Friday, March 7, 2014

Vachana 184: Aane Kudure Bhandaaravirdodeno? - So What if you have all the Wealth?


VACHANA IN KANNADA

ಆನೆ ಕುದುರೆ  ಭಂಡಾರವಿರ್ದೊಡೇನೋ?
ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು
ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ಮೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದೋ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನ.

TRANSLITERATION

aane kudure bhaMDaaravirdoDEnO?
taanuMbudu paDiyakki, oMdaavina haalu.
malaguvudardha maMca.
I huruLillada siriya mecci keDabEDa manujaa
oDalu bhUmiya saMga, oDave taanEnappudO?
kaiviDida maDadi parara saMga, praaNa vaayuvina saMga
saaviMge saMgaDavaarU illa kaaNaa, niHkaLaMka mallikaarjuna

CLICK HERE FOR A RECITATION
http://youtu.be/sHQGpBrJMyI

TRANSLATION (WORDS)

aane (elephant) kudure(horse)  bhaMDaaravirdoDEnO(what if one has wealth?)
taanuMbudu(one eats) paDiyakki (one measure of  rice), oMdaavina(of one cow) haalu(milk).
malaguvudardha(sleeps on half)  maMca(a cot).
I huruLillada  (this meaningless, unworthy) siriya (wealth) mecci ( to trust,)  keDabEDa(don’t be a fool) manujaa(oh! man)
oDalu (body) bhUmiya (the earth)  saMga (becomes one with), oDave (jewel) taanEnappudO (who knows what happens)?
kaiviDida maDadi (married wife) parara saMga(goes with the others)
praaNa (breath) vaayuvina (wind, air) saMga (joins),
 saaviMge ( the death) saMgaDavaarU illa kaaNaa (nobody is with), niHkaLaMka mallikaarjuna (Nihkalanka Mallikarjuna)

VACHANA IN ENGLISH

What if one has Elephants, Horses and Wealth?
One eats a handful of rice, drinks one cow’s milk,
and sleeps on one half of a cot.
Trusting this unworthy wealth, don’t be a fool oh! Man.
Body becomes one with the Earth, who knows what happens to the jewelry?
The married wife becomes other’s, the breath joins the wind,
Nobody accompanies in death, you see, Nihkalanka Mallikarjuna!

COMMENTARY

In this Vachana, Moligeya Marayya urges us to become aware of the impermanence of this material world. We spend all our lives earning a living and accumulating wealth. We collect horses, elephants, cars and all sorts of vehicles. We acquire multiple houses and count our blessings along with our money. We feel we are top of the world and continue to accumulate more and more. We may not even have time and patience to enjoy what we accumulate.  Do we really need all this wealth? In fact, all we need is a handful of rice to eat, some milk from just one cow and only half of a cot to sleep.  We can survive and live with this minimum. Yet we never think about it. We believe that the wealthier we are, the happier we will be. If that were the case, all the wealthy individuals must be happy individuals. That truly is not the case.
Eventually body becomes one with the Earth. We do not take our jewelry and vehicles with us when that happens. The spouse who promised to be with us in life and death and forever, cannot accompany us. The breath that kept our company all the time joins the wind. We go back to where we came from without anyone and anything to accompany us.  Why then is this urge to acquire more and more? Does that mean that we should give up earning? Sharanas never advocated inaction. They urged us to be active (Kaayaka - Work is worship). They urged us to simplify our lives and live with just the right share of necessities and share the excess with the community (Daasoha). They urged us to realize the great blessings we have from Him, treat all we have as His and share it with all His people, our fellow beings!  Marayya is reminding us to gain this awareness.

Let us earn, share and live just right!

 KANNADA COMMENTARY

ಅರ್ಥ:
ಆನೆ ಕುದುರೆ  ಭಂಡಾರವಿರ್ದೊಡೇನೋ? (ಸಂಪತ್ತು ಇದ್ದರೇನು?)
ತಾನುಂಬುದು (ತಾನು ಊಟಮಾಡುವುದು)  ಪಡಿಯಕ್ಕಿ (ಒಂದು ಅಳತೆಯ ಅಕ್ಕಿ)  ಒಂದಾವಿನ (ಒಂದು ಹಸುವಿನ) ಹಾಲು
ಮಲಗುವುದರ್ಧ ಮಂಚ (ಮಲಗುವುದು ಮಂಚದ ಅರ್ಧ ಸ್ಥಳದಲ್ಲಿ).
ಈ ಹುರುಳಿಲ್ಲದ (ಅರ್ಥವಿಲ್ಲದ)  ಸಿರಿಯ (ಸಂಪತ್ತನ್ನು) ಮೆಚ್ಚಿ ಕೆಡಬೇಡ ಮನುಜಾ.
ಒಡಲು (ಹೊಟ್ಟೆ, ದೇಹ) ಭೂಮಿಯ ಸಂಗ ಒಡವೆ ತಾನೇನಪ್ಪುದೋ(ಒಡವೆ ಏನಾಗುವುದೋ)?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನ.

ತಾತ್ಪರ್ಯ:

ಈ ವಚನದಲ್ಲಿ ಮೋಳಿಗೆಮಾರಯ್ಯನವರು ಭೌತಿಕ ವಸ್ತುಗಳು ಎಷ್ಟು ನಶ್ವರ ಎಂಬುದನ್ನು ತಿಳಿಸುತ್ತಿದ್ದಾರೆ.
ಮನುಷ್ಯನು ಎಲ್ಲ ರೀತಿಯ ಸಂಪತ್ತು ಸಂಚಯ ಮಾಡುವದರಲ್ಲಿ ತನ್ನ ಬದುಕನ್ನು ತೊಡಗಿಸುತ್ತಾನೆ. ಆನೆಗಳು, ಕುದುರೆಗಳು ಮುಂತಾದ ವಾಹನಗಳನ್ನು, ಇಂದು ಬಗೆ ಬಗೆಯ ಕಾರುಗಳನ್ನು ಇಟ್ಟುಕೊಳ್ಳುತ್ತಾನೆ, ಸುಖ ಸಾಧನಗಳನ್ನು, ಸೌಕರ್ಯಗಳನ್ನು ಮತ್ತು ನಾನಾ ರೀತಿಯ ಧನ ಸಂಪತ್ತನ್ನು ಗಳಿಸುತ್ತಾನೆ. ಆದರೆ ಅದು ಏತಕ್ಕೆ ಎಂದು ಕೇಳುತ್ತಾರೆ ಮಾರಯ್ಯನವರು. ಏಕೆಂದರೆ ತಾನು ಉಣ್ಣುವುದು ಒಂದು ಅಳತೆಯ ಅಕ್ಕಿ ಮಾತ್ರ, ಕುಡಿಯುವುದು ಒಂದು ಆಕಳ ಸ್ವಲ್ಪ ಹಾಲು, ತನಗೆ ಮಲಗಲು ಬೇಕಾಗುವುದು ಅರ್ಧ ಮಂಚದಷ್ಟು ಸ್ಥಳ. ಆದರೆ ಇಡಿ ಬದುಕನ್ನು ಏನೇನೋ ಅರ್ಜನೆ ಮಾಡುವುದರಲ್ಲಿ ಕಳೆಯುತ್ತಾನೆ ಮನುಜ. ಮನೆ ಮಾರು, ದವಸ ಧಾನ್ಯ, ಆನೆ ಕುದುರೆ, ಧನ ಸಂಪತ್ತುಗಳನ್ನು ಕೂಡಿಹಾಕುತ್ತಾನೆ. ಆದರೆ ಇದೆಲ್ಲದರಿಂದ ಏನು ಪ್ರಯೋಜನ? ಏಕೆಂದರೆ ತನ್ನ ಸ್ವಂತಕ್ಕೆ ಬೇಕಾಗುವುದು ಬಹಳ ಕಡಿಮೆ. ಅಷ್ಟೇ ಅಲ್ಲ. ಈ ಸಂಪತ್ತು ಹುರುಳಿಲ್ಲದ್ದು ಎನ್ನುತ್ತಾರೆ ಅವರು. ಏಕೆಂದರೆ ಇವುಗಳಲ್ಲಿ ಯಾವುದೂ ತಾನು ಸಾಯುವಾಗ ತನ್ನ ಸಂಗಡ ಬರುವುದಿಲ್ಲ. ಜೀವಿತಾವಧಿಯಲ್ಲಿಯೂ ಕೂಡ ಇವಾವವೂ ತನ್ನ ದುಃಖ ದೂರ ಮಾಡುವುದಿಲ್ಲ. ಮಡದಿ ಮಕ್ಕಳು ಧನ ಸಂಪತ್ತು ಇದ್ದರೆ ತಾನು ಸುಖವಾಗಿರಬಲ್ಲೆ ಎಂಬ ಭ್ರಮೆ ಎಲ್ಲರಿಗೂ ಇರುತ್ತದೆ. ಆದರೆ ಅದು ಸತ್ಯವಲ್ಲ. ಈ ಮಾತು ಸತ್ಯವಾಗಿದ್ದರೆ ಪ್ರಪಂಚದಲ್ಲಿರುವ ಎಲ್ಲ ಶ್ರೀಮಂತರೂ ಯಾವ ದುಃಖವೂ ಇಲ್ಲದೆ ಸಂತೋಷವಾಗಿರಬೇಕಾಗಿತ್ತು. ಆದರೆ ಸತ್ಯ ಸ್ಥಿತಿ ಹಾಗಿಲ್ಲ. ಅಪಾರ ಸಂಪತ್ತು ಇದ್ದರೂ ಅವರು ಕೂಡ ತಮ್ಮದೇ ಆದ ದುಃಖದಿಂದ ನರಳುತ್ತಿರುತ್ತಾರೆ. ಈ ರೀತಿಯ ದುಃಖ ಭೌತಿಕ ಸಂಪತ್ತಿನಿಂದ ದೂರವಾಗತಕ್ಕದ್ದಲ್ಲ. ಅದು ಅರಿವಿನಿಂದ ದೂರವಾಗತಕ್ಕದ್ದು. ಅಂತಹ ಅರಿವನ್ನು ಗಳಿಸಬೇಕೇ ಹೊರತು ಭೌತಿಕ ಸಂಪತ್ತಲ್ಲ.
ಸತ್ತ ಮೇಲೆ ದೇಹ ಭೂಮಿಯ ಪಾಲಾಗುತ್ತದೆ. ಒಡವೆಗಳನ್ನು ಯಾರು ಕೊಂಡೊಯ್ಯುತ್ತಾರೆಯೋ ತಿಳಿಯದು. ನೆಂಟರಿಷ್ಟರು, ಕಳ್ಳಕಾಕರು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ತನ್ನ ಜೊತೆಗಂತೂ ಬರುವುದಿಲ್ಲ. ತಾನಂತೂ ತೆಗೆದುಕೊಂಡು ಹೋಗಲಾಗದು. ’ನಿನ್ನೊಂದಿಗೆ ಸದಾ ಇರುತ್ತೇನೆ” ಎಂದು ಹೇಳಿ ಸಪ್ತಪದಿ ತುಳಿದ ಹೆಂಡತಿ ಕೂಡ ತಾನು ಸತ್ತಾಗ ತನ್ನೊಂದಿಗೆ ಬರದೆ ನೆಂಟರಿಷ್ಟರೊಂದಿಗೆ ಇರುತ್ತಾಳೆ. ಇನ್ನು ಸದಾ ತನ್ನೊಂದಿಗೆ ಇದ್ದ ಪ್ರಾಣ ಕೂಡ ವಾಯುವಿನ ಸಂಗಡ ಸೇರಿ ಹೋಗುತ್ತದೆ. ಸಾವಿನೊಂದಿಗೆ ಯಾರೂ ಬರುವುದಿಲ್ಲ. ಅಂದಮೇಲೆ ಎಲ್ಲ ವಸ್ತು ವಾಹನ, ಧನ ಕನಕ, ಮಡದಿ ಮಕ್ಕಳು ಹೇಗೆ ತನ್ನೊಂದಿಗೆ ಬರಲು ಸಾಧ್ಯ? ಆದ್ದರಿಂದ ಅವುಗಳನ್ನು ನೆಚ್ಚಿ ಏನು ಫಲ? ಕೇವಲ ಅವುಗಳಿಗಾಗಿಯೇ ಬದುಕು ತೇಯುವುದರಿಂದ ಏನು ಲಾಭ?
ಅಂದರೆ ಮನೆ ಮಾರು, ಮಡದಿ ಮಕ್ಕಳು ಇರದೆ ಬದುಕಬೇಕೆ? ಇಲ್ಲ. ಇದರರ್ಥ ಅದಲ್ಲ. ಎಲ್ಲ ಶರಣರು ಸಂಸಾರಸ್ಥರೇ ಆಗಿದ್ದರು. ಎಲ್ಲರೂ ಕಾಯಕ ಮಾಡುತ್ತಿದ್ದರು. ಹಣವನ್ನು ಅರ್ಜಿಸುತ್ತಿದ್ದರು. ಆದರೆ ಅದನ್ನು ಕೇವಲ ತನ್ನದು ಎಂಬ ಭಾವ ಅವರದಾಗಿರಲಿಲ್ಲ. ಅವರು ಹೇಳುವುದು ಅದನ್ನೇ, ನೆಚ್ಚಿ ಬದುಕಬೇಡ ಎಂದು. ಅದು ತನಗೆ  ಬೇಕಾದ ಸುಖ ಕೊಡುತ್ತದೆ ಎಂಬ ಭಾವನೆ ಹುಸಿ. ಆದ್ದರಿಂದ ಆದನ್ನು ಯಾವುದಕ್ಕೂ ಅವಲಂಬಿಸದೆ ಎಲ್ಲವನ್ನೂ ಗುರು ಲಿಂಗ ಜಂಗಮಕ್ಕೆ ಅರ್ಪಿಸಬೇಕು. ಇವುಗಳಲ್ಲಿ ಯಾವುದೂ ತನ್ನದಲ್ಲ. ತನ್ನಲ್ಲಿರುವುದೆಲ್ಲ ಆ ಪರವಸ್ತುವಿನ ಪ್ರಸಾದ. ಅದನ್ನು ತಾನು ಹಂಚಿ ಅನುಭವಿಸಬೇಕು ಎಂಬ ಅರಿವು ಇರುವುದು ಮುಖ್ಯ ಎಂಬುದು ಈ ವಚನದ ತಾತ್ಪರ್ಯ.



1 comment:

  1. Beautiful explanation of the vachana. So simple, so true yet very difficult to be mindful of this fact.
    Thank you.

    ReplyDelete