Saturday, November 13, 2010

Vachana 13 Bettada Melondu Maneya Maadi - Equanimity

ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?

 ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?

ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?

ಚೆನ್ನಮಲ್ಲಿಕಾಜುನದೇವ ಕೇಳಯ್ಯ

ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

TRANSLITERATION

beTTada (Mountain) mElE (On) oMdu (one) maneya (house) mADi (built), mRugaMgaLige (wild animals) aMjidoDe (afraid of) eMtayya(how)?

Samudrada(Sea) taDiyalli (shore) oMdu maneya mADi, noreteregaLige (waves) aMjidoDe (afraid of) eMtayya(how)?

saMteyoLage (In the Market) oMdu maneya mADi, Sabdakke(noise) nAcidoDe (shy of) eMtayya (how)?

cennamallikAjunadEva (Lord) kELayya(listen)

lOkadoLage(In the world) huTTida(born) baLika(after), stuti (praise)-niMdegaLu(blames) baMdare(if arrived)

manadalli (in the mind) kOpava(anger) tALade(not subject to) samAdhAni (calm and collected) yAgirabEku(must be)beTTada mEloMdu maneya mADi, mRugaMgaLigaMjidoDeMtayya?

samudrada taDiyaloMdu maneya mADi, noreteregaLigaMjidoDeMtayya?

saMteyoLagoMdu maneya mADi, Sabdakke nAcidoDeMtayya?

cennamallikAjunadEva kELayya

lOkadoLage huTTida baLika, stuti-niMdegaLu baMdare

manadalli kOpava tALade samAdhAniyAgirabEku


CLICK TO HEAR IT

http://www.youtube.com/watch?v=3LnAau-tr08

A MUSICAL RENDERING:
http://www.kannadaaudio.com/Songs/Devotional/home/BasaveshwaraVachanagalu-SubhadraMansoor.php
select play all

TRANSLATION

After building a house on the mountain, how can you be afraid of wild animals around it?

After building a house on the sea shore, how can you be afraid of lofty waves?

After building a house in the shanty town (flea market), how can you be concerned with the noise?

Oh! Lord Chenna Mallikarjuna, listen!

While born and living in this world, if praise and blames (criticism) come along, you have to face them without getting angry and maintaining the calmness of mind.


COMMENTARY

This is one of the popular vachanas by Akka Mahadevi. Shiva sharane (feminine form for sharana) Mahadevi is affectionately and respectfully called Akka (elder sister), just as Shiva sharana Basava is called Basavanna (aNNa, Elder brother). Akka Mahadevi was probably the first sharane to gain access to Anubhava Mantapa, a platform for sharing experiences and discussing philosophy and practices organized by Basavanna and presided by prominent sharanas such as Allama prabhu. Akka uses the ‘Chenna Mallikarjuna’ (another name of the Lord Shiva) as signature in her vachanas.

In this vachana Akka portrays her realization of how one must stay equanimous while handling life’s situations. She advises us not to lose our temper, become angry or annoyed at world’s disapproval or adomnition, and not to become proud at world's approval or admiraition. She advocates that the admirations and admonitions coming our way should not disturb our balance and calmness of mind. She provides three human situations as examples.

Once we build a house on the mountain, we should be ready to live with the wild animals that might be roaming around the house. After all, we have built our house in their natural habitat. Roaming around their habitat, when and where they like is their nature. We should have considered this aspect before building the house. Once the house is built, the only right choice is to develop a mindset of cooperative living rather than perturbed by the presence of the wild animals. Along the same lines, it is only natural that waves hit a house built on the sea shore. We should be prepared for high tides and tsunami!  Similarly, we should be prepared for the noise of the market, once we build a house in the midst a market.

My mother once told me “ once we have a dog in the house, we should be ready to be bitten by it - Naayi Kattidamele, adarinda kacchisikolluvudakku siddavagirabeku”. I must have been complaining about something! I wonder if she got the idea from this vachana!

The natural tendency of the world we live in is to throw admiration and admonition at us. The admiration should not make us unnecessarily proud; the admonition should not make us unnecessarily depressed. Neither of these should make us lose our balance. We should be equanimous. Akka is praying the Lord Chenna Mallikarjuna to give us the strength to achieve such equanimity.

How can we achieve such equanimity under the pressures of success and failure, happiness and sorrow? According to philosopher J. Krishnamoorthy, the fundamental reason behind why these situations tend to throw us out of balance is the image of ourselves and others, we have created in our minds. These perceived images are due to past actions, successes and failures, status in life, our position in society, etc. We will be happy when our image is recognized by others and we will be sad when it is perturbed by others. In general, life is a competition between these images. Note that these images are formed by past actions and may not be pertinent to today. If we can only remove the “I” that contributes to these images, we will be a long way towards achieving the equanimity!

Let us ‘plan’ before we ‘build’! Once built, let us strive to be equanimous under successes and failures!

FOR THOSE OF YOU WHO CAN READ KANNADA

ಲೋಕದ ಜನರು ಬದುಕಿನಲ್ಲಿ ನಿವಾರಿಸಲಾಗದೆ ಇರುವುದರ ಬಗ್ಗೆ ದೂರುವುದನ್ನು, ಸಂಕಟಪಡುವುದನ್ನು ಕಂಡು ಹೀಗೆ ತಿಳಿಯ ಹೇಳುತ್ತಾಳೆ ಅಕ್ಕ ಮಹಾದೇವಿ. ಬೆಟ್ಟದ ಮೇಲೆ ಮನೆಮಾಡಿಯಾಗಿದೆ. ಅದರಲ್ಲಿ ವಾಸಮಾಡುತ್ತಿರುವಾಗ, ಸುತ್ತಲಿನ ಕಾಡಿನ ಪ್ರಾಣಿಗಳು ಅಲ್ಲಿಗೆ ಬರುವುದು ಸಹಜ. ತಮ್ಮ ಮನ ಬಂದೆಡೆ ತಿರುಗಾಡುವುದು ಅವುಗಳ ಸ್ವಭಾವ. ಅವುಗಳಿಗೆ ಅಂಜಿದಡೆ ಹೇಗೆ? ಅವುಗಳಿರುವೆಡೆ ನಾವು ವಾಸಿಸಬೇಕಾಗಿರುವುದರಿಂದ ಅವುಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಹಜವಾದುದನ್ನು ನಾವು ನಿವಾರಿಸಲು ಸಾಧ್ಯವೇ? ಅದನ್ನು ಮೊದಲೇ ನಿರೀಕ್ಷಿಸಿ ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ಅದೇ ರೀತಿ ಸಮುದ್ರದ ತಡಿಯಲ್ಲಿ ಮನೆ ಮಾಡಿದಾಗ ನೊರೆತುಂಬಿದ ಅಲೆಗಳು ಬಂದು ಅಪ್ಪಳಿಸುತ್ತವೆ. ಅದು ಕೂಡ ಸಹಜವೆ. ಅದು ಪ್ರಕೃತಿಯ ನಿಯಮ. ಅದನ್ನು ನಾವು ನಮಗೆ ಬೇಕಾದಂತೆ ಪರಿವರ್ತಿಸಲು ಸಾಧ್ಯವಿಲ್ಲ. ಸಂತೆಯಲ್ಲಿ ಮನೆ ಮಾಡಿದ ಮೇಲೆ ಅಲ್ಲಿ ಉಂಟಾಗುವ ಶಬ್ದಕ್ಕೆ ನಾಚಿಕೊಂಡರೆ ಹೇಗೆ? ನೂರಾರು ಮಂದಿ ನೆರೆಯುವ ಸಂತೆಯಲ್ಲಿ ನಿಶ್ಶಬ್ದತೆ ನಿರೀಕ್ಷಿಸಬಹುದೆ? ಅಲ್ಲಿ ಗದ್ದಲ ಉಂಟಾಗುವುದು ಸಹಜ. ಅದೇ ರೀತಿಯಾಗಿ ಸಂಸಾರದಲ್ಲಿ ಹುಟ್ಟಿದ ಬಳಿಕ ಜನರು ನಮ್ಮನ್ನು ಸ್ತುತಿಸುತ್ತಾರೆ ಹಾಗೂ ನಿಂದಿಸುತ್ತಾರೆ. ಇದು ಲೋಕದ ಸಹಜ ವರ್ತನೆ. ಜನರ ನಿಂದನೆಯನ್ನು ಕೇಳಿ ಕೋಪ ಮಾಡಿಕೊಂಡರೆ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ. ಅದರಿಂದ ನಷ್ಟವಾಗುವುದು ನಮಗೇ ಹೊರತು ಜನರಿಗಲ್ಲ. ಅದನ್ನು ಅರಿತುಕೊಂಡು ನಮಗಾಗುವ ನಷ್ಟವನ್ನು ತಡೆಯಲು ಜನರ ಸ್ತುತಿನಿಂದೆಗಳನ್ನು ಕಡೆಗಣಿಸಿ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎನ್ನುತ್ತಾಳೆ ಅಕ್ಕ.


ಇಲ್ಲಿ "ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿವಾಗಿರಬೇಕು” ಎಂಬುದನ್ನು ಗಮನಿಸಬೇಕು. ನಿಂದೆಯನ್ನು ಕೇಳಿ ಕೋಪ ತಾಳುವುದು ಸಹಜ. ಆದರೆ ಸ್ತುತಿಯನ್ನು ಕೇಳಿದಾಗ ಕೋಪ ಉಂಟಾಗುವುದಿಲ್ಲ. ಮನಸ್ಸು ಬೀಗುತ್ತದೆ. ಇಲ್ಲಿ ಅಕ್ಕ ಎರಡೂ ಸಂದರ್ಭದಲ್ಲಿ ಉದ್ವೇಗಗೊಳ್ಳದೆ ಸಮಾಧಾನಿಯಾಗಿರಬೇಕೆನ್ನುವ ಮೂಲಕ ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಳ್ಳಬೇಕೆಂದು ಹೇಳುತ್ತಿದ್ದಾಳೆ.


ಸ್ಥಿತಪ್ರಜ್ಞತೆಯನ್ನು ತಂದುಕೊಳ್ಳುವುದು ಹೇಗೆ? ಮನಸ್ಸು ಏಕೆ ಸುಖಿ ಅಥವಾ ದುಃಖಿಯಾಗುತ್ತದೆ ಎಂಬುದನ್ನು ಅರಿತುಕೊಂಡರೆ ಅದು ಸಾಧ್ಯವಾಗಬಹುದು. ನಮ್ಮೆಲ್ಲರಲ್ಲಿಯೂ ನಾನು ಎಂಬುದು ಬಹಳ ಬಲವಾಗಿ ಬೇರೂರಿದೆ. ಈ “ನಾನು’ ವಿಗೆ ಧಕ್ಕೆಯಾದಾಗ ನೋವು, ದುಃಖ, ಅವಮಾನ, ನಿರಾಶೆ ಉಂಟಾಗುತ್ತದೆ. ಅದರ ಇಷ್ಟದಂತೆ ಸಂದರ್ಭಗಳು ಕೂಡಿ ಬಂದಾಗ, “ನಾನು” ಅನ್ನು ಹೊಗಳಿದಾಗ, ಸುಖ, ಸಂತೋಷ, ಅಭಿಮಾನ, ಅಹಂಕಾರ ಉಂಟಾಗುತ್ತವೆ.ಅಂದರೆ ಎಲ್ಲವೂ ಈ “ನಾನು” ವಿನ ಮೇಲೆಯೇ ಅವಲಂಬಿಸಿದೆ. ಈ “ನಾನು” ಎಂಬುದು ಏನು ಎಂಬುದನ್ನು ವಿಶ್ವ ಗುರು ಎಂದೇ ವಿಖ್ಯಾತರಾದ ಜಿಡ್ಡು ಕೃಷ್ಣಮೂರ್ತಿಯವರು ವಿವರಿಸಿ ಹೇಳುತ್ತಾರೆ: ನನ್ನ ಬಗ್ಗೆ ನನ್ನ ಮನಸ್ಸಿನಲ್ಲಿ ಒಂದು ರೂಪವಿರುತ್ತದೆ, ಇತರರ ಬಗ್ಗೆಯೂ ನನ್ನ ಮನಸ್ಸಿನಲ್ಲಿ ಒಂದು ರೂಪವಿರುತ್ತದೆ. ಮತ್ತು ನಾವಿಬ್ಬರೂ ಈ ರೂಪಗಳೊಂದಿಗೆ ಸ್ಪಂದಿಸುತ್ತೇವೆ. ಅಂದರೆ ಪ್ರತಿಯೊಬ್ಬನೂ ತಾನು ತನ್ನ ಮನಸ್ಸಿನಲ್ಲಿ ಮಾಡಿಕೊಂಡ ರೂಪದೊಂದಿಗೆ ತನ್ನ ರೂಪದಮೂಲಕ ಪ್ರತಿ ಸ್ಪಂದಿಸುತ್ತಾನೆ. ಇಲ್ಲಿ ಗಮನಿಸಬೇಕಾದದು ಎಂದರೆ ಯವುದೂ ವಾಸ್ತವಲ್ಲ. ನಮ್ಮೆಲ್ಲರ ರೂಪಗಳು ಸಮಾಜ, ಕುಟುಂಬ ಮತ್ತು ನಾವು ಸ್ವತಃ ಸೃಷ್ಟಿಸಿಕೊಂಡ ರೂಪಗಳು. ಉದಾಹರಣೆಗೆ: ನಾನು ಇಂತಿಂಥವರ ಸಂತಾನ, ಇಂತಿಂಥ ಪದವಿಹೊಂದಿದವನು, ಇಂತಿಂಥ ಕ್ಷೇತ್ರದಲ್ಲಿ ಇಷ್ಟಿಷ್ಟು ಅನುಭವ ಹೊಂದಿರುವವನು ಇತ್ಯಾದಿ ಇತ್ಯಾದಿ. ಇದೇ ರೀತಿ ಪ್ರತಿಯೊಬ್ಬರಿಗೂ ಅವರವರದೇ ರೂಪವಿರುತ್ತದೆ. ಮತ್ತು ಪ್ರತಿಯೊಬ್ಬರೂ ಆಯಾ ರೂಪಗಳಿಂದ ಆಯಾ ರೂಪಗಳೊಂದಿಗೆ ಪ್ರತಿಸ್ಪಂದಿಸುತ್ತಾರೆ. ಅಂದರೆ ನಮ್ಮೆಲ್ಲರ ಪ್ರತಿಸ್ಪಂದನೆಯಲ್ಲಿ ಎಲ್ಲಿಯೂ ವಾಸ್ತವತೆ ಮತ್ತು ವರ್ತಮಾನವಿರುವುದಿಲ್ಲ. ಎಲ್ಲವೂ ಒಂದು ರೀತಿಯ ಕಲ್ಪನೆ ಮತ್ತು ಇತಿಹಾಸವಾಗಿರುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ಉಂಟಾದ ಚಿತ್ರ ನಾವು ಆತನ ಬಗ್ಗೆಇತರರು ಹೇಳಿದಂತೆ, ನಮಗೆ ಅನುಭವವಾದಂತೆ ಅಥವಾ ನಮ್ಮ ಇಷ್ಟದಂತೆ ಮಾಡಿಕೊಂಡದ್ದಾಗಿರುವುದರಿಂದ ಅದು ವಾಸ್ತವವಾಗಿರುವುದಿಲ್ಲ ಮತ್ತು ಆಗಲೇ ಮಾಡಿಕೊಂಡದ್ದರಿಂದ ಅದು ವರ್ತಮಾನವಲ್ಲ. ಅದು ಆಗಲೇ ಇತಿಹಾಸವಾಗಿರುತ್ತದೆ. ವರ್ತಮಾನದಲ್ಲಿ ಆ ವ್ಯಕ್ತಿ ಬೇರೆಯೇ ಆಗಿರಬಹುದು. ಆದರೆ ನಾವು ಹಿಂದಿನ ನೆನಪಿನನೆಲೆಯಿಂದಲೇ ಪ್ರತಿಸ್ಪಂದಿಸುತ್ತೇವೆ. ಅಂದರೆ ಈ “ನಾನು” ಎಂಬುದು ಎಲ್ಲವೂ ಒಂದು ಚಿತ್ರ ಒಂದು ಇಮೇಜ್ ಅಷ್ಟೆ. ಇದನ್ನು ಹೃದ್ಗತ ಮಾಡಿಕೊಂಡರೆ ಈ ಸಂಸಾರದಲ್ಲಿ ಸಮಾಧಾನಿಯಾಗಿರಬಹುದು.

3 comments:

 1. ನಿಮ್ಮ ಈ ಸರಣಿಯ ಮೊದಲನೆ ಅಕ್ಕನ ವಚನದ ಆಯ್ಕೆ ಬಹಳ ಸೂಕ್ತವಾಗಿದೆ. ಮನುಷ್ಯ ಜೀವನದ, ಪ್ರಮುಖ ಆಯಾಮಗಳಲ್ಲಿ ನೆಲೆ ಕಂಡುಕೊಳ್ಳುವುದು ಒಂದು. ಮದುವೆ ಮಾಡಿಕೊಂಡು , ಮಕ್ಕಳು ಮಾಡಿಕೊಂಡು, ಮನೆ ಕಟ್ಟಿಕೊಂಡು ಒಂದು ನೆಲೆ ಕಂಡುಕೊಳ್ಳುವುದು ಸಾದಾರಣವಾಗಿ ಕಂಡುಬರುವ ಗುಣಸ್ವಭಾವ. ಮನೆ ಕಟ್ಟಿಕೊಳ್ಳುವಂಥಹ ಭೌತಿಕ ಕ್ರಿಯೆಯನ್ನು ವಿಷಯವಾಗಿ ಇಟ್ಟುಕೊಂಡ ಅಕ್ಕ, ಮನುಷ್ಯ ಮೈಗೂಡಿಸಿಕೊಳ್ಳಬೇಕಾದ ಒಂದು ನಿರ್ದಿಷ್ಟ ಗುಣದ ಬಗ್ಗೆ ಹೇಳಿದಂತೆ ಕಾಣಿಸುತ್ತದೆ. 'ಆರಕ್ಕೇರದ - ಮೂರಕ್ಕಿಳಿಯದ' ಸಮಾಧಾನ ಮನಸ್ತಿತಿ ಉಳಿಸಿಕೊಂಡಾಗ , ನಾವು ಭೌತಿಕವಾಗಿ ಗಳಿಸಿದ, ಜೀವನಾವಶ್ಯಕ ವಸ್ತುಗಳು, ಸಂಭಂದಗಳು, ಮುಂತಾದವುಗಳೆಲ್ಲ ಸಾರ್ಥಕವಾಗುವ ಸಂಭವ ಹೆಚ್ಚಾಗುತ್ತದೆ. ನಾವು ಗಳಿಸಿದ , ಇಷ್ಟಪಡುವ ಎಲ್ಲವೂ ಬೇರೆಯವರ 'ಸ್ತುತಿ - ನಿಂದೆ' ಯ ದೃಷ್ಟಿಯಿಂದ ನೋಡಿದಾಗ ನಮ್ಮತನ ಇಲ್ಲವಾಗಿ , ಪರಾವಲಂಬಿಗಳಾಗಿ, ಮನಸ್ಸು ಕ್ಷುದ್ರ ವಾಗುತ್ತದೆ. ಇದರಿಂದ ಉಂಟಾದ ನಮ್ಮ ಕೋಪ ತಾಪಗಳು 'ಮನೆಯೊಳಗಿನ ಕಿಚ್ಚು ಮನೆಯನ್ನು ಸುಡುತ್ತದೆ' ಎಂಬ ಬಸವಣ್ಣನ ಮಾತಿನಂತೆ ಆಗುತ್ತದೆ.
  ನಿಮ್ಮ ಈ ವಚನ ಮಾಲಿಕೆಯ ಹಾರಕ್ಕೆ ನನ್ನ ಎರಡು ಹೂಗಳನ್ನು ಪೋಣಿಸುವ ಯತ್ನ ಮಾಡಿದ್ದೇನೆ, ನೀವು ಇಷ್ಟಪಡುವಿರೆಂದು ನಂಬಿದ್ದೇನೆ. ಈ ಮಾಲಿಕೆ ಹೀಗೆ ಮುಂದುವರೆಸಿ ಎಂದು ಕೇಳಿಕೊಳ್ಳುತ್ತೇನೆ.
  ನಿಮ್ಮ ವಿಶ್ವಾಸಿ ,
  ಜಯದೇವ.

  ReplyDelete
 2. ಜಯದೇವ ಅವರೆ, ತಾವು ಹೆಳಿರುವ ಮಾತುಗಳಿಂದ ಅಕ್ಕನ ವಚನದ ಭಾವ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ವಿಶೇಷವಾಗಿ ತಮ್ಮ "ಮನೆ ಕಟ್ಟಿಕೊಳ್ಳುವಂಥಹ ಭೌತಿಕ ಕ್ರಿಯೆಯನ್ನು ವಿಷಯವಾಗಿ ಇಟ್ಟುಕೊಂಡ ಅಕ್ಕ, ಮನುಷ್ಯ ಮೈಗೂಡಿಸಿಕೊಳ್ಳಬೇಕಾದ ಒಂದು ನಿರ್ದಿಷ್ಟ ಗುಣದ ಬಗ್ಗೆ ಹೇಳಿದಂತೆ ಕಾಣಿಸುತ್ತದೆ. 'ಆರಕ್ಕೇರದ - ಮೂರಕ್ಕಿಳಿಯದ' ಸಮಾಧಾನ ಮನಸ್ಥಿತಿ ಉಳಿಸಿಕೊಂಡಾಗ , ನಾವು ಭೌತಿಕವಾಗಿ ಗಳಿಸಿದ, ಜೀವನಾವಶ್ಯಕ ವಸ್ತುಗಳು, ಸಂಬಂಧಗಳು, ಮುಂತಾದವುಗಳೆಲ್ಲ ಸಾರ್ಥಕವಾಗುವ ಸಂಭವ ಹೆಚ್ಚಾಗುತ್ತದೆ. ನಾವು ಗಳಿಸಿದ , ಇಷ್ಟಪಡುವ ಎಲ್ಲವೂ ಬೇರೆಯವರ 'ಸ್ತುತಿ - ನಿಂದೆ' ಯ ದೃಷ್ಟಿಯಿಂದ ನೋಡಿದಾಗ ನಮ್ಮತನ ಇಲ್ಲವಾಗಿ , ಪರಾವಲಂಬಿಗಳಾಗಿ, ಮನಸ್ಸು ಕ್ಷುದ್ರ ವಾಗುತ್ತದೆ" ಎಂಬ ಮಾತು ಬಹಳ ಮಹತ್ವದ್ದು. ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ್ದಕ್ಕಾಗಿ ಧನ್ಯವಾದಗಳು.---ಲೀಲಾ ಗರಡಿ

  ReplyDelete
 3. Thanks for sharing :)

  ReplyDelete