Saturday, June 21, 2014

Vachana 199: Taanillade Taa Maaduva Sahajanu – The one without ‘I’

VACHANA IN KANNADA
ತಾನಿಲ್ಲದೆ ತಾ ಮಾಡುವ ಸಹಜನು
ತಾನಿಲ್ಲದೆ ತಾ ನೀಡುವ ಸಹಜನು
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು
ಏನೊಂದರ ಹಮ್ಮಿಲ್ಲದ ಸುಜ್ಞಾನಿಯನು
ಮಾಟದ ಕೂಟದ ಸ್ಥಳದೊಳು ಕೂಡಿಹ
ಕೂಡಲಸಂಗಮದೇವನನೇನೆಂದುಪಮಿಸುವೆನು?
TRANSLITERATION
taanillade taa maaDuva sahajanu
taanillade taa nIDuva sahajanu
taa bErillade beresiha nijapadadoLu
EnoMdara hammillada suj~jaaniyanu
maaTada kUTada sthaLadoLu kUDiha
kUDalasaMgamadEvananEneMdupamisuvenu?

CLICK HERE FOR A RECITATION


TRANSLATION (WORDS)

taanillade (without the self) taa (one self)  maaDuva  (doing ) sahajanu (natural self)
taanillade (without the self) taa  (one self) nIDuva (giving) sahajanu(natural self)
taa(one self)  bErillade (not seperating)  beresiha (has become one)  nijapadadoLu (with the natural self)
EnoMdara (of anything)  hammillada (not being proud) suj~jaaniyanu (wise?person who is)
maaTada ( of action) kUTada (of unification)  sthaLadoLu kUDiha  (become one in the place of)
kUDalasaMgamadEvananEneMdupamisuvenu? (whom  shall I compare him with.)

VACHANA IN ENGLISH

The one who does without self (‘I’)
The one who gives without self
The one who has become one with the natural self
The wise one who is not proud of anything
Whom shall I compare that one with, who has unified in action with
Lord Kudalasangama!

COMMENTARY

Basavanna gives a concrete description of the individual who has become one with Lord Kudalasangama in this simple Vachana. Such individual’s behavior would be completely different from common men. He will not have even the smallest tinge of ‘I’ (ego, selfishness) in him. He is never selfish in what all he does. Even when he does everything, he never feels that he did anything. He gives, but never feels that he gave. He is not inactive. He participates fully in all aspects of the life. But, he is never attached to anything he does. He has conquered his ego. Such is the individual who has become one with the Divine. He is the Divine.  
We are all animals of our experiences. These experiences, relations and actions change us from our true natural selves. They bring in the I-ness or ego into us. Becoming one with the divine is the state of being completely out of ‘ego’. It is the state of ‘being’ and not ‘doing’.  Basavanna says that such an egoless individual is the Lord and cannot be compared with any one else!

Let us remove the ‘I’ from us!

KANNADA COMMENTARY

ಅರ್ಥ:
ತಾನಿಲ್ಲದೆ ತಾ ಮಾಡುವ ಸಹಜನು (ತಾನು ಇಲ್ಲದೆ ಸಹಜವಾಗಿ ಮಾಡುವವನು)
ತಾನಿಲ್ಲದೆ ತಾ ನೀಡುವ ಸಹಜನು ( ತಾನು ಇಲ್ಲದೆ ಸಹಜವಾಗಿ ನೀಡುವವನು)
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು ( ತನ್ನಲ್ಲಿ ತಾನು ಬೇರೆಯಾಗಿರದೆ)
ಏನೊಂದರ ಹಮ್ಮಿಲ್ಲದ ಸುಜ್ಞಾನಿಯನು (ಯಾವುದರದ್ದೂ ಅಹಂಕಾರವಿಲ್ಲದೆ)
ಮಾಟದ ಕೂಟದ ಸ್ಥಳದೊಳು ಕೂಡಿಹ  (ಮಾಡುವುದರಲ್ಲಿ ಕೂಡಿರುವ ಕಡೆ ಇರುವ)
ಕೂಡಲಸಂಗಮದೇವನನೇನೆಂದುಪಮಿಸುವೆನು? (ಕೂಡಲ ಸಂಗಮನನ್ನು ಯಾವ ರೀತಿಯಾಗಿ ತಿಳಿಸಲಿ?)

ಕೂಡಲಸಂಗಮ ಎಲ್ಲಿರುತ್ತಾನೆ ಮತ್ತು ಹೇಗಿರುತ್ತಾನೆ ಎಂಬುದನ್ನು ಈ ವಚನದಲ್ಲಿ ಸೂಚಿಸುತ್ತಿದ್ದಾರೆ ಬಸವಣ್ಣನವರು.
ಸುಜ್ಞಾನಿಯಾದವನ ನಡತೆ ಸಾಮಾನ್ಯರಿಗಿಂತ ಬೇರೆಯಾಗಿರುತ್ತದೆ. ಆತನು ಮಾಡುವ ಎಲ್ಲದರಲ್ಲಿ ಸ್ವಾರ್ಥ ಇರುವುದಿಲ್ಲ.  “ನಾನು”  “ತಾನು” ಎನ್ನುವ ಭಾವಕ್ಕೆ ಅಲ್ಲಿ ಎಡೆಯಿರುವುದಿಲ್ಲ. ತಾನೇ ಎಲ್ಲವನ್ನು ಮಾಡಿದರೂ  ಆ ಕೆಲಸದಲ್ಲಿ “ತಾನು” ಇರುವುದಿಲ್ಲ. ತಾನೇ ಇತರರಿಗೆ ಏನೇ ಕೊಟ್ಟರೂ “ನಾನು ಕೊಟ್ಟೆ” ಎಂಬ ಭಾವವಿರುವುದಿಲ್ಲ.
ಏನು ಈ “ನಾನು”  “ತಾನು”  ಎನ್ನುವುದು?  “ನಾನು” ಎನ್ನುವುದು ಕೇವಲ ಕಲ್ಪನೆ. ಅದು ಹಳೆಯ ವಿಚಾರ.  ಅದರಲ್ಲಿ ಸತ್ಯವೆಂಬುದೇ ಇಲ್ಲ, ಅದು, ತಾಯಿ ತಂದೆಯರ, ಸಮಾಜದ ಮತ್ತು ತಾನೇ ಕಲ್ಪಿಸಿಕೊಂಡ ವಿಚಾರಗಳಿಂದ ಹುಟ್ಟಿದುದು. ಕೇವಲ ಕಾಲ್ಪನಿಕ ವಿಚಾರಗಳ ಹೊರೆ ಅದು. ಆ ಹಳೆಯ ವಿಚಾರಗಳಿಗೆ  ಕಟ್ಟು ಬಿದ್ದು ನಾವು ನಮ್ಮ ಸಹಜತೆಯನ್ನೇ ಮರೆತು ಬಿಟ್ಟಿದ್ದೇವೆ. ಆ ಹೊರೆಯನ್ನು ಕಳಚಿಕೊಂಡು ಯಾರು ಸಹಜರಾಗಿರುತ್ತಾರೆಯೋ ಅವರೇ ಸುಜ್ಞಾನಿಗಳು. ಅಂತಹವರು ತಾವು ನೀಡುವದರಲ್ಲಿಯೂ “ತಾನು” ಅನ್ನು  ಬೆರೆಸುವುದಿಲ್ಲ. “ತಾ”ನಿಲ್ಲದೆ ಸಹಜವಾಗಿ ನೀಡುತ್ತಾರೆ. ಅವರ”ತಾನು” ಅವರ ನಿಜದಲ್ಲಿ ಬೇರೆಯಾಗದೆ ಬೆರೆತು ಹೋಗಿರುತ್ತದೆ. ಅಂದರೆ ಅಲ್ಲಿ ಅಹಂಕಾರಕ್ಕೆ ಸ್ಥಾನವೇ ಇರುವುದಿಲ್ಲ. ಅವರ ಈ ಕೂಟದಲ್ಲಿಯೇ ಕೂಡಲ ಸಂಗಮನಿರುವನೆಂದು ಬಸವಣ್ಣನವರು ಹೇಳುತ್ತಾರೆ. ಆ ಸ್ಥಿತಿಯನ್ನು ವರ್ಣಿಸುವುದು ಅಸಾಧ್ಯ. ಅದನ್ನು ನಾನು ಹೇಗೆ ತಿಳಿಸಲಿ ಎಂದು ಕೇಳುತ್ತಾರೆ ಬಸವಣ್ಣನವರು.

ನಡೆಯ ಚೆನ್ನ ನುಡಿದು ತೋರಿ
ನುಡಿಯ ಚೆನ್ನ ನಡೆದು ತೋರಿ
ಆ ನಡೆ ನುಡಿ ಎರಡರ ಚೆನ್ನ ಮೃಡ ನಿಮ್ಮೊಳಡಗಿಸಿ
ತಾವೆಡೆಯಿಲ್ಲದೆ ಪರಿಪೂರ್ಣರಾದವರ ಪಡುಗವ ಹೊರುವೆ, ಪಾದರಕ್ಷೆಯ ಹಿಡಿವೆ
ಎನಗಿದೆ ಮಾಟ ಬಯಸುವ ಬೇಟ
ಕೂಡಲಸಂಗಮದೇವಾ
ಇದು ನಿಮ್ಮ ಕೂಡುವ ಕೂಟ



No comments:

Post a Comment