VACHANA IN
KANNADA
ಅರ್ತಿಯಿಂದ
ಮಾಡುವ ಭಕ್ತಿ ಕರ್ತಾರನ ಕಮ್ಮಟಕ್ಕೊಳಗಾಯಿತ್ತು
ಸತ್ಯದಿಂದ
ಮಾಡುವ ಭಕ್ತಿ ಕರ್ತಾರನ ಕಮ್ಮಟಕ್ಕೆ
ಹೊರಗಾಯಿತ್ತು
ಅರ್ತಿ
ಲೌಕಿಕಕ್ಕೆ, ಸತ್ಯ ಪಾರಮಾರ್ಥಕ್ಕೆ.
ಉಭಯದ
ಗೊತ್ತನರಿದು ಮಾಡುವ ಭಕ್ತಿ
ಈಶಾನ್ಯಮೂರ್ತಿ
ಮಲ್ಲಿಕಾರ್ಜುನನಿಗರ್ಪಿತವಾಯಿತ್ತು.
TRANSLITERATION
artiyiMda
maaDuva bhakti kartaarana kammaTakkoLagaayittu,
satyadiMd
amaaDuva bhakti kartaarana kammaTakke horagaayittu
arti
loukikakke, satya paaramaarthakke.
ubhayada
gottanaridu maaDuva bhakti
IshaanyamUrti
mallikaarjunanigarpitavaayittu.
TRANSLATION (WORDS)
artiyiMda
(with love) maaDuva bhakti (devotion) kartaarana kammaTakkoLagaayittu (belongs
to creatore’s world, is worldly),
satyadiMd
amaaDuva bhakti (devotion with truth) kartaarana kammaTakke horagaayittu
(doesnot belong to creators world, which is out of this world)
arti
loukikakke (love is temporal) , satya paaramaarthakke (truth is non temporal).
ubhayada (of
both) gottanaridu (knowing what are the
places) maaDuva bhakti (devotion)
IshaanyamUrti
mallikaarjunanigarpitavaayittu. (is accepted by Ishanyamurti Mallikaarjuna)
VACHANA
IN ENGLISH
The devotion
made with love belongs to the creator’s world (worldly)
The devotion
made with truth does not belong to the creator’s world (out of this world)
Love is
temporal, Truth is non temporal.
Devotion
made knowing the place of both is accepted by
Ishanyamurti
Mallikaarjuna.
COMMENTARY
This Vachana
is from Shivalenka Manchanna. He was the
teacher of Urilingidevaru and was a great orator. Ishanyamurti Mallikaarjuna was his signature.
In this
Vachana, Manchanna tries to distinguish
between the two prominent forms of devotion and urges that a combination of the
two would be a better way!
The first
form of devotion is inspired by love of the fruits of devotion. There is an
expectation that this devotion brings materialistic fruits and comforts. As
such, this form is suitable for temporal aspects. The second form of devotion
is based on truth. The devotee is not aspiring for any material aspects. He is
completely above it. But, such devotion is not practical from the point of view
of living here. What is ideal, is a combination of the two forms or modes. One
should be here, but detached from here.
Manchanna is emphasizing the sharana concept of being fully in the
mundane world with an appropriate level of detachment.
Let our
devotion be based on love and truth!
KANNADA
COMMENTARY
ಅರ್ಥ:
ಅರ್ತಿಯಿಂದ
(ಪ್ರೀತಿಯಿಂದ) ಮಾಡುವ ಭಕ್ತಿ ಕರ್ತಾರನ(ಬ್ರಹ್ಮನ, ಸೃಷ್ಟಿ ಕರ್ತನ) ಕಮ್ಮಟಕ್ಕೊಳಗಾಯಿತ್ತು (ಕಾರ್ಯಾಗಾರಕ್ಕೆ ಒಳಗಾಯಿತು.)
ಸತ್ಯದಿಂದ
(ನಿಜವಾಗಿ) ಮಾಡುವ ಭಕ್ತಿ ಕರ್ತಾರನ ಕಮ್ಮಟಕ್ಕೆ
ಹೊರಗಾಯಿತ್ತು
ಅರ್ತಿ
ಲೌಕಿಕಕ್ಕೆ, ಸತ್ಯ ಪಾರಮಾರ್ಥಕ್ಕೆ.
ಉಭಯದ
ಗೊತ್ತನರಿದು (ಎರಡರ ಸ್ಥಾನಗಳನ್ನು ಅರಿತು) ಮಾಡುವ ಭಕ್ತಿ
ಈಶಾನ್ಯಮೂರ್ತಿ
ಮಲ್ಲಿಕಾರ್ಜುನನಿಗರ್ಪಿತವಾಯಿತ್ತು.
ತಾತ್ಪರ್ಯ:
ಶಿವಲೆಂಕ
ಮಂಚಣ್ಣ
ಶಿವಲೆಂಕ
ಮಂಚಣ್ಣ ಉರಿಲಿಂಗಿದೇವರ ಗುರುಗಳಾಗಿದ್ದರು. ಇವರು ಪಂಡಿತ ವಂಶದವರು. ಶಿವನ ಗುಣಗಳನ್ನು ಸಾರುತ್ತ
ವಾದದಲ್ಲಿ ಇತರರನ್ನು ಸೋಲಿಸುತ್ತ ಸಂಚರಿಸುತ್ತಿದ್ದರು.
ಅನೇಕ ವೀರಶೈವ ಪುರಾಣಗಳಲ್ಲಿ ಇವರ ಉಲ್ಲೇಖ ಬರುತ್ತದೆ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದು ಇವರ
ವಚನಾಂಕಿತ.
ಇದು ಶಿವಲೆಂಕಮಂಚಣ್ಣನವರ
ವಚನ, ಇಲ್ಲಿ ಅವರು ಎಂತಹ ಭಕ್ತಿ
ಮಲ್ಲಿಕಾರ್ಜುನನಿಗೆ ಪ್ರಿಯವಾಗುತ್ತದೆ ಎಂಬುದನ್ನು ಹೇಳುತಿದ್ದಾರೆ.
ಪ್ರೀತಿಯಿಂದ
ಮಾಡುವ ಭಕ್ತಿ ಕರ್ತಾರನ ಕಮ್ಮಟಕ್ಕೆ ಒಳಗು ಎಂದು. ಅಂದರೆ ಅದು ಈ ಲೋಕಕ್ಕೆ ಸಲ್ಲುತ್ತದೆ. ಎಂದರೆ
ಭಕ್ತಿ ಮಾಡಬೇಕು ಎಂದುಕೊಂಡು ಮಾಡುವ ಭಕ್ತಿ,
ಕೃತಕವಾಗಿರುತ್ತದೆ. ಭಕ್ತಿಯ ಬಗ್ಗೆ ಪ್ರೀತಿ ಎಂಬುದು ಕೃತಕ. ನಿಜವಾದ ಭಕ್ತಿಯನ್ನು ಅರಿಯದೆ, ಅದರ
ಫಲಗಳನ್ನು ಮಾತ್ರ ಊಹಿಸಿ ಭಕ್ತಿಯ ಬಗ್ಗೆ ಪ್ರೀತಿಹೊಂದುವುದು ನಿಜವಾದ ಭಕ್ತಿಯಲ್ಲ. ಅಂತಹ ಭಕ್ತಿ
ಈ ಲೋಕದ ಸ್ವಭಾವಕ್ಕೆ ಸರಿಯಾದದ್ದು.
ಸತ್ಯದಿಂದ
ಮಾಡುವ ಭಕ್ತಿ ಬೇರೆ. ಅದು ಈ ಲೋಕಕ್ಕೆ ಸೇರಿರುವುದಿಲ್ಲ. ಅಂದರೆ ಅದು ಈ ಲೋಕದಿಂದ ಬೇರೆಯಾಗಿ
ಪಾರಮಾರ್ಥಕ್ಕೆ ಸೇರಿದುದು. ಈ ಲೋಕವು ಸತ್ಯವಲ್ಲ,
ಅದು ಕೇವಲ ಮಾಯೆ ಎಂದು ಅದನ್ನು ತಿರಸ್ಕರಿಸಿ ಅದರಿಂದ
ದೂರವಾಗಿರುವಂತಹದ್ದು. ಈ ಎರಡೂ ರೀತಿಯ ಭಕ್ತಿಗಳು ಮಲ್ಲಿಕಾರ್ಜುನನಿಗೆ ಪ್ರಿಯವಲ್ಲ.
ಎಂದರೆ ಈ
ವಚನದ ಮೂಲಕ ಲೆಂಕಣ್ಣನವರು ಈ ಲೋಕಕ್ಕೇ ಅಂಟಿಕೊಂಡು ಇರುವುದೂ, ಅಥವಾ ಕೇವಲ ಪಾರಮಾರ್ಥದ ಬಗ್ಗೆ
ಆಸ್ಥೆ ಹೊಂದಿರುವುದೂ ಎರಡು ಸರಿಯಲ್ಲ ಎಂಬ ಭಾವ ವ್ಯಕ್ತಗೊಳಿಸುತ್ತಿದ್ದಾರೆ.
.
ಪ್ರೀತಿ ಈ
ಲೋಕಕ್ಕೆ ಸರಿಹೊಂದುವಂತಹದ್ದು. ಇಲ್ಲಿ ಎಲ್ಲವೂ ಲೆಕ್ಕಾಚಾರದ ನಡತೆ, ಫಲದ ಆಸೆಯಿಂದ ಪ್ರೇರಿತವಾದದ್ದು.
ಆದ್ದರಿಂದ ಅದು ಲೌಕಿಕ. ಮತ್ತು ಸತ್ಯದಿಂದ ಮಾಡುವ ಭಕ್ತಿಯಲ್ಲಿ ಈ
ಲೋಕಕ್ಕೆ ಬೆಲೆಯಿಲ್ಲ. ಅದು ಪಾರಮಾರ್ಥಕ್ಕೆ ಅಡ್ಡಿಯಾಗುತ್ತದೆ ಎಂದು ಅದನ್ನು ದೂರಮಾಡಿ ಕೇವಲ
ಪಾರಮಾರ್ಥದ ಆಸೆಯಲ್ಲಿ ಬದುಕುವುದು ಕೂಡ
ಸರಿಯಲ್ಲ. ಏಕೆಂದರೆ ಅದು ಈ ಲೋಕದಿಂದ ದೂರವಾದದ್ದು.
ಈ ಎರಡೂ ರೀತಿಗಳನ್ನುಳಿದು ಇನ್ನೂ ಒಂದು ರೀತಿಯಿದೆ.
ಅದೇ ಎರಡಕ್ಕೂ ಅದರದರ ಸ್ಥಾನ ಕೊಡುವುದು.
ಈ ಲೋಕ
ಮತ್ತು ಪಾರಮಾರ್ಥದ ನಿಜವಾದ ಸ್ಥಾನಗಳನ್ನು ಅರಿತು ಅವುಗಳನ್ನು ಆಯಾ ಸ್ಥಾನದಲ್ಲಿರಿಸಿ ಮಾಡುವ ಸಹಜ
ಭಕ್ತಿಯು ಮಲ್ಲಿಕಾರ್ಜುನನಿಗೆ ಪ್ರಿಯವಾಗುತ್ತದೆ ಎನ್ನುತ್ತಾರೆ ಲೆಂಕಣ್ಣನವರು.
No comments:
Post a Comment