Friday, November 19, 2010

Vachana 14 Papiya Dhana Prayaschitakallade - Appropriateness of Wealth

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,

ಸತ್ಪಾತ್ರಕ್ಕೆ ಸಲ್ಲದಯ್ಯ!

ನಾಯ ಹಾಲು ನಾಯಿಂಗಲ್ಲದೆ,

ಪಂಚಾಮೃತಕ್ಕೆ ಸಲ್ಲದಯ್ಯ!

ನಮ್ಮ ಕೂಡಲಸಂಗನ ಶರಣರಿಗಲ್ಲದೆ

ಮಾಡುವ ಅರ್ಥ ವ್ಯರ್ಥ ಕಂಡಯ್ಯ.TRANSLITERATION


pApiya (sinner's) dhana (wealth) prAyaScittakke (repentence) allade(only, but not),

satpAtrakke(deserving) salladayya(does not befit)!

nAya(dog's) hAlu(milk) nAyiMge (for dogs) allade,

paMcAmRutakke(nectar of five) salladayya!

namma(our) kUDalasaMgana SaraNarige (sharanas) allade

mADuva(acquiring) artha(money) vyartha(useless) kaMDayya(Please see).pApiya dhana prAyaScittakkallade,

satpAtrakke salladayya!

nAya hAlu nAyiMgallade,

paMcAmRutakke salladayya!

namma kUDalasaMgana SaraNarigallade

mADuva artha vyartha kaMDayya.CLICK TO HEAR IT

http://www.youtube.com/watch?v=KxaQzXoL72w

MUSICAL RENDERING

http://www.raaga.com/player4/?id=173118&mode=100&rand=3.14159265

TRANSLATION

The sinner’s wealth befits nothing other than to expiate his sins (his own repentance), and certainly not to render as charity to the deserving!

The dog’s milk befits nothing other than its own puppies, and certainly not as an ingredient of the nectar of five ingredients (fit for the Lord’s worship)!

Mark Sir! The wealth spent for any purpose other than the welfare of the devotees of our Lord Kudala Sangama, is verily a waste!

COMMENTARY

Basavanna advocated ‘Kaayaka (duty)' as a must to acquire wealth (to feed the body and the family) and ‘dasoha (giving to community)' to dispose the excess wealth for community needs. In this vachana he specifies the right means for Kaayaka and Dasoha - wealth should be acquired by noble means and it should be disposed off as charity to deserving noble individuals for the welfare of the society.

We all know and feel that the ‘money moves the world’. It is hard to have a comfortable life without money, and people look down upon poor. No wonder, we spend all our energies to earn money. While there is nothing wrong in earning money, it should be done by noble means, without hurting others, and without resorting to lying and cheating. Basavanna says that the money earned through sinful ways can only be used to expiate such sins or as a medium for sinner’s repentance.

In practice, those who resort to sinful ways of accumulating wealth hardly think about the welfare of the others around them. Even if they share their wealth, it is usually to put their names on society’s bulletin boards, to compensate for the ills they have brought upon others, or to gain notoriety as a philanthropist. There is always a selfish motive, not the selfless willingness to contribute to the welfare of the society.

It is interesting that Basavanna compares the wealth accumulated through sinful ways to Dog’s milk, which can only be used to feed its puppies; it cannot be used for making the nectar (typically the five ingredients are milk, honey, Ghee, Banana, yogurt) fit for the Lord’s worship. Basavanna is simply giving the example of current day practice of using cow’s rather than dog’s milk for offers to the Lord. He is not implying that dog’s are inferior.

Basavanna says that the wealth should be disposed off as charity to the deserving (devotees of the Lord) and to the welfare of the society. He is using the word ‘devotee’ in a larger context to refer to those who have found the Lord within them, those who are above the fray of caste and creed, and those who consider all their deeds and wealth as belonging to the Lord. Obviously, when wealth is rendered to such individuals, it is guaranteed that that it will be used for the noblest purpose!

My favourite stanza in the Aarathi ‘Jaya Jagadeesha Hare’ is “Than Man Dhan sub hi teera, sub kuch hi tera; tera tujko arpan kya laage mera” meaning “Oh Lord! My body, mind and wealth are all yours and I am offering all of them back to you. I do not own anything”. If we can only develop such God mindedness, we will be a long way in reaching Him!

Let us not shy away from working hard to acquire wealth, but only by noble means! Let us share it with fellow beings to enhance the peace and happiness of all!FOR THOSE OF YOU WHO CAN READ KANNADA

“ದುಡ್ಡೇ ದೊಡ್ಡಪ್ಪ” ಎಂಬ ಮಾತು ಬಹು ಪ್ರಚಲಿತ. ಸಾಮಾನ್ಯವಾಗಿ ದುಡ್ಡಿಲ್ಲದಿದ್ದವನನ್ನು ಎಲ್ಲರೂ ಅಸಡ್ಢೆಯಿಂದಲೇ ನೋಡುತ್ತಾರೆ. ದುಡ್ಡಿಲ್ಲದೆ ಬದುಕುವುದು ಸಾಮಾನ್ಯನಿಗೆ ಅಸಾಧ್ಯವೇ ಆಗುತ್ತದೆ. ಆದ್ದರಿಂದ ಎಲ್ಲರೂ ದುಡ್ದು ಗಳಿಸುವುದರಲ್ಲಿ ತೊಡಗುವುದು ಆಶ್ಚರ್ಯವೂ ಅಲ್ಲ, ಪಾಪವೂ ಅಲ್ಲ. ಆದರೆ ಅದನ್ನು ಪಾಪದಿಂದ ಗಳಿಸುವುದು ತರವಲ್ಲ ಎನ್ನುತ್ತಾರೆ ವಚನಕಾರರು. ಪಾಪದಿಂದ ಗಳಿಸುವುದು ಎಂದರೇನು? ಎಂದು ಹುಟ್ಟುವ ಪ್ರಶ್ನೆಗೆ, ಸುಳ್ಳು, ಮೋಸ, ಶೋಷಣೆಗಳ ಮೂಲಕ ಹಣ ಗಳಿಸುವುದು ಎಂದು ಹೇಳಬಹುದು. ಇತರರ ಮನ ನೋಯಿಸಿ, ವಂಚಿಸಿ ಗಳಿಸುವವನ ಹಣ ಆತನ ಪ್ರಾಯಶ್ಚಿತ್ತಕ್ಕೆ ಮಾತ್ರ ಸಲ್ಲುವುದೇ ಹೊರತು ಸತ್ಪಾತ್ರರಿಗೆ ಸಲ್ಲುವುದಿಲ್ಲವೆಂದು ಹೇಳುತ್ತಾರೆ ಬಸವಣ್ಣನವರು.


ಇನ್ನೊಬ್ಬರನು ನೋಯಿಸಿ ಧನಗಳಿಸುವವನಿಗೆ ಕಷ್ಟದಲ್ಲಿರುವವರಿಗೆ ಸಹಾಯಮಾಡಬೇಕೆಂಬ ಮನಸ್ಸು ಉಂಟಾಗುವುದೇ ಇಲ್ಲ. ಹಾಗೇನಾದರು ಅವನು ಸಹಾಯ ಮಾಡಿದ್ದಾದರೆ, ಅದರ ಹಿಂದೆ ಸ್ವಾರ್ಥ ಭಾವವಿರುತ್ತದೆ. ಸಹಾಯ ಪಡೆದವರು ತನ್ನನ್ನು ಹೊಗಳಲಿ, ತಾನು ಪ್ರಸಿದ್ದನಾಗಲಿ ಇತ್ಯಾದಿ. ಅಥವಾ ಅಷ್ಟಿಷ್ಟು ಪಾಪ ಪ್ರಜ್ಞೆ ಇರುವವನಿಗೆ ಸ್ವಲ್ಪ ಪುಣ್ಯಮಾಡಿ ಪಾಪವನ್ನು ಕಳೆದುಕೊಳ್ಳಬೇಕು ಎಂಬ ಭಾವನೆಯಿರುತ್ತದೆ. ಇದೇ ಪ್ರಾಯಶ್ಚಿತ್ತ. ಇಲ್ಲವೆ, ನನಗೆ ಇಂತಿಷ್ಟು ಲಾಭವಾದರೆ ಇಂತಿಷ್ಟು ದಾನಮಾಡುತ್ತೇನೆ ಎಂದು ಹೊತ್ತ ಹರಕೆಯನ್ನು ತೀರಿಸುವಸಲುವಾಗಿ ದಾನ ಮಾಡುತ್ತಾನೆ. ಒಟ್ಟಿನಲ್ಲಿ ಎಲ್ಲವೂ ಲೆಕ್ಕಾಚಾರದ ವ್ಯಾಪಾರ. ಈ ರೀತಿಯಾಗಿ ಪಾಪಿಯ ಹಣ ಪ್ರಾಯಶ್ಚಿತ್ತಕ್ಕೆ ಮಾತ್ರ ಸಲ್ಲುತ್ತದೆ. ಇದಕ್ಕೆ ಒಂದು ಉದಾಹರಣೆ ಕೊಡುತ್ತಾರೆ ಬಸವಣ್ಣನವರು. ನಾಯಿಯ ಹಾಲು ನಾಯಿ ಮರಿ ಕುಡಿಯುತ್ತದೆಯೇ ಹೊರತು ಅದನ್ನು ಯಾರೂ ಪಂಚಾಮೃತಕ್ಕೆ ಬಳಸುವುದಿಲ್ಲ. ಅದೇ ರೀತಿಯಾಗಿ ಪಾಪಿಯ ಹಣ ಸತ್ಪಾತ್ರರಿಗೆ ಸಲ್ಲುವುದಿಲ್ಲ. ಇಲ್ಲಿ ಲೋಕದ ರೀತಿಯನ್ನು ಒಂದು ಉದಾಹರಣೆಯಾಗಿ ಬಳಸಿದ್ದಾರೆ ಅಷ್ಟೆ. ಅದನ್ನು ಹೆಚ್ಚು ವಿಶ್ಲೇಷಣೆಗೆ ಒಳಪಡಿಸುವ ಅಗತ್ಯವಿಲ್ಲ. ನಾಯಿ ಯನ್ನು ಅವರು ಕೀಳೆಂದು ಹೇಳುತ್ತಿದ್ದಾರೆಂದು ಅರ್ಥವಲ್ಲ.

ಸತ್ಪಾತ್ರರು ಎಂದರೆ ಯಾರು? ಲೋಕದ ಜಂಜಾಟಗಳಿಂದ ಬಿಡಿಸಿಕೊಂಡವರು, ಮತ ಧರ್ಮ ಜಾತಿಗಳನ್ನು ಮೀರಿ ನಿಂತವರು, ಮೇಲು ಕೀಳುಗಳೆಂಬ ಭೇದಭಾವವನ್ನು ಎಣಿಸದವರು, ಪರಮದಯಾಮಯರು, ಸಕಲ ಜೀವಾತ್ಮರಿಗೆ ಲೇಸನೆ ಬಯಸುವವರು, ನುಡಿದಂತೆ ನಡೆವವರು, ಎಲ್ಲದರಲ್ಲಿಯೂ ಪರಮತತ್ವವನ್ನು ಕಾಣುವವರು, “ನಾನು” ಎಂಬುದನ್ನು ಕಳೆದುಕೊಂಡು ಅರಿವನ್ನು ಪಡೆದವರು. ಇಂತಹವರಿಗೆ ಯಾರ ಹಂಗೂ ಇರುವುದಿಲ್ಲ. ಅವರು ಯಾರ ಹಣವನ್ನೂ ಬಯಸುವುದಿಲ್ಲ. ಅವರು ಮಾಡುವ ಕೆಲಸಕ್ಕೆ ಬೇಕಾದದ್ದು ತಾನಾಗಿಯೇ ಹರಿದು ಬರುತ್ತದೆ. “ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿಪ್ಪವು” ಎಂಬುದು ಅವರ ಅಖಂಡ ನಂಬಿಕೆ.


ಮೇಲೆ ಹೇಳಿದಂತಹ ಸತ್ಪಾತ್ರರಿಗೆ ಹಣ ಕೊಟ್ಟಾಗ ಅದರ ಸದ್ವಿನಿಯೋಗವಾಗುತ್ತದೆ. ಹಣವನ್ನು ತೃಣವಾಗಿ ಕಾಣುವವರಿಗೆ ಹಣ ಕೊಡುವುದು ಹೇಗೆ? “ಕೊಡುವವನು ಕೊಂಬುವವನು ಕೂಡಲ ಸಂಗಮದೇವನು” ಎಂಬ ಭಾವದಿಂದ ಕೊಟ್ಟಾಗ ಈ ಸತ್ಪಾತ್ರರು ಸಹ ಅದೇ ಭಾವದಿಂದ ಸ್ವೀಕರಿಸುತ್ತಾರೆ. ಹಾಗಲ್ಲದೆ ಅದನ್ನು ತನ್ನ ಸ್ವಾರ್ಥಕ್ಕಾಗಿ, ಕೀರ್ತಿಗಾಗಿ, ಹರಕೆ ತೀರಿಸುವುದಕ್ಕಾಗಿ, ಪುಣ್ಯಗಳಿಸುವಸಲುವಾಗಿ ದಾನಮಾಡಲು ಗಳಿಸುವ ಹಣ ವ್ಯರ್ಥವಾಗುತ್ತದೆ, ಈ ಯಾವುದಕ್ಕೂ ಯಾವ ಬೆಲೆಯೂ ಇಲ್ಲ. ಯಾರೇ ಆಗಲಿ ತಾವು, ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಹಣವನ್ನು ಇಂತಹ ಶರಣರಿಗೆ ಕೊಡದೆ ಇದ್ದರೆ ಆ ಅರ್ಥವು ವ್ಯರ್ಥವೆಂದು ಹೇಳುತ್ತಾರೆ ಬಸವಣ್ಣನವರು.

1 comment:

  1. Basavanna was a great guru, he once said that the money we earn from ourselves is referred to as bisi anna (fresh rice), the money we receive from our parents are referred to as thangala anna (rice from previous days) and the money we receive from the relation of our wife's is considered as to alasida anna (waste rice)...

    ReplyDelete