Friday, January 28, 2011

Vachana 24 Jnanada Baladinda - Company of Devotees


ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.

TRANSLITERATION

j~jaanada baladiMda aj~jaanada kEDu nOdayya
jyOtiya baladiMda tamaMdhada kEDu nODayya
satyada baladiMda asatyada kEDu nODayya
paruShada baladiMda avalOhada kEDu nODayya
koodaLa saMgana sharaNaranubhaavadiMda
enna bhavada kEDu nODayya

CLICK TO HEAR IT

http://www.youtube.com/watch?v=x3P2ValHDEg

A MUSICAL RENDERING

http://www.youtube.com/watch?v=R1JLfABtsmQ&playnext=1&list=PL6BE04706D5B94103

TRANSLATION

j~jaanada(knowledge) baladiMda(with the power of, influence of) aj~jaanada(ignorance) kEDu(vanishes) nOdayya(Look, Sir!)
jyOtiya(light) baladiMda tamaMdhada(darkness) kEDu nODayya
satyada(truth) baladiMda asatyada (falseness, untruth?) kEDu nODayya
paruShada(an imaginary gem) baladiMda(the touch of which) avalOhada(inferior metal) kEDu(turns in to gold) nODayya
koodaLa saMgana sharaNara(devotees’) anubhaavadiMda( mystism, experience)
enna (my) bhavada(worldliness, materialism) kEDu nODayya



Look, Sir,
The power of knowledge drives the ignorance away!
Appearance of light drives the darkness away!
Truth drives the untruth away!
The touch of the alchemic gem turns any metal into gold!
With exposure to devotees’ experience and mysticism, my materialism goes away!

COMMENTARY

In previous posting we mentioned that the only way to realize God is to have an open mind and invite Him to enter our hearts. In order to bring the openness to our mind, we should first realize as to what is it filled with. Obviously, as individuals surrounded by the world we live our minds are full of materialistic thoughts and patterns. In this vachana, Basavanna emphasizes that the companionship and exposure to devotees of the Lord is the best way to empty our mind from the worldliness! He compares the exposure to devotees’ experience to the power of knowledge that removes ignorance, light driving the darkness away, truth erasing the untruth, and the imaginary alchemic gem that turns anything it touches into precious gold!

In our daily pursuits we tend acquire the knowledge necessary to complete any task through reading about it, thinking about it, or from the experience of others in similar tasks. While these help us to perform the task eventually, direct observation and exposure to one who has performed that task earlier would be the best way to go. Removing materialism from our minds is a task beyond the capabilities of our sense organs. As such, influence of those who have achieved it is the best way.
I wonder if group bhajans, group meditations and satsang were advocated as stepping stones towards achieving the exposure to devotees and their mysticism!
It is well known by the research on society and behaviour of individuals that an individual’s behaviour cannot be altered by concentrating on the individual. We can influence his behaviour only by changing the environment around him. Remember, ‘to soar like an eagle, we should be in the company of eagles!’


Let us strive to keep the company of those who have opened up their minds to the Lord!

KANNADA COMMENTARY

ಹಿಂದಿನ ವಚನದಲ್ಲಿ ದೇವನು ಎಲ್ಲವನ್ನೂ ಮೀರಿದವನು ಎಂಬುದನ್ನು ತಿಳಿದುಕೊಂಡೆವು. ಅಂಥವನನ್ನು ಹೇಗೆ ಕಂಡುಕೊಳ್ಳುವುದು? ಮನಸ್ಸು ತೆರವಾಗಿಟ್ಟುಕೊಳ್ಳುವುದು ಬಲು ಮುಖ್ಯವೆಂದರಿದೆವು. ಮನಸ್ಸು ತೆರವಾಗಿಟ್ಟುಕೊಳ್ಳುವುದು ಹೇಗೆ? ಮೊದಲು ಅದು ಯಾವುದರಿಂದ ತುಂಬಿದೆ ಎಂದು ಅರಿತುಕೊಂಡರೆ ಆ ಕೆಲಸ ಸುಲಭವಾಗುವುದು. ನಮ್ಮ ಮನಸ್ಸು ಭವದಿಂದ ಅಂದರೆ ಪ್ರಾಪಂಚಿಕ ವಿಷಯಗಳಿಂದ ತುಂಬಿಕೊಂಡಿದೆ. ಅದರಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದಕ್ಕೆ ಬಸವಣ್ಣನವರು ಈ ವಚನದಲ್ಲಿ ಒಂದು ಸುಲಭದ ಉಪಾಯ ಹೇಳಿರುವರು.

ಜ್ಞಾನದ ಬಲದಿಂದ ಅಜ್ಞಾನ ನಾಶವಾಗುತ್ತದೆ. ಜ್ಯೊತಿಯ ಬಲದಿಂದ ಕತ್ತಲೆಯು ಸಂಪೂರ್ಣವಾಗಿ ಇಲ್ಲವಾಗುತ್ತದೆ.ಸತ್ಯವು ಬೆಳಕಿಗೆ ಬಂದಾಗ ಅಸತ್ಯವು ಅಳಿದುಹೋಗುತ್ತದೆ. ಪರುಷ ಮಣಿಯ ಸ್ಪರ್ಶದಿಂದ ಅವಲೋಹವು ಕೂಡ ತನ್ನ ಅವಲೋಹತ್ವವನ್ನು ಕಳೆದುಕೊಂಡು ಸುವರ್ಣವಾಗುತ್ತದೆ. ಅದೇ ರೀತಿಯಾಗಿ ಶರಣರ ಅನುಭಾವದಿಂದ ತನ್ನ ಭವವು ನಾಶಹೊಂದುತ್ತದೆ ಎಂದು ಹೇಳುತ್ತಾರೆ ಬಸವಣ್ಣನವರು.
ಜ್ಞಾನ, ಜ್ಯೋತಿ, ಸತ್ಯ, ಮತ್ತು ಪರುಷಕ್ಕೆ ಎಂತಹ ಶಕ್ತಿ ಇದೆಯೆಂದರೆ ಅವುಗಳ ಬಲದಿಂದ ಅವುಗಳ ವಿರುದ್ಧಗುಣಗಳಾದ ಅಜ್ಞಾನ,ಕತ್ತಲೆ, ಅಸತ್ಯ ಮತ್ತ್ತು ಅವಲೋಹಗಳು ಹೇಳಹೆಸರಿಲ್ಲದೆ ನಾಶವಾಗುತ್ತವೆ. ಅಂತಹುದೇ ಬಲವು ಅನುಭಾವಕ್ಕಿದೆ ಎನ್ನುತ್ತಾರೆ. ಅನುಭಾವಿ ಶರಣರ ಸಂಗದಿಂದ ಭವವು ನಾಶವಾಗುತ್ತದೆ. ಸದಾ ಪ್ರಾಪಂಚಿಕ ವಿಷಯಗಳಲ್ಲಿ ಮುಳುಗುವುದನ್ನು ತಪ್ಪಿಸುತ್ತದೆ. ಪ್ರಾಪಂಚಿಕ ವಿಷಯಗಳು ವ್ಯಕ್ತಿಯನ್ನು ಪೂರ್ತಿಯಾಗಿ ಆವರಿಸಿಕೊಂಡು ಆತನು ಅದನ್ನುಳಿದು ಬೇರೆಕಡೆಗೆ ನೋಡದಂತೆ ಮಾಡುತ್ತವೆ. ಆತನು ಇನ್ನೂ ಹೆಚ್ಚು ಹೆಚ್ಚು ಅದರಲ್ಲಿಯೇ ತೊಳಲುವಂತೆ ಮಾಡುತ್ತವೆ. ಆದ್ದರಿಂದ ಆತನ ನೆಮ್ಮದಿ ಹಾಳಾಗಿಹೋಗುತ್ತದೆ. ಸದಾ ಗೊಂದಲದಲ್ಲಿ ಇಲ್ಲವೆ ಜಂಜಾಟದಲ್ಲಿರುತ್ತಾನೆ. ಆದರೆ ಅನುಭಾವಿಗಳಾದ ಶರಣರ ಸಂಗವು ಆತನಿಗೆ ತನ್ನ ಪ್ರಮಾದದ ಅರಿವುಮಾಡಿಕೊಡುತ್ತದೆ. ಅವರ ಅನುಭಾವದ ಶಕ್ತಿಯಿಂದ ಆತ ಪ್ರಭಾವಿತನಾಗಿ ಆತನ ಭವದ ಅಳಿವಾಗುತ್ತದೆ.

ಇಲ್ಲಿ ಮೇಲೆ ಹೇಳಿದ ಪರುಷಮಣಿಯೊಂದನ್ನು ಬಿಟ್ಟು ಜ್ಞಾನ, ಜ್ಯೋತಿ,ಅಸತ್ಯಗಳೆಲ್ಲವು ಅಮೂರ್ತವಾದ ವಿಷಯಗಳೆ. ಪರುಷಮಣಿಯೂ ಸಹ ಕಾಲ್ಪನಿಕವಾದದ್ದರಿಂದ ಅಮೂರ್ತವೆ ಆಗುತ್ತದೆ. ಅನುಭಾವವೂ ಅಮೂರ್ತವಾದದ್ದು, ಇಂದ್ರಿಯಗಳಿಗೆ ನಿಲುಕದಂತಹದು. ಅದರ ಗುಣ ಅಪೂರ್ವವಾದದ್ದು. ಅದನ್ನು ಗುರುತಿಸುವುದು ಸುಲಭವಲ್ಲ. ಆದರೆ ಅದರ ಸಂಸರ್ಗದಲ್ಲಿ ಬಂದವರು ಅದರ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಅದರ ಹತ್ತಿರದಲ್ಲಿದ್ದರೆ ಅಪಾರವಾದ ಮನಃಶಾಂತಿ ಇರುತ್ತದೆ. ಯಾವ ಭಯವೂ ಆತನನ್ನು ಕಾಡುವುದಿಲ್ಲ, ಯಾವ ಚಿಂತೆಯೂ ಆತನನ್ನು ತಟ್ಟುವುದಿಲ್ಲ, ಯಾವ ಗೊಂದಲವೂ ಆತನನ್ನು ತೊಡರುವುದಿಲ್ಲ. ಇದೇ ಮನಸ್ಸಿನ ತೆರವಾದ ಸ್ಥಿತಿ. ಸದಾ ಅವರ ಸಂಗದಲ್ಲಿರುವುದರಿಂದ ಭವದ ನಾಶವೇ ಉಂಟಾಗುತ್ತದೆ ಎನ್ನುತ್ತಾರೆ ಬಸವಣ್ಣನವರು.

ಯಾವುದೇ ಕೌಶಲವನ್ನು ಕಲಿಯಬೇಕಾದರೆ ಆ ಕೌಶಲ್ಯದ ಬಗ್ಗೆ ಕೇವಲ ಓದಿಕೊಂಡರೆ ಸಾಲದು. ಎಷ್ಟೇ ವಿಶದವಾಗಿ ಓದಿಕೊಂಡರೂ ಆ ರೀತಿಯಾಗಿ ಕಲಿತುಕೊಂಡ ಕೌಶಲದಲ್ಲಿ ಕುಂದುಗಳು, ಅರೆಕೊರೆಗಳು ಇದ್ದೇ ಇರುವ ಸಾಧ್ಯತೆ ಇರುತ್ತವೆ. ಆದರೆ ಅದೇ ಕೌಶಲ್ಯವನ್ನು ತಿಳಿದವನಿಂದ ಪ್ರತ್ಯಕ್ಷವಾಗಿ ನೋಡಿ ಕಲಿತುಕೊಂಡರೆ ಅದರ ಪರಿಯೇ ಬೇರೆ. ಇದು ಮೂರ್ತವಿಷಯವಾಯಿತು. ಅಮೂರ್ತ ವಿಷಯಕ್ಕಂತೂ ಇದು ವಿಷೇಶವಾಗಿ ಅನ್ವಯಿಸುತ್ತದೆ. ಅನುಭಾವದ ಬಗ್ಗೆ ನಾವು ಎಷ್ಟೇ ಓದಿದರೂ ಅದು ನಮ್ಮ ಕೈಗೂಡುವುದಿಲ್ಲ. ಕೇವಲ ಕಲ್ಪನೆಯಲ್ಲೇ ವಿಹರಿಸುವಂತಾಗುತ್ತದೆ. ಆದರೆ ಅನುಭಾವಿ ಶರಣರ ಒಡನಾಟದಿಂದ ಅದರ ಕಂಪು ತಿಳಿಯುತ್ತದೆ, ಭವದ ನಾಶವಾಗುತ್ತದೆ, ಅದನ್ನು ಕೈಗೂಡಿಸಿಕೊಳ್ಳುವ ಕಲೆ ಕರಗತವಾಗುತ್ತದೆ. ಅದಕ್ಕೇ ಶರಣರ ಅನುಭಾವದ ಮಹತ್ವ ಅಪಾರವಾದದ್ದು.

No comments:

Post a Comment