VACHANA IN
KANNADA
ಮನೆಯ
ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ!
ಅಂಗವಿದ್ಯೆಯನೊಲ್ಲ,
ಕಂಗಳೊಳಗಣ
ಕಸವ ಕಳೆದಲ್ಲದೆ ನೋಡಲೀಯ,
ಕೈಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲದೊಳೆದಲ್ಲದೆ ಹೊಂದಲೀಯ,
ಕಾಲದೊಳೆದಲ್ಲದೆ ಹೊಂದಲೀಯ,
ಇಂತೀ
ಸರ್ವಾಂಗ ತಲೆದೊಳೆದ ಕಾರಣ,
ಕೂಡಲಸಂಗಮದೇವನೆನ್ನ
ಕೂಡಿಕೊಂಡನವ್ವಾ.
TRANSLITERATION
maneya
gaMDana manevaarteyanEna hELuvenavvaa!
aMgavidyeyanolla,
kaMgaLoLgaNa
kasava kaLedallade nODalIya,
kaiya
toLedallade muTTalIya
kaaladoLedallade
hoMdalIya,
iMtI
sarvaaMga taledoLeda kaaraNa,
kUDalasaMgamadEvanenna
kUDikoMDanavaa.
CLICK HERE
FOR A RECITATION
TRANSLATION
(WORDS)
maneya
gaMDana (of my husband) manevaarteyanEna
(about the behavior) hELuvenavvaa! (what
shall I say mother! )
aMgavidyeyanolla,
(does not like all the physical tricks)
kaMgaLoLgaNa
(in the eyes) kasava (the dirt)
kaLedallade (unless get rid of) nODalIya (doesn’t allow to see him),
kaiya (hands)
toLedallade (unless washed) muTTalIya (does not allow touching)
kaaladoLedallade
(without washing feet) hoMdalIya (he
will not accept),
iMtI (Thus) sarvaaMga (all my senses) taledoLeda (are
washed) kaaraNa (because),
kUDalasaMgamadEvanu
(Lord kUDalasaMgama ) enna (me) kUDikoMDanavaa.( accepted)
VACHANA IN
ENGLISH
Mother,
what can I say of the behavior of my household lord (husband)!
He does not like the sneaky ways of the body;
Unless I clean the dirt in my eyes, he does not let me see him;
He does not like the sneaky ways of the body;
Unless I clean the dirt in my eyes, he does not let me see him;
Unless I
wash my hand, he does not let me touch him;
Unless I wash my feet, He will not join me!
Unless I wash my feet, He will not join me!
Now that I
washed myself all over,
Lord Kudalasangama
has accepted me!
COMMENTARY
In this
Vachana, Basavanna stipulates the requirements for the merger of the devotee with
divine. The ultimate goal of the spiritual path is the merger of the devotee
and the Lord. The mantra ‘OM Namah Shivaaya” is considered as the humble
request of the devotee to Lord asking Him “Oh Lord, let me merge with you!”
Sharanas considered the relation between the Lord and the devotee a ‘holy
matrimony’ in which the Sharana is the wife (Sathi) and the Lord is the husband
(Pathi) - “Sharana Sathi, Linga Pathi”.
Basavanna
says that all the contortions of the physical body are not enough to attract
the Lord to him. These physical movements are just the rituals that one goes
through in the name of worship. The Lord does not let us see Him, unless we
wash the dirt off of our eyes. Our eyes have exposed us to the experiences of
the world, which have molded our
thinking and behavior. Our hands have touched the worldly materials and have
become dirty. Our feet need to be washed off of all the dirt we have
accumulated trotting through the materialistic path. Essentially, our senses have contributed
to what we are and how we behave. They have infected our minds with the six passions (arishadvargas – kama,
krodha, lobha, moha, mada, maatsarya). We must wash ourselves of these passions.
We must be pure externally (bahiranga shuddhi) and we must be pure internally
(antharanga shuddhi). Only then, that
the Lord will allow us to merge with Him.
Let us
strive for Internal and External purity!
KANNADA
COMMENTARY
ಅರ್ಥ:
ಮನೆಯ
ಗಂಡನ ಮನೆವಾರ್ತೆಯನೇನ (ಮನೆಯಲ್ಲಿ ವ್ಯವಹರಿಸುವ ರೀತಿ) ಹೇಳುವೆನವ್ವಾ!
ಅಂಗವಿದ್ಯೆಯನೊಲ್ಲ,
(ದೇಹದಿಂದ ಯಾಂತ್ರಿಕವಾಗಿ ಮಾಡುವ ತಂತ್ರಗಳು)
ಕಂಗಳೊಳಗಣ
ಕಸವ ಕಳೆದಲ್ಲದೆ ನೋಡಲೀಯ,
ಕೈಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲದೊಳೆದಲ್ಲದೆ ಹೊಂದಲೀಯ,(ಸ್ವೀಕರಿಸನು, ಕೂಡಿಕೊಳ್ಳನು)
ಕಾಲದೊಳೆದಲ್ಲದೆ ಹೊಂದಲೀಯ,(ಸ್ವೀಕರಿಸನು, ಕೂಡಿಕೊಳ್ಳನು)
ಇಂತೀ
ಸರ್ವಾಂಗ ತಲೆದೊಳೆದ ಕಾರಣ,(ಸರ್ವಾಂಗ ಶುದ್ಧವಾದ ಕಾರಣ)
ಕೂಡಲಸಂಗಮದೇವನೆನ್ನ
ಕೂಡಿಕೊಂಡನವ್ವಾ.
ತಾತ್ಪರ್ಯ:
ಕೂಡಲ ಸಂಗಮನನ್ನು ಕೂಡಿಕೊಳ್ಳಲು ಏನೇನು ಮಾಡ ಬೇಕೆಂಬುದನ್ನು ಹೇಳುವಂತಹ
ಬಸವಣ್ಣನವರ ವಚನವಿದು.
ಶರಣರೆಲ್ಲ ಆ ಪರತತ್ವವನ್ನು ಪತಿಯೆಂದು ಮತ್ತು ತಮ್ಮನ್ನು ಸತಿ ಭಾವಿಸಿರುವವರು, ಆತನನ್ನು
ಕೂಡಿಕೊಳ್ಳಲು ಹಂಬಲಿಸುತ್ತಿವವರು. ಅಂತಹ ಗಂಡನು ತನ್ನೊಂದಿಗೆ ಹೇಗೆ ವ್ಯವಹರಿಸುತ್ತಾನೆ ಎಂಬುದನ್ನು
ಬಸವಣ್ಣನವರು ಇಲ್ಲಿ ಹೇಳುತ್ತಿದ್ದಾರೆ.
ಆತನು, ಈ ಅಂಗಕ್ಕೆ ಮಹತ್ವ ಕೊಟ್ಟು ಮಾಡುವ
ಬಾಹ್ಯ ಪೂಜೆಗಳನ್ನು, ಒಪ್ಪುವವನಲ್ಲ.
ನನ್ನ ಕಣ್ಣುಗಳಲ್ಲಿಯ ಕಸವನ್ನು ತೆಗೆಯದೆ ನಾನು ಆತನನ್ನು ನೋಡಲು ಬಿಡುವುದಿಲ್ಲ.
ಕಾಲುಗಳನ್ನು ತೊಳೆದು ಶುದ್ಧವಾಗದ ಮುನ್ನ ನನ್ನನ್ನು ಸ್ವೀಕರಿಸುವುದಿಲ್ಲ. ನಾನು ಸರ್ವಾಂಗ ಶುದ್ಧನಾದಾಗ ಮಾತ್ರ ಆತನು ನನ್ನನ್ನು
ಕೂಡಿಕೊಂಡನು ಎಂದು ಹೇಳುತ್ತಾರೆ.
ಬಾಹ್ಯ ಪೂಜೆಗಳನ್ನು ಆತ ಒಪ್ಪುವವನಲ್ಲ.
ಈ ದೇಹದಿಂದ ಮಾಡುವ ಪೂಜೆಯ ಎಲ್ಲ ಕಾರ್ಯಗಳು ಯಾಂತ್ರಿಕವಾಗುತ್ತವೆ. ಅಂತಹುಗಳಿಗೆ ಆತ
ಒಲಿಯುವುದಿಲ್ಲ. ಕಣ್ಣಿನಲ್ಲಿರುವ ಕಸ
ಎಂದರೆ ಹಳೆಯ ನೆನಪುಗಳು, ನಮ್ಮ ದೃಷ್ಟಿಯನ್ನು
ಪ್ರಭಾವಗೊಳಿಸುವ ಇತರ ವಿಷಯಗಳು. ಅವುಗಳು ನಮ್ಮ
ಕಾಣ್ಕೆಗೆ ಕಸವಾಗುತ್ತವೆ. ನಾವು ಯಾವುದರಿಂದ ಪ್ರಭಾವಿತರಾಗಿರುತ್ತೇವೆಯೋ ಅದು ಮಾತ್ರ ನಮಗೆ
ಕಾಣುತ್ತದೆ. ಈ ಕಸವನ್ನು ಕಳೆದುಕೊಂಡಲ್ಲದೆ ನಾವು
ಆತನನ್ನು ನೋಡಲು ಸಾಧ್ಯವಿಲ್ಲ. ಕಾಲುಗಳನ್ನು
ತೊಳೆದಲ್ಲದೆ ಆತ ನಮ್ಮನ್ನು ಸ್ವೀಕರಿಸುವುದಿಲ್ಲ.
ಅಂದರೆ ನಮ್ಮ ನಡತೆ ಶುದ್ಧಗೊಂಡಲ್ಲದೆ ಆತನು
ನಮ್ಮನ್ನು ಒಪ್ಪುವುದಿಲ್ಲ. ಸ್ವಾರ್ಥ ಮತ್ತು ಅಹಂಕಾರದ ನಡತೆ ನಮ್ಮನ್ನು ಆತನಿಂದ ದೂರವಿಡುತ್ತದೆ.
ಇದೇ ರೀತಿಯಾಗಿ ಸರ್ವಾಂಗವೆಲ್ಲವೂ ಶುದ್ಧಗೊಳ್ಳಬೇಕು. ನಮ್ಮಲ್ಲಿಯ ಅಶುದ್ಧತೆಯನ್ನು
ಕಳೆದುಕೊಳ್ಳಬೇಕು. ಆಗಮಾತ್ರ ಕೂಡಲಸಂಗಮನು ನಮ್ಮನ್ನು ಒಪ್ಪಿಕೊಳ್ಳುತ್ತಾನೆ, ಎಂಬ ಭಾವ ಇಲ್ಲಿ
ವ್ಯಕ್ತವಾಗುತ್ತದೆ.
No comments:
Post a Comment