VACHANA IN KANNADA
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
TRANSLITERATION
aava kaayakavaadaDU
svakaayakava maaDi
guru liMga jaMgamada
muMdiTTu,
okkuda haaraisi, mikkuda
kaikoMDu
vyaadhi baMdare naraLu,
bEne baMdare oralu,
jIva hOdaDe saayi,
idakkaa dEvara haMgEke, bhaapu laddeya sOma?
CLICK HERE FOR A
RECITATION
TRANSLATION (WORDS)
aava kaayakavaadaDU (
which ever job) svakaayakava maaDi
(doing your job)
guru liMga jaMgamada
muMdiTTu,(offering to the teacher, liMga and the jamgama)
okkuda haaraisi,(expect
only that is worth) mikkuda kaikoMDu
(take only what is left)
vyaadhi baMdare naraLu
(if you have an ailment groan), bEne baMdare oralu (if you are in pain moan),
jIva hOdaDe saayi (if
death comes die), idakkaa dEvara haMgEke (why live in the obligation of the
God?), bhaapu laddeya sOma? (that is good Laddeya Soma)
VACHANA IN
ENGLISH
Just perform your job, no matter which job it is,
Offer to the teacher, God and wandering ascetic,
Expect only that is worth, take only what is left,
Groan if you have an ailment, moan if you are in pain,
Die if death comes.
Why live in the obligation of (blame) the God, for these, Laddeya Soma?
COMMENTARY
This Vachana is from Laddeya Somanna. His signature is ‘Laddeya
Soma’. He is from the village of Laada in Raichur District of Karnataka. He has
been referenced in Chennabasava Purana and Mahalinga Leele. His statue is in
Madhukeswara temple in Banavasi. Only this Vachana from his has been found.
This Vachana stresses the concepts of Kaayaka (unselfish,
full minded duty) and Daasoha (Sharing).
No matter what the job is one must perform it with utmost sincerity,
giving 100% to it. One should expect only what is right from that work and not
become greedy of the fruits of that work. The fruits of this work are to be
offered to the teacher (Guru), God (Linga) and the wandering ascetics (Jangama)
first and one should consume only what is left. Guru initiates the awareness
and knowledge needed to understand Linga (God, The energy/Chaitanya behind this universe). Jangama, once understanding
God, spends his life unselfishly spreading that knowledge to community. Offering to these three is simply returning what one got from God, back to Him. Understanding the importance of these three concepts takes an individual away and beyond the mundane world. This awareness along with determination to perform one's duties with utmost sincerity helps one to face in stride any ailment, pain and even death, without being in the obligation of (blaming) God.
Essentially, this Vachana is asking us to do our duties
honestly, share the most with the community, live with the least and do not
complain about the ailment and pain, rather face them with the utmost strength
without resorting to blaming the God for these.
Let us work, share and not blame!
KANNADA COMMENTARY
ಅರ್ಥ:
ಆವ ಕಾಯಕವಾದಡೂ (ಯಾವುದೇ ಕಾಯಕವಾದರೂ)
ಸ್ವಕಾಯಕವ ಮಾಡಿ (ನಿನ್ನ ಪಾಲಿಗೆ ಬಂದ ಕಾಯಕವನ್ನು ಮಾಡಿ)
ಗುರು ಲಿಂಗ ಜಂಗಮದ ಮುಂದಿಟ್ಟು (ಗುರು, ಲಿಂಗ, ಜಂಗಮರಿಗೆ ಅರ್ಪಿಸಿ),
ಒಕ್ಕುದ ಹಾರೈಸಿ (ನ್ಯಾಯವಾದದ್ದನ್ನು ಮಾತ್ರ ಆಶಿಸಿ), ಮಿಕ್ಕುದ ಕೈಕೊಂಡು (ಉಳಿದದ್ದನ್ನು ಗ್ರಹಿಸು)
ವ್ಯಾಧಿ ಬಂದಡೆ ನರಳು(ಕಾಹಿಲೆಯಾದರೆ ನರಳು), ಬೇನೆ ಬಂದಡೆ ಒರಲು (ನೋವಾದರೆ ನೋವಿನಿಂದ ಕಿರುಚು),
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
ಗುರು ಲಿಂಗ ಜಂಗಮದ ಮುಂದಿಟ್ಟು (ಗುರು, ಲಿಂಗ, ಜಂಗಮರಿಗೆ ಅರ್ಪಿಸಿ),
ಒಕ್ಕುದ ಹಾರೈಸಿ (ನ್ಯಾಯವಾದದ್ದನ್ನು ಮಾತ್ರ ಆಶಿಸಿ), ಮಿಕ್ಕುದ ಕೈಕೊಂಡು (ಉಳಿದದ್ದನ್ನು ಗ್ರಹಿಸು)
ವ್ಯಾಧಿ ಬಂದಡೆ ನರಳು(ಕಾಹಿಲೆಯಾದರೆ ನರಳು), ಬೇನೆ ಬಂದಡೆ ಒರಲು (ನೋವಾದರೆ ನೋವಿನಿಂದ ಕಿರುಚು),
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
ತಾತ್ಪರ್ಯ:
ಇದು ಲದ್ದೆಯ ಸೋಮಣ್ಣನವರ ವಚನ. “ಲದ್ದೆಯ ಸೋಮ” ಎಂಬುದು ಇವರ ಅಂಕಿತ. ಇವರು
ರಾಯಚೂರಿನ ಲಾಧಾ ಗ್ರಾಮದವರು ಎಂಬುದು ತಿಳಿದು ಬರುತ್ತದೆ. ಚೆನ್ನಬಸವ ಪುರಾಣ ಮತ್ತು
ಮಹಲಿಂಗಲೀಲೆಯಲ್ಲಿ ಇವರ ಉಲ್ಲೇಖವಿದೆ. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಇವರ
ವಿಗ್ರಹವಿದೆ.ಇವರ ಈ ಒಂದೇ ವಚನ ಲಭ್ಯವಾಗಿದೆ. ಈ ವಚನದಲ್ಲಿ ಅವರು ಕಾಯಕದ ಮಹತ್ವವನ್ನು
ಹೇಳುತ್ತಿದ್ದಾರೆ.
ತಮ್ಮ ಕಷ್ಟ ಮತ್ತು ತೊಂದರೆಗಳಿಂದ
ಕೊರಗುತ್ತ ಸುಖಕ್ಕಾಗಿ ದೇವರನ್ನು
ಯಾಚಿಸುವ ಜನರನ್ನು ನೋಡಿ ಈ ಮಾತನ್ನು ಹೇಳುತ್ತಿರುವಂತೆ ಕಾಣುತ್ತದೆ. ಈ ರೀತಿಯಾಗಿ ದೇವರ
ಹಂಗಿಗಾಗಿ ಕಾಯುವ ಅವಶ್ಯಕತೆಯಿಲ್ಲ. ನಿನ್ನ ಕೆಲಸ
ನೀನು ನಿಷ್ಹೆಯಿಂದ ಮಾಡಿದರೆ ಇನ್ನಾವುದರ ಅವಶ್ಯಕತೆಯೂ ಇರುವುದಿಲ್ಲ ಎನ್ನುತ್ತಾರೆ,
ಯಾವುದೇ ಕಾಯಕವಾದರೂ ಸರಿಯೆ ನಿನ್ನ ಪಾಲಿಗೆ ಬಂದ ಕಾಯಕವನ್ನು ನಿಷ್ಠೆಯಿಂದ ಮಾಡು.
ಆ ನಿಷ್ಹೆಯೇ ನಿನಗೆ ಅಪಾರವಾದ ಧೈರ್ಯ ಕೊಡುತ್ತದೆ. ಅದರಿಂದ ಬರುವುದಷ್ಟನ್ನು ಮಾತ್ರ ಹಾರೈಸು.
ಅದಕ್ಕಿಂತ ಹೆಚ್ಚಿನದನ್ನು ಆಶಿಸಬೇಡ. ಮತ್ತು ಬಂದದ್ದನ್ನು ಶ್ರದ್ಧೆಯಿಂದ ಗುರು ಲಿಂಗ ಜಂಗಮರಿಗೆ
ಅರ್ಪಿಸು ಎನ್ನುತ್ತಾರೆ.
ಗುರು ಲಿಂಗ ಜಂಗಮರಿಗೆ ಅರ್ಪಿಸುವುದರಿಂದ ಏನಾಗುತ್ತದೆ? ಎಂಬ ಪ್ರಶ್ನೆ ಹುಟ್ಟಬಹುದು. ಅಜ್ಞಾನದಲ್ಲಿ ಮುಳುಗಿ ಬದುಕಿನ ತೊಳಲಾಟಗಳಲ್ಲಿ ಹೊಯ್ದಾಡುತ್ತಿರುವ ವ್ಯಕ್ತಿಗೆ ಗುರುವು
ಉತ್ತಮ ಜೀವನದ ದಾರಿ ತೋರುವ ಮಹಾನ ಬೆಳಕು, ಲಿಂಗವೆಂದರೆ ಇಡೀ ವಿಶ್ವದ ಹಿಂದಿರುವ ಮಹಾಚೈತನ್ಯ,(ಮತ್ತು ಅದರ
ಅಂಶವಾದ ಈ ಲೋಕದ ಚೈತನ್ಯ) ಮತ್ತು ಜಂಗಮವೆಂದರೆ ವಿರಕ್ತನಾಗಿ ಲೋಕದ ಉದ್ಧಾರವನ್ನು ಕೈಗೊಂಡ ಮಹಾ
ಪ್ರಜ್ಞಾವಂತ. ಈ ಮೂರು ಶಕ್ತಿಗಳ ಮಹತ್ವವನ್ನು ಅರಿಯುವುದು ಎಂದರೆ ಸ್ವಾರ್ಥವನ್ನು ಮೀರಿ ಪರದಲ್ಲಿ
ಆಸಕ್ತಿ ಇರುವುದೆಂದೇ ಅರ್ಥ. ನಿಷ್ಟೆಯಿಂದ ಕಾಯಕ ಮಾಡಿ ನ್ಯಾಯವಾದದ್ದನ್ನು ಮಾತ್ರ ಹಾರೈಸಿ, ಈ
ಮೂರು ಶಕ್ತಿಗಳಿಗೆ ಅರ್ಪಿಸಿ ಉಳಿದದ್ದನ್ನು ತಾನು ಸ್ವೀಕರಿಸುವುದು ಎಂದು ಹೇಳುತ್ತಾರೆ. ಸ್ವಾರ್ಥವನ್ನು ಮೀರಿ ಈ ಮೂರು ಮಹಾ ಶಕ್ತಿಗಳನ್ನು
ಅರಿತು ಅವುಗಳಿಗಾಗಿ ತಾನು ನಿಷ್ಹೆಯಿಂದ ಕಾಯಕ ಮಾಡುವುದು ಬದುಕಿನ ಪರಮ ಉದ್ದೇಶವಾಗಿದ್ದರೆ ಆ
ವ್ಯಕ್ತಿಗೆ ಬೇರೆ ಎನೂ ಬಾಧಿಸವು. ಎಂದರೆ ಆತನು ಆ ಬಾಧೆಗಳನ್ನು ಬಾಧೆಗಳೆಂದು ಪರಿಗಣಿಸುವುದಿಲ್ಲ.
ಹಾಗೂ ಏನಾದರೂ ಆದರೆ ಏನೂ ಮಾಡಲಾಗದು. ಕಾಯಿಲೆ ಬಂದರೆ
ನರಳಬೇಕು. ನೋವಾದರೆ ಕಿರುಚಬೇಕು, ಸಾವು ಬಂದರೆ ಸಾಯಬೇಕು. ಅಷ್ಟೇ. ಅದಕ್ಕೆ ಹೆದರುವುದು
ಏಕೆ? “ಬರುವುದನ್ನು ನೀನು ತಡೆ” ಎಂದು ದೇವರನ್ನು
ಪ್ರಾರ್ಥಿಸುತ್ತ ಕುಳಿತಿರುವುದು ಸಲ್ಲ ಎನ್ನುತ್ತಾರೆ ಲದ್ದೆಯ ಸೋಮಣ್ಣನವರು.
No comments:
Post a Comment