Vachanas (sayings) of Veerashiva philosophers (Sharanas)of the 12th century are a treasure house of philosophical and spiritual thoughts tinged with the contemporary social context. They are pertinent to our lives today. Please feel free to share this blog with your friends and family and let us know if you have comments, through the comments window at the end of the posting! Thanks!
Friday, October 29, 2010
Vachana 11: baDatanake uMbuva ciMte - Chasing Happiness
ಬಡತನಕೆ ಉಂಬುವ ಚಿಂತೆ
ಉಣಲಾದರೆ ಉಡುವ ಚಿಂತೆ
ಉಡಲಾದರೆ ಇಡುವ ಚಿಂತೆ
ಇಡಲಾದರೆ ಹೆಂಡಿರ ಚಿಂತೆ
ಹೆಂಡಿರಾದರೆ ಮಕ್ಕಳ ಚಿಂತೆ
ಮಕ್ಕಳಾದರೆ ಬದುಕಿನ ಚಿಂತೆ
ಬದುಕಾದರೆ ಕೇಡಿನ ಚಿಂತೆ
ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು.
TRANSLITERATION
baDatanake uMbuva ciMte
uNalAdare uDuva ciMte
uDalAdare iDuva ciMte
iDalAdare heMDira ciMte
heMDirAdare makkaLa ciMte
makkaLAdare badukina ciMte
badukAdare kEDina ciMte
kEDAdare maraNada ciMte
iMtI halavu ciMteyallippavara kaMDenu
Sivana ciMteyalliddavarobbaranU kANeneMdAta namma aMbigara cauDayya nija SaraNanu.
CLICK TO HEAR IT:
http://www.youtube.com/watch?v=2mpQBa83yDo
TRANSLATION
baDatanake(poverty dictates) uMbuva (food) ciMte (worry, agony, or preoccupation)
uNalAdare(after food) uDuva (clothing) ciMte
uDalAdare(after clothing) iDuva(savings) ciMte
iDalAdare(after savings) heMDira(wife) ciMte
heMDirAdare(after wife) makkaLa(children) ciMte
makkaLAdare(after children) badukina (well being)ciMte
badukAdare(after well being) kEDina (troubles) ciMte
kEDAdare(after troubles) maraNada(death) ciMte
iMtI(thus) halavu(several) ciMteyallippavara(agonized people) kaMDenu(I saw)
Sivana(Lord Shiva) ciMteyalli(in mind) iddavarobbaranU (not even one) kANeneMdAta(I did not see) namma(our) aMbigara cauDayya nija (Humble) SaraNanu(Sharana).
When poor, one agonizes over where the next meal comes from!
When food needs are satisfied, one agonizes over clothing!
When clothing needs are satisfied, one agonizes over savings (wealth)!
When one has enough in savings, there is agony over finding a spouse!
Once the spouse is in, one agonizes over having children!
Having children, leads to the agony of their well being!
When all is well, one agonizes over ill being (health, other problems)!
The ill feelings, lead to the fear of death!
Thus, I see several people with each a variety of worries!
But, I do not see any one agonizing about you (thinking of you), Oh Lord!
Thus spoke the humble sharana, Ambigara Caudayya!
COMMENTARY
This vachana is from Ambigara Caudayya, a contemporary of Basavanna. An ambiga is an 'oarsman' implying that sharana Caudayya belonged to the family of professional oarsman. Identification of the profession is very significant, since Basavanna and his contemporaries believed in 'work is heaven' ('kaayakave Kailasa') philosophy. Dignity of labor was foremost in their lives. They advocated that everyone must perform their normal duties with utmost sincerity, irrespective of the profession they belong to and no profession is inferior to other!
Just as Basavanna used 'Kudala sangama' as the signature for his vachanas, this sharana used his name (Ambigara Caudayya) in the last line of the vachana as his signature.
This vachana further emphasizes the frustrations of our mundane lives depicted in Vachana 10. Ambigara Caudayya provides a strong portrayal of how our daily lives are consumed by mundane activities with no time or inclination left for self realization or reflection of what the life is all about. Satisfying one need immediately sets us in the mode of striving for the next. We are never content with what we have, although we convince ourselves that we would be happy and satisfied when the current goal or need is met. The cycle of wants and needs continues for ever. Caudayya says that he can identify several people who agonize in the cycle of wants and needs, but cannot find even one individual who has conquered the cycle to turn God minded.
Indeed, this vachana of the twelfth's century is pertinent to our society of today that offers lot more choices and attractions leading to never ending list of needs and wants. One has to make extra effort to stay clear of these attractions. Basavanna, in one of his vachanas depicts the cycle of wants and needs as "I am alone and the Five are torching me!" referring to the five sense organs that promise us happiness through the worldly elements. We are so attracted by these; we do not even feel that we are failing in realizing the true meaning of life and the God within.
Let us not ignore our duties! Let us not deprive of our necessities! But, let us not waste our immense capacity for self realization and Godliness!
FOR THOSE OF YOU WHO CAN READ KANNADA
ಒಂದಾದ ಮೇಲೊಂದರಂತೆ ಲೌಕಿಕ ಚಿಂತೆಗಳಿಗೆ ನಾವು ಹೇಗೆ ಪಕ್ಕಾಗುತ್ತೇವೆ ಎಂಬುದನ್ನು ಇಲ್ಲಿ ಬಹಳ ಸೊಗಸಾಗಿ ಹೇಳುತ್ತಾರೆ ಅಂಬಿಗರ ಚೌಡಯ್ಯನವರು,
ಇದು ಎಲ್ಲ ಕಾಲಕ್ಕೂ, ಎಲ್ಲ ಮಾನವರಿಗೂ ಪ್ರಸ್ತುತವಾಗುವ ವಚನ. ಮಾನವನನ್ನು ಕಾಡುವ ಪ್ರಾಥಮಿಕ ಚಿಂತೆಗಳು ಇವು. ಎಂಟು ಶತಮಾನಗಳ ಹಿಂದೆ ಬರೆದ ಈ ವಚನ, ಎಲ್ಲ ಕಾಲದ ಎಲ್ಲ ಮಾನವರ ಸಮಗ್ರ ಚಿಂತೆಗಳ ಮೂಲ ಚಿತ್ರವನ್ನು ಅತ್ಯಂತ ಸಮರ್ಥವಾಗಿ ತೆರೆದಿಡುತ್ತದೆ. ಮಾನವನನ್ನು ಹಿಂಡಿ ಹಿಪ್ಪೆ ಮಾಡುವ ಯಾವುದೇ ಚಿಂತೆಯಾದರೂ ಈ ಮೇಲಿನ ವಚನದ ಚೌಕಟ್ಟಿನಲ್ಲಿಯೇ ಬರುತ್ತದೆ. ಚಿಂತೆ ಮಾನವನನ್ನು ಚಿತೆಯಂತೆ ಸುಡುತ್ತದೆ. ಚಿಂತೆಯಲ್ಲಿ ಬೇಯುತ್ತಿರುವ ಇತರರನ್ನು ನೋಡಿದಾಗ ಇದು ನಮ್ಮ ಗಮನಕ್ಕೆ ಬರುತ್ತದೆ. ಆದರೆ ನಾವು ಸ್ವತಃ ಅದರಲ್ಲಿ ಮುಳುಗಿದಾಗ ಅದು ನಮಗೆ ಸ್ಪಷ್ಟವಾಗುವುದಿಲ್ಲ. ಚಿಂತೆಯ ಮೂಲವಿರುವುದು ಸುಖ ಸಂತೋಷದ ಆಕರ್ಷಣೆಯಲ್ಲಿ. ಇಂದು ಜಾಗತೀಕರಣದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಆಯ್ಕೆಗಳು, ಆಕರ್ಷಣೆಗಳು ಅಪಾರವಾಗಿವೆ, ಅಷ್ಟೇ ಅಲ್ಲದೆ ಅವು ದಿನದಿನವೂ ವೃದ್ಧಿಗೊಳ್ಳುತ್ತಿವೆ. ಮಾರುಕಟ್ಟೆಗಳು ಹೊಸಹೊಸ ಸರಕುಗಳಿಂದ ತುಂಬಿ ತುಳುಕುತ್ತಿವೆ. ಅವುಗಳಿಂದ ನಿಜವಾದ ಸುಖ ಸಂತೋಷಗಳು ಕೈಗೂಡುತ್ತವೆ ಎಂಬ ಭರವಸೆ ಹುಟ್ಟಿಸುತ್ತಿವೆ. ಅವುಗಳ ಬಲೆಗೆ ಬೀಳದೆ ಇರುವುದು ಪವಾಡವೇ ಸರಿ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ: “ಆನು ಒಬ್ಬನು ಸುಡುವರೈವರು” ಎಂದು. ಇಂದ್ರಿಯಗಳ ರೂಪದಲ್ಲಿರುವ ಐವರು ನನ್ನನ್ನು ವಿವಿಧವಾದ ಅನಂತ ಆಕರ್ಷಣೆಗಳೆಡೆಗೆ ಜಗ್ಗಿಕೊಂಡು ಹೋಗಿ ಸುಡುತ್ತಿದ್ದಾರೆ. ಇವರಿಂದ ಬಿಡಿಸಿಕೊಳ್ಳಲು ಸೆಣಸಾಡುತ್ತಿರುವವನು ನಾನು (ಎಚ್ಚರದಿಂದಿರ ಬಯಸುವವ) ಒಬ್ಬನೇ, ಎಂದು ಹೇಳುತ್ತಾರೆ. ಅಂದರೆ ಐದು ಇಂದ್ರಿಯಗಳ ಸೆಳೆತಕ್ಕೆ ಒಳಗಾಗಿ ಅವುಗಳಿಂದ ಬಿಡುಗಡೆ ಬಯಸುತ್ತಿರುವವನು ಒಬ್ಬನು. ‘ನಿನಗೆ ಸುಖವನ್ನೇ ತಂದು ಕೊಡುತ್ತೇವೆ’ ಎಂಬ ಭ್ರಮೆಯನ್ನು ಹುಟ್ಟಿಸಿ, ಯಾವ ಯಾವಯಾವುವೋ ವಿಷಯಗಳ ಹಿಂದೆ ಓಡುತ್ತ ನಾನಾ ರೂಪದಲ್ಲಿ ಕಾಡುವ ಈ ಐವರ ಎದುರಾಗಿ ಒಬ್ಬನೆ ಹೋರಾಡಬೇಕಾದ ಪರಿಸ್ಥಿತಿಯುಂಟಾಗಿದೆ ಎನ್ನುತ್ತಿದ್ದಾರೆ. ಸಾಮಾನ್ಯರಾದ ನಾವು ಇವುಗಳಲ್ಲಿ ಸಿಲುಕಿಕೊಂಡು ನರಳುವುದು ಸರ್ವ ಸಾಮಾನ್ಯ. ನಮಗೆ, ಇವುಗಳಿಂದ ನಾವು ನರಳುತ್ತಿದ್ದೇವೆ ಎಂದು ಗುರುತಿಸುವುದು ಸಹ ಬಹು ಕಷ್ಟ. ಆ ಆಕರ್ಷಣೆಗಳು ಎಷ್ಟು ಸುಂದರವಾಗಿರುತ್ತವೆ ಎಂದರೆ ಇಲ್ಲಿಯವರೆಗೆ ಅವುಗಳ ಸೆಳವಿಗೆ ಸಿಕ್ಕು ನರಳಿದ್ದು ಮರೆತೇ ಹೋಗುತ್ತದೆ. ಮೃಗ ಜಲದ ಹಿಂದೆ ಹಪಹಪಿಸಿ ಓಡುವ ಪ್ರಾಣಿಗಳಂತೆ ನಾವೂ ಓಡುತ್ತಿರುತ್ತೇವೆ. ನಮ್ಮ ಮನಸ್ಸಿಗೆ ಮಾಡಲು ಏನಾದರೊಂದು ಬೇಕು. ಸುಮ್ಮನೆ ಇರುವುದು ಅದರ ಜಾಯಮಾನವಲ್ಲ. ಅದರ ಈ ಅಭ್ಯಾಸ ತಪ್ಪಿಸುವುದು ಒಂದು ಸವಾಲೇ ಸರಿ. ಆ ಕ್ಷಣದಲ್ಲಿ ಎದುರಿಗೆ ಯಾವುದು ಸುಂದರವಾಗಿ ಕಾಣುತ್ತದೆಯೋ ಅದರಲ್ಲಿಯೇ ಅದು ತನ್ನನ್ನು ತೊಡಗಿಸಿಕೊಳ್ಳುತ್ತದೆ. ಅಲ್ಲಿ ಕಾಣುವ ಸೌಂದರ್ಯ ಭ್ರಮೆ ಎಂದು ಗುರುತಿಸುವುದು ಅದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಗುರುತಿಸಿದರೂ ಅವುಗಳಿಂದ ಬಿಡಿಸಿಕೊಳ್ಳುವುದಕ್ಕೆ ಅಸಾಮಾನ್ಯವಾದ ಶಕ್ತಿ ಬೇಕು. ನಮಗೆ ಬೇಡವಾದ, ಅಂದರೆ, ಆತ್ಮೋನ್ನತಿಗೆ ಸಹಕರಿಸದ ಯಾವುದೇ ಚಟುವಟಿಕೆಗಳಲ್ಲಿ ಮನಸ್ಸನ್ನು ತೊಡಗಿಸುವುದರಿಂದ ನಮ್ಮ ಅಪಾರ ಶಕ್ತಿ ವ್ಯಯವಾಗುತ್ತದೆ. ಆ ಶಕ್ತಿಯ ಸಂಚಯವೇ ನಮ್ಮ ಗುರಿಯಾಗಬೇಕು ಎಂಬ ಧ್ವನಿಯನ್ನು ಪ್ರಸ್ತುತ ವಚನದಲ್ಲಿ ಗುರುತಿಸುವುದು ನಮಗೆ ಬಿಟ್ಟದ್ದು
Subscribe to:
Post Comments (Atom)
thumba chennagi moodi bandide. Thank you very much for bringing this every week on time.
ReplyDeletea very simple vachana but has a lot of true fact in it...thnx to the uploader
ReplyDeleteಚಿಂತೆ ಎಂಬ ಮಲಸಾಗರದಲ್ಲಿ ಎಷ್ಟು ಬಯ್ಯುತ್ತ ಹೊರಳಾಡಿದರು ಎದ್ದು ಹೊರಬರುವ ಹಂಬಲ ಯಾರಿಗು ಇಲ್ಲವೈಯ್ಯಾ... ಹೇ ಪುರಒಧರ ವಿಠ್ಠಲ ನಿನೆ ಕಾಯಬೇಕು...
ReplyDelete