಂದ ಬೇರ್ಪಡಿಸಿ ನನ್ನಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಆದ್ದರಿಂದ ನಿನ್ನನ್ನು ಒಲಿಸುವುದು ನನಗೆ ಸಾಧ್ಯವಾಗುವುದಿಲ್ಲ. ನೀನೇ ಒಲಿದು ಬಿಡು” ಎಂದು ನಿಸ್ಸಹಾಯಕಳಾಗಿ ಅಕ್ಕಮಹಾದೇವಿ ಮಲ್ಲಿಕಾರ್ಜುನನನ್ನು ಕೇಳಿಕೊಳ್ಳುತ್ತಿದ್ದಾಳೆ.

“ಜಗದಗಲ ಮುಗಿಲಗಲ” ವಚನದ ಭಾವವೇ ಇಲ್ಲಿಯೂ ಕೂಡ ವ್ಯಕ್ತವಾಗಿದೆ. ಆ ದೇವನ ವಿರಾಡ್ರೂಪ ಇನ್ನೊಂದು ರೀತಿಯಲ್ಲಿ ಮೂಡಿಬಂದಿದೆ ಇಲ್ಲಿ. “ನಾನು ನಿನಗೆ ಜಲ, ವಿಭೂತಿ, ಗಂಧ, ಅಕ್ಷತೆ, ಪತ್ರೆ, ಪುಷ್ಪ, ನಾದ ಮತ್ತು ನೈವೇದ್ಯವನ್ನು ನೀಡುತ್ತೇನೆ, ನಿನನ್ನು ಪೂಜಿಸುತ್ತೇನೆ, ನೀನು ನನಗೆ ನಿನ್ನ ರೂಪವನ್ನು ತೋರಿಸು, ನನಗೆ ಒಲಿದು ಬಿಡು” ಎಂಬುದು ಈ ಲೋಕದ ವ್ಯವಹಾರದಂತೆ, ವ್ಯಾಪಾರದಂತೆ ಕಾಣುತ್ತದೆ. ಆತನು ಅಂತಹ ವ್ಯವಹಾರಕ್ಕೆ ಒಳಗಾಗುವವನಲ್ಲ. ನಮ್ಮ ಮನಸ್ಸು ಭಕ್ತಿಯ ನಿರ್ಮಲವಾದ ವಾತಾವರಣದಿಂದ ಶಾಂತವಾಗಲಿ ಎಂಬ ಉದ್ದೇಶದಿಂದ ಈ ಪೂಜೆಯೇ ಹೊರತು ಅದೇ ದೇವರನ್ನು ಕಂಡುಕೊಳ್ಳುವ ಉಪಾಯವಲ್ಲ. ಇಂತಹ ವ್ಯವಹಾರ ಭಾವನೆಯಿಂದ ಕೂಡಿದ ಪೂಜೆಯಿಂದ ಆತನು ಒಲಿಯುವನು ಎಂಬುದು ಅಸಾಧ್ಯದ ಮಾತು. ದೇವನು ಅದನ್ನು ಮೀರಿದವನು.

ಆದ್ದರಿಂದ ಬಹಿರಂಗದ ಪೂಜೆಯನ್ನು ಬಿಟ್ಟು ನಿನ್ನನ್ನು ಆಂತರಂಗದ ಧ್ಯಾನದಿಂದ ಒಲಿಸುತ್ತೇನೆ ಎಂದುಕೊಳ್ಳುತ್ತೇನೆ, ಆದರೆ ನೀನು ಮನಸ್ಸಿಗೇ ನಿಲುಕದವನು ಎನ್ನುತ್ತಾಳೆ ಅಕ್ಕ. ಧ್ಯಾನ ಎಂದರೇನು? ಸಾಮಾನ್ಯವಾಗಿ ಮನಸ್ಸನ್ನು ಏಕಾಗ್ರಗೊಳಿಸಿ ಯಾವುದೋ ಒಂದು ವಿಷಯದಲ್ಲಿ ಸಂಪೂರ್ಣವಾಗಿ ಮಗ್ನವಾಗುವುದಕ್ಕೆ ಧ್ಯಾನವೆನ್ನುವರು. ದೇವನು ಯವುದೋ ಒಂದು ವಸ್ತುವಿಗೆ ಸೀಮಿತವಾದವನಲ್ಲ. ಆತನು “ಜಗದಗಲ ಮುಗಿಲಗಲ..................................ಅಗೋಚರ ಅಪ್ರತಿಮ ಲಿಂಗ” ಅಂತಹವನನ್ನು ಕುರಿತು ಹೇಗೆ ತಾನೆ ಧ್ಯಾನ ಮಾಡಲು ಸಾಧ್ಯ? ಎಷ್ಟೇ ಆದರು ಧ್ಯಾನ ಮನಸ್ಸಿನ ಪರಿಧಿಯಲ್ಲಿಯೇ ಬರುವಂತಹದ್ದು. ಮನಸ್ಸಿಗೆ ಅತೀತನಾದವನನ್ನು ಮನಸ್ಸಿನಿಂದ ಕಂಡುಕೊಳ್ಳುವುದು ಹೇಗೆ? ಎಂದು ಕೇಳುತ್ತಾಳೆ ಅಕ್ಕ.
ಇನ್ನು ಇತರರು ಹೇಳುವಂತೆ ಜಪ ಮತ್ತು ಸ್ತೋತ್ರಗಳಿಂದ ನಿನ್ನನ್ನು ಒಲಿಸಿಕೊಳ್ಳುತ್ತೇನೆ ಎಂದುಕೊಂಡರೆ ನೀನು ನಾದಕ್ಕೆ ನಿಲುಕದವನು. ಯಾವುದೇ ಸ್ತೋತ್ರವಾಗಲಿ ನಿನ್ನನ್ನು ಪರಿಪೂರ್ಣವಾಗಿ ಚಿತ್ರಿಸಲು ಸಾಧ್ಯವಿಲ್ಲ. “ನಾದಪ್ರಿಯ ಶಿವನಲ್ಲ” ಎಂಬುದನ್ನು ನೆನಪಿಸಿಕೊಳ್ಳಬಹುದು. ಜಗತ್ತಿನಲ್ಲಿ ಅನೇಕರು ಅನೇಕ ಜಪ ಸ್ತೋತ್ರಗಳನ್ನು ಬರೆದಿದ್ದಾರೆ, ಹೇಳಿದ್ದಾರೆ. ದೇವನು ಸರ್ವತ್ರವೂ ನಾದ ರೂಪದಲ್ಲಿ ವ್ಯಾಪಿಸಿದ್ದಾನೆ ಎಂದು ಬಲ್ಲವರು ಹೇಳುತ್ತಾರೆ. ನಾವು ಹೇಳುವ ಸ್ತೋತ್ರದ ನಾದ ಎಷ್ಟೆ ಇಂಪಾದರೂ ಅದು ಕೂಡ ಸೀಮಿತವಾದದ್ದೇ. ದೇವನು ಯಾವುದೇ ಚೌಕಟ್ಟಿನೊಳಗೆ ಇರುವವನಲ್ಲ.

ಭಾವಜ್ಞಾನದಿಂದ ಒಲಿಸಿಕೊಳ್ಳುತ್ತೇನೆ ಎಂದುಕೊಂಡರೆ ನೀನು ಮತಿಗೆ ಸಿಗದವನು. ಭಾವ ಮತ್ತು ಜ್ಞಾನಗಳು ಬುದ್ಧಿಗೆ ಒಳಗಾದವುಗಳು. ಬುದ್ಧಿ ತನಗೆ ಬೇಕಾದಂತೆ ಭಾವವನ್ನು ಉಂಟುಮಾಡಿಕೊಳ್ಳುತ್ತದೆ, ಅದು ತನ್ನ ನೆನಪಿನಲ್ಲಿಯ ವಿಷಯದಿಂದ ತರ್ಕಿಸಿ ಜ್ಞಾನವನ್ನು ಸೃಷ್ಟಿಸುತ್ತದೆ. ಆದ್ದರಿಂದ ಅದು ಕೂಡ ನಮ್ಮ ಮತಿಯ ಪರಿಧಿಯಲ್ಲಿಯೇ ಬರುತ್ತದೆ. ಮನುಷ್ಯನ ಬುದ್ಧಿ, ಜ್ಞಾನ, ಮತಿಗಳಿಗೆ ಮೀರಿದವನನ್ನು ಬುದ್ಧಿ, ಜ್ಞಾನ, ಮತಿಗಳಿಂದ ಹೇಗೆ ಕಂಡುಕೊಳ್ಳುವುದು?

ಕೊನೆಗೆ ದೇವನನ್ನು ತನ್ನ ಹೃದಯಕಮಲದಲ್ಲಿಟ್ಟುಕೊಳ್ಳುತ್ತೇನೆ ಎಂದುಕೊಳ್ಳುತ್ತಾಳೆ ಅಕ್ಕ. ಆದರೆ ಅದೂ ಕೂಡ ಸಾಧ್ಯವಾಗುವುದಿಲ್ಲ. ಏಕೆಂದರೆ ಆತನು ಯಾವುದೇ ಒಂದು ಸ್ಥಳಕ್ಕೆ ಸೀಮಿತನಾದವನಲ್ಲ. ಆತನು ಸರ್ವಾಂಗ ಪರಿಪೂರ್ಣನು. ಅಣುರೇಣು ತೃಣ ಕಾಷ್ಠ ಗಳಲ್ಲಿಯೂ ಪರಿಪೂರ್ಣನಾಗಿರುವವನು. ಅಂತಹವನನ್ನು ಹಿಡಿತದಲ್ಲಿಟ್ಟುಕೊಂಡು, ಅಲ್ಲಿಯ ಅತನ ಇರವನ್ನು ಬೇರ್ಪಡಿಸಿ, ತನ್ನ ಹೃದಯದಲ್ಲಿಟ್ಟುಕೊಳುವುದು ಸಾಧ್ಯವೇ?

ಅಂತಹವನನ್ನು ಸೀಮಿತವಾದ ಈ ಎಲ್ಲ ವಿಧಗಳಿಂದ ಒಲಿಸಿಕೊಳ್ಳುವುದು ಹೇಗೆ ಎಂದು ತಿಳಿಯದೆ ಕೊನೆಗೆ ಅಕ್ಕ ಮಹಾದೇವಿಯು “ನೀನೇ ಒಲಿಯುವುದು ಸುಖ”ವೆಂದು ಹೇಳುತ್ತಾಳೆ. ಈ ಮಾತು ಅತ್ಯಂತ ಮಹತ್ವದ್ದು. ನಾವು ಆತನನ್ನು ಪಡೆಯಲು ಏನೇ ಪ್ರಯತ್ನ ಮಾಡಿದರೂ ಅದು ಅಸಾಧ್ಯವೆನಿಸುತ್ತದೆ. ಏಕೆಂದರೆ ನಾವು ಪ್ರಯತ್ನ ಮಾಡುವುದರ ಅರ್ಥವೆಂದರೆ: ನಾವು ನಮ್ಮ ಮನಸ್ಸಿನಲ್ಲಿ ಆಗಲೇ ಆತನ ಬಗ್ಗೆ ಒಂದು ಧಾರಣೆ, ಒಂದು ರೂಪ, ಒಂದು ಚಿತ್ರ ಮಾಡಿಕೊಂಡಂತೆ. ಅಂದರೆ ನಾವು, ನಾವು ಮಾಡಿಕೊಂಡ ರೂಪವನ್ನೇ ನಿರೀಕ್ಷಿಸುತ್ತೇವೆ, ನಾವು ನಿರೀಕ್ಷಿಸಿದ್ದು ನಮಗೆ ಕಾಣುತ್ತದೆ, ಮತ್ತು ನಾವು ದೇವರನ್ನು ಕಂಡುಕೊಂಡೆವೆಂಬ ಭ್ರಮೆಯಲ್ಲಿರುತ್ತೇವೆ. ಆದ್ದರಿಂದ ಯಾವುದೇ ಭಾವವನ್ನಿಟ್ಟುಕೊಳ್ಳದೆ ಮನಸ್ಸನ್ನು ನಿರಾಳಮಾಡಿಕೊಂಡಿರುವುದು ಮುಖ್ಯ. ಯಾವದೇ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅದನ್ನು ತೆರವಾಗಿರಿಸಿದರೆ ಆ ದೇವರಿಗೆ ಅವಕಾಶಮಾಡಿಕೊಟ್ಟಂತೆ. ದೇವನು ಯಾವಾಗಲೂ “ಒಳಗೆ ಬರಲೇ” ಎಂದು ಕಾಯುತ್ತಿರುತ್ತಾನಂತೆ. ಆದರೆ ನಾವು ನಮ್ಮ ಮನಸ್ಸಿನ ತುಂಬ ಏನೇನೋ ತುಂಬಿಕೊಂಡು ಅವನಿಗೆ ಇಂಬು ಮಾಡಿ ಕೊಡುವುದಿಲ್ಲ. ಆತನ ಧ್ವನಿ ನಮಗೆ ಕೇಳಿಸುವುದೇ ಇಲ್ಲ. ಆದ್ದರಿಂದ ಮನಸ್ಸನ್ನು ತೆರವುಗೊಳಿಸುವುದೇ ಸರಿಯಾದ ಉಪಾಯ. ಹಾಗೆ ಮಾಡಿದಾಗ ಆ ದೇವರು, ಆ ತತ್ತ್ವ, ಆ ಲಿಂಗ ನಮ್ಮೆದುರಿಗೆ ತಾನಾಗಿಯೇ ತೆರೆದುಕೊಳ್ಳುತ್ತದೆ.

2 comments:

  1. Nice vachana has a lot of knowledge in it...

    ReplyDelete
  2. God is said to be beyond our perception, so it makes sense to keep a totally open mind and realize his presence in our various life experiences?

    ReplyDelete