ಸಂಸಾರವೆಂಬುದು ಒಂದು ಗಾಳಿಯ ಸೊಡರು!
ಸಿರಿಯೆಂಬುದು ಒಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.
TRANSLITERATION
saMsAraveMbudu oMdu gALiya soDaru!
siriyeMbudu oMdu saMteya maMdi kaMDayya!
ida necci keDabEDa;
siriyeMbuda maredu pUjisu
namma kUDalasaMgamadEvana.
CLICK TO HEAR IT:
http://www.youtube.com/watch?v=YLTYH2DSaRk
TRANSLATION
saMsAraveMbudu(Life is) oMdu (a) gALiya(wind blown) soDaru (Lamp)!
siriyeMbudu(Wealth is) oMdu(a) saMteya(FleeMarket) maMdi(people) kaMDayya (you see)!
ida(these) necci(belief) keDabEDa(do not ruin yourself);
siriyeMbuda(wealth) maredu(forget) pUjisu(worship)
namma (our) kUDalasaMgamadEvana (Lord Kudakla Sangama Deva).
Life is an open-flamed lamp, exposed to winds!
Wealth is people in a flea market!
Do not ruin yourself by believing in this!
Ignore (forget) the wealth and worship
our Lord Kudala Sangama Deva!
COMMENTARY
Basavanna is comparing our life to an open-flamed lamp (candle) exposed to winds. Such a lamp hardly stays steady. It sways in the direction of the wind. So is life! When we encounter problems and stresses we are unhappy. When things go our way, we are happy. The happiness and sorrow are phases of life and neither is permanent.
Wealth is compared to people in a flea market. They come and go as they wish! So is wealth! It is not permanent!
Basavanna suggests not being carried away by the impermanent aspects of life and wealth, but gain self awareness and permanent happiness through worshipping the Lord Kudala Sangama Deva!
Is Basavanna advocating running away from life? Is he saying that acquiring wealth is a sin? Definitely, the answer to both questions is a ‘no’. Basavanna advocated passionate performance of our chosen profession (Kaayakave Kailaasa – work is heaven) and community service (Daasoha). He was the finance minister of King Bijjala. He said that the body is the temple and we must take care of the body. Wealth is necessary to maintain the body. The message of this vachana is that while we strive to do the best in this life, we should keep in mind the temporariness of life’s events and not be swayed by them, by developing God mindedness.
Worshipping the Lord in the context of this vachana is developing the ‘awareness’ on the temporariness of life and events. Consider the case of a sky diver. Certainly, he will be ‘aware’ of the risks involved and will have been trained to mitigate these risks. As such, this activity becomes an enjoyable sport for him. But, to others who are not ‘aware’ of his training and practice, the event brings worries and anxiety! Becoming aware of risks and training with a teacher to mitigate them for sports such as sky diving is well within our reach. But, becoming aware of the temporariness of life and wealth while we are completely immersed in them is not easy. Having a teacher helps. But, even a great teacher cannot bring awareness to us unless we are ready to receive his teachings. We must be ready to develop a mental framework to gain the awareness needed. Such mental framework development is the ‘worship of the Lord’, Basavanna is referring to in this vachana. Let us worship the Lord to:
Make us ignore the things we cannot control!
Give us strength to change the things we can control!
Grant us intelligence to distinguish between the two! and
Move us towards Him with self awareness!
Let us enjoy this beautiful life! Let us not be swayed by its ups and downs!
FOR THOSE OF YOU WHO CAN READ KANNADA:
ಈ ಸಂಸಾರವೆಂಬುದು ಗಾಳಿಯಲ್ಲಿಟ್ಟ ದೀಪದಂತೆ. ಗಾಳಿಯಲ್ಲಿಟ್ಟ ದೀಪವು ಹೇಗೆ ತಾನೆ ಒಂದೇ ರೀತಿಯಾಗಿ ಉರಿಯಲು ಸಾಧ್ಯ? ಅದುಗಾಳಿಗೆ ಹೊಯ್ದಾಡುತ್ತಲೇ ಇರುತ್ತದೆ. ಆರಿಯೂ ಹೋಗುತ್ತದೆ. ಅದೇ ರೀತಿಯಾಗಿ ಸಂಸಾರದಲ್ಲಿ ಕಷ್ಟ ಕೋಟಲೆಗಳು ಉಂಟಾದಾಗ ದುಃಖ ಉಂಟಾಗುತ್ತದೆ. ಬದುಕು ಹೊಯ್ದಾಡುತ್ತದೆ. ಅಲ್ಲಿ ಸುಖ ದುಃಖಗಳು ಸ್ಥಿರವಲ್ಲ. ಬದುಕೂ ಶಾಶ್ವತವಲ್ಲ. ಶಾಶ್ವತವಲ್ಲದ ಈ ಬದುಕಿನಲ್ಲಿ ಸಿರಿತನವು ಸಂತೆಯಲ್ಲಿ ನೆರೆವ ಮಂದಿಯಂತೆ. ಸಂತೆ ನಡೆವಾಗ ಕೆಲವು ಗಂಟೆಗಳ ಕಾಲ ಜನಜಂಗುಳಿ ಇರುತ್ತದೆ. ಆಮೇಲೆ ಎಲ್ಲರೂ ಹೊರಟು ಹೋಗುತ್ತಾರೆ. ಅದೇ ರೀತಿಯಾಗಿ ಸಿರಿತನವೂ ಕೂಡ ಬಂದು ಹೋಗುವಂತಹದು. ಶಾಶ್ವತವಾಗಿ ಇರುವಂತಹುದಲ್ಲ. ಆದ್ದರಿಂದ ಸಿರಿತನವನ್ನು ಮರೆತು ಕೂಡಲಸಂಗಮನನ್ನು ಪೂಜಿಸು ಎನ್ನುತ್ತಾರೆ ಬಸವಣ್ಣನವರು. ಶಾಶ್ವತವಲ್ಲದ ಸಂಸಾರವನ್ನು ಪೂರ್ತಿಯಾಗಿ ನಂಬಿ ಸುಖವನ್ನು ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಬದುಕು ಮತ್ತು ಸಿರಿತನದ ಅಸ್ಥಿರತೆಯನ್ನು ಮನವರಿಕೆ ಮಾಡಿಕೊಡಲು ಬಸವಣ್ಣನವರು ಗಾಳಿಗೊಡ್ಡಿದ ದೀಪ ಮತ್ತು ಸಂತೆಯ ಮಂದಿಯ ಉದಾಹರಣೆಯನ್ನು ಕೊಟ್ಟಿದ್ದಾರೆ. ಹಾಗಾದರೆ ಬದುಕನ್ನೇ ಬಿಟ್ಟು ಓಡಿಹೋಗಬೇಕೆ? ಹಣವನ್ನು ಗಳಿಸಲೇಬಾರದೆ? ಶ್ರೀಮಂತಿಕೆ ಪಾಪವೇ?ಖಂಡಿತವಾಗಿಯೂ ಅಲ್ಲ. ಬಸವಣ್ಣನವರು ಸ್ವತಃ ಮಂತ್ರಿಯಾಗಿದ್ದರು. ದೇಹವೇ ದೇಗುಲ ಎಂದು ಅವರೇ ಹೇಳಿದ್ದಾರೆ. ನಾವು ನಮ್ಮ ದೇಹವನ್ನು ದೇಗುಲವನ್ನಾಗಿ ಮಾಡಬೇಕು. ದೇಹವನ್ನು ಪೋಷಿಸಲು ಹಣದ ಅಗತ್ಯವಿದೆ. ಅದನ್ನು ಗಳಿಸಬೇಕು. ಮತ್ತು ಗಳಿಸಿದುದನ್ನು ದೇಹವನ್ನು ದೇಗುಲ ಮಾಡಿಕೊಂಡಂತಹವರಿಗಾಗಿ ವಿನಿಯೋಗಿಸಬೇಕು. ಈ ವಚನದಲ್ಲಿ ಅವರು ಹೇಳುತ್ತಿರುವುದೇನೆಂದರೆ, ಸಂಸಾರ ಮತ್ತು ಸಿರಿತನ ಎರಡೂ ಶಾಶ್ವತವಲ್ಲ. ಅವನ್ನೇ ನೆಚ್ಚಿಕೊಂಡಿದ್ದರೆ ಸುಖವಿಲ್ಲ. ನಾವು ಇದನ್ನು ಸದಾ ನೋಡುತ್ತೇವೆ. ಉದಾಹರಣೆಗೆ ಜಾಗತಿಕ ಆರ್ಥಿಕ ಹಿನ್ನಡೆ. “ ಓ! ಆರ್ಥಿಕ ಮುನ್ನಡೆಯಾಯಿತು, ಬಯಸಿದ ಸಿರಿತನ ಬಂದೇ ಬಿಟ್ಟಿತು, ಇನ್ನು ನಾವು ಬೇಕಾದುದನ್ನು ಪಡೆದು ಸುಖವಾಗಿರಬಹುದು” ಎಂದುಕೊಂಡ ಜನರು ಜಾಗತಿಕ ಆರ್ಥಿಕ ಹಿನ್ನಡೆಯಿಂದಾಗಿ ಒಮ್ಮಿಲೇ ಕುಸಿಯುತ್ತಾರೆ. ಅವರ ಮೇಲೆ ಆಕಾಶವೇ ಕಳಚಿಬೀಳುತ್ತದೆ. ಯುದ್ಧ, ಬಡತನ, ಭೂಕಂಪ, ಸುನಾಮಿ ಇತ್ಯಾದಿಗಳು ಅನೇಕರನ್ನು ಅಳಸಿ ಹಾಕುತ್ತವೆ. ಇವೆಲ್ಲವು ನಮಗೆ ಸಂಸಾರವೆಂಬುದು ಗಾಳಿಯ ಸೊಡರು, ಸಿರಿತನೆವೆಂಬುದು ಸಂತೆಯ ಮಂದಿ ಎಂಬುದನ್ನು ಮನದಟ್ಟು ಮಾಡಿಕೊಡುತ್ತವೆ. ಅವುಗಳ ನಶ್ವರತೆಯನ್ನು ಅರ್ಥಮಾಡಿಕೊಳ್ಳ ಬೇಕಾದವರು ನಾವು. ನಮಗೆ ನಿಜವಾದ ಮತ್ತು ಶಾಶ್ವತವಾದ ಸುಖ ಬೇಕಾದರೆ ಕೂಡಲ ಸಂಗಮನನ್ನು ಪೂಜಿಸಬೇಕು, ಎಂದು ಹೇಳುತ್ತಾರೆ ಬಸವಣ್ಣನವರು.
ಕೂಡಲ ಸಂಗಮನನ್ನು ಪೂಜಿಸುವುದು ಎಂದರೇನು? ಸುಲಭವಾಗಿ ನಮಗೆ ಅರ್ಥವಾಗುವಂತೆ ಹೇಳಬೇಕೆಂದರೆ ಅದನ್ನು “ಅರಿವು” ಎನ್ನಬಹುದು. ಸಂಸಾರ ಮತ್ತು ಸಿರಿತನದ ನಶ್ವರತೆಯನ್ನು ಅರ್ಥಮಾಡಿಕೊಳ್ಳುವುದು. ಆಗ ಅವುಗಳಿಂದುಂಟಾಗುವ ದುಃಖ ನಮಗೆ ತಟ್ಟುವುದಿಲ್ಲ. ಉದಾಹರಣೆಗೆ, ಜನರು ಅನೇಕ ಸಾಹಸಗಳನ್ನು ಕೈಗೊಳ್ಳುತ್ತಾರೆ. ಆಳವಾದ ಸಮುದ್ರದ ತಳದಲ್ಲಿ ಅಪಾಯಕಾರಿ ದೈತ್ಯ ಮೀನುಗಳೊಂದಿಗೆ ಈಜುವುದು, ಅಥವಾ ಎತ್ತರದ ಬೆಟ್ಟದ ಕೋಡು ಬಂಡೆಯಿಂದ ಕೆಳಗೆ ಹಾರುವುದು ಇತ್ಯಾದಿ. ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ಅವುಗಳಿಂದ ಭಯವಿಲ್ಲ. ಅವರು ತಾವು ಹೊಗುತ್ತಿರುವ ಕ್ಷೇತ್ರದ ಆಳ, ಹರಹು, ಅದರಿಂದ ಆಗುವ ಅಪಾಯ, ಅವುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಬಗೆ, ಆ ಕ್ರೀಡೆಯಲ್ಲಿ ಉಂಟಾಗುವ ಸುಖ, ಎಲ್ಲವೂ ಅವರು ತಿಳಿದು ಕೊಂಡಿರುತ್ತಾರೆ. ಅಂದರೆ ಅವರಿಗೆ ಆ ಎಲ್ಲದರ ಒಂದು ರೀತಿಯ ಅರಿವು ಇರುತ್ತದೆ. ಹಾಗಾಗಿ ಆ ಅಪಾಯಕಾರಿ ಸಾಹಸವೂ ಅವರಿಗೆ ಒಂದು ಕ್ರೀಡೆಯಾಗುತ್ತದೆ. ಆದರೆ ಅದರಿಂದ ದೂರವಿರುವಂತಹ ನಾವು ಅವುಗಳಿಗೆ ಹೆದರಿ ಹೌಹಾರುತ್ತೇವೆ. ಇದೇ ಮಾತು ಸಂಸಾರಕ್ಕೂ ಅನ್ವಯಿಸುತ್ತದೆ. ಸಂಸಾರ ಮತ್ತು ಸಿರಿತನದಿಂದಾಗುವ ಸುಖ ದುಃಖಗಳನ್ನು, ಅವುಗಳ ನಶ್ವರತೆಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡರೆ ಅದೂ ಒಂದು ಕ್ರೀಡೆಯಾಗುತ್ತದೆ. ಅದರಿಂದುಂಟಾಗುವ ಕಷ್ಟ ಕೋಟಲೆಗಳು ನಮಗೆ ತಟ್ಟುವುದಿಲ್ಲ. ಆದರೆ ಈ ಉದಾಹರಣೆಯಲ್ಲಿ ಒಂದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇಲೆ ಹೇಳಿದ ಅರಿವು ಬಹಳ ಸೀಮಿತವಾದದ್ದು, ಸಾಹಸಗಳು ಭೌತಿಕವಾದವುಗಳು. ಪ್ರಯತ್ನಪಟ್ಟರೆ ಅವುಗಳು ನಮ್ಮ ಅನುಭವಕ್ಕೆ ಬರುವಂತಹವು. ಅವುಗಳನ್ನು ನಮ್ಮ ಅನುಭವಕ್ಕೆ ತಂದುಕೊಡುವಂತಹ ತರಬೇತುದಾರರು ಸಿಗುತ್ತಾರೆ. ಆದರೆ ಸಂಸಾರದ ನಶ್ವರತೆಯನ್ನು ಅರಿತುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಬೇಕಾದ ಅರಿವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅದನ್ನು ನಮ್ಮ ಅನುಭವಕ್ಕೆ ತಂದುಕೊಡಬಲ್ಲ ತರಬೇತುದಾರರು (ಗುರುಗಳು) ಸಿಗುವುದು ಸುಲಭವಲ್ಲ. ಅಂತಹ ಗುರುಗಳು ಇದ್ದರೂ ಸಹ ನಮ್ಮ ಮನಸ್ಸು ಆ ಅರಿವನ್ನು ಪಡೆಯುವುದಕ್ಕಾಗಿ ಸಿದ್ಧವಾಗಿರುವುದಿಲ್ಲ. ಅದಕ್ಕೆ ಮಾನಸಿಕ ಸಿದ್ಧತೆ ಬೇಕಾಗುತ್ತದೆ. ಮನಸ್ಸು ಸದಾ ಜಾಗೃತವಾಗಿರಬೇಕಾಗುತ್ತದೆ. ಮನಸ್ಸನ್ನು ಸದಾ ಜಾಗೃತವಾಗಿಟ್ಟುಕೊಳ್ಳುವುದೇ ಪೂಜೆ ಎನಿಸುತ್ತದೆ ನನಗೆ.
No comments:
Post a Comment